ಹಲಸು (Jackfruit) ಕರಾವಳಿಗರಿಗೆ ಚಿರಪರಿಚಿತವಾದ ಹಣ್ಣು. ಅದ್ರೆ ಹಲಸು ಅಂದ್ರೆ ಮೂಗು ಮುರಿದುಕೊಳ್ಳುವ ಮಂದಿಯೇ ಹೆಚ್ಚು. ಅದ್ರೆ ಈಗ ಹಲಸಿನ ಹಣ್ಣಿನ ಘಮ ಎಲ್ಲರನ್ನೂ ಸೆಳೆಯುತ್ತಿದೆ. ಹಲಸಿನ ಹಣ್ಣನ್ನು ಉಪಯೋಗಿಸಿಕೊಂಡು ಕೇವಲ ಚಿಪ್ಸ್ (Chips), ಹಪ್ಪಳ (Papad) ಮಾತ್ರವಲ್ಲದೇ ಇನ್ನಿತರ ಹಲವಾರು ಖಾದ್ಯಗಳನ್ನು ತಯಾರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ ಉಡುಪಿಯಲ್ಲಿ ನಡೆದ ಹಲಸು ಮೇಳ. ಬನ್ನಿ ನಾವೂ ಅಲ್ಲೊಂದು ರೌಂಡ್ ಹಾಕ್ಕೊಂಡ್ ಬರೋಣ.
ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಹಲಸು (Jackfruit) ಕರಾವಳಿಗರಿಗೆ ಚಿರಪರಿಚಿತವಾದ ಹಣ್ಣು. ಅದ್ರೆ ಹಲಸು ಅಂದ್ರೆ ಮೂಗು ಮುರಿದುಕೊಳ್ಳುವ ಮಂದಿಯೇ ಹೆಚ್ಚು. ಅದ್ರೆ ಈಗ ಹಲಸಿನ ಹಣ್ಣಿನ ಘಮ ಎಲ್ಲರನ್ನೂ ಸೆಳೆಯುತ್ತಿದೆ. ಹಲಸಿನ ಹಣ್ಣನ್ನು ಉಪಯೋಗಿಸಿಕೊಂಡು ಕೇವಲ ಚಿಪ್ಸ್ (Chips), ಹಪ್ಪಳ (Papad) ಮಾತ್ರವಲ್ಲದೇ ಇನ್ನಿತರ ಹಲವಾರು ಖಾದ್ಯಗಳನ್ನು ತಯಾರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ ಉಡುಪಿಯಲ್ಲಿ ನಡೆದ ಹಲಸು ಮೇಳ. ಬನ್ನಿ ನಾವೂ ಅಲ್ಲೊಂದು ರೌಂಡ್ ಹಾಕ್ಕೊಂಡ್ ಬರೋಣ.
ಹಸಿದ ಹೊಟ್ಟೆಗೆ ಹಲಸಿನಹಣ್ಣು (Jackfruit) ಅನ್ನೋ ಮಾತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ, ಭೂಮಿ ತಂಪಾಗುತ್ತದೆ ಹಲಸು ಹಣ್ಣಾಗುತ್ತದೆ. ಮಳೆಗಾಲದಲ್ಲಿ ಹಸಿವು ಜಾಸ್ತಿ, ಬಡವರ ಹಸಿವಿಗೆ ವರದಾನವಾಗಿ ಹಲಸಿನಹಣ್ಣು ಸೃಷ್ಟಿಯಾಗಿದೆ ಅನ್ನೋದು ಕರಾವಳಿಗರ ಅಭಿಪ್ರಾಯ. ಆದರೆ ಕಾಲಕ್ರಮೇಣ, ಹಲಸು ತನ್ನ ಮಹತ್ವ ಕಳೆದುಕೊಂಡಿದೆ. ಒಂದೆಡೆ ನೂರಾರು ಕೋಟಿ ಮೌಲ್ಯದ ಹಲಸು ಹಣ್ಣಾಗಿ ಕೊಳೆತು ಬೀಳುತ್ತಿದ್ದರೆ, ಮತ್ತೊಂದೆಡೆ ನೂರಾರು ರೂಪಾಯಿ ಕೊಟ್ಟು ತುಂಡು ಹಲಸಿನ ಹಣ್ಣನ್ನು ಜನ ಖರೀದಿಸುತ್ತಿದ್ದಾರೆ. ಈ ಅಸಮತೋಲನ ಹೋಗಲಾಡಿಸಲು ಕರಾವಳಿಯಲ್ಲಿ ಇದೀಗ ಹಲಸು ಮೇಳ ನಡೆಸಲಾಗಿದೆ.
ಬರೀ ಕಡಬು, ಚಿಪ್ಸ್ ಮಾತ್ರವಲ್ಲ ಹಲಸಿನ ಬಿರಿಯಾನಿಯೂ ಮಾಡಬಹುದು!
ಹಲಸಿನ ಹಣ್ಣು ಮತ್ತು ಹಲಸಿನ ಹಣ್ಣಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತನ್ನು ನೀಡುವ ದೃಷ್ಟಿಯಲ್ಲಿ ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸು, ಹಲಸಿನ ಖಾದ್ಯ,, ಹಲಸು ಸಸಿಗಳ ಸಹಿತ ಇನ್ನಿತರ ಮೌಲ್ಯವರ್ಧಕ ಉತ್ಪನ್ನಗಳು ಗ್ರಾಹಕರ ಸೆಳೆಯಿತು.
ಮೇಳದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಹಲಸಿನ ಖಾದ್ಯ
ಹಲಸಿನ ಹಣ್ಣಿನ ಉತ್ಪನ್ನಗಳಾದ ಹಲಸಿನ ಹಪ್ಪಳ, ಚಿಪ್ಸ್, ಬೋಂಡಾ, ಮುಳಕ, ಹಲಸಿನ ಗಟ್ಟಿ, ಹಲಸಿನ ಐಸ್ ಕ್ರೀಮ್ ಸೇರಿದಂತೆ ಇನ್ನಿತರ ಆಹಾರ ಉತ್ಪನ್ನಗಳು ಉಡುಪಿ ಜನರ ಹಲಸಿನ ಹಸಿವನ್ನು ನೀಗಿಸಿದವು. ಮೇಳದಲ್ಲಿ ತೂಬುಗೆರೆಯ ಹಲಸು , ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸು ಲಭ್ಯವಿದ್ದವು.
ಜೊತೆಗೆ ಹಲಸಿನ ಹಣ್ಣಿನ ಪದಾರ್ಥಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಬಿಸ್ಕೆಟ್ ಮುಂತಾದವುಗಳ ಮಾರಾಟವಿತ್ತು. ಹಲಸು ಬೆಳೆದ ರೈತರು ನೇರವಾಗಿ ಬಂದು ಗ್ರಾಹಕರನ್ನು ಈ ಮೂಲಕ ತಲುಪಲು ಸಾಧ್ಯವಾಯಿತು. ಹಲಸಿನ ಮೌಲ್ಯವರ್ಧನೆಗೆ ನಾನಾ ಪ್ರಯೋಗಗಳನ್ನು ಮಾಡಿ ಈ ಮೇಳ ಯಶಸ್ವಿಯಾಗಿದೆ.
ಹಲಸು ತಿನ್ನುವಾಗ ಬೀಜವನ್ನು ಕಸವೆಂದು ಎಸೆಯಬೇಡಿ, Jackfruit Seeds ಬಾದಾಮಿಗೆ ಸಮವಂತೆ !
ರೋಗ ನಿರೋಧಕ ಮತ್ತು ಆರೋಗ್ಯವರ್ಧಕ ಮಹತ್ವ ಗಳನ್ನು ಹೊಂದಿರುವ ಹಲಸಿನ ಹಣ್ಣು, ಮೌಲ್ಯವರ್ಧನೆ ಯಿಂದ ಹೊಸ ಬೇಡಿಕೆ ಸೃಷ್ಟಿಸಿಕೊಳ್ಳಬೇಕಾಗಿದೆ. ಕೇರಳದಲ್ಲಿ ಹಲಸಿನ ಹಣ್ಣನ್ನು ನಾನಾ ಪ್ರಯೋಗಗಳ ಮೂಲಕ, ಜನರಿಗೆ ತಲುಪಿಸಲು ಸಾಧ್ಯವಾಗಿದ್ದು, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇಂತಹ ಪ್ರಯೋಗಗಳು ಮತ್ತಷ್ಟು ನಡೆಯಬೇಕು ಎಂದು ಜನ ಬಯಸಿದ್ದಾರೆ.