ಈಗ ನಿಮ್ಮ ಮನೆಯಲ್ಲೇ ಮಾಡಿ...ಹೈದರಾಬಾದ್ ಫೇಮಸ್ ಶಾ ಗೌಸ್ ಚಿಕನ್ ದಮ್ ಬಿರಿಯಾನಿ

Published : Jun 20, 2026, 08:29 PM IST
Shah ghouse biryani recipe

ಸಾರಾಂಶ

Shah ghouse biryani recipe: ಹೈದರಾಬಾದ್ ಬಿರಿಯಾನಿ ಎಂದ ತಕ್ಷಣ ನೆನಪಾಗುವ ಹೆಸರು 'ಶಾ ಗೌಸ್ ರೆಸ್ಟೋರೆಂಟ್'. ಬಾಯಲ್ಲಿ ಇಟ್ಟರೆ ಕರಗಿಹೋಗುವ ಮೃದುವಾದ ಚಿಕನ್ ಮತ್ತು ಘಮಘಮಿಸುವ ಮಸಾಲೆಗಳ ಸುಗಂಧ ಹೊಂದಿರುವ ಈ ಪ್ರಸಿದ್ಧ ರೆಸ್ಟೋರೆಂಟ್ ಶೈಲಿಯ ಚಿಕನ್ ದಮ್ ಬಿರಿಯಾನಿಯನ್ನು ಅತ್ಯಂತ ಸುಲಭವಾಗಿ ನಿಮ್ಮ ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದರ ರೆಸಿಪಿ ಇಲ್ಲಿದೆ.

ಹೈದರಾಬಾದ್ ಬಿರಿಯಾನಿ ಎಂದರೆ ಆಹಾರ ಪ್ರಿಯರಿಗೆ ಥಟ್ಟನೆ ನೆನಪಾಗುವ ಹೆಸರುಗಳಲ್ಲಿ 'ಶಾ ಗೌಸ್' (Shah Ghouse) ಖಂಡಿತವಾಗಿಯೂ ಇರುತ್ತದೆ. ಆ ಹೆಸರು ಕೇಳಿದ ತಕ್ಷಣವೇ ಘಮಘಮಿಸುವ ಮಸಾಲೆಗಳ ಸುಗಂಧ, ಬಾಯಲ್ಲಿ ಇಟ್ಟರೆ ಕರಗಿಹೋಗುವ ಮೃದುವಾದ ಚಿಕನ್ ತುಂಡುಗಳು ಕಣ್ಣಮುಂದೆ ಸುಳಿದಾಡುತ್ತವೆ. ಅಂತಹ ಅದ್ಭುತವಾದ ಶಾ ಗೌಸ್ ರೆಸ್ಟೋರೆಂಟ್ ರುಚಿಯನ್ನು, ಅದೇ ಮಟ್ಟದಲ್ಲಿ ನಾವು ಮನೆಯಲ್ಲೇ ಹೇಗೆ ತಯಾರಿಸಬೇಕೆಂದು ಇಲ್ಲಿ ನೋಡಿ.

ಶಾ ಗೌಸ್ ಸ್ಟೈಲ್ ಚಿಕನ್ ದಮ್ ಬಿರಿಯಾನಿ ತಯಾರಿಕೆಗೆ ಬೇಕಾಗುವ ಪದಾರ್ಥಗಳು

ಕಲ್ಲುಪ್ಪು - ರುಚಿಗೆ ತಕ್ಕಷ್ಟು
ಲವಂಗ - 4 ಅಥವಾ 5
ದಾಲ್ಚಿನ್ನಿ - 1 ಇಂಚು ತುಂಡು
ಶಾಜೀರಾ - 1 ಟೀಸ್ಪೂನ್
ಏಲಕ್ಕಿ ಪುಡಿ - 1 ಟೀಸ್ಪೂನ್
ಅಚ್ಚಖಾರದ ಪುಡಿ - 1 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ ಪೇಸ್ಟ್ - 1 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್
ಫ್ರೈಡ್ ಆನಿಯನ್ಸ್ (ಕರಿದ ಈರುಳ್ಳಿ) - ಕಾಲು ಕಪ್
ಮೆಂತ್ಯ ಸೊಪ್ಪಿನ ಎಲೆಗಳು - 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು - ಕಾಲು ಕಪ್
ಕೇಸರಿ ನೆನೆಸಿದ ನೀರು - ಕಾಲು ಕಪ್
ತುಪ್ಪ - 2 ಟೇಬಲ್ ಸ್ಪೂನ್
ಚಿಕನ್ - ಅಗತ್ಯವಿರುವಷ್ಟು (ದೊಡ್ಡ ತುಂಡುಗಳು)
ನಿಂಬೆಹಣ್ಣಿನ ರಸ - ಅರ್ಧ ಹೋಳು
ಗಟ್ಟಿ ಮೊಸರು - 1 ಕಪ್
ಅಕ್ಕಿ ಬೇಯುತ್ತಿರುವ ನೀರು - ಅರ್ಧ ಕಪ್

ಅಕ್ಕಿ ಬೇಯಿಸಲು ಬೇಕಾಗುವ ಪದಾರ್ಥಗಳು

ಕಲ್ಲುಪ್ಪು
ಲವಂಗ
ಶಾಜೀರಾ
ದಾಲ್ಚಿನ್ನಿ
ಏಲಕ್ಕಿ ಪುಡಿ
ಕೊತ್ತಂಬರಿ ಸೊಪ್ಪು
ಬಾಸ್ಮತಿ ಅಕ್ಕಿ

ಲೇಯರಿಂಗ್ (ದಮ್) ಗಾಗಿ: ಕೇಸರಿ ನೆನೆಸಿದ ನೀರು

ಶಾ ಗೌಸ್ ಸ್ಟೈಲ್ ಚಿಕನ್ ದಮ್ ಬಿರಿಯಾನಿ ತಯಾರಿಸುವ ವಿಧಾನ

*ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಚ್ಛವಾಗಿ ತೊಳೆದ ಚಿಕನ್ ತುಂಡುಗಳನ್ನು ಹಾಕಬೇಕು. ಇದಕ್ಕೆ ಕಲ್ಲುಪ್ಪು, ಲವಂಗ, ದಾಲ್ಚಿನ್ನಿ, ಶಾಜೀರಾ ಸೇರಿಸಬೇಕು. ಆನಂತರ ಖಾರದಪುಡಿ, ಹಸಿಮೆಣಸಿನಕಾಯಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ತುಂಡುಗಳಿಗೆ ಚೆನ್ನಾಗಿ ಹಚ್ಚಬೇಕು. ಉತ್ತಮ ಸುಗಂಧಕ್ಕಾಗಿ ಏಲಕ್ಕಿ ಪುಡಿ, ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು, ಫ್ರೈಡ್ ಆನಿಯನ್ಸ್ ಹಾಕಿ ಕಲಿಸಬೇಕು. ಈಗ ಇದರಲ್ಲಿ ಅರ್ಧ ನಿಂಬೆಹಣ್ಣಿನ ರಸ, ಒಂದು ಕಪ್ ಮೊಸರು, ತುಪ್ಪ, ಸ್ವಲ್ಪ ಕೇಸರಿ ನೀರನ್ನು ಹಾಕಿ ಎಲ್ಲವನ್ನೂ ಚಿಕನ್‌ಗೆ ಹಿಡಿಯುವಂತೆ ಚೆನ್ನಾಗಿ ಕಲಸಿಕೊಳ್ಳಬೇಕು.

ಮತ್ತೊಂದು ಅಗಲವಾದ ಪಾತ್ರೆಯಲ್ಲಿ ಅನ್ನಕ್ಕಾಗಿ ನೀರನ್ನು ಕುದಿಸಬೇಕು. ನೀರು ಕುದಿಯುವಾಗ ಅದರಲ್ಲಿ ಕಲ್ಲುಪ್ಪು, ಲವಂಗ, ದಾಲ್ಚಿನ್ನಿ, ಶಾಜೀರಾ, ಏಲಕ್ಕಿ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಬೇಕು. ನೀರು ಚೆನ್ನಾಗಿ ಬೇಯುತ್ತಿರುವ ಸಮಯದಲ್ಲಿ ಅರ್ಧ ಗಂಟೆ ಮುಂಚಿತವಾಗಿ ನೆನೆಸಿಟ್ಟುಕೊಂಡ ಬಾಸ್ಮತಿ ಅಕ್ಕಿಯನ್ನು ಅದರಲ್ಲಿ ಹಾಕಬೇಕು (ಇದರಲ್ಲಿ ಅರ್ಧ ಕಪ್ ಅಕ್ಕಿ ಬೇಯುತ್ತಿರುವ ನೀರನ್ನು ತೆಗೆದು ಈಗಾಗಲೇ ಕಲಸಿಟ್ಟ ಚಿಕನ್‌ಗೆ ಹಾಕಬೇಕು. ಕನಿಷ್ಠ ಒಂದು ಗಂಟೆಯ ಕಾಲ ಚಿಕನ್ ಅನ್ನು ಪಕ್ಕಕ್ಕೆ ಎತ್ತಿಡಬೇಕು. ಹೀಗೆ ಮಾಡಿದರೆ ಮಸಾಲೆಗಳೆಲ್ಲವೂ ಮಾಂಸಕ್ಕೆ ಹಿಡಿದು ಒಳಗಿನವರೆಗೆ ಜ್ಯೂಸಿಯಾಗಿ ಬದಲಾಗುತ್ತದೆ) ಅಕ್ಕಿ ಸುಮಾರು ಶೇ. 70 ರಷ್ಟು (ಅನ್ನದ ಅಗುಳು ಮೃದುವಾಗುವ ಮುನ್ನ) ಬೇಯುವವರೆಗೆ ನೋಡಿಕೊಂಡು, ಸ್ಟವ್ ಆಫ್ ಮಾಡಿ ನೀರನ್ನು ಬಗ್ಗಿಸಬೇಕು.

ಈಗ ದಪ್ಪ ತಳವಿರುವ ಬಿರಿಯಾನಿ ಪಾತ್ರೆಯನ್ನು ತೆಗೆದುಕೊಂಡು, ತಳಭಾಗದಲ್ಲಿ ಮ್ಯಾರಿನೇಟ್ ಮಾಡಿಟ್ಟುಕೊಂಡ ಚಿಕನ್ ಮಿಶ್ರಣವನ್ನು ಒಂದು ಪದರದಂತೆ ಸಮಾನವಾಗಿ ಹರಡಬೇಕು. ಅದರ ಮೇಲೆ ಅರ್ಧ ಬೆಂದ ಬಾಸ್ಮತಿ ಅಕ್ಕಿಯನ್ನು ಬಿಸಿಯಾಗಿರುವಾಗಲೇ ಎರಡನೇ ಪದರದಂತೆ ಹಾಕಬೇಕು. ಕೊನೆಯದಾಗಿ ಉತ್ತಮ ಬಣ್ಣ ಮತ್ತು ರಾಜಮನೆತನದ ಸುಗಂಧಕ್ಕಾಗಿ ಕೇಸರಿ ನೆನೆಸಿದ ನೀರನ್ನು ಮೇಲ್ಭಾಗದಲ್ಲಿ ಚಿಮುಕಿಸಬೇಕು. ಪಾತ್ರೆಯ ಮೇಲೆ ಮುಚ್ಚಳವನ್ನು ಮುಚ್ಚಿ ಹಬೆ (ಆವಿ) ಹೊರಗೆ ಹೋಗದಂತೆ ಸೀಲ್ ಮಾಡಬೇಕು. ಇದನ್ನು ಮೊದಲು 5 ನಿಮಿಷ ಹೈ ಫ್ಲೇಮ್‌ನಲ್ಲಿ (ಹೆಚ್ಚಿನ ಉರಿಯಲ್ಲಿ), ಆನಂತರ 15-20 ನಿಮಿಷಗಳ ಕಾಲ ಅತ್ಯಂತ ಸಣ್ಣ ಉರಿಯಲ್ಲಿ ದಮ್ ಮಾಡಬೇಕು.

ಅಷ್ಟೇ, ಮುಚ್ಚಳ ತೆಗೆದ ತಕ್ಷಣ ಇಡೀ ಮನೆಯಲ್ಲಾ ಘಮಘಮಿಸುವ ಬಿಸಿಬಿಸಿಯಾದ ಶಾ ಗೌಸ್ ಸ್ಟೈಲ್ ಬಿರಿಯಾನಿಂದ ಕೂಡಿರುತ್ತದೆ. ತಂಪಾದ ರೈತಾದೊಂದಿಗೆ (ಮೊಸರು ಬಜ್ಜಿ) ಸೇರಿಸಿ ಬಡಿಸಿದರೆ, ಒಂದು ಅಗುಳು ಅನ್ನವನ್ನೂ ಬಿಡದೆ ಖಾಲಿ ಮಾಡುತ್ತಾರೆ!

ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ನೋಡಿ ವಿಡಿಯೋ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಣೆ ಇಲ್ಲದೆಯೂ ಮಾಡಬಹುದು ಪರ್ಫೆಕ್ಟ್ ಆದ ಗುಂಡಗಿನ ಚಪಾತಿ, ರೊಟ್ಟಿ.. ಇಲ್ಲಿವೆ 4 ಸ್ಮಾರ್ಟ್ ಟ್ರಿಕ್ಸ್
Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!