ಆಲ್ಕೋಹಾಲ್ ಇಲ್ಲವೆಂದ್ರೂ ಕಿಕ್ಕೇರಿಸುತ್ತೆ ಈ ಡ್ರಿಂಕ್, ದೀಪಾವಳಿ ಗೆಸ್ಟ್‌ಗೆ ಕೊಡಬಹುದು

By Suvarna News  |  First Published Oct 14, 2022, 6:12 PM IST

ದೀಪಾವಳಿಯಲ್ಲಿ ಅತಿಥಿಗಳ ಸತ್ಕಾರ ಮುಖ್ಯವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಅನೇಕರು ಪಾರ್ಟಿ ಆಯೋಜನೆ ಮಾಡ್ತಾರೆ. ಪಾರ್ಟಿಯಲ್ಲಿ ಆಲ್ಕೋಹಾಲ್ ರಹಿತ ಪಾನೀಯ ಇಷ್ಟಪಡುವವರು ಸಾಕಷ್ಟು ಮಂದಿ ಇರ್ತಾರೆ. ಅವರ ಮನಸ್ಸು ಸೆಳೆಯಲು ನೀವು ಕೆಲ ಸೂಪರ್ ಡ್ರಿಂಕ್ಸ್ ಟ್ರೈ ಮಾಡಬಹುದು.  
 


ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ಸಾಗಿದೆ. ಬರುವ ಅತಿಥಿಗಳಿಗೆ ಏನು ಆಹಾರ ತಯಾರಿಸಬೇಕು ಎಂಬ ಲಿಸ್ಟ್ ಸಿದ್ಧವಾಗ್ತಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಜನರು ಪ್ಯಾಕ್ ಆದ ಸಿಹಿ ತಿಂಡಿಯನ್ನು ಮನೆಗೆ ತಂದು ಬಿಡ್ತಾರೆ. ಹಾಗಾಗಿ ಸ್ವೀಟ್ ಬಗ್ಗೆ ಹೆಚ್ಚು ಚಿಂತೆಯಿರೋದಿಲ್ಲ. ರಿಫ್ರೆಶ್‌ಮೆಂಟ್ ಪಾನೀಯದ ಬಗ್ಗೆ ಮಹಿಳೆಯರು ಹೆಚ್ಚು ಆಲೋಚನೆ ಮಾಡ್ತಾರೆ. ಅತಿಥಿಗಳು ಮನೆಗೆ ಬರ್ತಿದ್ದಂತೆ ಯಾವ ಡ್ರಿಂಕ್ ನೀಡ್ಬೇಕು ಎಂಬುದು ಅವರ ತಲೆಕೆಡಿಸುತ್ತದೆ. ರಿಫ್ರೆಶ್ಮೆಂಟ್ ಡ್ರಿಂಕ್ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅನಾನಸ್‌ ಹಣ್ಣಿನಿಂದ ಹಿಡಿದು ನಿಂಬೆ ಹಣ್ಣನು ಬಳಸಿ ರುಚಿ ರುಚಿಯಾದ ಪಾನೀಯ ತಯಾರಿಸಬಹುದು. ಇದು ಆಲ್ಕೋಹಾಲ್ ರಹಿತ ಡ್ರಿಂಕ್ ಆಗಿರಯತ್ತದೆ. ಹಾಗಾಗಿ ಅನೇಕರು ಇದನ್ನು ಇಷ್ಟಪಡೋದ್ರಲ್ಲಿ ಎರಡು ಮಾತಿಲ್ಲ. ನಾವಿಂದು ದೀಪಾವಳಿಗೆ ಮಾಡಬಹುದಾದ ಸ್ಪೆಷಲ್ ಡ್ರಿಂಕ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.  

ದೀಪಾವಳಿ (Diwali) ಯಲ್ಲಿ ಮನೆಯಲ್ಲೇ ಮಾಡಿ ರುಚಿ ರುಚಿ ಪಾನೀಯ (Drink) : 

Latest Videos

undefined

ಅನಾನಸ್ (Pineapple)  ಡ್ರಿಂಕ್ : ಅನಾನಸ್ ಜ್ಯೂಸ್ ಎಲ್ಲರಿಗೂ ಇಷ್ಟ. ಆದ್ರೆ ಈ ಡ್ರಿಂಕ್ ಸ್ವಲ್ಪ ಭಿನ್ನವಾಗಿರುತ್ತದೆ. ನೀವು ಅನಾನಸ್ ಜೊತೆ ಸ್ಟ್ರಾಬೆರಿ ಸಿರಪ್ ಬೆರೆಸಿ ಈ ಡ್ರಿಂಕ್ ತಯಾರಿಸಬೇಕು. ಅನಾನಸ್ ರಸಕ್ಕೆ ಎರಡರಿಂದ ಮೂರು ಚಮಚ ಸ್ಟ್ರಾಬೆರಿ ಸಿರಪ್ ಸೇರಿಸಿ ಮಿಕ್ಸ್ ಮಾಡಬೇಕು. ನಂತ್ರ ಅದಕ್ಕೆ ಐಸ್ ಪೀಸ್ ಹಾಕಿ. ಡ್ರಿಂಕ್ ಅಲಂಕಾರಕ್ಕೆ ಅನಾನಸ್ ಸಣ್ಣ ತುಂಡುಗಳನ್ನು ಕತ್ತರಿಸಿ ಹಾಕಿ. ನಂತ್ರ ಸುಂದರ ಗ್ಲಾಸ್ ನಲ್ಲಿಟ್ಟು ಸರ್ವ್ ಮಾಡಿ. ಅನಾನಸ್ ಸುವಾಸನೆ ಎಲ್ಲರನ್ನು ಸೆಳೆಯುತ್ತದೆ.  

ಕೀಲು ನೋವಿದ್ದರೆ ಏನೇನೋ ಔಷಧಿ ಮಾಡೋ ಮುನ್ನ ಈ ಮನೆ ಮದ್ದು ಟ್ರೈ ಮಾಡಿ

ಚಾಕೊಲೇಟ್ ಶೇಕ್ (Chocolate Shake) :  ಚಾಕೊಲೇಟ್ ಬಹುತೇಕರ ಫೆವರೆಟ್. ದೀಪಾವಳಿಯಲ್ಲಿ ಮನೆಗೆ ಬರುವ ಅತಿಥಿಗಳಿಗೆ ನೀವು ಚಾಕೊಲೇಟ್ ಹ್ಯಾಝೆಲ್ನಟ್ಸ್ ಮಿಲ್ಕ್ ಶೇಕ್  ತಯಾರಿಸಿ ಕೊಡಬಹುದು. ಹಾಲು, ಕೋಕೋ ಪೌಡರ್, ಚಾಕೊಲೇಟ್ ತುಂಡುಗಳು ಮತ್ತು ಐಸ್ ಹಾಕಿ ಮಿಕ್ಸಿ ಮಾಡಿ. ಮಿಕ್ಸರ್ ಜಾರ್ ನಿಂದ ಈ ಮಿಶ್ರಣವನ್ನು ತೆಗೆದು ಚಾಕೊಲೇಟ್ ಸಿರಪ್ ಸೇರಿಸಿ. ಇದು ಚಾಕೊಲೇಟ್ ಸುವಾಸನೆ ಹೆಚ್ಚಿಸುತ್ತದೆ. ನಂತ್ರ ಅದಕ್ಕೆ ಹ್ಯಾಝೆಲ್ನಟ್ಸ್  ಸೇರಿಸಿ. ಈಗ ರುಚಿಕರವಾದ ಚಾಕೊಲೇಟ್ ಮಿಲ್ಕ್ ಶೇಕ್ ಸಿದ್ಧವಾಗುತ್ತದೆ. 

ಜಲಜೀರಾ :  ಅನೇಕರು ಇಷ್ಟಪಡುವ ಪಾನೀಯಗಳಲ್ಲಿ ಜಲಜೀರಾ ಕೂಡ ಒಂದು. ಹುಳಿ-ಸಿಹಿ ಪಾನೀಯ ಇದಾಗಿದೆ. ಜೀರಿಗೆ ರಸ ಬೆರೆಸಿರು ಈ ಪಾನೀಯ ಜೀರ್ಣಕ್ರಿಯೆಗೆ ಒಳ್ಳೆಯದು. ಜಲಜೀರಾ ಮಾಡಲು ಪುದೀನ ಎಲೆಗಳು, ಹುರಿದ  ಜೀರಿಗೆ, ಬೆಲ್ಲ, ಕಪ್ಪು ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. ಜೀರಿಗೆ ಹಾಗೂ ಉಪ್ಪನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತ್ರ ಕೊತ್ತಂಬರಿ ಸೊಪ್ಪು, ಪುದೀನಾ ಎಲೆ ಹಾಗೂ ಜೀರಿಗೆ ಪುಡಿಯನ್ನು ಮಿಕ್ಸಿ ಜಾರಿಗೆ ಹಾಕಿ ನಿಂಬೆ ರಸ ಹಾಗೂ ನೀರನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತ್ರ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿ, ಅದಕ್ಕೆ ಸಾಕಷ್ಟು ನೀರನ್ನು ಸೇರಿಸಿ. ಇದಕ್ಕೆ ಬೆಲ್ಲವನ್ನು ಮಿಕ್ಸ್ ಮಾಡಿ. ಐಸ್ ಪೀಸ್ ಹಾಕಿ, ಜಲಜೀರಾ ಮಿಶ್ರಣವನ್ನು ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ.  

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಅಥವಾ ನೀರು, ಯಾವುದು ಕುಡಿಯೋದು ಒಳ್ಳೇದು ?
 
ಚೆರ್ರಿ ಶುಂಠಿ ಐಸ್ ಟೀ :  ಚೆರ್ರಿ ಶುಂಠಿ ಐಸ್ ಟೀ ಮಾಡಲು ನಿಮಗೆ ವೆನಿಲಾ ಶುಗರ್,  ಶುಂಠಿ ರಸ, ಚೆರ್ರಿ ಜ್ಯೂಸ್, ನಿಂಬೆ ರಸ, ದ್ರಾಕ್ಷಿ ರಸ ಬೇಕಾಗುತ್ತದೆ. ಎಲ್ಲಾ ರಸವನ್ನು ಜಗ್‌ನಲ್ಲಿ ಮಿಕ್ಸ್ ಮಾಡಿ ಮತ್ತು ಫ್ರಿಜ್‌ನಲ್ಲಿ ತಣ್ಣಗಾಗಲು ಬಿಡಿ. ನಂತ್ರ  ಸರ್ವ್ ಮಾಡಿ. 

click me!