ಭಾರತದ ಕೊನೆಯ ಟೀ ಸ್ಟಾಲ್‌ನಲ್ಲಿ ಡಿಜಿಟಲ್ ಪೇಮೆಂಟ್‌ಗೆ ಅವಕಾಶ; ಆನಂದ್ ಮಹೀಂದ್ರಾ ಟ್ವೀಟ್

By Vinutha Perla  |  First Published Nov 6, 2022, 10:21 AM IST

ಇತ್ತೀಚಿನ ಕೆಲ ವರ್ಷಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚು ವ್ಯಾಪಕವಾಗುತ್ತಿವೆ. ಮಾಲ್‌, ಥಿಯೇಟರ್‌, ಹೊಟೇಲ್‌ ಮಾತ್ರವಲ್ಲ ಸಣ್ಣಪುಟ್ಟ ಅಂಗಡಿಗಳಲ್ಲೂ ಡಿಜಿಟಲ್ ಪೇಮೆಂಟ್ ಲಭ್ಯವಿರುತ್ತದೆ. ಸದ್ಯ ಭಾರತ-ಚೀನಾ ಗಡಿಯ ಕೊನೆಯ ಟೀ ಸ್ಟಾಲ್ ಸಹ ಡಿಜಿಟಲ್ ಪಾವತಿ ಸ್ವೀಕರಿಸಲು ಸಿದ್ಧವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ ಆಯ್ಕೆಗಳನ್ನು ಹೊಂದಿವೆ. ಮಾಲ್‌, ಥಿಯೇಟರ್‌, ಹೊಟೇಲ್‌ ಮಾತ್ರವಲ್ಲ ಸಣ್ಣಪುಟ್ಟ ಅಂಗಡಿಗಳಲ್ಲೂ ಡಿಜಿಟಲ್ ಪೇಮೆಂಟ್ ಲಭ್ಯವಿರುತ್ತದೆ. ಸದ್ಯ ಭಾರತ-ಚೀನಾ ಗಡಿಯ ಕೊನೆಯ ಟೀ ಸ್ಟಾಲ್ ಸಹ ಡಿಜಿಟಲ್ ಪಾವತಿ ಸ್ವೀಕರಿಸಲು ಸಿದ್ಧವಾಗಿದೆ. 'ಇಂಡಿಯಾಸ್ ಲಾಸ್ಟ್ ಟೀ ಶಾಪ್' ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತದೆ, 'ಜೈ ಹೋ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

As they say, a picture is worth a thousand words. This captures the breathtaking scope and scale of India’s digital payments ecosystem. Jai ho! 👏🏽👏🏽👏🏽 https://t.co/n6hpWIATS0

— anand mahindra (@anandmahindra)
 

ಯುಪಿಐ ಪಾವತಿ ಸ್ವೀಕರಿಸಲು 'ಇಂಡಿಯಾಸ್ ಲಾಸ್ಟ್ ಟೀ ಶಾಪ್' ಸಿದ್ಧ
ಭಾರತ- ಟಿಬೆಟ್ ಗಡಿಯಲ್ಲಿ ದೇಶದ ಕೊನೆಯ ಗ್ರಾಮವಾದ ಮಾನಾ ಇದೆ. ಮಾನಾ ಗ್ರಾಮವು ದೊಡ್ಡ ಪ್ರವಾಸಿಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿಗೆ ಭಾರತ ಮತ್ತು ವಿದೇಶದಿಂದ ಸಾವಿರಾರು ಪ್ರವಾಸಿಗರು (Tourist) ಭೇಟಿ ನೀಡುತ್ತಾರೆ. ಪ್ರವಾಸಿಗರು ಭಾರತದ ಕೊನೆಯ ಚಹಾ ಅಂಗಡಿಯಲ್ಲಿ ಚಹಾವನ್ನು (Tea) ಹೀರುತ್ತಾ ವಾತಾವರಣವನ್ನು ಆನಂದಿಸುತ್ತಾರೆ. ಭಾರತದ ಈ ಕೊನೆಯ ಚಹಾ ಅಂಗಡಿಯಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಬಿಸಿಬಿಸಿಯಾದ, ರುಚಿಕರಾದ ತುಳಸಿ ಚಹಾವನ್ನು ಒದಗಿಸಲಾಗುತ್ತದೆ. ಆದ್ರೆ ಹಳ್ಳಿಯಲ್ಲಿರುವ ಈ ಟೀ ಶಾಪ್‌ನಲ್ಲಿ ಇಷ್ಟು ವರ್ಷಗಳ ವರೆಗೆ ಕೇವಲ ಹಣವನ್ನು (Money) ಪಾವತಿಸುವ ಮೂಲಕ ಮಾತ್ರ ಟೀ ಕುಡಿಯಬಹುದಾಗಿತ್ತು. ಆದ್ರೆ ಇನ್ಮುಂದೆ ಈ ಸಣ್ಣ ಟೀ ಅಂಗಡಿಯಲ್ಲಿಯೂ ಡಿಜಿಟಲ್ ಪೇಮೆಂಟ್ ಆಪ್ಶನ್ ಲಭ್ಯವಿರಲಿದೆ.

Tap to resize

Latest Videos

ನೋಕಿಯಾ,ಕೋಲ್ಗೇಟ್ ಕಂಪನಿಗಳ ಮೊದಲ ಪ್ರಾಡಕ್ಟ್ ಯಾವುದು? ಆನಂದ್ ಮಹೀಂದ್ರಾ ಹಂಚಿಕೊಂಡ ಲಿಸ್ಟ್ ವೈರಲ್

ಟ್ವಿಟರ್‌ನಲ್ಲಿ ಸ್ಪೂರ್ತಿದಾಯಕ ವಿಷಯವನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಪಾವತಿಯನ್ನು ತೋರಿಸುವ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ. UPI ಪಾವತಿಗಳನ್ನು ಬಳಸುವ 10,500 ಅಡಿ ಎತ್ತರದಲ್ಲಿರುವ ಉತ್ತರಾಖಂಡದ ಹಳ್ಳಿಯೊಂದರಲ್ಲಿ ನೆಲೆಗೊಂಡಿರುವ 'ಇಂಡಿಯಾಸ್ ಲಾಸ್ಟ್ ಟೀ ಶಾಪ್' ಫೋಟೋವನ್ನು ಮಹೀಂದ್ರಾ ರಿಟ್ವೀಟ್ ಮಾಡಿದ್ದಾರೆ. 'ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ. ಇದು ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ವ್ಯಾಪ್ತಿ ಮತ್ತು ಪ್ರಮಾಣವನ್ನು ಸೆರೆಹಿಡಿಯುತ್ತದೆ. ಜೈ ಹೋ' ಎಂಬ ಶೀರ್ಷಿಕೆ ನೀಡಿದ್ದಾರೆ. 

ಆನಂದ್ ಮಹೀಂದ್ರಾ ಅವರ ಪೋಸ್ಟ್ 4,700 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ ಮತ್ತು ಹಲವಾರು ಬಳಕೆದಾರರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, 'ಸರ್, ಇದೊಂದು ಕ್ರಾಂತಿ. ನಮ್ಮ ಖರ್ಚು ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ' ಎಂದು ತಿಳಿಸಿದ್ದಾರೆ.

ಆರು ಕಿಮೀ ನಡೆದೇ ಹೋಗಿ ಪುಸ್ತಕ ವಿತರಣೆ; ಗ್ರಂಥಪಾಲಕಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ಮತ್ತೊಬ್ಬ ಬಳಕೆದಾರರು  'ನಿನ್ನೆ ನಾನು ನನ್ನ ಜೇಬಿನಲ್ಲಿ ಅಕ್ಷರಶಃ ಕೇವಲ 3 ರೂಪಾಯಿಗಳೊಂದಿಗೆ ನನ್ನ ಮನೆಯಿಂದ ಹೊರಗೆ ಹೋಗಿದ್ದೆ.... ಇಂದಿನ ದಿನಗಳಲ್ಲಿ ನಾನು ಯುಪಿಯನ್ನು ಅಷ್ಟು ಅವಲಂಬಿಸಿದ್ದೇನೆ' ಎಂದಿದ್ದಾರೆ. ಮೂರನೇ ಬಳಕೆದಾರರು 'ಜೀವನದ ವಿಧಾನಗಳಲ್ಲಿ ಅಸಾಧಾರಣ ಬದಲಾವಣೆ. ಅಕ್ಷರಶಃ ನಾನು ನನ್ನ ಪರ್ಸ್‌ ಇನ್ನು ಮುಂದೆ ಸಾಗಿಸುವುದಿಲ್ಲ' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಭವಿಷ್ಯದಲ್ಲಿ ವೆಬ್3 ಸಾಧಿಸಲು ಯೋಚಿಸಿದ್ದನ್ನು ನಿಜವಾದ UPI ಸಾಧಿಸಿದೆ. ಕೊನೆಯ ಮೈಲಿಯನ್ನು ಸಂಪರ್ಕಿಸುವ ವಿಕೇಂದ್ರೀಕೃತ ಮತ್ತು ಪ್ರಜಾಪ್ರಭುತ್ವೀಕೃತ ಆರ್ಥಿಕತೆಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

click me!