ಹಲ್ಲಿಗೆ ಅಂಟದ, ಅಂಗಡಿ ಸ್ಟೈಲ್‌ ಕಡಲೆಕಾಯಿ ಚಿಕ್ಕಿ ಮಾಡ್ಬೇಕಾ? ಈ 2 ಪದಾರ್ಥ ಮಿಸ್ ಮಾಡ್ದೇ ಸೇರಿಸಿ

Published : Sep 16, 2026, 06:27 PM IST
Peanut chikki recipe

ಸಾರಾಂಶ

Peanut chikki recipe: ಕಡಲೆಕಾಯಿ ಚಿಕ್ಕಿ ಮನೆಯಲ್ಲಿ ಮಾಡಿದಾಗ ಹಲ್ಲಿಗೆ ಅಂಟಿಕೊಳ್ಳುತ್ತಿದೆಯೇ ಅಥವಾ ಮೆತ್ತಗಾಗುತ್ತಿದೆಯೇ? ಅಂಗಡಿಗಳಲ್ಲಿ ಸಿಗುವಂತೆ ಕಟಕ್ ಎಂದು ಮುರಿಯುವ, ಹೊಳೆಯುವ ಮತ್ತು ಗರಿಗರಿಯಾದ ಪರ್ಫೆಕ್ಟ್ ಚಿಕ್ಕಿ ಮಾಡಲು ಬೇಕರಿ ಮಾಲೀಕರು ಬಳಸುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ ನೋಡಿ.

ನೆಯಲ್ಲಿ ಕಡಲೆಕಾಯಿ ಚಿಕ್ಕಿ ಮಾಡಿದಾಗ ಅದು ಗರಿಗರಿಯಾಗದೆ ಹಲ್ಲಿಗೆ ಅಂಟಿಕೊಳ್ಳುವುದು ಅಥವಾ ಮೆತ್ತಗಾಗುವುದು ಹಲವರ ದೂರು. ಆದರೆ, ಅಂಗಡಿಗಳಲ್ಲಿ ಸಿಗುವ ಚಿಕ್ಕಿ ಮಾತ್ರ ಕಟಕ್ ಅಂತ ಮುರಿಯುತ್ತದೆ. ಅದಕ್ಕೆ ಕಾರಣ ಅವರು ಬಳಸುವ ಕೆಲವು ಸಣ್ಣ ಟ್ರಿಕ್ಸ್. ಆ ಎಲ್ಲಾ ಸೀಕ್ರೆಟ್‌ಗಳು ಇಲ್ಲಿವೆ..

1. ಮೊದಲ ಹಂತ: ಸರಿಯಾದ ಕಡಲೆಬೀಜದ ಆಯ್ಕೆ

ಮಾರುಕಟ್ಟೆಯಲ್ಲಿ ಸಿಗುವ ಬಿಳಿ ಅಥವಾ ತಿಳಿ ಬಣ್ಣದ, ಸಣ್ಣ ಗಾತ್ರದ ಕಡಲೆಬೀಜಗಳನ್ನು ಚಿಕ್ಕಿಗೆ ಬಳಸಬೇಡಿ. ಏಕೆಂದರೆ ಅವುಗಳಲ್ಲಿ ಎಣ್ಣೆಯಂಶ ಹೆಚ್ಚಿರುತ್ತದೆ, ಹುರಿದಾಗ ಎಣ್ಣೆ ಬಿಟ್ಟು ಚಿಕ್ಕಿ ಮೆತ್ತಗಾಗುತ್ತದೆ.

ಬದಲಿಗೆ, ಉದ್ದವಾದ ಮತ್ತು ಗಾಢ ಕೆಂಪು/ಕಂದು ಬಣ್ಣದ ಸಿಪ್ಪೆಯಿರುವ ಕಡಲೆಬೀಜಗಳನ್ನೇ ಆಯ್ಕೆ ಮಾಡಿ. ಇವುಗಳನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಎರಡು ಹೋಳುಗಳಾಗಿ ಮಾಡಿಟ್ಟುಕೊಳ್ಳಿ.

2. ಎರಡನೇ ಹಂತ: ಅಳತೆ ಮತ್ತು ಬೆಲ್ಲದ ಜೊತೆ ಸಕ್ಕರೆಯ ಬಳಕೆ

ಅಳತೆ: 250 ಗ್ರಾಂ ಕಡಲೆಬೀಜಕ್ಕೆ, 250 ಗ್ರಾಂ ಬೆಲ್ಲ ತೆಗೆದುಕೊಳ್ಳಿ.

ಅಂಗಡಿಗಳ ಸೀಕ್ರೆಟ್: ಬೆಲ್ಲದ ಜೊತೆಗೆ 50 ರಿಂದ 60 ಗ್ರಾಂ ಸಕ್ಕರೆ ಸೇರಿಸಬೇಕು. ಅಂಗಡಿಗಳಲ್ಲಿ ಕೇವಲ ಬೆಲ್ಲ ಮಾತ್ರ ಬಳಸಲ್ಲ, ಸ್ವಲ್ಪ ಸಕ್ಕರೆ ಸೇರಿಸುವುದರಿಂದ ಚಿಕ್ಕಿಗೆ ಅತ್ಯುತ್ತಮವಾದ ಹೊಳಪು (Shine) ಮತ್ತು ಗರಿಗರಿತನ (Crunch) ಬರುತ್ತದೆ.

3. ಮೂರನೇ ಹಂತ: ಬೆಲ್ಲದ ಪಾಕದ ಪರ್ಫೆಕ್ಟ್ ಹದ

ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲ, ಸಕ್ಕರೆ ಮತ್ತು ಕೇವಲ 2 ಚಮಚ ನೀರು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ.

ಪಾಕ ಸರಿಯಾಗಿದೆಯೇ ಎಂದು ನೋಡಲು ಒಂದು ಬಟ್ಟಲು ನೀರಿಗೆ ಪಾಕದ ಒಂದು ಹನಿ ಹಾಕಿ. ಅದು ತಣ್ಣಗಾದ ಮೇಲೆ ಮುರಿದಾಗ "ಕಟಕ್" (Crystal Break) ಎಂದು ಶಬ್ದ ಬಂದು ಮುರಿಯಬೇಕು. ಎಳೆದರೆ ರಬ್ಬರ್‌ನಂತೆ ಹಿಗ್ಗಬಾರದು. ರಬ್ಬರ್‌ನಂತಿದ್ದರೆ ಚಿಕ್ಕಿ ಹಲ್ಲಿಗೆ ಅಂಟಿಕೊಳ್ಳುತ್ತದೆ ಎಂದರ್ಥ.

4. ನಾಲ್ಕನೇ ಹಂತ: ಅಡುಗೆ ಸೋಡಾ (Baking Soda)

ಪಾಕ ಸರಿಯಾದ ಹದಕ್ಕೆ ಬಂದ ನಂತರ ಗ್ಯಾಸ್ ಆಫ್ ಮಾಡುವ ಮುನ್ನ ಚಿಟಿಕೆ ಏಲಕ್ಕಿ ಪುಡಿ ಮತ್ತು 1/8 ಚಮಚ ಅಡುಗೆ ಸೋಡಾ (ಬೇಕಿಂಗ್ ಸೋಡಾ) ಹಾಕಿ ಮಿಕ್ಸ್ ಮಾಡಿ. ಸೋಡಾ ಹಾಕಿದ ತಕ್ಷಣ ಬೆಲ್ಲದ ಪಾಕ ನೊರೆ ನೊರೆಯಾಗಿ ತಿಳಿ ಬಣ್ಣಕ್ಕೆ ತಿರುಗುತ್ತದೆ. ಈ ಸೋಡಾವೇ ಚಿಕ್ಕಿ ಗಟ್ಟಿಯಾಗದೆ, ಬಿಸ್ಕತ್ತಿನಂತೆ ಸುಲಭವಾಗಿ ಮುರಿಯಲು ಕಾರಣ!

5. ಲಟ್ಟಿಸುವ ಮತ್ತು ಕತ್ತರಿಸುವ ವಿಧಾನ

ಗ್ಯಾಸ್ ಆಫ್ ಮಾಡಿ ತಕ್ಷಣ ಕಡಲೆಬೀಜ ಹಾಕಿ ವೇಗವಾಗಿ ತಿರುವಿ.

ತುಪ್ಪ ಸವರಿದ ಬಟರ್ ಪೇಪರ್ ಅಥವಾ ಮಣೆ ಮೇಲೆ ಈ ಮಿಶ್ರಣ ಹಾಕಿ, ಮೇಲೆ ಮತ್ತೊಂದು ಬಟರ್ ಪೇಪರ್ ಇಟ್ಟು ಲಟ್ಟಣಿಗೆಯಿಂದ ತಕ್ಷಣವೇ ತೆಳುವಾಗಿ ಲಟ್ಟಿಸಿ.

ಮುಖ್ಯವಾದ ಟ್ರಿಕ್: ಮಿಶ್ರಣ ಬಿಸಿಯಾಗಿದ್ದಾಗಲೇ ಚಾಕುವಿನಿಂದ ಬೇಕಾದ ಅಳತೆಗೆ ಗೆರೆ ಹಾಕಿ (ಕಟ್ ಮಾರ್ಕ್ ಮಾಡಿ). ಪೂರ್ತಿ ತಣ್ಣಗಾದ ಮೇಲೆ ಕಟ್ ಮಾಡಲು ಹೋದರೆ ಪುಡಿಯಾಗುತ್ತದೆ.

6. ಶೇಖರಣೆ (Storage)

ಚಿಕ್ಕಿ ಸಂಪೂರ್ಣವಾಗಿ ತಣ್ಣಗಾದ ನಂತರ ಕಟ್ ಮಾಡಿದ ಗೆರೆಗಳ ಮೇಲೆ ಮುರಿದು, ಗಾಳಿಯಾಡದ (Air-tight) ಡಬ್ಬದಲ್ಲಿ ಬಟರ್ ಪೇಪರ್ ಅಥವಾ ಜಿಪ್‌ಲಾಕ್ ಕವರ್‌ನಲ್ಲಿ ಹಾಕಿಡಿ. 2-3 ತಿಂಗಳು ಇಟ್ಟರೂ ಇದು ಮೆತ್ತಗಾಗುವುದಿಲ್ಲ.

ರುಚಿ ಹೆಚ್ಚಿಸಲು

ಕಡಲೆಬೀಜವನ್ನು ಪಾಕಕ್ಕೆ ಹಾಕುವಾಗ ಅದರ ಜೊತೆಗೆ 1-2 ಚಮಚ ಹುರಿದ ಬಿಳಿ ಎಳ್ಳನ್ನು (Sesame Seeds) ಸೇರಿಸಿ ನೋಡಿ, ಚಿಕ್ಕಿ ನೋಡಲು ಬೇಕರಿಗಿಂತಲೂ ಸುಂದರವಾಗಿ ಕಾಣುವುದಲ್ಲದೆ, ತಿನ್ನುವಾಗ ಇನ್ನಷ್ಟು ಕ್ರಂಚಿಯಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Clean Greasy Non-Stick Pan: ನಾನ್-ಸ್ಟಿಕ್ ಪ್ಯಾನ್ ಅಂಚಿನಲ್ಲಿರುವ ಜಿಡ್ಡು ಹೋಗ್ತಿಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ
ಒಂದೇ ಒಂದು ಚಮಚ ಸಕ್ಕರೆ ಸಾಕು... ಥಂಡಿ ವಾತಾವರಣವಿದ್ರೂ ಡಬ್ಬಿಯಲ್ಲಿಟ್ಟ ಬಿಸ್ಕತ್, ರಸ್ಕ್ ಮೆತ್ತಗಾಗಲ್ಲ!