Chocolate Benefits: ಬಿಳಿ ಚಾಕೋಲೇಟ್‌ ತಿಂದ್ರೆ ಆರೋಗ್ಯಕ್ಕೆಷ್ಟು ಲಾಭವಿದೆ ಗೊತ್ತಾ ?

By Suvarna News  |  First Published Mar 5, 2022, 9:47 AM IST

ಚಾಕೋಲೇಟ್ಸ್‌ ಅಂದ್ರೆ ಬಾಯಿ ಚಪ್ಪರಿಸಿ ತಿನ್ನದವರು ಯಾರಿದ್ದಾರೆ ಹೇಳಿ. ಅದರಲ್ಲೂ ನಟ್ಸ್ (Nuts) ಸೇರಿಸಿದ ಡಾರ್ಕ್‌ ಚಾಕೋಲೇಟ್ಸ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಆದ್ರೆ ಇವೆಲ್ಲಕ್ಕಿಂತ ವೈಟ್ ಚಾಕೋಲೇಟ್ (White Chocolate) ಆರೋಗ್ಯ (Health)ಕ್ಕೆ ಒಳ್ಳೇದು ಅನ್ನೋದು ನಿಮ್ಗೆ ಗೊತ್ತಾ ?


ಚಾಕೋಲೇಟ್ಸ್ ಅನ್ನು ಹಲವಾರು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಬರ್ತ್‌ಡೇ, ಫೆಸ್ಟಿವಲ್, ಪ್ರಮೋಶನ್ ಅಂತ ಚಾಕೊಲೇಟ್‌ಗಳನ್ನು ಗಿಫ್ಟ್ (Gift) ಆಗಿ ನೀಡಲಾಗುತ್ತದೆ. ಚಾಕೋಲೇಟ್ಸ್‌ನಲ್ಲಿ ಹಲವು ವೆರೈಟಿಗಳೂ ಸಿಗುತ್ತವೆ. ಅದರಲ್ಲೂ ಡಾರ್ಕ್ ಚಾಕೊಲೇಟ್, ವೈಟ್ ಚಾಕೋಲೇಟ್ ಬೇರೆಯೇ ಇದೆ. ಕೆಲವೊಂದು ಪ್ಲೈನ್ ಚಾಕೋಲೇಟ್ಸ್ ಆಗಿದ್ದರೆ, ಇನ್ನು ಕೆಲವು ಚಾಕೋಲೇಟ್ಸ್‌ಗಳು ಬಾದಾಮಿ (Almond), ಗೋಡಂಬಿ, ಪಿಸ್ತಾ, ಒಣಖರ್ಜೂರ ಹೀಗೆ ಹಲವು ಡ್ರೈಫ್ರೂಟ್ಸ್‌ಗಳನ್ನು ಒಳಗೊಂಡಿರುತ್ತವೆ. 

ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಆದ್ರೆ ಚಾಕೋಲೇಟ್ಸ್ ತಿನ್ನೋಂದ್ರಿದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಎಲ್ಲರೂ ಡಾರ್ಕ್ ಚಾಕೊಲೇಟ್ಸ್ ಹೆಚ್ಚಾಗಿ ತಿನ್ನುತ್ತಾರೆ. ಆದ್ರೆ ವೈಟ್ ಚಾಕೊಲೇಟ್ (White Chocolate) ತಿನ್ನೋದ್ರಿಂದಾನೂ ಆರೋಗ್ಯ (Health)ಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ? ವೈಟ್ ಚಾಕೋಲೇಟ್ಸ್ ಬಗ್ಗೆ ನೀವು ತಿಳಿದಿರದ ಕೆಲವೊಂದು ವಿಚಾರಗಳು ಇಲ್ಲಿವೆ.

Latest Videos

undefined

ಡಾರ್ಕ್ ಚಾಕಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ

ಬಿಳಿ ಚಾಕೋಲೇಟ್ ಎಂದರೇನು ?
ಇತ್ತೀಚಿನ ದಿನಗಳಲ್ಲಿ ಡಾರ್ಕ್ ಚಾಕೊಲೇಟ್ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ವೈಟ್ ಚಾಕೊಲೇಟ್ ತಯಾರಿಕೆ ಆರಂಭವಾಗಿರುವುದು ಇಂದು ನಿನ್ನೆಯಲ್ಲ. ಡಾರ್ಕ್ ಚಾಕೊಲೇಟ್ ಆರಂಭವಾಗುವ ಮೊದಲು ಜನರು ಬಿಳಿ ಚಾಕೊಲೇಟ್‌ಗಳನ್ನೇ ಇಷ್ಟಪಟ್ಟು ತಿನ್ನುತ್ತಿದ್ದರು. ಹಲವಾರು ವರ್ಷಗಳಿಂದ ವೈಟ್ ಚಾಕೊಲೇಟ್ ಜನರ ಮಧ್ಯೆ ಜನಪ್ರಿಯವಾಗಿತ್ತು.

ತಜ್ಞರ ಪ್ರಕಾರ, 1930ರಲ್ಲಿ ಬಿಳಿ ಚಾಕೊಲೇಟ್‌ನ್ನು ತಯಾರಿಸಲು ಆರಂಭಿಸಲಾಯಿತು. ಇದನ್ನು ಇತರ ಚಾಕೊಲೇಟ್‌ಗಳಂತೆಯೇ ಅದೇ ಕೋಕೋ ಬೀನ್ಸ್‌ನಿಂದ ತಯಾರಿಸಲಾಗುತ್ತದೆ. ಚಾಕೊಲೇಟ್ ತಯಾರಿಸುವ ಕಂಪನಿಗಳು ಕಂದು ಬಣ್ಣದ ಕೋಕೋ ಘನವಸ್ತುಗಳನ್ನು ಮೂಲ ಚಾಕೊಲೇಟ್ ಸಮೀಕರಣದಿಂದ ಸಂಪೂರ್ಣವಾಗಿ ಹೊರತೆಗೆಯುತ್ತಾರೆ.  ನಂತರ ಕೋಕೋ ಬೆಣ್ಣೆಯನ್ನು ಮಾತ್ರ ಬಳಸುತ್ತಾರೆ. ಈ ಬಿಳಿ ಬಣ್ಣದ ಕೋಕೋದಿಂದ ವೈಟ್ ಚಾಕೊಲೇಟ್ ತಯಾರಿಸುತ್ತಾರೆ. ಆದ್ದರಿಂದ, ಕೋಕೋ ಬೆಣ್ಣೆ (Coco Butter)ಯ ರುಚಿ ಮತ್ತು ವಿನ್ಯಾಸವನ್ನು ಅವಲಂಬಿಸಿ ಬಿಳಿ ಚಾಕೊಲೇಟ್‌ನ ರುಚಿ ಬ್ರಾಂಡ್‌ನಿಂದ ಬ್ರ್ಯಾಂಡ್‌ಗೆ ಬದಲಾಗಬಹುದು. ನೈಸರ್ಗಿಕವಾಗಿ ತಯಾರಿಸುವ ಕಾರಣ ಬಿಳಿ ಚಾಕೊಲೇಟ್ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮ ಎಂದು ಹೇಳಲಾಗುತ್ತದೆ.

ಕಪ್ಪೆಂದು ಹೀಗಳೆಯಬೇಡಿ, ಕಪ್ಪಲ್ಲಿದೆ ತ್ವಚೆ ಸುಂದರವಾಗಿಸುವ ಪವರ್

ಬಿಳಿ ಚಾಕೊಲೇಟ್ ತಯಾರಿಸುವುದು ಹೇಗೆ ?
ಬಿಳಿ ಚಾಕೊಲೇಟ್ ಅನ್ನು ಕೋಕೋ ಬೆಣ್ಣೆ, ಸಕ್ಕರೆ (Sugar), ಹಾಲಿನ ಉತ್ಪನ್ನಗಳು, ವೆನಿಲ್ಲಾ ಮತ್ತು ಲೆಸಿಥಿನ್ ಅನ್ನು ಮಿಶ್ರಣ ಮಾಡುವ ಮೂಲಕ ತಯಾರಿಸಲಾಗುತ್ತದೆ. ಇದು ಎಮಲ್ಸಿಫೈಯರ್ ಆಗಿ ಬಳಸಲಾಗುವ ನೈಸರ್ಗಿಕವಾಗಿ ಪಡೆದ ಕೊಬ್ಬಿನಾಮ್ಲವಾಗಿದೆ. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಬಿಳಿ ಚಾಕೊಲೇಟ್ ಕನಿಷ್ಠ 20 ಪ್ರತಿಶತದಷ್ಟು ಕೋಕೋ ಬೆಣ್ಣೆ ಮತ್ತು 14 ಪ್ರತಿಶತದಷ್ಟು ಹಾಲಿನ ಘನವಸ್ತುಗಳನ್ನು ಹೊಂದಿರಬೇಕು ಮತ್ತು 55 ಪ್ರತಿಶತಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಹೊಂದಿರುವುದಿಲ್ಲ. ಈ ಕಡ್ಡಾಯ ಪದಾರ್ಥಗಳ ಹೊರತಾಗಿ, ಮಸಾಲೆಗಳು, ಬೀಜಗಳು, ಕಾಫಿ, ಮಾಲ್ಟ್, ಉಪ್ಪು ಮತ್ತು ಬಿಳಿ ಚಾಕೊಲೇಟ್‌ನಲ್ಲಿ ಕೃತಕ ಸುವಾಸನೆಯಂತಹ ಕೆಲವೊಮ್ಮೆ ಬಳಸುತ್ತಾರೆ. 

ಬಿಳಿ ಚಾಕೊಲೇಟ್ ಆರೋಗ್ಯಕರವೇ ?
ಬಿಳಿ ಚಾಕೊಲೇಟ್ ಆರೋಗ್ಯಕರವಲ್ಲ ಎಂದು ಆರೋಗ್ಯ ತಜ್ಞರು ವಾದಿಸಿದರೂ, ಅದರಲ್ಲೂ ಆರೋಗ್ಯಕ್ಕೆ ಪೂರಕವಾದ ಹಲವಾರು ಅಂಶಗಳಿವೆ. ಬಿಳಿ ಚಾಕೊಲೇಟ್ ನಲ್ಲಿ ವಿಟಮಿನ್ (Vitamin) ಡಿ 2, ಪೊಟ್ಯಾಸಿಯಮ್, ರಂಜಕ, ಕಬ್ಬಿಣ, ತಾಮ್ರ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಬಿಳಿ ಚಾಕೊಲೇಟ್ ಆರೋಗ್ಯಕರವಾಗಿರುತ್ತವೆ, ಏಕೆಂದರೆ ಅವುಗಳು ಹೆಚ್ಚು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತವೆ. ಹೀಗಾಗಿ ನೀವು ಕೂಡಾ ಚಾಕೊಲೇಟ್ ಪ್ರಿಯರಾಗಿದ್ರೆ ಇನ್ಮುಂದೆ ಡಾರ್ಕ್ ಚಾಕೊಲೇಟ್ಸ್ ಸೈಡಿಗಿಟ್ಟು ವೈಟ್ ಚಾಕೊಲೇಟ್ ತಿನ್ನೋದನ್ನು ಅಭ್ಯಾಸ ಮಾಡಿಕೊಳ್ಳಿ. ಬಾಯಿಗೂ ರುಚಿ, ಆರೋಗ್ಯಕ್ಕೂ ಎಲ್ಲಾ ರೀತಿಯಲ್ಲೂ ಒಳ್ಳೆಯದು.

click me!