ಈ ಸಿಂಪಲ್‌ ಟೆಕ್ನಿಕ್‌ನಿಂದ ವರ್ಷವಾದರೂ ಕೂಡ ಹುಣಸೆ ಹಣ್ಣು ಕಪ್ಪಾಗದಂತೆ, ಹಾಳಾಗದಂತೆ ತಡೆಯಬಹುದು!

Published : Apr 22, 2026, 12:06 PM IST
tamarind

ಸಾರಾಂಶ

Tamarind: ಅಡುಗೆಯಲ್ಲಿ ಹುಣಸೆ ಹಣ್ಣು ಇಲ್ಲ ಎಂದರೆ ರುಚಿಯೇ ಇರೋದಿಲ್ಲ. ಅಂದಹಾಗೆ ಹುಣಸೆ ಹಣ್ಣಿನ ಕಲರ್‌ ಬದಲಾಗದಂತೆ, ಹಾಳಾಗದಂತೆ ವರ್ಷಗಟ್ಟಲೇ ಶೇಖರಣೆ ಮಾಡಿ ಇಡಬಹುದು. ಹಾಗಾದರೆ ಇದಕ್ಕೆ ಏನು ಪರಿಹಾರ ಇದೆ? 

ಹುಣಸೆ ಹಣ್ಣು ಒಂದಿಷ್ಟು ಸಮಯ ಆದ್ಮೇಲೆ ಕಪ್ಪಗಾಗೋದುಂಟು, ಹಾಳಾಗುವುದು. ಇದು ಹಾಳಾಗದಂತೆ ವರ್ಷಗಟ್ಟಲೇ ಹೇಗೆ ಇಡಬಹುದು ಎಂದು ಶಿರಸಿ ಮೂಲದ ರವಿಚಂದ್ರ ಹೆಗಡೆ ಎನ್ನುವವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರವಿಚಂದ್ರ ಹೆಗಡೆ ನೀಡಿದ ಸಲಹೆ ಏನು?

  • ಮಾರುಕಟ್ಟೆಯಿಂದ ತಂದ ಹುಣಸೆ ಹಣ್ಣನ್ನು ಸೋಸುವ ಮೂಲಕ ಅದರಲ್ಲಿನ ನಾರು, ಬೀಜವನ್ನೆಲ್ಲ ತೆಗೆದು ಅದಕ್ಕೆ ಉಪ್ಪನ್ನು ಹಾಕಿ ಕುಟ್ಟಿ ಬಿಸಿಲಿನಲ್ಲಿ ಒಣಗಿಸಿ ಈ ರೀತಿಯ ಉಂಡೆ ಕಟ್ಟಿ ವರ್ಷಾನುಗಟ್ಟಲೆ ಇಟ್ಟುಕೊಳ್ಳುವ ಪದ್ಧತಿ ನಮ್ಮಲ್ಲಿದೆ. ಇದರಿಂದ ಮೃದುವಾದ ಹುಣಸೆ ಹಣ್ಣನ್ನು ಅಡುಗೆ ಸಮಯದಲ್ಲಿ ಸುಲಭವಾಗಿ ಬಳಸಬಹುದು!
  • ಆದರೆ ಎಲ್ಲೆಡೆಯೂ ಹುಣಸೆಹಣ್ಣನ್ನು ಇದೇ ರೀತಿ ಸಂಸ್ಕರಿಸಿಟ್ಟು ಬಳಸುತ್ತಾರೆಯೇ ಅಥವಾ ನೇರವಾಗಿ ಬಳಸುತ್ತಾರೆಯೇ ಎನ್ನುವ ಪ್ರಶ್ನೆಯನ್ನು ಅಮ್ಮನಲ್ಲಿ ಕೇಳಿದಾಗ ಬಹುತೇಕ ಇದೇ ರೀತಿ ಮಾಡಬಹುದು, ಅಥವಾ ಕೆಲ ಬೇರೆ ವಿಧಾನಗಳು ಇರಬಹುದು ಎನ್ನುವ ಉತ್ತರ ಬಂತು.!
  • ನಾವು ತಿಳಿದು ಪಾಲಿಸಿಕೊಂಡು ಬರುತ್ತಿರುವ ವಿಧಾನ ನಮಗೆ ಯಾವಾಗಲೂ ಅಚ್ಚು ಮೆಚ್ಚು! ಆದರೆ ಬೇರೆ ಬೇರೆ ವಿಧಾನವಿದ್ದಲ್ಲಿ ಸಹ ಅದನ್ನು ತಿಳಿದುಕೊಳ್ಳಲು ತಪ್ಪೇನು ಎನ್ನುವ ಕಾರಣಕ್ಕೆ ಈ ವಿಷಯವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ!

ಓದುಗರು ಏನು ಸಲಹೆ ನೀಡಿದ್ದಾರೆ?

  • ಹುಣಸೆಯ ಬಿಳಿ ಭಾಗ ಮೇಲೆ ಬರುವ ಹಾಗೆ ಅದರ ಅಂಟಿನ ಪದರು ಒಳಗೆ ಮಾಡಿ ಒಂದಕ್ಕೊಂದು ಮೆತ್ತಿಸಿ ಇಡ್ತಾರೆ, ಉಪ್ಪು ಎಲ್ಲಾ ಹಾಕೊಲ್ಲ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸ್ತಾರೆ ಅಷ್ಟೇ. ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಡ್ತಾರೆ. ಒಂದು ವರ್ಷದ ತನಕ ಕಪ್ಪು ಕೂಡಾ ಆಗದ ಹಾಗೇ ಇರುತ್ತೆ. ವರ್ಷ ಕಳೆದ ನಂತರ ಸ್ವಲ್ಪ ಬಣ್ಣ ಬದಲಾಗುತ್ತೆ.
  • ನಾರು ಮತ್ತು ಬೀಜ ತೆಗೆದು ಒಂದು ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಡ್ತೀನಿ ಒಂದು ವರ್ಷ ಆದರೂ ಹುಣಸೇ ಹಣ್ಣು ಕಪ್ಪು ಬಣ್ಣ ಆಗಲ್ಲ
  • ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವ ಅಥವಾ ಕೆಲಸದ ಒತ್ತಡ ಇದ್ದಾಗ ಕೆಲವರು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ, ಕಿವುಚಿ, ಸೋಸಿದ ದಪ್ಪನೆಯ ರಸಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಶಿಣ ಸೇರಿಸಿ 'ಹುಣಸೆ ಪೇಸ್ಟ್' ಮಾಡಿ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ, ಇದು ಅಡುಗೆ ಮಾಡುವಾಗ ಕ್ಷಣಾರ್ಧದಲ್ಲಿ ಬಳಸಲು ಬಹಳ ಅನುಕೂಲವಾಗುತ್ತದೆ. ಇದರ ಜೊತೆಗೆ, ನಾರು ಮತ್ತು ಬೀಜ ತೆಗೆದ ಹುಣಸೆಹಣ್ಣನ್ನು ಏರ್-ಟೈಟ್ ಡಬ್ಬಿಗಳಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡುವುದರಿಂದಲೂ ಅದು ಬಣ್ಣ ಬದಲಾಗದಂತೆ ಮತ್ತು ಹಸಿ ವಾಸನೆಯನ್ನು ಕಳೆದುಕೊಳ್ಳದಂತೆ ತಾಜಾವಾಗಿರುತ್ತದೆ.
  • ಬೀಜ ನಾರು ತೆಗೆದು ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ ಎರಡು ದಿನ ಇಟ್ಟು ಸ್ವಲ್ಪ ಮೆತ್ತಗೆ ಆದಮೇಲೆ ಒರಳಿನಲ್ಲಿ ಹಾಕಿ ಹಾರೆ ಕೋಲಿನಿಂದ ಕುಟ್ಟಿ ಉಂಡೆ ಮಾಡಿ ಇಡುವುದು ವರ್ಷ ಗಟ್ಟಲೆ ಹಾಳಾಗುವುದಿಲ್ಲ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಬೆಸ್ಟ್ ಬಿರಿಯಾನಿ ತಿನ್ನಬೇಕು ಅಂದ್ರೆ ಈ ಸ್ಪಾಟ್ ಮಿಸ್ ಮಾಡ್ಬೇಡಿ
ಕಲಸಿದ ಚಪಾತಿ ಹಿಟ್ಟು ಕಪ್ಪಾಗಬಾರದೇ? ಇಷ್ಟು ಮಾಡಿ.. 2 ದಿನದ ನಂತರವೂ ಫ್ರೆಶ್ ಆಗಿರುತ್ತೆ