ಮನೆಗೆ ಬೇಕಾದ ಪಾತ್ರೆಗಳನ್ನು ಇಷ್ಟಪಟ್ಟು ಖರೀದಿ ಮಾಡಿರುತ್ತೇವೆ. ಪಾತ್ರೆ ಹಳೆಯದಾದಂತೆ ತುಕ್ಕು ಹಿಡಿಯುತ್ತದೆ. ಕೆಲವೊಮ್ಮೆ ಇಟ್ಟಲ್ಲೇ ಪಾತ್ರೆ ತುಕ್ಕು ಹಿಡಿಯುತ್ತದೆ. ಉಜ್ಜಿ ಉಜ್ಜಿ ಕೈ ನೋವಾಗಿ ಅದನ್ನು ಎಸೆಯಲು ಮುಂದಾಗ್ತೇವೆ. ಇನ್ಮುಂದೆ ಅದನ್ನು ಎಸೆಯುವ ಬದಲು ಈ ಟ್ರಿಕ್ ಪಾಲಿಸಿ.
ಅಡುಗೆ(Cooking) ಎಷ್ಟೇ ರುಚಿಯಿದ್ದರೂ ಕೆಲವೊಮ್ಮೆ ಅಡುಗೆ ಮನೆ (Kitchen)ಹಾಗೂ ಪಾತ್ರೆಗಳು ಅದ್ರ ರುಚಿ(Taste)ಯನ್ನು ಹಾಳು ಮಾಡುತ್ತವೆ. ಸ್ವಚ್ಛವಿಲ್ಲದ ಅಡುಗೆ ಮನೆ,ಕೊಳಕಾದ ಪಾತ್ರೆಗಳು ಕಣ್ಣಿಗೆ ಬಿದ್ದರೆ ತುತ್ತು ಒಳಗೆ ಹೋಗುವುದಿಲ್ಲ.ಹೊಳೆಯುವ (bright) ಅಡುಗೆ ಮನೆ ಇರಬೇಕೆಂಬುದು ಎಲ್ಲರ ಬಯಕೆಯಾಗಿರುತ್ತದೆ. ಪಾತ್ರೆಗಳು ಥಳ ಥಳ ಹೊಳೆಯುತ್ತಿದ್ದರೆ ಅಡುಗೆ ಮಾಡಲು ಆಸಕ್ತಿ ಹೆಚ್ಚಾಗುತ್ತದೆ. ಪಾತ್ರೆಗಳ ಮೇಲೆ ತುಕ್ಕು, ಕಪ್ಪು ಕಲೆಗಳಿದ್ದರೆ ಅದು ಕಿಚನ್ ಸೌಂದರ್ಯ ಹಾಳು ಮಾಡುತ್ತದೆ. ಕೆಲವರ ಮನೆಗಳಲ್ಲಿ ಹೆಂಚು, ಸ್ಟೀಲ್ (Steel )ಪಾತ್ರೆಗಳು ತುಕ್ಕು ಹಿಡಿದಿರುತ್ತವೆ. ಎಷ್ಟೇ ಉಜ್ಜಿದರೂ ಕಲೆ ಸ್ವಚ್ಛವಾಗುವುದಿಲ್ಲ. ಪಾತ್ರೆಗಳನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಕೆಲವು ಹಳೆಯ ಪಾತ್ರೆಗಳು ಸಹ ತುಕ್ಕು ಹಿಡಿಯುತ್ತವೆ. ಇದಲ್ಲದೆ, ನೆಲದ ಅಂಚುಗಳು ಮತ್ತು ಮಾರ್ಬಲ್‌ಗಳ ಮೇಲೆ ತುಕ್ಕು ಗುರುತುಗಳು ಕಂಡುಬರುತ್ತವೆ.
ಕಬ್ಬಿಣದ ವಸ್ತುಗಳನ್ನು ಅಡಿಗೆ ಮನೆ ಅಥವಾ ಬಾತ್ ರೂಮಿನಲ್ಲಿ (Bathroom )ನೆಲದ ಮೇಲೆ ಇರಿಸಿದರೆ, ಅದರ ಕಲೆಗಳು ಅಂಟಿಕೊಳ್ಳುತ್ತವೆ. ಈ ತುಕ್ಕುಗಳನ್ನು ಸುಲಭವಾಗಿ ತೆಗೆಯುವುದು ಸಾಧ್ಯವಿಲ್ಲ. ಇದಕ್ಕಾಗಿ ನೀವು ಕೆಲವು ವಿಶೇಷ ಟಿಪ್ಸ್ ಬಳಸಬೇಕು.
ಸ್ಟೀಲ್ ಪಾತ್ರೆಗಳ ಮೇಲಿನ ತುಕ್ಕು ಗುರುತುಗಳು ಅಥವಾ ನೆಲ ಮೇಲಿನ ತುಕ್ಕು ಗುರುತುಗಳನ್ನು ಹೋಗಲಾಡಿಸುವ ವಿಧಾನಗಳನ್ನು ಇಂದು ನಾವು ನಿಮಗೆ ಹೇಳ್ತೆವೆ.
ಪಾತ್ರೆಗಳ ಮೇಲಿರುವ ತುಕ್ಕು(Rust )ಗುರುತುಗಳನ್ನು ಸ್ವಚ್ಛಗೊಳಿಸಲು ಹೀಗೆ ಮಾಡಿ :
ಉಪ್ಪು(Salt) ಮತ್ತು ನಿಂಬೆ(Lemon) ತುಕ್ಕನ್ನು ತೆಗೆದುಹಾಕುವ ಗುಣ ಹೊಂದಿದೆ. ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತುಕ್ಕು ಇರುವ ಜಾಗಕ್ಕೆ ಹಚ್ಚಿ ಉಜ್ಜಬೇಕು. ಉಜ್ಜಿದ ನಂತರ ಐದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆನಂತರ ಶುದ್ಧ ನೀರಿನಿಂದ ಪಾತ್ರೆಯನ್ನು ಸ್ವಚ್ಛಗೊಳಿಸಬೇಕು.
undefined
ಉಪ್ಪು,ನಿಂಬೆ ರಸ ಮಾತ್ರವಲ್ಲ ಅಡಿಗೆ ಸೋಡಾ (Baking soda )ಕೂಡ ಕಲೆ ತೆಗೆಯುತ್ತದೆ. ಇದಕ್ಕೆ ಅಡುಗೆ ಸೋಡಾ ಮತ್ತು ಉಪ್ಪನ್ನು ಬಳಸಬೇಕು. ಪಾತ್ರೆಗಳ ಮೇಲಿನ ತುಕ್ಕು ಹೋಗಬೇಕೆಂದ್ರೆ ಉಪ್ಪು ಮತ್ತು ಸೋಡಾ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ. ಸ್ವಲ್ಪ ಉಜ್ಜಿದ ನಂತರ ಅದನ್ನು ಐದು ನಿಮಿಷ ಬಿಟ್ಟು ನಂತರ ತೊಳೆಯಿರಿ.
Relationship Tips: ಅಪ್ಪಿತಪ್ಪಿಯೂ ಸಂಗಾತಿ ಮುಂದೆ ಈ ಮಾತಾಡ್ಬೇಡಿ
ಪಾತ್ರೆಯ ಮೇಲಿರುವ ತುಕ್ಕು ತೆಗೆಯಲು ಆಲೂಗಡ್ಡೆ (Potato)ಯನ್ನು ಸಹ ಬಳಸಬಹುದು. ತಿನ್ನಲು ಮಾತ್ರ ಆಲೂಗಡ್ಡೆ ರುಚಿಯಲ್ಲ. ಇದ್ರಿಂದ ಅನೇಕ ಪ್ರಯೋಜನವಿದೆ. ಆಲೂಗಡ್ಡೆಯಲ್ಲಿ ವಿಭಿನ್ನ ರೀತಿಯ ಆಮ್ಲವು ಕಂಡುಬರುತ್ತದೆ. ಆಲೂಗಡ್ಡೆಯ ಸಿಪ್ಪೆ ತೆಗೆದು,ತುಕ್ಕು ಹಿಡಿದ ಜಾಗಕ್ಕೆ ಆಲೂಗಡ್ಡೆಯನ್ನು ಉಜ್ಜಬೇಕು. ಸ್ವಲ್ಪ ಸಮಯದ ನಂತರ ನೀರಿನಿಂದ ಸ್ವಚ್ಛಗೊಳಿಸಬೇಕು.
ನೆಲದ ಮೇಲಿರುವ ತುಕ್ಕನ್ನು ಹೀಗೆ ತೆಗೆಯಿರಿ :
ಗ್ಯಾಸ್ ಸಿಲಿಂಡರ್ ಸೇರಿದಂತೆ ಕಬ್ಬಿಣದ ವಸ್ತುಗಳನ್ನು ಇಟ್ಟ ಜಾಗದಲ್ಲಿ ಕಲೆಯಾಗುವುದು ಸಾಮಾನ್ಯ. ಅದನ್ನು ತೆಗೆಯದೆ ಹೋದಲ್ಲಿ ನೆಲ ಕೊಳಕಾಗಿ ಕಾಣುತ್ತದೆ. ಅದರ ಕಲೆ ತೆಗೆಯಲು ಸೀಮೆ ಎಣ್ಣೆ (Kerosene )ನೆರವಾಗುತ್ತದೆ. ತುಕ್ಕು ಹಿಡಿದ ಜಾಗಕ್ಕೆ ಸೀಮೆಎಣ್ಣೆ ಹಾಕಿ ಅದನ್ನು ಹರಡಬೇಕು. ಸುಮಾರು 10 ನಿಮಿಷಗಳ ನಂತರ, ಹತ್ತಿ ಬಟ್ಟೆಯಿಂದ ತುಕ್ಕು ಹಿಡಿದ ಜಾಗವನ್ನು ಉಜ್ಜು ಬೇಕು. ತಕ್ಷಣ ಆ ಜಾಗವನ್ನು ತೊಳೆಯಬೇಡಿ. ಐದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ನೆಲದಲ್ಲಿ ಕಾಣಿಸಿಕೊಂಡ ತುಕ್ಕು ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತದೆ.
China Baby Loans: ಜನಸಂಖ್ಯೆ ಪ್ರಮಾಣ ಕುಸಿತ: 2ಕ್ಕಿಂತ ಹೆಚ್ಚು ಮಕ್ಕಳಾದರೆ ಸರ್ಕಾರದಿಂದ ವಿಶೇಷ ಆಫರ್ಸ್!
ಅನೇಕ ಬಾರಿ ಬಟ್ಟೆ ಮೇಲೆ ತುಕ್ಕಿನ ಗುರುತು ಕಾಣಿಸಿಕೊಳ್ಳುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಸುಲಭ. ಬಟ್ಟೆಯ ಮೇಲೆ ಅಡಿಗೆ ಸೋಡಾ ಮತ್ತು ನೀರಿನ ಮಿಶ್ರಣ ಹಾಕಿ. 2 ಗಂಟೆಗಳ ಕಾಲ ಬಿಟ್ಟು ಕೈಗಳಿಂದ ಉಜ್ಜುವ ಮೂಲಕ ತೊಳೆಯಿರಿ. ಹೀಗೆ ಮೂರ್ನಾಲ್ಕು ಬಾರಿ ಮಾಡಿದರೆ ತುಕ್ಕು ಮಾಯವಾಗುತ್ತದೆ.