ಭಾರತೀಯರು ಸಸ್ಯಾಹಾರಿ, ಮಾಂಸಾಹಾರಿ ಎಂದು ವಿಭಿನ್ನ ಆಹಾರಕ್ರಮಗಳನ್ನು ಹೊಂದಿದ್ದಾರೆ. ಆದರೆ ಭಾನುವಾರ ಬಂತು ಅಂದ್ರೆ ಸಾಕು ನಾನ್‌ವೆಜ್ ಪ್ರಿಯರ ಮನೆಯಲ್ಲಿ ಬಿರಿಯಾನಿ ಘಮ ಬರುತ್ತದೆ. ಮನೆಯಲ್ಲಿ ಅಡುಗೆ ಮಾಡೋಕೆ ಆಗಲ್ಲ ಅನ್ನುವವರು ಹೊಟೇಲ್‌ಗಳಿಗೆ ಹೋಗಿ ನಾನ್‌ವೆಜ್ ಬ್ಯಾಟಿಂಗ್ ಮಾಡ್ತಾರೆ. ಆದ್ರೆ ಹೆಚ್ಚಿನವರಿಗೆ ಭಾನುವಾರ ಬಾಡೂಟವೇ ಬೇಕು. ಅದ್ಯಾಕೆ ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೇದಾ ?
ಭಾರತದ ಆಹಾರಪದ್ಧತಿ ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ವೆಜ್ ಆಗಿರಲು, ನಾನ್‌ವೆಜ್ ಆಗಿರಲಿ ಇಲ್ಲಿನ ಸ್ವಾದಿಷ್ಟಕರ ಆಹಾರಕ್ಕೆ ಬೇರ್ಯಾವುದೂ ಸಾಟಿಯಾಗಲಾರು. ಪಲಾವ್, ಪರಾಠ, ಪನ್ನೀರ್, ಕರಿ, ಚಾಟ್ಸ್ ಸೇರಿದಂತೆ ವೆಜ್ ಪ್ರಿಯರ ಬಾಯಲ್ಲಿ ನೀರೂರಿಸುವ ಹಲವಾರು ತಿನಿಸುಗಳಿವೆ. ಬಿರಿಯಾನಿ, ಕಬಾಬ್, ಚಿಕನ್ ಸುಕ್ಕ, ಫಿಶ್ ಕರಿ ಮೊದಲಾದವುಗಳನ್ನು ನಾನ್‌ವೆಜ್ ಪ್ರಿಯರು ಸವೀಬಹುದು. ಅದರಲ್ಲೂ ನಾನ್‌ವೆಜ್‌ನಲ್ಲಿ ಭಾರತದಲ್ಲಿರುವಷ್ಟು ವೆರೈಟಿ ಬಹುಶಃ ಬೇರೆಲ್ಲೂ ಇಲ್ಲವೇನೋ. ಹೀಗಾಗಿ ಮಾಂಸಾಹಾರಿಗಳು ಬಗೆಬಗೆಯ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ.
ನಾನ್‌ವೆಜ್ ಪ್ರಿಯರು ದಿನದ ಮೂರು ಹೊತ್ತು ಮಾಂಸಾಹಾರ (Nonveg) ಸೇವಿಸೋಕೆ ರೆಡಿಯಿರ್ತಾರೆ. ಅದರಲ್ಲೂ ಭಾನುವಾರವಂತೈ ಬಾಡೂಟವೇ ಬೇಕು. ವಾರ ಪೂರ್ತಿ ವೆಜ್ ತಿಂದ್ರೂ ಭಾನುವಾರ ನಾನ್‌ವೆಜ್ ಬೇಕು ಅನ್ನೋದು ಅಲಿಖಿತ ನಿಯಮ. ಮನೆಯಲ್ಲಿ ಮಾಡಿಲ್ಲಾಂದ್ರೂ ಹೊಟೇಲ್, ರೆಸ್ಟೋರೆಂಟ್, ಸ್ಟಾಲ್‌ಗಳಿಗೆ ಹೋಗಿಯಾದ್ರೂ ಮಾಂಸಾಹಾರವನ್ನು ಸವೀತಾರೆ. ಅದಕ್ಕೆ ಕಾರಣವೇನು ಎಂಬುದಕ್ಕೆ ನಿರ್ಧಿಷ್ಟ ಕಾರಣವಿಲ್ಲ.
ಪ್ರತಿದಿನ ನಾನ್‌ವೆಜ್ ಬೇಕೇ ಬೇಕು ಅನ್ನೋರಿಗೆ ಈ ರೋಗಗಳು ಕಾಡೋದು ಖಂಡಿತಾ
ಬ್ರಿಟಿಷರಿಂದ ಆರಂಭವಾಗಿರುವ ಪದ್ಧತಿನಾ ?
ಭಾರತದಲ್ಲಿ ಬಹುತೇಕರು ಭಾನುವಾರವೇ ಮಾಂಸಾಹಾರ ಸೇವಿಸುವ ಪದ್ದತಿಯನ್ನ ರೂಢಿಸಿಕೊಂಡಿದ್ದಾರೆ. ಇದಕ್ಕೆ ಬ್ರಿಟಿಷರು ಅನುಸರಿಸಿಕೊಂಡು ಬಂದಿದ್ದ ಪದ್ಧತಿಯೇ ಕಾರಣ ಎಂದು ಹೇಳಲಾಗುತ್ತಿದೆ. ಬ್ರಿಟಿಷರು ವಿಶ್ರಾಂತಿ ಪಡೆಯಲು ಭಾನುವಾರವನ್ನ ಆಯ್ದುಕೊಳ್ಳುತ್ತಿದ್ದರು. ಆ ದಿನ ಯಾವುದೇ ಕೆಲಸವನ್ನು ಮಾಡದೆ ಬಗೆ ಬಗೆಯ ಆಹಾರ (Food)ಗಳನ್ನು ತಯಾರಿಸಿ ಸವಿಯುತ್ತಿದ್ದರು. ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಆಟವಾಡುತ್ತಿದ್ದರು. ಒಟ್ನಲ್ಲಿ ಖುಷಿಯಲ್ಲಿ ಸಮಯ ಕಳೆಯುತ್ತಿದ್ದರು. ಕಾಲಾನಂತರದಲ್ಲಿ, ಈ ಅಭ್ಯಾಸವು ಆಳುವ ಬ್ರಿಟಿಷರಿಂದ ಭಾರತೀಯರಿಗೆ ಬಂದಿರಬಹುದು ಎಂದು ಹೇಳಲಾಗುತ್ತದೆ.
ಇದಲ್ಲದೇ, ಬ್ರಿಟಿಷರ ಆಗಮನಕ್ಕೆ ಮುಂಚಿತವಾಗಿ, ನಮ್ಮ ದೇಶದಲ್ಲಿ ಆದಿವಾಸಿಗಳು ಮತ್ತು ಇತರ ಜಾತಿಗಳು ವಾರವನ್ನ ಲೆಕ್ಕಿಸದೆ ಮಾಂಸಾಹಾರವನ್ನ ಸೇವಿಸುತ್ತಿದ್ದರು. ಈ ರೀತಿಯಾಗಿಯೂ ಸಹ, ಮಾಂಸಾಹಾರಿ ಆಹಾರವು ನಮ್ಮ ಭಾರತೀಯರಿಗೆ ಒಂದು ಅಭ್ಯಾಸ (Habit)ವಾಗಿ ಮಾರ್ಪಟ್ಟಿರಬಹುದು ಎಂಬ ಮಾತು ಸಹ ಇದೆ.
ಸಸ್ಯಾಹಾರಿಗಳಿಗೆ ಖಿನ್ನತೆ ಹೆಚ್ಚು, ಮಾಂಸಾಹಾರಿಗಳ ಮಾನಸಿಕ ಆರೋಗ್ಯ ಹೇಗೆ ?
ವೀಕೆಂಡ್ ಫುಲ್ ಫ್ರೀ, ಕುಕ್ಕಿಂಗ್ ಈಟಿಂಗ್
ಭಾನುವಾರ ಮಾಂಸಾಹಾರ ಸಿದ್ಧಪಡಿಸುವುದಕ್ಕೆ ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವ ಕಾರಣವೆಂದರೆ ಭಾನುವಾರ ಕಾಲೇಜು, ಕಚೇರಿ ಎಲ್ಲ ಕಡೆಯೂ ರಜೆಯಾಗಿರುತ್ತದೆ. ಉಳಿದ ದಿನಗಳಲ್ಲಿ ಎಲ್ಲರೂ ಬಿಝಿಯಾಗಿದ್ದರೆ ಭಾನುವಾರದಂದು ಬಿಡುವಾಗಿರುತ್ತಾರೆ. ಹೀಗಾಗಿ ಮನೆ ಮಂದಿ ಜೊತೆಯಾಗಿ ಊಟ ಮಾಡುತ್ತಾ ಸಮಯ ಕಳೆಯೋಕೆ ಸಾಧ್ಯವಾಗುತ್ತದೆ. ಹೀಗಾಗಿಯೇ ಈ ದಿನ ವಿಶೇಷವಾಗಿ ಬಾಡೂಟ ಸಿದ್ಧಪಡಿಸಿ ಸವಿಯುತ್ತಾರೆ. ಮಾತ್ರವಲ್ಲ ನಾನ್‌ವೆಜ್ ಅಡುಗೆ (Cooking) ತಯಾರಿಸಲು ಸ್ಪಲ್ಪ ಸಮಯ ಬೇಕು. ಆದ್ರೆ ವೀಕ್ ಡೇಸ್‌ನಲ್ಲಿ ಒತ್ತಡದ ಕೆಲಸಗಳಿರುವ ಕಾರಣ ಇದು ಸಾಧ್ಯವಾಗುವುದಿಲ್ಲ. ಆದರೆ ಭಾನುವಾರ ಹೆಚ್ಚು ಸಮಯಾವಕಾಶವಿರುವುದರಿಂದ ಆರಾಮವಾಗಿ ಅಡುಗೆ ಸಿದ್ಧಪಡಿಸಬಹುದು.
ಭಾನುವಾರ ನಾನ್‌ವೆಜ್ ತಿನ್ನೋ ಅಭ್ಯಾಸ ಒಳ್ಳೇದಾ ?
ಕೆಲವೊಬ್ಬರು ಮಂಗಳವಾರ, ಶುಕ್ರವಾರ ನಾನ್‌ವೆಜ್ ತಿನ್ನುವುದಿಲ್ಲ. ಈ ದಿನಗಳು ದೇವರಿಗೆ ವಿಶೇಷವಾಗಿರುವ ಕಾರಣ ಕೇವಲ ಸಸ್ಯಾಹಾರವನ್ನಷ್ಟೇ ತಿನ್ನುತ್ತಾರೆ. ಆದ್ರೆ ಭಾನುವಾರ ನಾನ್‌ವೆಜ್ ತಿನ್ಬೋದಾ ? ಹಿಂದೂ ಪುರಾಣಗಳ ಪ್ರಕಾರ, ಭಾನುವಾರವು ಸೂರ್ಯ ದೇವರ ವಾರವಾಗಿದೆ. ಈ ದಿನವು ಸೂರ್ಯನ ಆರಾಧನೆಗೆ ತುಂಬಾ ಪ್ರಸಿದ್ಧವಾಗಿದೆ. ಈ ದಿನದಂದು, ಮಾಂಸ, ಸಂಭೋಗ ಮತ್ತು ಮದ್ಯಪಾನ ಮಾಡುವವನು ಅನೇಕ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಯಾಗಿ ಜನಿಸುತ್ತಾನೆ ಎಂದು ಸೂರ್ಯಷ್ಟಕಂನಲ್ಲಿ ಹೇಳಲಾಗಿದೆ. ಆದ್ದರಿಂದ, ಸಾಧ್ಯವಾದ್ರೆ, ಭಾನುವಾರದಂದು ಮಾಂಸಾಹಾರವನ್ನು ಸೇವಿಸದಿರುವುದು ಉತ್ತಮ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.