ಬಾಡಿಗೆದಾರರನ್ನು ಹೀಗೂ ವೆಲ್‌ಕಂ ಮಾಡ್ತಾರಾ, ಬೆಂಗಳೂರಿನ ಮಹಿಳೆ ಮಾಡಿದ ಕೆಲಸಕ್ಕೆ ನೆಟ್ಟಿಗರ ಮೆಚ್ಚುಗೆ

By Vinutha Perla  |  First Published Jul 7, 2023, 10:23 AM IST

ಬೆಂಗಳೂರಲ್ಲಿ ಬಾಡಿಗೆದಾರರು ತಮ್ಮ ಮನೆ ಮಾಲೀಕರನ್ನು ನೆನಪಿಸಿಕೊಂಡ್ರೆ ಸಾಕು ಕನಸಲ್ಲೂ ಬೆಚ್ಚಿಬೀಳ್ತಾರೆ. ಮನೆ ಮಾಲೀಕರು ಸಣ್ಣಪುಟ್ಟ ಕಾರಣಕ್ಕೆ ಮಾಡೋ ಕಿರಿಕಿರಿ ಎಂಥಾ ಬಾಡಿಗೆದಾರರಿಗೂ ರೇಜಿಗೆ ಹುಟ್ಟಿಸಿರುತ್ತೆ. ಹೀಗಿರುವಾಗ ಬೆಂಗಳೂರಲ್ಲೊಬ್ಬ ಮಹಿಳೆ ತಮ್ಮ ಬಾಡಿಗೆದಾರರನ್ನು ಸ್ವಾಗತಿಸಿರೋ ರೀತಿಗೆ ನೆಟ್ಟಿಗರು ವಾವ್ಹ್‌ ಅಂದಿದ್ದಾರೆ.


ಬೆಂಗಳೂರಿನ ಕೆಲ ಮನೆ ಮಾಲೀಕರು ಬಾಡಿಗೆದಾರರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ತಾರೆ ಎಂಬುದು ಹಲವರಿಗೆ ಗೊತ್ತಿದೆ. ಸೌಲಭ್ಯಗಳ ಕೊರತೆಯಿದ್ದರೂ ಬಾಡಿಗೆ ಹೆಚ್ಚಳ, ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಕಿರಿಕಿರಿ ಮಾಡ್ತಾನೆ ಇರ್ತಾರೆ. ಬೆಂಗಳೂರಲ್ಲಿ ಮನೆ ಓನರ್ ಮತ್ತು ಬಾಡಿಗೆದಾರನ ನಂಟು ಎಣ್ಣೆ-ಸೀಗೇಕಾಯಿಯಂತೆ ಇರುತ್ತೆ ಅಂದ್ರೂ ತಪ್ಪಾಗಲಾರದು. ಮನೆ ಹುಡುಕುವಾಗಲೇ ಓನರ್ ಹೇಗಿರುತ್ತಾರೆನೋ ಎಂಬ ಆತಂಕ ಮನೆ ಮಾಡಿರುತ್ತೆ. ಹೀಗಿರುವಾಗ ಬೆಂಗಳೂರಲ್ಲೊಬ್ಬ ಮಹಿಳೆ ತಮ್ಮ ಬಾಡಿಗೆದಾರರನ್ನು ಸ್ವಾಗತಿಸಿರೋ ರೀತಿಗೆ ನೆಟ್ಟಿಗರು ವಾವ್ಹ್‌ ಅಂದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಸಂಸ್ಕೃತಿ ಬಿಸ್ಟ್, ತಮ್ಮ ಬಾಡಿಗೆದಾರನಿಗೆ ಒಂದು ಸಣ್ಣ ಸ್ವಾಗತ ಉಡುಗೊರೆಯನ್ನು ನೀಡಲು ನಿರ್ಧರಿಸಿದರು. ತಮ್ಮಲ್ಲಿ ಬಾಡಿಗೆಗಾಗಿ ಬರುವ ವ್ಯಕ್ತಿಗೆ  ಸಾಂಪ್ರದಾಯಿಕ ಕೊರಿಯನ್ ಭಕ್ಷ್ಯವಾದ ಕಿಮ್ಚಿಯ ಬ್ಯಾಚ್ ಅನ್ನು ತಯಾರಿಸಿದರು. ಸಂಸ್ಕೃತಿ ಅವರು ಟ್ವಿಟರ್‌ನಲ್ಲಿ ಸಿದ್ಧಪಡಿಸಿದ ಕಿಮ್ಚಿಯ ಅಥವಾ ಕ್ಯಾಬೇಜ್‌ನ ಆಹಾರದ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಅದರೊಂದಿಗೆ ಅವರು ಕಿರು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!

ಬಾಡಿಗೆದಾರರಿಗಾಗಿ ಸ್ಪೆಷಲ್‌ ಕೊರಿಯನ್ ಭಕ್ಷ್ಯ ತಯಾರಿಸಿದ ಮನೆ ಮಾಲೀಕರು
'ನಾನು ಒಂದು ಕೆಜಿ ಕಿಮ್ಚಿಯ ಉಪ್ಪಿನಕಾಯಿನ್ನು ತಯಾರಿಸಿದೆ. ನನ್ನ ಬಾಡಿಗೆದಾರರಿಗೆ ಇದನ್ನು ನೀಡುವ ಮೊದಲು ಅದನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿದೆ' ಎಂದು ಹೇಳಿದ್ದಾರೆ. ತಮ್ಮ ಬಾಡಿಗೆದಾರರು (Tenant) ಮಾತಿನ ಮಧ್ಯೆ ಸಹಜವಾಗಿ ಕಿಮ್ಚಿ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದಾಗ ಈ ಮಹಿಳೆ ಅವರಿಗೆ ಒಂದು ಕಿ. ಗ್ರಾಂನಷ್ಟು ಕಿಮ್ಚಿ ತಯಾರಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಮನೆ ಮಾಲೀಕರು ತುಂಬಾ ದುರಂಕಾರಿಗಳಾಗಿರುತ್ತಾರೆ ಎಂದು ಜನರು ಟೀಕಿಸುತ್ತಿರುವ ಸಮಯದಲ್ಲಿ, ಈ ಮಹಿಳೆಯ (Woman) ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಕಿಮ್ಚಿ, ಒಂದು ಸಾಂಪ್ರದಾಯಿಕ ಕೊರಿಯನ್ ಭಕ್ಷ್ಯವಾಗಿದ್ದು, ಉಪ್ಪುಸಹಿತ ಮತ್ತು ಹುದುಗಿಸಿದ ತರಕಾರಿಗಳನ್ನು (Vegetables) ಒಳಗೊಂಡಿರುತ್ತದೆ, ಸಾಮಾನ್ಯವಾಗಿ ನಾಪಾ ಎಲೆಕೋಸು ಅಥವಾ ಕೊರಿಯನ್ ಮೂಲಂಗಿ. ಗೊಚುಗಾರು, ಸ್ಪ್ರಿಂಗ್ ಆನಿಯನ್ಸ್, ಬೆಳ್ಳುಳ್ಳಿ, ಶುಂಠಿ, ಮತ್ತು ಜಿಯೋಟ್‌ಗಲ್, ಇತ್ಯಾದಿಗಳನ್ನು ಒಳಗೊಂಡಂತೆ ವ್ಯಾಪಕವಾದ ಮಸಾಲೆಗಳನ್ನು ಬಳಸಲಾಗುತ್ತದೆ. ಕಿಮ್ಚಿಯನ್ನು ವಿವಿಧ ಸೂಪ್‌ಗಳು ಮತ್ತು ಸ್ಟ್ಯೂಗಳಲ್ಲಿಯೂ ಬಳಸಲಾಗುತ್ತದೆ. 

ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್​ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್

ನಾನು ಅತ್ಯುತ್ತಮ ಮನೆ ಮಾಲೀಕಳು ಎಂಬ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲೇ? ಎಂದು ಪೋಸ್ಟ್ ಮಾಡಿದ ಮಹಿಳೆ ತಮಾಷೆಯಾಗಿ ಕೇಳಿದ್ದಾರೆ. ಜುಲೈ 6ರಂದು ಈ ಪೋಸ್ಟ್​ ಅನ್ನು ಟ್ವೀಟ್ ಮಾಡಲಾಗಿದ್ದು ಈತನಕ ಸುಮಾರು 41,000 ಜನರಿಂದ ವೀಕ್ಷಿಸಲ್ಪಟ್ಟಿದೆ (Views). ಸುಮಾರು 400 ಜನರು ಇದನ್ನು ಇಷ್ಟಪಟ್ಟಿದ್ದಾರೆ.  

ಹಲವಾರು ಮಂದಿ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ರೆಸಿಪಿ ಕೇಳಿದ್ದಾರೆ.' ನಿಮ್ಮ ಈ ನಡೆ ಅತ್ಯಂತ ಆದರ್ಶಪ್ರಾಯವಾಗಿದೆ. ನಮ್ಮ ಮನೆ ಮಾಲೀಕರು ಸಹ ನಾಲ್ಕು ವರ್ಷಗಳಿಂದ ಮನೆ ಬಾಡಿಗೆಯನ್ನೇ ಹೆಚ್ಚಿಸಿಲ್ಲ, ನಾನು ಇಂಥವರನ್ನು ಪಡೆಯಲು ಪುಣ್ಯ ಮಾಡಿದ್ದೇನೆ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ನನಗೂ ಇಷ್ಟು ಒಳ್ಳೆಯ ಮನೆ ಮಾಲೀಕರನ್ನು ಹುಡುಕಿಕೊಡಿ' ಎಂದು ಕಮೆಂಟಿಸಿದ್ದಾರೆ.

ಸ್ಟಾರ್ಟ್‌ಅಪ್‌ ಆರಂಭಿಸಲು 8 ಲಕ್ಷ ಹೂಡಿಕೆ ಮಾಡಿದ ಮನೆ ಮಾಲೀಕರು
ಈ ಹಿಂದೆಯೂ ಬೆಂಗಳೂರಿನ ಮನೆ ಮಾಲೀಕರ ಮಹತ್ಕಾರ್ಯವೊಂದು ಸುದ್ದಿಯಾಗಿತ್ತು. ಬೆಂಗಳೂರಿನ ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ (Tenants) ಸ್ಟಾರ್ಟ್‌ಅಪ್‌ ಆರಂಭಿಸಲು 8 ಲಕ್ಷ ಹೂಡಿಕೆ (Investment) ಮಾಡಿರೋ ವಿಚಾರ ವೈರಲ್ ಆಗಿತ್ತು.  Betterhalf.aiನ ಸಹ-ಸಂಸ್ಥಾಪಕ ಮತ್ತು CEO ಪವನ್ ಗುಪ್ತಾ, ತಮ್ಮ ಮನೆ ಮಾಲೀಕರು ತಾವು ನಡೆಸುತ್ತಿರುವ AI ಚಾಲಿತ ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್‌ನಲ್ಲಿಅಂದಾಜು ರೂ 8.2 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಪವನ್ ಗುಪ್ತಾ ಟ್ವಿಟರ್‌ನಲ್ಲಿ ಸುಶೀಲ್ ಎಂಬ ಹೆಸರಿನ ತನ್ನ ಮನೆ ಮಾಲೀಕರ ಜೊತೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು ವೈರಲ್ ಆಗಿತ್ತು.

click me!