Latest Videos

ಪಾನಿಪೂರಿಯಲ್ಲಿ 5 ರೀತಿಯ ರಾಸಾಯನಿಕ ವಸ್ತುಗಳಿವೆ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

By Sathish Kumar KHFirst Published Jun 29, 2024, 2:09 PM IST
Highlights

ಬಾಯಿಗೆ ರುಚಿಕರ  ಸ್ಟ್ರೀಟ್ ಫುಡ್ ಆಗಿರುವ ಪಾನಿಪುರಿಯಲ್ಲಿ 5 ಬಗೆಯ ರಾಸಾಯನಿಕ ವಸ್ತುಗಳನ್ನು ಶೀಘ್ರವೇ ರಾಸಾಯನಿಕಯುಕ್ತ ಪಾನಿಪುರಿ ಬ್ಯಾನ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರು (ಜೂ.29): ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಸಂಜೆ ಹೊತ್ತಲ್ಲಿ ಸೇವನೆ ಮಾಡುವ ಪಾನಿಪೂರಿಯಲ್ಲಿ ಬರೋಬ್ಬರಿ 5 ರೀತಿಯ ರಾಸಾಯನಿಕ ವಸ್ತುಗಳಿವೆ. ಹೀಗಾಗಿ, ರಾಸಾಯನಿಕಯುಕ್ತ ವಸ್ತುಗಳನ್ನು ಬಳಸಿ ತಯಾರಿಸುವ ಪಾನಿಪುರಿಯನ್ನು ಬ್ಯಾನ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದಾರೆ. ಪಾನಿಪೂರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ ಸನ್ ಸೆಟ್ ಯೆಲ್ಲೊ, ರೋಡೋಮೈನ್ ಸೇರಿದಂತೆ ಒಟ್ಟು 5 ರೀತಿಯ ರಾಸಾಯನಿಕ ವಸ್ತುಗಳು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಮಾರಕವಾಗಿರುವ ಪಾನಿಪೂರಿಯನ್ನು ಬ್ಯಾನ್ ಮಾಡಲಾಗುವುದು. ಈ ಬಗ್ಗೆ ಸೋಮವಾರ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಪಾನಿಪೂರಿ ಕೊಡಿಸ್ತೇನೆಂದು 7 ವರ್ಷದ ಮಗು ಕರೆದೊಯ್ದು ಅತ್ಯಾಚಾರ

ಈಗಾಗಲೇ ರ್ಯಾಂಡಮ್ ಪರೀಕ್ಷೆ ಮಾಡಿದ ಸರ್ಕಾರ: ರಾಜ್ಯದಲ್ಲಿ ಈಗಾಗಲೇ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ಬ್ಯಾನ್ ಮಾಡಿರುವ ಸರ್ಕಾರವು ಈಗ ಪಾನಿಪೂರಿ ಬ್ಯಾನ್ ಮಾಡಲು ಮುಂದಾಗಿದೆ. ರಾಜ್ಯಾದ್ಯಂತ 49 ಕಡೆ ಪಾನಿಪೂರಿ ತಯಾರಿಕೆ ಮಾಡುತ್ತಿದ್ದ ಸ್ಥಳಗಳಿಂದ ಪಾನಿಪೂರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರುವುದು ಪತ್ತೆಯಾಗಿದೆ. ಹೀಗಾಗಿ, ಶೀಘ್ರದಲ್ಲೆ ಪಾನಿಪೂರಿಗೆ ಬಳಸೋ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್  ಮಾಡಲು ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಕಾರಕ ಇರೋ ಸಾಸ್, ಮೀಟಾ ಖಾರದ ಪುಡಿ ಬ್ಯಾನ್  ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಬಾಂಬೆ ಮಿಠಾಯಿ, ಗೋಬಿ, ಕಬಾಬ್‌ ಬಳಿಕ ಪಾನಿಪುರಿಗೂ ಬಂತು ಕಂಟಕ!

ಇನ್ನು ಶಾಲಾ ಕಾಲೇಜು ಮಕ್ಕಳು, ವಿದ್ಯಾರ್ಥಿಗಳು, ಕೆಲಸ ಮಾಡುವ ಹದಿ ಹರೆಯ ವಯಸ್ಕರು ಸೇರಿದಂತೆ ಮನೆ ಮಂದಿಯೆಲ್ಲಾ ಪಾನಿಪೂರಿಯನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಸಂಜೆ ತಂಪಾದ ವಾತಾವರಣ ಇದ್ದರೆ ಅಥವಾ ಮಳೆ ಬಂದು ನಿಂತಿದ್ದತೆ ಆಗ ಪಾನಿಪೂರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತದೆ. ಆಗ ಹೊಟ್ಟೆಗೆ ಇಷ್ಟವಿಲ್ಲದಿದ್ದರೂ ನಾಲಿಗೆ ಕೇಳುವ ರುಚಿ ರುಚಿಯಾದ ಆಹಾರ ತಿನ್ನುವುದಕ್ಕಾಗಿ ಪಾನಿಪೂರಿ ಸೇವಿಸುವುದು ಇಷ್ಟವಾಗುತ್ತದೆ. ಇದರಿಂದ ಕ್ಷಣಮಾತ್ರಕ್ಕೆ ಯಾವುದೇ ಹಾನಿ ಆಗದಿದ್ದರೂ, ನಿರಂತರವಾಗಿ ಪಾನಿಪೂರಿ ತಿನ್ನುವವರ ಆರೋಗ್ಯದ ಮೇಲೆ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುಗಳು ಆರೋಗ್ಯ ಹಾಳು ಮಾಡುತ್ತವೆ ಎಂಬುದು ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರೀಕ್ಷೆಯಿಂದ ತಿಳಿದುಬಂದಿದೆ.

click me!