Protein dosa recipe: ರಾತ್ರಿಯಿಡೀ ನೆನೆಸಬೇಕಿಲ್ಲ... ಉದ್ದು, ಸೋಡಾ ಏನೂ ಹಾಕದೆ ಮಾಡಿ ಪ್ರೋಟೀನ್ ದೋಸೆ

Published : Jun 19, 2026, 06:25 PM IST
Protein dosa recipe

ಸಾರಾಂಶ

Protein dosa recipe: ದಿನಾ ಅದೇ ಆಲೂಗಡ್ಡೆ ಮಸಾಲೆ ದೋಸೆ ತಿಂದು ಬೇಸರವಾಗಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಸೂಪರ್ ಹೆಲ್ತೀ ರೆಸಿಪಿ! ರುಚಿಯ ಜೊತೆಗೆ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಮತ್ತು ಫೈಬರ್ ನೀಡುವ, ಗರಿಗರಿಯಾದ ಹೆಸರುಬೇಳೆ ದೋಸೆಯನ್ನು ಹೋಟೆಲ್ ಶೈಲಿಯಲ್ಲಿ ಸುಲಭವಾಗಿ ಹೇಗೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಕ್ಷಿಣ ಭಾರತೀಯ ಆಹಾರದ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಗರಿಗರಿಯಾದ ಬಿಸಿಬಿಸಿ ದೋಸೆ. ಸಾಮಾನ್ಯವಾಗಿ ಮನೆಗಳಲ್ಲಿ ಉದ್ದಿನಬೇಳೆ ಮತ್ತು ಅಕ್ಕಿ ಬಳಸಿ ಸಾಂಪ್ರದಾಯಿಕ ದೋಸೆ ಮಾಡಲಾಗುತ್ತದೆ. ಆದರೆ ಪ್ರತಿ ಬಾರಿ ಅದೇ ರುಚಿ ತಿಂದು ಬೇಸರವಾಗಿದ್ದರೆ ಮತ್ತು ನಿಮ್ಮ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿಸಬೇಕಿದ್ದರೆ, ಹೆಸರುಬೇಳೆ ಮತ್ತು ಅಕ್ಕಿಯ ಈ ದೋಸೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ನಾರಿನಂಶ (Fiber) ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

ಹಳದಿ ಹೆಸರುಬೇಳೆ (ಸಿಪ್ಪೆ ಇಲ್ಲದ್ದು): 1 ಕಪ್
ಅಕ್ಕಿ (ಕೋಲಂ ಅಥವಾ ಬಾಸ್ಮತಿ ತರಿ): 1/2 ಕಪ್
ಹಸಿರು ಮೆಣಸಿನಕಾಯಿ: 2
ಶುಂಠಿ: 1 ಇಂಚು
ಇಂಗು: ಒಂದು ಚಿಟಿಕೆ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ: ದೋಸೆ ಬೇಯಿಸಲು
ಗಾರ್ನಿಶ್ ಮಾಡಲು: ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಪನೀರ್ (ಬೇಕಿದ್ದರೆ)

ಮಾಡುವ ವಿಧಾನ

*ಮೊದಲು ಹೆಸರುಬೇಳೆ ಮತ್ತು ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು, ಒಟ್ಟಿಗೆ 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
*ನೆನೆದ ಬೇಳೆ-ಅಕ್ಕಿಯ ನೀರನ್ನು ಸೋಸಿ, ಮಿಕ್ಸಿ ಜಾರ್‌ಗೆ ಹಾಕಿ. ಅದರೊಂದಿಗೆ ಹಸಿರು ಮೆಣಸಿನಕಾಯಿ, ಶುಂಠಿ, ಇಂಗು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ (smooth paste) ರುಬ್ಬಿಕೊಳ್ಳಿ.
*ಈ ಮಿಶ್ರಣವನ್ನು ಪಾತ್ರೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಸಾಮಾನ್ಯ ದೋಸೆ ಹಿಟ್ಟಿನ ಹದದಲ್ಲಿರಲಿ (ಬಹಳ ಗಟ್ಟಿ ಅಥವಾ ತೆಳ್ಳಗೆ ಇರಬಾರದು). ಇದನ್ನು 10 ನಿಮಿಷ ಸೆಟ್ ಆಗಲು ಬಿಡಿ.
*ದೋಸೆ ತವಾವನ್ನು ಮಧ್ಯಮ ಉರಿಯಲ್ಲಿ ಕಾಯಿಸಿ, ಸ್ವಲ್ಪ ನೀರು ಚಿಮುಕಿಸಿ ಬಟ್ಟೆಯಿಂದ ಒರೆಸಿ. ಈಗ ತವಾದ ಮಧ್ಯದಲ್ಲಿ ಒಂದು ಸೌಟು ಹಿಟ್ಟು ಹಾಕಿ, ಒಳಗಿನಿಂದ ಹೊರಗಿನ ಕಡೆಗೆ ವೃತ್ತಾಕಾರವಾಗಿ ತೆಳ್ಳಗೆ ಹರಡಿ.
*ದೋಸೆಯ ಸುತ್ತಲೂ ಮತ್ತು ಮಧ್ಯದಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಕೆಳಭಾಗದಲ್ಲಿ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಬೇಯಿಸಿ.
*ದೋಸೆ ತಾನಾಗಿಯೇ ಏಳುವಾಗ, ಮೇಲಿನಿಂದ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಮತ್ತು ಪನೀರ್ ಉದುರಿಸಿ ಮಡಚಿ. ಈಗ ಬಿಸಿಬಿಸಿ ಪ್ರೋಟೀನ್ ದೋಸೆಯನ್ನು ಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಸವಿಯಲು ನೀಡಿ.

ಗಮನದಲ್ಲಿರಲಿ..

ಪರ್ಫೆಕ್ಟ್ ಪ್ರಮಾಣ (2:1 ಅನುಪಾತ): ದೋಸೆ ಹರಿದು ಹೋಗದೆ ಗರಿಗರಿಯಾಗಿ ಬರಲು 1 ಕಪ್ ಹೆಸರುಬೇಳೆಗೆ ಅರ್ಧ ಕಪ್ ಅಕ್ಕಿ ಅಥವಾ ಬಾಸ್ಮತಿ ತರಿ ಕಡ್ಡಾಯವಾಗಿ ಬಳಸಿ.
ಹೆಚ್ಚಿನ ಕ್ರಿಸ್ಪಿನೆಸ್‌ಗಾಗಿ ಮೆಂತ್ಯ: ಬೇಳೆ ಮತ್ತು ಅಕ್ಕಿ ನೆನೆಸುವಾಗ 1 ಚಮಚ ಮೆಂತ್ಯ ಕಾಳುಗಳನ್ನು ಸೇರಿಸಿದರೆ ದೋಸೆ ಹೋಟೆಲ್ ಶೈಲಿಯಲ್ಲಿ ಚೆನ್ನಾಗಿ ಕೆಂಪಗೆ ಮತ್ತು ಗರಿಗರಿಯಾಗಿ ಬರುತ್ತದೆ.
ತವಾ ತಾಪಮಾನ ನಿಯಂತ್ರಣ: ಪ್ರತಿ ದೋಸೆ ಹಾಕುವ ಮುನ್ನ ತವಾದ ಮೇಲೆ ಸ್ವಲ್ಪ ನೀರು ಚಿಮುಕಿಸಿ, ಬಟ್ಟೆ ಅಥವಾ ಟಿಶ್ಯೂನಿಂದ ಒರೆಸಿ ತಣ್ಣಗಾಗಿಸಿ. ನಂತರ ಉರಿ ಕಡಿಮೆ ಮಾಡಿ ಹಿಟ್ಟನ್ನು ಹರಡಿ.
ಜೀರ್ಣಕ್ರಿಯೆಗೆ ಶುಂಠಿ-ಇಂಗು: ಹೆಸರುಬೇಳೆ ಜೀರ್ಣಾಗಲು ಸುಲಭವಾಗಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಆಗದಿರಲು ರುಬ್ಬುವಾಗ 1 ಇಂಚು ಶುಂಠಿ ಮತ್ತು ಒಂದು ಚಿಟಿಕೆ ಇಂಗು ಕಡ್ಡಾಯವಾಗಿ ಸೇರಿಸಿ.
ತುಪ್ಪ ಅಥವಾ ಬೆಣ್ಣೆಯ ಬಳಕೆ: ದೋಸೆ ಬೇಯಿಸುವಾಗ ಕೇವಲ ಎಣ್ಣೆ ಬಳಸುವ ಬದಲು ತುಪ್ಪ ಅಥವಾ ಬೆಣ್ಣೆ ಬಳಸಿದರೆ ದೋಸೆಯ ರುಚಿ ಮತ್ತು ಘಮ ದುಪ್ಪಟ್ಟಾಗುತ್ತದೆ.
ಹೋಟೆಲ್ ಸ್ಟೈಲ್ : ದೋಸೆ ಬೆಂದ ನಂತರ ಮೇಲಿನಿಂದ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ತುರಿದ ಪನೀರ್ ಮತ್ತು ಸ್ವಲ್ಪ ಚಾಟ್ ಮಸಾಲಾ ಉದುರಿಸಿದರೆ ಸೂಪರ್ ಆಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿಂಡರ್ ಜಾಯ್, ಸಫೋಲಾ ಸೇರಿ ಹಲವು ಉತ್ಪನ್ನಕ್ಕೆ ಆಹಾರ ಸುರಕ್ಷತೆ ಪ್ರಾಧಿಕಾರ ನೋಟಿಸ್, ಕಾರಣವೇನು?
ಮಾನ್ಸೂನ್ ಬರ್ತಿದ್ದಂಗೆ ನಿಮ್ಮ ತಟ್ಟೆಯಿಂದ ಈ ಆಹಾರಗಳಿಗೆ ಗುಡ್ ಬೈ ಹೇಳಿ