ಸಾಬೂದಾನ (Sabudana) ಅಥವಾ ಸಬ್ಬಕ್ಕಿಯನ್ನು ಹೆಚ್ಚಾಗಿ ವಡೆ, ಪಾಯಸ ಮಾಡಲು ಬಳಸಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಇದಲ್ಲದೆ ಸಾಬೂದಾನದಿಂದ ತಯಾರಿಸುವ ಕಿಚಡಿ ಹಲವು ಆರೋಗ್ಯ (Health) ಕರ ಗುಣಗಳನ್ನು ಹೊಂದಿದೆ ಅನ್ನೋದು ನಿಮಗೆ ಗೊತ್ತಾ?
ಕಿಚಡಿ, ಆರೋಗ್ಯ (Health)ಕ್ಕೆ ಹಿತಕರವಾದ ಅತ್ಯುತ್ತಮ ಆಹಾರ (Food) .ಅದರಲ್ಲೂ ವಯಸ್ಸಾದವರಿಗೆ, ಹುಷಾರು ತಪ್ಪಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವವರಿಗೆ ಹೆಚ್ಚಾಗಿ ಕಿಚಡಿಯನ್ನೇ ಕೊಡುತ್ತಾರೆ. ಎಲ್ಲಾ ರೀತಿಯ ಕಿಚಡಿಯೂ ಎಲ್ಲಾ ವಯಸ್ಸಿನವರಿಗೂ ಆರೋಗ್ಯಕ್ಕೆ ಅತ್ಯುತ್ತಮ. ಅದರಲ್ಲೂ ಸಾಬೂದಾನ ಕಿಚಡಿ (Sabudana Khichdi) ಒಂದಷ್ಟು ಹೆಚ್ಚೇ ಆರೋಗ್ಯಕ್ಕೆ ಹಿತವಿರುವ ಗುಣಗಳನ್ನು ಹೊಂದಿದೆ, ಸಾಬೂದಾನ ಅಥವಾ ಸಬ್ಬಕ್ಕಿಯನ್ನು ಹೆಚ್ಚಾಗಿ ವಡೆ, ಪಾಯಸ ಮಾಡಲು ಬಳಸಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಇದಲ್ಲದೆ ಸಾಬೂದಾನದಿಂದ ತಯಾರಿಸುವ ಕಿಚಡಿ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ ಅನ್ನೋದು ನಿಮಗೆ ಗೊತ್ತಾ ?
ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಅವರು ಇನ್‌ಸ್ಟಾಗ್ರಾಮ್ (Instagram)ನಲ್ಲಿ ಸಾಬುದಾನ ಕಿಚಡಿಯ ಅದ್ಭುತ ಪ್ರಯೋಜನಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಬುದಾನ ಕಿಚಡಿಯೆಂಬ ಅಂಟು ಮುಕ್ತ ಖಾದ್ಯವನ್ನು ಮಹಿಳೆಯರಿಗೆ ಸೂಪರ್‌ಫುಡ್ ಎಂದು ಅವರು ಹೇಳಿದ್ದಾರೆ. ಇದು ಋತುಬಂಧದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಫಲವತ್ತತೆಯನ್ನು ಸುಧಾರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಕಿಚಡಿ ಸೇವನೆ ಮಹಿಳೆ (Woman)ಯರಲ್ಲಿ ಹಾರ್ಮೋನುಗಳನ್ನು ಸುಧಾರಿಸಲು ಪ್ರಯೋಜನಕಾರಿ ಎಂದು ಬಹಿರಂಗಪಡಿಸಿದರು.
undefined
ಹಬ್ಬಕ್ಕೋ, ಸಂಜೆ ಸ್ನಾಕ್ಸ್, ಎರಡಕ್ಕೂ ಸೈ ಸಾಬುದಾನ ವಡಾ.. ಇಲ್ಲಿದೆ ರೆಸಿಪಿ
ಸಾಬುದಾನ ಕಿಚಡಿಯನ್ನು ಪ್ರತಿಯೊಂದು ಭಾರತೀಯ ಮನೆಯಲ್ಲೂ ತಯಾರಿಸಿ ಸವಿಯುವುದನ್ನು ಕಾಣಬಹುದು. ಹೆಚ್ಚಾಗಿ ಭಾರತದಲ್ಲಿ ಉಪವಾಸ, ವ್ರತದ ಸಂದರ್ಭದಲ್ಲಿ ಇದನ್ನು ಮಾಡಿ ತಿನ್ನುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಸ್ಯಾಧಾರಿತ ಆಹಾರಗಳು ಮತ್ತು ಸಸ್ಯಾಹಾರಿ ಜೀವನಶೈಲಿಯ ಹಠಾತ್ ಜನಪ್ರಿಯತೆಯು ಈ ಸೂಪರ್ ಪೋಷಣೆಯ ಭಕ್ಷ್ಯವು ಹೆಚ್ಚು ಜನಪ್ರಿಯತೆಯನ್ನು ಗಳಿಸಲು ಸಹಾಯ ಮಾಡಿದೆ. ಕರೀನಾ ಕಪೂರ್ ಖಾನ್ ಅವರಂತಹ ತಾರೆಯರಿಗೆ ತರಬೇತಿ ನೀಡಿದ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರು ಈ ಸಾಮಾನ್ಯ ಸವಿಯಾದ ಪದಾರ್ಥವನ್ನು ಇಷ್ಟಪಡುತ್ತಾರೆ. ಇದು ಮಹಿಳೆಯರಿಗೆ ಸೂಪರ್‌ಫುಡ್ ಎಂದು ಅವರು ಹೇಳುತ್ತಾರೆ.
ಮಹಿಳೆಯರು ಸಾಬುದಾನ ಖಿಚಡಿಯನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳ ಹೊರತಾಗಿಯೂ ರುಜುತಾ ಅವರು ಇದನ್ನು ಯಾವ ಸಮಯದಲ್ಲಿ ಸೇವಿಸಬೇಕು ಮತ್ತು ಹೇಗೆ ಸೇವಿಸಬೇಕು ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಸಾಬುದಾನ ಕಿಚಡಿಯ ಪ್ರಯೋಜನಗಳು
ಜ್ವರ ಅಥವಾ ಇತರ ಯಾವುದೇ ಕಾಯಿಲೆಯಿಂದ ಚೇತರಿಸಿಕೊಂಡವರಿಗೆ ನೀಡಲು ಗಂಜಿಯನ್ನು ಹೊರತುಪಡಿಸಿ ಸಾಬುದಾನ ಕಿಚಡಿ ಅತ್ಯುತ್ತಮ ಆಯ್ಕೆ. ಆಂಟಿಬಯೋಟಿಕ್ ಕೋರ್ಸ್ ಮುಗಿದ ನಂತರ ಒಂದು ಸಣ್ಣ ಬೌಲ್ ಸಾಬುದಾನ ಕಿಚಡಿ ತಿಂದರೆ ನಿಶ್ಯಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಋತುಬಂಧದ ಸಮಯದಲ್ಲಿ ಅಧಿಕ ರಕ್ತಸ್ರಾವವನ್ನು ತಡೆಗಟ್ಟಲು ಈ ಕಿಚಡಿಯನ್ನು ಸೇವಿಸಬಹುದು. ಸಾಬುದಾನ ಕಿಚಡಿಯ ನಿರಂತರ ಸೇವನೆ ಮಹಿಳೆಯರಲ್ಲಿ ಫಲವತ್ತತೆಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಾಬೂದಾನ ತಿನ್ನೋಲ್ವಾ? ಹಾಗಿದ್ರೆ ಈ ಸುದ್ದಿ ಓದಲೇ ಬೇಕು..
ವಿಶೇಷವಾಗಿ ಮಹಿಳೆ ಗರ್ಭಿಣಿ (Pregnant)ಯಾಗಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಸಾಬುದಾನ ಕಿಚಡಿಯನ್ನು ವಾರಕ್ಕೆ ಎರಡು ಬಾರಿ ಸೇವಿಸಬಹುದು. ಪೆರಿ-ಮೆನೋಪಾಸಲ್ ಹಂತದಲ್ಲಿ, ಋತುಚಕ್ರಕ್ಕೆ ಸ್ವಲ್ಪ ಮೊದಲು ತಲೆನೋವು (Headache) ಅಥವಾ ವಿಪರೀತ ಆಯಾಸವಾಗುತ್ತಿದ್ದರೆ, ಮಹಿಳೆಯರು ಕಿಚಡಿಯನ್ನು ಸೇವಿಸಬಹುದು. ಮುಟ್ಟಿನ ಸಮಯದಲ್ಲಿ ಹಸಿವಾಗದಿರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ದಹಿ ಅಥವಾ ಮೊಸರಿನೊಂದಿಗೆ ಊಟದ ಸಮಯದಲ್ಲಿ ಒಂದು ಸಣ್ಣ ಬೌಲ್ ಸಾಬೂದಾನ ಕಿಚಡಿಯನ್ನು ಸೇವಿಸಬಹುದು.
ಇನ್‍ಸ್ಟಾಗ್ರಾಂನಲ್ಲಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಪೌಷ್ಟಿಕತಜ್ಞರು ಮತ್ತು ಬಾಣಸಿಗರ ಗಮನವನ್ನು ಸಾಬುದಾನ ಹೇಗೆ ಸೆಳೆದಿದೆ ಎಂಬುದರ ಕುರಿತು ಮಾತನಾಡಿದರು. ಪೋಸ್ಟ್‍ವೊಂದರಲ್ಲಿ ಅವರು, ಕಡಲೆಕಾಯಿ, ಧನಿಯಾ, ಜೀರಾ, ಮಿರ್ಚಿ ಮಸಾಲೆಗಳೊಂದಿಗೆ ತೆಂಗಿನಕಾಯಿ, ತುಪ್ಪ ಹೊಂದಿರುವ ಈ ಸಾಬೂದಾನ ಕಿಚಡಿ ಎಲ್ಲರಿಗೆ ಪ್ರಿಯವಾಗುತ್ತಿದೆ. ಈ ಕಿಚಡಿಯಲ್ಲಿರುವ ಫೀನಾಲಿಕ್ ಸಂಯುಕ್ತಗಳು, ಉತ್ಕರ್ಷಣ ನಿರೋಧಕ ಅಣುಗಳಿಂದ ಇದು ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಪ್ರಿಯವಾಗುತ್ತಿದೆ ಎಂದಿದ್ದಾರೆ.