ಚುಮು ಚುಮು ಚಳಿಯಲ್ಲಿ,ಬಿಸಿ ಬಿಸಿ ಚಹಾ ಕೈನಲ್ಲಿದ್ದರೆ ಅದ್ರ ಮಜವೇ ಬೇರೆ. ಟೀ ಕುಡಿದ ನಂತ್ರ ಕಪ್ ಎಸೆಯೋಕೆ ಏಳ್ಬೇಕಲ್ಲ ಅಂತಾ ಬೇಸರಪಟ್ಟುಕೊಳ್ಳುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಟೀ ಜೊತೆ ಕಪ್ ತಿನ್ನುವ ಸ್ಟಾರ್ಟ್ ಅಪ್ ಎಲ್ಲರನ್ನು ಆಕರ್ಷಿಸುತ್ತಿದೆ.
ಟೀ (Tea). ಹೆಸರು ಕೇಳುತ್ತಿದ್ದಂತೆ ನಿದ್ದೆಗಣ್ಣಿನಲ್ಲಿ ಎದ್ದು ಕುಳಿತುಕೊಳ್ಳುವವರಿದ್ದಾರೆ. ಚಹಾ ಕುಡಿಯಲು ಇಷ್ಟಪಡುವವರು ಯಾವಾಗ,ಎಲ್ಲಿ ಚಹಾ ಕೊಟ್ಟರೂ ಖುಷಿ (Enjoy)ಯಿಂದ ಕುಡಿಯುತ್ತಾರೆ. ದಿನಕ್ಕೆ 10 ಕಪ್(Cup) ಗಿಂತ ಹೆಚ್ಚು ಚಹಾ ಕುಡಿಯುವವರಿದ್ದಾರೆ. ಟೀ ಒಂದು ರೀತಿಯ ಅಮಲು ಎಂದರೆ ತಪ್ಪಾಗಲಾರದು. ಅನೇಕರ ದಿನದ ಆರಂಭ ಚಹಾದಿಂದ ಶುರುವಾಗುತ್ತದೆ. ಟೀ ಕುಡಿದಿಲ್ಲವೆಂದರೆ ಕೆಲಸ (Work) ಶುರು ಮಾಡುವ ಮೂಡ್ (Mood) ಇರುವುದಿಲ್ಲ. ಒತ್ತಡ (Stress)ದಿಂದ ರಿಲ್ಯಾಕ್ಸ್ (Relax )ಆಗ್ಬೇಕೆಂದ್ರೆ ಕೆಲವರಿಗೆ ಕಪ್ ಟೀ ಬೇಕು. ಇನ್ನು ಕೆಲವರು ಲೋಟಗಟ್ಟಲೇ ಚಹಾ ಸೇವಿಸುತ್ತಾರೆ. ಊಟದ ಜೊತೆ ನೀರಿನ ಬದಲು ಟೀ ಕುಡಿಯುವವರೂ ಇದ್ದಾರೆ.
ಕುಲ್ಹಾದ್ ಚಹಾ (Kulhad Tea): ಟೀ ಕುಡಿಯೋದಕ್ಕೂ ಸ್ಟೈಲ್ ಇದೆ. ತಮ್ಮಿಷ್ಟದ ಕಪ್ ನಲ್ಲಿ ಟೀ ಕುಡಿದ್ರೆ ಮಾತ್ರ ಕೆಲವರಿಗೆ ನೆಮ್ಮದಿ. ಮತ್ತೆ ಕೆಲವರು ಮಣ್ಣಿನ ಕಪ್ ನಲ್ಲಿ ಚಹಾ ಸೇವಿಸಲು ಇಷ್ಟಪಡ್ತಾರೆ. ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಕಡೆ ಮಣ್ಣಿನ ಕಪ್ ನಲ್ಲಿ ಈಗ ಟೀ ಸಿಗ್ತಿದೆ. ಟೀ ರುಚಿ ಜೊತೆ ಕಪ್ ವಾಸನೆ ಇಷ್ಟವಾಗುತ್ತದೆ. ಕುಲ್ಹಾದ್ ನಲ್ಲಿ ಟೀ ಕುಡಿದವರು ಕಪ್ ಬಿಸಾಕದೆ ಮನೆಗೆ ತೆಗೆದುಕೊಂಡು ಬರ್ತಾರೆ. ಇದು ಪರಿಸರವನ್ನು ರಕ್ಷಿಸುತ್ತದೆ. ಪ್ಲಾಸ್ಟಿಕ್ ಕಪ್ ಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣದಿಂದಲೇ ಕುಲ್ಹಾದ್ ಚಹಾ ಈಗ ಪ್ರಸಿದ್ಧಿ ಪಡೆಯುತ್ತಿದೆ.
ತಿನ್ನಲೂ ಬರುತ್ತೆ ಟೀ ಕಪ್ :
ಈಗ ಟೀ ಕುಡಿಯೋದು ಮಾತ್ರವಲ್ಲ ಟೀ ಹಾಕಿದ ಕಪ್ ತಿನ್ನಬಹುದು. ಆಶ್ಚರ್ಯವಾದ್ರೂ ಇದು ಸತ್ಯ. ಮಧ್ಯಪ್ರದೇಶದ (Madhya Pradesh )ಶಾಹದೋಲ್ ಜಿಲ್ಲೆಯಲ್ಲಿ ಇಂತಹದೊಂದು ಅಂಗಡಿ(Store)ಯಿದೆ. ಜನರು ಟೀ ಸವಿಯುವುದಲ್ಲದೆ ಕಪ್ ತಿನ್ನುತ್ತಾರೆ.
ಶಾಹದೋಲ್ ಜಿಲ್ಲಾಸ್ಪತ್ರೆಯ ಬಳಿ ಇಬ್ಬರು ಯುವಕರು ಟೀ ಸ್ಟಾಲ್ (Tea Stall )ನಡೆಸುತ್ತಿದ್ದಾರೆ. ಈ ಅಂಗಡಿಯ ಹೆಸರು 'ಚಾಯ್ ಪಿಯೋ, ಕಪ್ ಖಾ ಜಾವೋ'. ರಿಂಕು ಅರೋರಾ (Rinku Arora) ಮತ್ತು ಪಿಯೂಶ್ ಕುಶ್ವಾಹ (Piyush Kushwaha )ಈ ಟೀ ಅಂಗಡಿ ನಡೆಸುತ್ತಿದ್ದಾರೆ. ಹೊಸ ಪರಿಕಲ್ಪನೆಯಿಂದ ಶುರುವಾದ ಸ್ಟಾರ್ಟ್ಅಪ್ (Startup ) ಗ್ರಾಹಕ (Customer )ರ ಗಮನ ಸೆಳೆಯುತ್ತಿದೆ.
ಬಲು ದುಬಾರಿ ಈ ಚಹಾ... ಇದರ ಬೆಲೆ ಕೇಳಿದ್ರಾ?
ಬಿಸ್ಕತ್ ವೇಫರ್ (Biscuit Wafer)ನಿಂದ ತಯಾರಾಗಿದೆ ಟೀ ಕಪ್ : ಕೋನ್ ಐಸ್ ಕ್ರೀಮ್ (Cone Ice Cream )ನಲ್ಲಿ ಬಿಸ್ಕತ್ ವೇಫರ್ ಇರುತ್ತದೆ. ಐಸ್ ಕ್ರೀಮ್ ಜೊತೆ ನಾವು ಅದನ್ನೂ ತಿನ್ನುತ್ತೇವೆ. ಈಗ ಟೀಗೂ ಬಿಸ್ಕತ್ ವೇಫರ್ ಬಂದಿದೆ. ಟೀ ಕುಡಿದ ನಂತರ, ಜನರು ಕಪ್ ಎಸೆಯುವಂತಿಲ್ಲ. ಕಪ್ ತಿನ್ನಬಹುದು.
ಕಡಿಮೆ ಬೆಲೆಗೆ ರುಚಿ ರುಚಿ ಟೀ : ಬಿಸ್ಕತ್ ವೇಫರ್ ನಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಹಾಗಾಗಿ ನಾವು ಪ್ಲಾಸ್ಟಿಕ್ ಕಪ್ ಬದಲು ಬಿಸ್ಕತ್ ವೇಫರ್ ನಲ್ಲಿ ಟೀ ನೀಡುತ್ತಿದ್ದೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಶಾಹದೋಲ್‌ನ ಈ ಅಂಗಡಿಗೆ ಜನರು ಟೀ ಕುಡಿಯಲು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.
ಈ ಗಿಡಮೂಲಿಕೆ ಮಸಾಲಾ ಚಹಾ ಕುಡಿದು ಮಲಗಿದ್ರೆ ತೂಕ ಇಳಿಯುತ್ತೆ!
ಚಳಿಗಾಲದ(Winter)ಲ್ಲಿ ಟೀ ಕುಡಿಯುವ ಮಜವೇ ಬೇರೆ. ಹಾಗಾಗಿಯೇ ಚಳಿಗಾಲದಲ್ಲಿ ಈ ವಿಶೇಷ ಚಹಾಕ್ಕೆ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಅಂಗಡಿಯಲ್ಲಿ ಈ ಚಹಾದ ಬೆಲೆ 20 ರೂಪಾಯಿ. ರಿಂಕು ಮತ್ತು ಪಿಯೂಷ್ ಬೇರೆಯವರನ್ನು ಅವಲಂಬಿಸಿಲ್ಲ. ಅವರೇ ಅಂಗಡಿಯಲ್ಲಿ ಚಹಾ ತಯಾರಿಸುತ್ತಾರೆ. ಇವರು ಮಾಡುವ ಚಹಾ ಜನಕ್ಕೆ ತುಂಬಾ ಇಷ್ಟವಾಗಿದೆ. ಟೀ ಕಪ್ ಬಿಸ್ಕತ್ ವೇಪರ್ ನಿಂದ ಮಾಡಿರುವ ಕಾರಣ ಇದು ಮಕ್ಕಳಿಗೂ ಇಷ್ಟವಾಗಿದೆ.