ಅಧಿಕ ತೂಕ ಹಲವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ತೂಕ ಇಳಿಸಿಕೊಳ್ಳಲು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಹೆಚ್ಚಿನವರು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ಕೆಲವು ಆಹಾರಗಳನ್ನು ಸೇವಿಸಿದರೆ ಮತ್ತು ರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿದರೆ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ಅದ್ಯಾವುದೆಂದು ತಿಳಿಯೋಣ.
ಕೆಲವರು ತಿನ್ನದಿದ್ದರೆ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಬೆಳಗ್ಗೆ ತಿನ್ನುವುದಿಲ್ಲ. ಆದರೆ, ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದರಿಂದ ತೂಕವನ್ನು ಕಳೆದುಕೊಳ್ಳಬಹುದು ಎಂದು ಭಾವಿಸುವುದು ಭ್ರಮೆ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು. ವಿಶೇಷವಾಗಿ ಬೆಳಗ್ಗಿನ ಉಪಾಹಾರವನ್ನು ಮಾಡದಿರುವುದು ಕೆಲವೇ ಗಂಟೆಗಳಲ್ಲಿ ತೀವ್ರ ಹಸಿವನ್ನು ಉಂಟುಮಾಡಬಹುದು. ಇದರಿಂದ ನೀವು ಮಧ್ಯಾಹ್ನದ ವೇಳೆ ಅತಿಯಾಗಿ ತಿನ್ನುತ್ತೀರಿ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಿಗ್ಗೆ ಕೆಲವು ಆಹಾರಗಳನ್ನು ಸೇವಿಸಿದರೆ ಮತ್ತು ರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿದರೆ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ಅದ್ಯಾವುದೆಂದು ತಿಳಿಯೋಣ.
ಬಾಳೆಹಣ್ಣು: ಬಾಳೆಹಣ್ಣು (Banana) ತೂಕ ಇಳಿಸಲು ತುಂಬಾ ಸಹಕಾರಿ. ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಅಲ್ಲದೆ ಇದು ನಿಮ್ಮ ಹೊಟ್ಟೆ ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಮ್ಮ ದೇಹಕ್ಕೆ (Body) ಶಕ್ತಿಯನ್ನು ನೀಡುವುದು ಮಾತ್ರವಲ್ಲದೆ ಫಿಟ್‌ನೆಸ್ ಅನ್ನು ಹೆಚ್ಚಿಸುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ಈ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಕೂಡ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
Weight Loss Tips: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ
ಮೊಟ್ಟೆ: ತೂಕ ಇಳಿಸಿಕೊಳ್ಳಲು ಬಯಸುವವರು ಖಂಡಿತಾ ಬೆಳಗ್ಗೆ ಮೊಟ್ಟೆ (Egg) ತಿನ್ನಬೇಕು. ಮೊಟ್ಟೆಗಳು ಪ್ರೋಟೀನ್‌ಗಳ ಉಗ್ರಾಣವಾಗಿದೆ. ಇದು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಪ್ರೋಟೀನ್ ಆಹಾರವಾಗಿದೆ. ಮೊಟ್ಟೆಯಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಓಟ್ಸ್: ಹೆಚ್ಚಿನ ಪ್ರೋಟೀನ್ ಹೊಂದಿರುವ ಆರೋಗ್ಯಕರ ಉಪಹಾರ ಓಟ್ಸ್. ಇದು ನಿಮ್ಮ ಹಸಿವನ್ನು (Hungry) ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಯಾವುದೇ ಭಯವಿಲ್ಲದೆ ಓಟ್ಸ್ ತಿನ್ನಬಹುದು. ಇದು ನಿಮ್ಮ ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ.
ಮೊಳಕೆಯೊಡೆದ ಧಾನ್ಯಗಳು: ಬೆಳಗ್ಗಿನ ಉಪಾಹಾರದಲ್ಲಿ ಮೊಳಕೆ ಕಾಳುಗಳನ್ನು (Sprouts) ತಿನ್ನುವುದು ತುಂಬಾ ಒಳ್ಳೆಯದು. ಇವುಗಳು ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಧಾನ್ಯಗಳು ಪ್ರೋಟೀನ್‌ಗಳು, ಮೆಗ್ನೀಸಿಯಮ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
Weight Loss Tips: ಎಷ್ಟೇ ಡಯಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ ? ಈ ತಪ್ಪು ಮಾಡಬೇಡಿ.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಏನೆಲ್ಲಾ ತಿನ್ನಬಾರದು
ಅನ್ನ: ತೂಕ ಇಳಿಸಿಕೊಳ್ಳಲು ಬಯಸುವವರು, ರಾತ್ರಿಯಲ್ಲಿ ಅನ್ನ (Rice)ವನ್ನು ತಿನ್ನುವುದನ್ನು ನಿಲ್ಲಿಸಿ. ದಿನಕ್ಕೆ ಒಮ್ಮೆ ಮಾತ್ರ ಅನ್ನ ತಿನ್ನಿ. ಏಕೆಂದರೆ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ. ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಹೆಚ್ಚಾದರೆ ದೇಹದ ಕೊಬ್ಬು ಹೆಚ್ಚುತ್ತದೆ. ಅನ್ನದೊಂದಿಗೆ ಚಪಾತಿ ತಿನ್ನುವುದು ಒಳ್ಳೆಯದು.
ರೆಡ್ ಮೀಟ್: ಮಟನ್ ಮತ್ತು ಗೋಮಾಂಸದಂತಹ ಕೆಂಪು ಮಾಂಸದ (Red meat) ಖಾದ್ಯಗಳು ದೇಹಕ್ಕೆ ಅಗತ್ಯವಾದ ಪ್ರೋಟೀನ್‌ಗಳನ್ನು ಒದಗಿಸುತ್ತವೆ. ಆದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಅದಕ್ಕಾಗಿಯೇ ಅವುಗಳನ್ನು ರಾತ್ರಿಯಲ್ಲಿ ತಿನ್ನಬಾರದು. ತಿಂದರೆ ತೂಕ ಹೆಚ್ಚುತ್ತದೆ.
ಆಲೂಗಡ್ಡೆ: ಆಲೂಗಡ್ಡೆ (Potato)ಯನ್ನು ಸಹ ರಾತ್ರಿಯಲ್ಲಿ ತಿನ್ನಬಾರದು. ಏಕೆಂದರೆ ಇವು ಜಠರದುರಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ತೂಕವನ್ನೂ ಹೆಚ್ಚಿಸುತ್ತದೆ. ಅಲ್ಲದೆ ಚೀಸ್ ನಲ್ಲಿ ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ. ರಾತ್ರಿ ವೇಳೆಯೂ ಇವುಗಳನ್ನು ತಿನ್ನಬೇಡಿ.
ಸ್ವೀಟ್ಸ್: ರಾತ್ರಿಯಲ್ಲಿ ಸ್ವೀಟ್ಸ್ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಅವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.