Mangoes On EMI: ರಸಭರಿತ ಮಾವಿನ ಹಣ್ಣು ಈಗ್ಲೇ ತಿನ್ನಿ, ಆಮೇಲೆ ಪಾವತಿಸಿ!

By Vinutha Perla  |  First Published Apr 9, 2023, 9:00 AM IST

ಈಗ ಏನಿದ್ರೂ ಇಎಂಐ ಕಾಲ. ದುಬಾರಿಯಾಗಿರುವ ಎಲ್ಲವನ್ನೂ ಹೀಗೆ ಮೊದಲೇ ಖರೀದಿಸಿ, ನಂತರ ಕಂತು ಕಂತಾಗಿ ಹಣ ಪಾವತಿಸಲಾಗುತ್ತೆದೆ. ಎಲೆಕ್ಟ್ರಾನಿಕ್ಸ್‌, ಮನೆ, ವೆಹಿಕಲ್ ಎಲ್ಲವನ್ನೂ ಜನರು ಇಎಂಐ ಮೂಲಕವೇ ಖರೀದಿಸುತ್ತಾರೆ. ಆದ್ರೆ ಮಾವಿನಹಣ್ಣನ್ನು ಇಎಂಐ ಮೂಲಕ ಖರೀಸಿಸಬಹುದು ಅಂದ್ರೆ ನೀವ್ ನಂಬ್ತೀರಾ?


ಬೇಸಿಗೆ ಶುರುವಾಗಿದೆ. ಜೊತೆಗೆ ಮಾವಿನ ಹಣ್ಣಿನ ಸೀಸನ್ ಕೂಡಾ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ರಾಶಿ ರಾಶಿಯಾಗಿ ಮಾರುಕಟ್ಟೆಗೆ ಬಂದಿಳಿಯುತ್ತಿದೆ. ವೆರೈಟಿ ವೆರೈಟಿ ಮಾವುಗಳು ಜನರನ್ನು ಸೆಳೆಯುತ್ತಿವೆ. ಬಣ್ಣ, ರುಚಿ, ಬೆಲೆ ಎಲ್ಲದರಲ್ಲಿಯೂ ವ್ಯತ್ಯಾಸವಿರುವ ಹಲವು ಬಗೆಯ ಮಾವಿನಹಣ್ಣುಗಳನ್ನು ನೋಡಬಹುದು. ಕೆಲವು ವಿಶೇಷ ತಳಿಯ ಮಾವುಗಳಂತೂ ಸಿಕ್ಕಾಪಟ್ಟೆ ಕಾಸ್ಟ್ರೀಯಾಗಿರುತ್ತವೆ. ಅದರಲ್ಲೂ ಬಹುತೇಕರ ಅಚ್ಚುಮೆಚ್ಚಿನ ಅಲ್ಪಾನ್ಸೊ ತಳಿಯ ಮಾವಿನ ಹಣ್ಣುಗಳ ಬೆಲೆ ಪ್ರತಿ ಬಾರಿಯೂ ಹೆಚ್ಚಾಗಿರುತ್ತದೆ. ಆದರೆ ಇದರ ರುಚಿ ಚೆನ್ನಾಗಿರುವ ಕಾರಣ ಎಲ್ಲರೂ ಕೊಳ್ಳಬೇಕೆಂದು ಬಯಸುತ್ತಾರೆ. ಬೆಲೆ ಕೇಳಿ ಕಂಗಾಲಾಗುತ್ತಾರೆ. ಆದ್ರೆ ಇನ್ಮುಂದೆ ಬೆಲೆ ಹೆಚ್ಚಿದ್ರೂ ಮಾವಿನಹಣ್ಣು ಕೊಳ್ಳೋಕೆ ಹಿಂದೇಟು ಹಾಕ್ಬೇಕಿಲ್ಲ. ಯಾಕಂದ್ರೆ ಪುಣೆಯಲ್ಲಿ ಹಣ್ಣಿನ ವ್ಯಾಪಾರಿ ಒಬ್ಬರು ಅಲ್ಪಾನ್ಸೊ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸುವವರಿಗೆ ವಿಶೇಷ ಕೊಡುಗೆ ಒಂದನ್ನು ನೀಡ್ತಿದ್ದಾರೆ.

ಅಲ್ಪಾನ್ಸೊ ತಳಿಯ ಮಾವಿನ ಹಣ್ಣು ಪ್ರತಿ ಡಜನ್‌ಗೆ 1,300 ರೂಪಾಯಿ.!
ಹೌದು, ಪುಣೆ ಮೂಲದ ಉದ್ಯಮಿಯೊಬ್ಬರು ಹಣ್ಣುಗಳ ರಾಜನನ್ನ ಖರೀದಿಸಲು ಸುಲಭವಾದ ಮಾಸಿಕ ಕಂತುಗಳ ವಿಶಿಷ್ಟ ಸೌಲಭ್ಯವನ್ನ ಗ್ರಾಹಕರಿಗೆ (Customers) ನೀಡಿದ್ದಾರೆ. ಪ್ರಪಂಚದಾದ್ಯಂತ ತನ್ನ ವಿಶೇಷ ರುಚಿಗೆ ಹೆಸರುವಾಸಿಯಾದ ಅಲ್ಫೋನ್ಸೋ ಮಾವಿನ ಹಣ್ಣಿನ (Mangoes) ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಈ ಇಎಂಐ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದ್ದಾರೆ. ದೇವಘಡ್​ ಮತ್ತು ರತ್ನಗಿರಿಯಲ್ಲಿ ಬೆಳೆಯುವ ಅಲ್ಪಾನ್ಸೊ ತಳಿಯ ಮಾವಿನ ಹಣ್ಣುಗಳಿಗೆ ಬೇಡಿಕೆ ಜಾಸ್ತಿ ಇದ್ದು ಇದರ ಬೆಲೆ 800-1300 ರೂಪಾಯಿ ಎಂದು ಹೇಳಲಾಗಿದೆ. ಹೀಗಾಗಿ ಎಲ್ಲರಿಗೂ ಖರೀದಿಸಲು ಸಾಧ್ಯವಾಗುವಂತೆ ಮಾಡಲು ವ್ಯಾಪಾರಿ (Trader) ಇಎಂಐ ವ್ಯವಸ್ಥೆ ಒದಗಿಸಿದ್ದಾರೆ.

Tap to resize

Latest Videos

ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು: ದೇಶದಲ್ಲಿ 1 ಕೆಜಿ ಹಣ್ಣಿಗೆ 21 ಸಾವಿರ ರೂಪಾಯಿ!

ಪುಣೆಯ ಗುರುಕೃಪಾ ಟ್ರೇಡರ್ಸ್​ ಮತ್ತು ಪ್ರೂಟ್​ ಪ್ರಾಡಕ್ಟ್​​​ ಮಾಲೀಕರಾದ ಗೌರವ್​ ಸನಸ್​ ತಮ್ಮ ಅಂಗಡಿಗೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದ್ದು ಮಾವಿನ ಹಣ್ಣನ್ನು ಈಗ ತಿನ್ನಿರಿ ನಂತರ EMI ಪಾವತಿಸಿ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ.

ಈ ಕುರಿತು ಮಾತನಾಡಿರುವ ಅಂಗಡಿ ಮಾಲೀಕ ಗೌರವ್​ ಸನಸ್,​ ಟಿವಿ, ಫ್ರಿಡ್ಜ್​, ವಾಷಿಂಗ್​ ಮೆಷೀನ್​, ಎಸಿ, ಮೋಬೈಲ್​ ಸೇರಿದಂತೆ ಇನ್ನಿತರ ವಸ್ತುಗಳನ್ನು ನಾವು EMI ಮೂಲಕ ಖರೀದಿಸುತ್ತೇವೆ. ಹಾಗೆಯೇ ದುಬಾರಿ ಬೆಲೆ ಇರುವ ಹಣ್ಣುಗಳನ್ನು ಯಾಕೆ EMI ಮೂಲಕ ಖರೀದಿಸಬಾರದು ಎಂದು ನನ್ನ ಮನಸ್ಸಿನಲ್ಲಿ ಮೂಡಿತು. ಇದಕ್ಕಾಗಿ ಈ ಇಎಂಐ ವ್ಯವಸ್ಥೆ ಮಾಡಿದೆ ಎಂದಿದ್ದಾರೆ. ನಮ್ಮ ಉದ್ದೇಶ ಇರುವುದು ಪ್ರತಿ ಒಬ್ಬರು ಈ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸುವಂತಾಗಬೇಕು. ಇಡೀ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ನಾವೇ ಪ್ರಪ್ರಥಮ ಬಾರಿಗೆ EMI ಸೌಲಭ್ಯ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಟಿವಿ, ಫ್ರಿಡ್ಜ್​, ವಾಷಿಂಗ್​ ಮೆಷೀನ್​, ಎಸಿ, ಮೋಬೈಲ್​ ಸೇರಿದಂತೆ ಇನ್ನಿತರ ವಸ್ತುಗಳನ್ನು EMIನಲ್ಲಿ ಖರೀದಿಸುವಾಗ ಪಾಲಿಸುವ ವಿಧಾನಗಳನ್ನು ಇಲ್ಲಿ ಕೂಡ ಪಾಲಿಸಬೇಕು. ಗ್ರಾಹಕರು ಕ್ರೆಡಿಟ್​ ಕಾರ್ಡ್​ ಮೂಲಕ ಹಣ ಪಾವತಿಸಿ ಮೂರು, ಆರು ಅಥವಾ 12 ತಿಂಗಳುಗಳ ಕಂತಿನಲ್ಲಿ ಮೊತ್ತವನ್ನು ಪಾವತಿಸಬಹುದಾಗಿದೆ. ಆದರೆ, ಗ್ರಾಹಕರು EMI ಸೌಲಭ್ಯ ಸಿಗಬೇಕೆಂದರೆ ಕನಿಷ್ಠ ಎಂದರು 5,000 ಸಾವಿರ ಮೌಲ್ಯದ ಮಾವಿನ ಹಣ್ಣುಗಳನ್ನು ಖರೀದಿಸಬೇಕು ಎಂದು ತಿಳಿದುಬಂದಿದೆ. ಇದುವರೆಗೂ ನಾಲ್ಕು ಗ್ರಾಹಕರು EMI ಸೌಲಭ್ಯದ ಮೂಲಕ ಹಣ್ಣುಗಳನ್ನು ಖರೀದಿಸಿದ್ದಾರೆ ಎಂದು ಅಂಗಡಿ ಮಾಲೀಕ ಗೌರವ್​ ಸನಸ್​ ತಿಳಿಸಿದ್ದಾರೆ.

300ಕ್ಕೂ ಹೆಚ್ಚು ವೆರೈಟಿ ಮಾವು ಬೆಳೆಯೂ 'ಮ್ಯಾಂಗೋ ಮ್ಯಾನ್‌', ಬುಟ್ಟಿಯಲ್ಲಿ ಮೋದಿ, ಐಶ್ವರ್ಯ, ಸಚಿನ್‌ !

ಅಲ್ಪಾನ್ಸೊ ತಳಿಯ ಮಾವಿನ ಹಣ್ಣಿನ ವಿಶೇಷತೆ
ಮಹಾರಾಷ್ಟ್ರದ ದಿಯೋಗರ್ ಮತ್ತು ರತ್ನಗಿರಿಯಲ್ಲಿ ಬೆಳೆಯುವ ಅಲ್ಫೊನ್ಸೊ ಮಾವನ್ನು ಹ್ಯಾಪಸ್ ಮಾವು ಎಂದು ಸಹ ಕರೆಯುತ್ತಾರೆ. ಮಾವಿನ ಎಲ್ಲಾ ಪ್ರಭೇದಗಳಲ್ಲಿ, ಅಲ್ಫೋನ್ಸೊವನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಅದರ ಅತ್ಯುತ್ತಮ ರುಚಿ (Taste) ಮತ್ತು ಕಡಿಮೆ ಉತ್ಪಾದನೆಯಿಂದಾಗಿ, ಅದರ ಬೆಲೆಗಳು ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ. ಜನಸಾಮಾನ್ಯರು ಖರೀದಿಸಲು ಕಷ್ಟವಾಗುತ್ತದೆ.

click me!