Health Tips: ಮೆದುಳು ಶಾರ್ಪ್ ಆಗಿರಬೇಕಾ ? ಈ ಆಹಾರ ಮಿಸ್ ಮಾಡ್ಕೊಬೇಡಿ

By Suvarna NewsFirst Published Dec 24, 2021, 1:09 PM IST
Highlights

ದೇಹದ ಎಲ್ಲ ಕೆಲಸಕಾರ್ಯಗಳು ಸುಗಮವಾಗಿ ಆಗಬೇಕೆಂದರೆ ಮಿದುಳು ಸದೃಢವಾಗಿರಬೇಕು. ಮಿದುಳಿನ ಸಾಮರ್ಥ್ಯ ಚೆನ್ನಾಗಿದ್ದರಷ್ಟೇ ಮನುಷ್ಯ ಚೆನ್ನಾಗಿರಲು ಸಾಧ್ಯ. ಕೆಲವರಿಗೆ ಸಮಯಕ್ಕೆ ಸರಿಯಾಗಿ ಏನೋ ಮರೆತುಹೋಗುವುದು. ಆ ತಕ್ಷಣದಲ್ಲಿ ಮಾಡಬೇಕಾದ ಕಾರ್ಯ ಮಾಡಲು ತಡವರಿಸಿದಂತಾಗುವುದು ಇವೆಲ್ಲ ಮಿದುಳಿನ ಕ್ಷಮತೆ ಕುಗ್ಗಿರುವ ಲಕ್ಷಣಗಳು. ಹಾಗಾಗದೆ ಇರಲು ಮಿದುಳಿಗೆ ಪೂರಕವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು.

ನಿರ್ದಿಷ್ಟ ಕ್ಷಣದಲ್ಲಿ ಏನೋ ಮರೆತಂತಾಗುವುದು, ಮಾಡಬೇಕಾದ ಕೆಲಸ-ಕಾರ್ಯಗಳ ಬಗ್ಗೆ ನೆನಪಿಲ್ಲದಿರುವುದು ((Memory Loss), ವಯಸ್ಸಾದಂತೆ ಮರೆವು ಕಾಯಿಲೆ (Dementia) ಕಾಡುವುದು. ಇಂತಹ ಹಲವಾರು ಸಮಸ್ಯೆಗಳ ನಡುವೆ ಬದುಕು ಸಾಗುತ್ತಿರುತ್ತದೆ. ನಮ್ಮ ಯಾವುದೇ ಸಾಮರ್ಥ್ಯದ ಮೂಲ ಮಿದುಳು (Brain). ಮಿದುಳೊಂದು ಚೆನ್ನಾಗಿದ್ದರೆ ಎಲ್ಲವೂ ಸುಗಮವಾಗಿ ಸಾಗುತ್ತಿರುತ್ತದೆ. ಮಿದುಳು ನಮಗೆ ಇಷ್ಟೆಲ್ಲ ಕೊಡುಗೆ ನೀಡಬೇಕಾದರೆ ನಾವೂ ಮಿದುಳಿಗೆ ಏನಾದರೊಂದು ಗಿಫ್ಟ್ (Gift) ಅನ್ನು ಆಗಾಗ ನೀಡುತ್ತಿರಬೇಕು! ಅಲ್ಲವೇ? ಮಿದುಳಿನ ಕ್ಷಮತೆ (Brain Capacity) ಹೆಚ್ಚಿಸುವ ಆಹಾರ ಪದಾರ್ಥ (Good Food)ಗಳನ್ನು ಸೇವನೆ ಮಾಡುವುದೇ ನಾವು ನೀಡಬೇಕಾದ ಉಡುಗೊರೆ.

ನಮ್ಮ ಆಹಾರ ಪದ್ಧತಿ ಮಿದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ನಮಗೆ ತಿಳಿದೇ ಇದೆ. ಇತ್ತೀಚಿನ ಜಂಕ್ ಫುಡ್ (Junk Food) ಸೇವನೆಯಿಂದ ಮಿದುಳಿಗೆ ಹಾನಿಯಾಗುತ್ತದೆ. ಅದರ ಕ್ಷಮತೆ ಕುಂದುತ್ತದೆ. ಆದರೆ, ಹಿಂದಿನಿಂದಲೂ ನಮ್ಮ ನಡುವೆ ಹಾಸುಹೊಕ್ಕಾಗಿರುವ ಕೆಲವು ಆಹಾರಗಳು ಮಿದುಳಿಗೆ ಪೂರಕವಾಗಿವೆ. ಅವುಗಳಲ್ಲಿ ಮೀನಿಗೆ ಉನ್ನತ ಸ್ಥಾನ.

ಹೌದು, ಮಿದುಳಿಗೆ ಅತ್ಯಗತ್ಯವಾದ ಪೋಷಕಾಂಶ ನೀಡುವಲ್ಲಿ ಮೀನು (Fish) ಟಾಪ್ 1ನೇ ಸ್ಥಾನದಲ್ಲಿದೆ. ಇದರಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ (Omega-3 Fatty Acid) ಮಿದುಳಿನ ಬೆಳವಣಿಗೆಗೆ ಪೂರಕವಾಗಿದೆ. ಮಾನವನ ಮಿದುಳು ಶೇ.60ರಷ್ಟು ಕೊಬ್ಬಿನಿಂದ ಕೂಡಿರುತ್ತದೆ. ಈ ಕೊಬ್ಬಿನ ಅರ್ಧದಷ್ಟು ಭಾಗ ಒಮೆಗಾ-3 ಫ್ಯಾಟಿ ಆಸಿಡ್ ಅಂಶವೇ ಇರುತ್ತದೆ. ಇದು ಮಿದುಳು ಮತ್ತು ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಕಲಿಕೆ ಮತ್ತು ಸ್ಮರಣೆಗೆ ಫ್ಯಾಟಿ ಆಸಿಡ್ ಅಂಶವೇ ಅತಿ ಮುಖ್ಯ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ವಯೋಸಹಜ ಮರೆವು ಕಾಲಿಯೆ ಕಾಡದಂತೆ ಮಾಡುತ್ತದೆ. ಒಮೆಗಾ-3 ಫ್ಯಾಟಿ ಆಸಿಡ್ ಅಂಶ ಕಡಿಮೆ ಇದ್ದಾಗ ಕಲಿಕೆಗೆ ಸಂಬಂಧಿಸಿದ ತೊಂದರೆ ಹಾಗೂ ಖಿನ್ನತೆ ಕಂಡುಬರುತ್ತದೆ. ಸಂಶೋಧಕರ ಪ್ರಕಾರ, ಮೀನು ಸೇವನೆ ಮಾಡುವವರಲ್ಲಿ ಮಿದುಳಿನ ಬೂದುಬಣ್ಣದ ಪ್ರದೇಶ ಉತ್ತಮ ಸ್ಥಿತಿಯಲ್ಲಿರುತ್ತದೆ. ಮಿದುಳಿನ ಈ ಭಾಗದಲ್ಲಿ ಸ್ಮರಣೆ ಹಾಗೂ ಭಾವಕೋಶ, ನಿರ್ಧಾರ ತೆಗೆದುಕೊಳ್ಳುವುದಕ್ಕೆ  ಸಂಬಂಧಿಸಿದ ನರಕೋಶಗಳಿರುತ್ತವೆ.

ಮಿದುಳು ಚುರುಕಾಗಿರಬೇಕೆಂದರೆ ಇವೆಲ್ಲ ಮಾಡ್ಬಾರ್ದು!

ಯಾವುದೇ ವೈದ್ಯರ ಬಳಿ ಹೋದರೂ ಆಯಾ ಕಾಲದಲ್ಲಿ ಸಿಗುವ ಸೀಸನಲ್ ಹಣ್ಣು (Fruit)ಗಳನ್ನು ತಿನ್ನಿ ಎನ್ನುವ ಸಲಹೆ ಮಾಡುವುದು ಸಾಮಾನ್ಯ. ಹಣ್ಣಿನಲ್ಲಿರುವ ಹಲವಾರು ಅಂಶಗಳು ಮಿದುಳಿನ ಬೆಳವಣಿಗೆಗೆ ಪೂರಕವಾಗಿವೆ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ(Orange), ಲಿಂಬೆ (Lime), ಕಿವಿ)Kiwi), ಟೊಮ್ಯಾಟೊ, ಪೇರಳೆ ಹಣ್ಣುಗಳು ಮಿದುಳಿಗೆ ಉತ್ತಮ.  ಸಂಶೋಧನೆಗಳ ಪ್ರಕಾರ, ರಕ್ತದಲ್ಲಿ ವಿಟಮಿನ್ ಸಿ ಅಂಶ ಉನ್ನತ ಮಟ್ಟದಲ್ಲಿದ್ದರೆ ಏಕಾಗ್ರತೆ (Concentration), ಸ್ಮರಣೆ (Memory) ಗ್ರಹಿಕೆ (Grasping) ಮತ್ತು ನಿರ್ಧಾರ ತೆಗೆದುಕೊಳ್ಳುವ (Decision Making) ಸಾಮರ್ಥ್ಯ ಚೆನ್ನಾಗಿರುತ್ತದೆ.

ಒಣಹಣ್ಣುಗಳ (Dry Fruits) ಸೇವನೆಯೂ ಮಿದುಳಿಗೆ ಬಹಳ ಉತ್ತಮ. ಆರೋಗ್ಯಕರ ಮಿದುಳು ರೂಪುಗೊಳ್ಳಲು ಒಣಹಣ್ಣುಗಳು ಅಗತ್ಯ. ಹಲವಾರು ಅಧ್ಯಯನಗಳು ಹೇಳುವುದೇನೆಂದರೆ, ಒಣಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ವಯಸ್ಸಾದಂತೆ ಕಾಡುವ ಮರೆವು ಸಮಸ್ಯೆ ಸೇರಿದಂತೆ ವಿವಿಧ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸುವುದಿಲ್ಲ. ವಯಸ್ಸಾದರೂ ವಿವೇಚನೆಶಕ್ತಿ ಚೆನ್ನಾಗಿಯೇ ಇರುತ್ತದೆ. ನೆನಪಿನ ಶಕ್ತಿಯೂ ಚೆನ್ನಾಗಿರುತ್ತದೆ. ಒಣಹಣ್ಣುಗಳಲ್ಲಿ ಉತ್ತಮ ಕೊಬ್ಬು, ಆಂಟಿಆಕ್ಸಿಡಂಟ್, ವಿಟಮಿನ್ ಇ ಮುಂತಾದ ಅಂಶಗಳಿವೆ. 

ನಿಮಗೆ ಗೊತ್ತೇ?

ಕಾಫಿ (Coffee) ಯಲ್ಲಿರುವ ಕೆಫೀನ್ ಮತ್ತು ಆಂಟಿಆಕ್ಸಿಡಂಟ್ ಅಂಶಗಳು ಮಿದುಳಿನ ಆರೋಗ್ಯಕ್ಕೆ ಪೂರಕವಾಗಿವೆ. ಕೆಫೀನ್ ಹೆಚ್ಚಾದರೂ ಮಿದುಳಿಗೆ ಹಾನಿ ಖಂಡಿತ. ನಿಗದಿತ ಪ್ರಮಾಣದಲ್ಲಿದ್ದರೆ ಒಳ್ಳೆಯ ಪರಿಣಾಮ. ಕೆಫೀನ್ ಅಂಶದಿಂದ ತಕ್ಷಣ ಮನಸ್ಥಿತಿ ಸುಧಾರಣೆಯಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ. 

ಇನ್ನು, ಒಂದೆಲಗದ ಎಲೆ, ಕಾಂಡ, ಬೇರುಗಳೆಲ್ಲವೂ ಸ್ಮರಣ ಶಕ್ತಿ ಹೆಚ್ಚಳಕ್ಕೆ ಪೂರಕವಾಗಿವೆ. ಮಕ್ಕಳಿಗೆ ದಿನವೂ ಬೆಳಗ್ಗೆ ಒಂದೆಲಗ ತಿನ್ನಿಸಿದರೆ ಅವರ ಬುದ್ಧಿ ಚುರುಕಾಗುತ್ತದೆ.

click me!