ನಾವು ಏನಾದರೂ ತಿಂಡಿಯನ್ನು ಮಗುವಿನ ಕೈಗೆ ಕೊಟ್ಟಂತೆ ಮಾಡುವುದು, ಕೊಡದಿರುವ ಆಟವಾಡುತ್ತೇವೆ. ಐಸ್ ಕ್ರೀಮ್ ಮ್ಯಾನ್ ಕೂಡ ಟಿವಿ ಸ್ಟಾರ್ ಕರಣ್ ವೀರ್ ವೊಹ್ರಾ ಅವರ ಪುಟ್ಟ ಮುದ್ದಾದ ಮಗುವಿನ ಜತೆಗೆ ಇದೇ ಆಟವಾಡುತ್ತಾನೆ. ಬಳಿಕ, ಐಸ್ ಕ್ರೀಮ್ ನೀಡಿದಾಗ ಆಕೆ ಪಟಕ್ಕೆಂದು ತಿನ್ನುವ ವಿಡಿಯೋ ವೈರಲ್ ಆಗಿದೆ.
ಐಸ್ ಕ್ರೀಮ್ ಎಂದರೆ ಮಕ್ಕಳಿಗೆ ಆಸೆ. ಐಸ್ ಕ್ರೀಮ್ ಪಾರ್ಲರ್ ಕಣ್ಣಿಗೆ ಬಿದ್ದಾಕ್ಷಣ ಕೊಡಿಸುವಂತೆ ಪಾಲಕರಿಗೆ ಗಂಟುಬೀಳುವುದು ಎಲ್ಲರ ಅನುಭವ. ಐಸ್ ಕ್ರಿಮ್ ಸವಿಯಬೇಕೆನ್ನುವ ಆಸೆಯಿಂದ ಇರುವಾಗ ತಡವಾದರೆ ಭಾರೀ ಕಸಿವಿಸಿ ಉಂಟಾಗುತ್ತದೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳೊಂದಿಗೆ ಏನಾದರೂ ಆಟಿಕೆ ಅಥವಾ ತಿಂಡಿಯನ್ನು ಕೊಟ್ಟಂತೆ ಮಾಡುವುದು, ಕೊಡದೇ ಇರುವ ಆಟವಾಡುತ್ತೇವೆ. ಐಸ್ ಕ್ರೀಮ್ ಮ್ಯಾನ್ ಕೂಡ ಹಾಗೆಯೇ ಮಾಡಿದರೆ ಮಕ್ಕಳು ಅಪ್ಸೆಟ್ ಆಗುತ್ತಾರೆ. ಇಂಥದ್ದೇ ಅನುಭವವನ್ನು ಟೆಲಿವಿಷನ್ ಸ್ಟಾರ್ ಕರಣ್ ವೀರ್ ವೊಹ್ರಾ ಹಂಚಿಕೊಂಡಿದ್ದಾರೆ.
ಕೊನೆಗೂ ಐಸ್ ಕ್ರೀಮ್ ಕೈಗೆ ಬಂತು!
ಕರಣ್ ವೊಹ್ರಾ (Karanvir Vohra) ಅವರಿಗೆ ಮೂವರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ. ಯಾವುದೋ ಬರ್ತ್ ಡೇ (Birthday) ಪಾರ್ಟಿಯಂತೆ ಕಾಣುವ ಸ್ಥಳದಲ್ಲಿ ಅವರ ಮಕ್ಕಳು (Children) ಐಸ್ ಕ್ರೀಮ್ ಸ್ಟಾಲ್ (Ice Cream Stall) ಎದುರು ನಿಂತಿದ್ದಾರೆ. ಐಸ್ ಕ್ರೀಮ್ ಮ್ಯಾನ್ ಈ ಮಕ್ಕಳೊಂದಿಗೆ ಐಸ್ ಕ್ರೀಮ್ ಕೋನಗಳ ಮೂಲಕ ಆಟವಾಡುತ್ತಾನೆ. ಐಸ್ ಕ್ರೀಮ್ ಕೈಗೆ ಸಿಕ್ಕಂತೆ ಮಾಡುವುದು, ಮತ್ತೆ ತೆಗೆದುಕೊಳ್ಳುವುದು ಮಾಡುತ್ತ ಆಟವಾಡಿಸುತ್ತಾನೆ.
Walking Tips: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತೆ ನಡಿಗೆ
ವೊಹ್ರಾ ಅವರ ಕಿರಿ ಮಗಳು ಜಿಯಾ (Jia) ಇಲ್ಲಿ ಭಾರೀ ಮುದ್ದಾಗಿ ಕಾಣುತ್ತಾಳೆ. ಜತೆಗೆ, ಭಾವನೆಗಳನ್ನು ಅಷ್ಟೇ ಮುದ್ದಾಗಿ (Lovely) ಹೊರಹಾಕಿದ್ದಾಳೆ. ಐಸ್ ಕ್ರೀಮ್ ಸಿಗದೇ ಇರುವಾಗ ಆಕೆ ಅಪ್ಸೆಟ್ (Upset) ಆಗುತ್ತಾಳೆ. ಐಸ್ ಕ್ರೀಮಿಗಾಗಿ ಪದೇ ಪದೆ ಕೈಚಾಚುತ್ತಾಳೆ. ಆದರೆ ಆತ ನೀಡದೆ ಸತಾಯಿಸುತ್ತಾನೆ. ಕೊನೆಗೊಮ್ಮೆ ಸಿಕ್ಕಾಗ ಫಟ್ ಎಂದು ಬಾಯಿಗೆ ಹಾಕುತ್ತಾಳೆ. ಹಿರಿಯ ಇಬ್ಬರು ಮಕ್ಕಳಿಗೆ ಈ ಆಟ ಗೊತ್ತಾಗಿ ಅವರೇನೂ ಹೆಚ್ಚು ಗಲಿಬಿಲಿಗೆ ಒಳಗಾಗುವುದಿಲ್ಲ. ಆದರೆ, ಜಿಯಾ ಐಸ್ ಕ್ರೀಮ್ ದಕ್ಕದೇ ಭಾರೀ ಕಸಿವಿಸಿ ಮಾಡಿಕೊಳ್ಳುವ ಹೊತ್ತಿಗೆ ಆಕೆಗೆ ಕೋನ್ ನೀಡುತ್ತಾನೆ.
Parenting Tips: ಮಕ್ಕಳು ಯಾಕೆ ಪದೇ ಪದೇ ಪ್ರಶ್ನೆ ಕೇಳಿ ಇರಿಟೇಟ್ ಮಾಡ್ತಾರೆ?
ಮುಗ್ಧತೆಗೆ ಮಾರುಹೋದ ನೆಟ್ಟಿಗರು
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದ್ದು, ನೆಟ್ಟಿಗರು ಜಿಯಾಳ ಮುಗ್ಧ ಎಕ್ಸ್ ಪ್ರೆಷನ್ ಗೆ ಮಾರು ಹೋಗಿದ್ದಾರೆ. ಆಕೆಯ ಕ್ಯೂಟ್ ನೆಸ್ (Cuteness) ಎಲ್ಲರ ಗಮನ ಸೆಳೆದಿದ್ದು, ಆಕೆಯ ಬಗ್ಗೆ ಪ್ರೀತಿಯ (Love) ಸುರಿಮಳೆ ಹರಿಸಿದ್ದಾರೆ. ಹಲವರು ಆಕೆ ಆಸೆಯ ಕಂಗಳಿಂದ ಐಸ್ ಕ್ರೀಮ್ ನಿಟ್ಟಿಸುವ ಬಗ್ಗೆ ಬರೆದಿದ್ದಾರೆ. ಬಳಿಕ ಸಿಗದಿದ್ದಾಗ ಆಗುವ ನಿರಾಶೆ, ಬೇಸರವನ್ನೂ ವರ್ಣಿಸಿದ್ದಾರೆ. ಒಬ್ಬರು “ಪಾಪ, ಸೋನು ಬೇಬಿಗೆ ತೊಂದರೆ ನೀಡುತ್ತಿದ್ದಾನೆ’ ಎಂದಿದ್ದರೆ, ಮತ್ತೊಬ್ಬ ವ್ಯಕ್ತಿ “ಪುಟ್ಟ ಏಂಜೆಲ್ ಅಳುವಂತೆ ಮಾಡುತ್ತಿದ್ದಾನೆ’ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಭಾರೀ ಮುದ (Enjoyable) ನೀಡುವಂತಿದ್ದು, ವೈರಲ್ ಆಗಿದೆ.