New Recipe: ನೂಡಲ್ಸ್ ತಿಂದು ಬೇಜಾರಾಗಿದ್ಯಾ ? ಝೂಡಲ್ಸ್ ಟ್ರೈ ಮಾಡಿ.

By Suvarna News  |  First Published Mar 5, 2022, 10:06 AM IST

ತುಂಬಾ ಹಸಿವಾಗ್ತಿದೆ ಎಂದಾಗ ತಕ್ಷಣ ನೆನಪಾಗೋದು ನೂಡಲ್ಸ್ (Noodles). ಫಟಾಫಟ್ ಅಂತ ಐದೇ ನಿಮಿಷದಲ್ಲಿ ರೆಡಿ ಮಾಡ್ಬೋದು. ಆದ್ರೆ ಯಾವಾಗ್ಲೂ ನೂಡಲ್ಸ್ ತಿಂದು ಬೇಜಾರಾಗಿದ್ಯಾ ? ಡೋಂಟ್ ವರಿ, ಝೂಡಲ್ಸ್ (Zoodles) ಟ್ರೈ ಮಾಡಿ.


ದಿಢೀರ್ ಅಡುಗೆ (Cooking) ಮಾಡ್ಬೇಕು ಎಂದಾಗ ತಕ್ಷಣಕ್ಕೆ ಎಲ್ಲರಿಗೂ ನೆನಪಾಗೋದು ನೂಡಲ್ಸ್. ಅಡಿಗೆ ಬರದವರು, ಬ್ಯಾಚುಲರ್ಸ್‌ಗಳ ಟಾಪ್ ಲಿಸ್ಟ್‌ನಲ್ಲಿರುವ ತಿಂಡಿ. ಮಾರುಕಟ್ಟೆಗಳಲ್ಲಿ ಈಗ ರೆಡಿಮೇಡ್ ನೂಡಲ್ಸ್ (Noodles) ಪ್ಯಾಕೆಟ್ ಸಿಗುವ ಕಾರಣ ತಯಾರಿಸಲು ಜಸ್ಟ್ ಐದೇ ನಿಮಿಷ ಸಾಕು. ಸೂಪ್, ಸಾಸ್, ಬೇಯಿಸಿದ ತರಕಾರಿ ಸೇರಿಸಿದರೆ ಗೆಸ್ಟ್‌ಗಳಿಗೂ ಸರ್ವ್ ಮಾಡ್ಬೋದು.

ನೂಡಲ್ಸ್ ಏಷಿಯಾದ ಹಲವು ದೇಶಗಳ ಜನರ ಸಾಂಪ್ರದಾಯಿಕ ಆಹಾರ (Food). ಎಳೆ ಎಳೆಯಾಗಿ ಪ್ಯಾಕೆಟ್‌ಗಳಲ್ಲಿ ಸಿಗುವ ನೂಡಲ್ಸ್‌ಗಳನ್ನು ಗೋಧಿ, ಅಕ್ಕಿ, ಜೋಳ ಮುಂತಾದ ಏಕದಳ ಧಾನ್ಯಗಳ ಹಿಟ್ಟಿನಿಂದ ಸಾಂಪ್ರದಾಯಿಕವಾಗಿ ತಯಾರು ಮಾಡಲಾಗುತ್ತದೆ. ಎಣ್ಣೆ, ನೀರು, ಉಪ್ಪನ್ನು ಮಾತ್ರ ಇದರ ತಯಾರಿಯಲ್ಲಿ ಬಳಸಲಾಗುತ್ತದೆ. ಅಡುಗೆಯ ಸಂದರ್ಭದಲ್ಲಿ ನೂಡಲ್ಸ್ಗೆ ಮೊಟ್ಟೆ ಅಥವಾ ಮಾಂಸವನ್ನು ಬೆರೆಸುವ ಪದ್ಧತಿಯೂ ಇದೆ. ಆದ್ರೆ ಯಾವಾಗ್ಲೂ ನೂಡಲ್ಸ್ ತಿನ್ನೋಕೆ ಬೇಜಾರು ಅನ್ನೋರಿಗೆ ನಾವು ಹೊಸ ಆಹಾರ ಪರಿಚಯ ಮಾಡಿಕೊಡ್ತೀವಿ. ಅದುವೇ ಝೂಡಲ್ಸ್ (Zoodles).

Tap to resize

Latest Videos

ರೆಸಿಪಿ: ಅಳಿದುಳಿದ ಆಹಾರದಿಂದ ಈ ತಿನಿಸು ಮಾಡ್ಬಹುದು ನೋಡಿ!

ಆರೋಗ್ಯ ತಜ್ಞರು ಮತ್ತು ಪೌಷ್ಟಿಕತಜ್ಞರ ಪ್ರಕಾರ, ಝೂಡಲ್ಸ್ ತಾಜಾ ಚೀನೀಕಾಯಿಯಿಂದ ಮಾಡಿದ ನೂಡಲ್ಸ್ ಆಗಿದೆ. ಇದು ಪ್ರೋಟೀನ್ (Protein)ನಲ್ಲಿ ಸಮೃದ್ಧವಾದ ಆಹಾರವಾಗಿದೆ. ಇದನ್ನು ಸುಲಭವಾಗಿ ನೀವು ಮನೆಯಲ್ಲಿಯೇ ತಯಾರಿಸಬಹುದು. ಅಜೀರ್ಣ ಸಮಸ್ಯೆಯ ವಿರುದ್ಧ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಸಣ್ಣಗಾಗಬೇಕೆಂದು ಬಯಸುವವರು ಝೂಡಲ್ಸ್ ತಿನ್ನುವುದು ತುಂಬಾ ಒಳ್ಳೆಯದು. ಯಾಕೆಂದರೆ ಇದು ತೂಕ ನಷ್ಟ (Weight Loss)ವನ್ನು ಉತ್ತೇಜಿಸುತ್ತದೆ. 

ಮನೆಯಲ್ಲೇ ಝೂಡಲ್ಸ್ ತಯಾರಿಸುವುದು ಹೇಗೆ ?

ಬೇಕಾಗುವ ಪದಾರ್ಥಗಳು
ಎರಡು ಚೀನೀಕಾಯಿ, ¼ ಕಪ್ ಮಿಶ್ರ ಬೆಲ್ ಪೆಪರ್, 1 ಈರುಳ್ಳಿ, 2 ಲವಂಗ ಬೆಳ್ಳುಳ್ಳಿ, 1 ಟೀಸ್ಪೂನ್ ನಿಂಬೆ ರಸ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು, 1 ಟೀ ಸ್ಪೂನ್ ಹುರಿದ ಎಳ್ಳು ಬೀಜಗಳು, 2 ಟೀ ಸ್ಪೂನ್ ಆಲಿವ್ ಎಣ್ಣೆ, ¼ ಟೀಸ್ಪೂ ನ್ ಕರಿಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಪ್ಯಾನ್ ಅನ್ನು ಬಿಸಿ ಮಾಡಿ, ಎಣ್ಣೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಮತ್ತು 30 ಸೆಕೆಂಡುಗಳ ಕಾಲ ಹುರಿಯಿರಿ. ಈಗ ಝೂಡಲ್‌ಗಳ ಜೊತೆಗೆ ಬೆಲ್ ಪೆಪರ್‌ನ ಸುರುಳಿಗಳನ್ನು ಸೇರಿಸಿ. ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಅವುಗಳನ್ನು ಒಟ್ಟಿಗೆ ಹುರಿಯಿರಿ. ಮುಂದೆ, ಉಪ್ಪು, ಮೆಣಸು, ನಿಂಬೆ ರಸ ಮತ್ತು ಹುರಿದ ಎಳ್ಳು ಸೇರಿಸಿ. ಕೊತ್ತಂಬರಿ ಸೊಪ್ಪು ಅಥವಾ ಕೊತ್ತಂಬರಿ ಸೊಪ್ಪಿನ ಅಲಂಕಾರದೊಂದಿಗೆ ಬಿಸಿಯಾಗಿ ಬಡಿಸಿ.

ಯಾವುದೇ ಯಂತ್ರವಿಲ್ಲದೆ ಮನೆಯಲ್ಲಿ ತಯಾರಿಸಿ ಗೋಧಿ ಹಿಟ್ಟಿನ ಆರೋಗ್ಯಕರ ಟೇಸ್ಟಿ ನೂಡಲ್ಸ್‌

ಝೂಡಲ್ಸ್‌ನ ಆರೋಗ್ಯ ಪ್ರಯೋಜನಗಳು
ಚೀನೀಕಾಯಿ ಹಲವಾರು ಜೀವಸತ್ವಗಳು, ಖನಿಜಗಳು ಮತ್ತು ಇತರ ಪ್ರಯೋಜನಕಾರಿ ಸಸ್ಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಒಂದು ಅಧ್ಯಯನದ ಪ್ರಕಾರ, ಒಂದು ಕಪ್ ಬೇಯಿಸಿದ ಚೀನೀಕಾಯಿ (Pumpkin) ಕೇವಲ 17 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು 1 ಗ್ರಾಂಗಿಂತ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಇದು ವಿಟಮಿನ್ ಎ, ಸಿ ಮತ್ತು ಕೆ ಯ ಸಮೃದ್ಧ ಮೂಲವಾಗಿದೆ ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲೇಟ್‌ನ ಸಂಭಾವ್ಯ ಮೂಲವಾಗಿದೆ. ಚೀನೀಕಾಯಿ ನೀರು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಅಸ್ವಸ್ಥತೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. 

ಚೀನಿಕಾಯಿಯಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾರೊಟಿನಾಯ್ಡ್‌ಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ನೀರು ಮತ್ತು ಫೈಬರ್ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಪೂರ್ಣವಾಗಿರಿಸುತ್ತದೆ ಮತ್ತು ತೂಕ ನಷ್ಟವನ್ನು ಹೆಚ್ಚಿಸುತ್ತದೆ. 

click me!