ಖರ್ಜೂರ ಮಿಕ್ಸಿ ಜಾರ್‌ಗೆ ಅಂಟಿಕೊಳ್ತಿದ್ಯಾ? ಈ ಒಂದು ಪದಾರ್ಥ ಹಾಕಿದ್ರೆ ಸೆಕೆಂಡ್‌ಗಳಲ್ಲೇ ಸಿದ್ಧವಾಗುತ್ತೆ ಪೌಡರ್‌

Published : Sep 16, 2026, 12:08 PM IST
Dates Mix

ಸಾರಾಂಶ

Grind Dates in Mixer Jar : ಖರ್ಜೂರದ ಸಿಹಿ ತಿಂಡಿ ರುಚಿಯಾಗಿರುತ್ತೆ. ಆರೋಗ್ಯಕ್ಕೂ ಉತ್ತಮ. ಆದ್ರೆ ಅದನ್ನು ತಯಾರಿಸೋದು ಸವಾಲಿನ ಕೆಲ್ಸ. ಮಿಕ್ಸಿ ಜಾರ್‌ ಗೆ ಅದು ಅಂಟಿಕೊಳ್ಳದಂತೆ ಏನು ಮಾಡ್ಬೇಕು ಗೊತ್ತಾ?

ಇತ್ತೀಚೆಗೆ ಸಕ್ಕರೆ ಹಾಕದೆ ತಯಾರಿಸುವ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸಿಹಿತಿಂಡಿಗಳಲ್ಲಿ ಖರ್ಜೂರ ಬಳಸುವುದು ಕೂಡ ಸಾಮಾನ್ಯವಾಗಿದೆ. ಆದ್ರೆ ಖರ್ಜೂರದಿಂದ ಲಡ್ಡು ಅಥವಾ ಎನರ್ಜಿ ಬಾಲ್ಸ್ ತಯಾರಿಸುವಾಗ ಅದನ್ನು ಮಿಕ್ಸಿಯಲ್ಲಿ ರುಬ್ಬುವುದು ಕೆಲವೊಮ್ಮೆ ದೊಡ್ಡ ತಲೆನೋವಾಗುತ್ತದೆ.

ಮಿಕ್ಸಿಗೆ ಅಂಟಿಕೊಳ್ಳುವ ಖರ್ಜೂರ

ಖರ್ಜೂರದಲ್ಲಿ ನೈಸರ್ಗಿಕವಾಗಿ ಅಂಟಿಕೊಳ್ಳುವ ಗುಣ ಹೆಚ್ಚಿರುವುದರಿಂದ, ಮಿಕ್ಸಿ ಜಾರ್ಗೆ ಹಾಕಿದ ತಕ್ಷಣ ಅದು ಜಾರ್ನ ಗೋಡೆಗಳಿಗೆ ಮತ್ತು ಬ್ಲೇಡ್ ಸುತ್ತಲೂ ಅಂಟಿಕೊಳ್ಳಬಹುದು. ಇದರಿಂದ ಬ್ಲೇಡ್ ಸರಿಯಾಗಿ ತಿರುಗದೆ ಇರಬಹುದು. ಖರ್ಜೂರದ ಮಿಶ್ರಣ ನುಣ್ಣಗಾಗೋದಿಲ್ಲ. ಹಾಗೆ ಜಾರ್ಗೆ ಅಂಟಿಕೊಂಡಿರುವ ಖರ್ಜೂರವನ್ನು ತೆಗೆಯೋದು ಕಷ್ಟದ ಕೆಲ್ಸ.

ಖರ್ಜೂರದ ಜೊತೆ ಇದನ್ನೂ ಹಾಕಿ

ಖರ್ಜೂರವನ್ನು ಮಿಕ್ಸಿಯಲ್ಲಿ ರುಬ್ಬುವಾಗ ಒಂದು ಸಣ್ಣ ಕಿಚನ್ ಟ್ರಿಕ್ ಪ್ರಯತ್ನಿಸಬಹುದು. ಖರ್ಜೂರದ ಜೊತೆ ಹುರಿದ ಮಖಾನಾ ಹಾಕಿ.ಮೊದಲು ಮಖಾನಾವನ್ನು ಸ್ವಲ್ಪ ಹುರಿದು, ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ನಂತರ ಖರ್ಜೂರದ ಜೊತೆ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿ. ಇದರಿಂದ ಖರ್ಜೂರ ಒಂದೇ ಕಡೆ ಅಂಟಿಕೊಳ್ಳದೆ ಮಖಾನಾದ ಜೊತೆ ಬೆರೆತು ಸುಲಭವಾಗಿ ರುಬ್ಬಿಕೊಳ್ಳಲು ಸಹಾಯವಾಗಬಹುದು.

ಮಖಾನಾ ಹಾಕುವುದರಿಂದ ಏನು ಪ್ರಯೋಜನ?

ಹುರಿದ ಮಖಾನಾ ಸೇರಿಸಿದಾಗ ಮಿಶ್ರಣದ ಟೆಕ್ಸ್ಚರ್ ಬದಲಾಗುತ್ತದೆ. ಖರ್ಜೂರವನ್ನು ನುಣ್ಣಗೆ ರುಬ್ಬುವುದೂ ಸುಲಭವಾಗಬಹುದು. ಚೆನ್ನಾಗಿ ರುಬ್ಬಿದ ಬಳಿಕ ಲಡ್ಡು ಅಥವಾ ಸಣ್ಣ ಬೈಟ್ಸ್ಗಳ ಆಕಾರ ನೀಡಲು ಕೂಡ ಅನುಕೂಲವಾಗುತ್ತದೆ.

ಹಬ್ಬಗಳಿಗೆ ಮಾಡಬಹುದು ಸಿಂಪಲ್ ಸಿಹಿ

ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಹಬ್ಬದ ಸಂದರ್ಭದಲ್ಲಿ ಹೆಚ್ಚು ಸಕ್ಕರೆ ಇರುವ ಮಾರುಕಟ್ಟೆಯ ಸಿಹಿತಿಂಡಿಗಳ ಬದಲು ಮನೆಯಲ್ಲಿ ಖರ್ಜೂರ ಮತ್ತು ಮಖಾನಾದಿಂದ ಸಿಹಿ ತಯಾರಿಸಬಹುದು. ಎರಡನ್ನೂ ರುಬ್ಬಿ, ಅದಕ್ಕೆ ನಿಮ್ಮ ಇಷ್ಟದ ಡ್ರೈ ಫ್ರೂಟ್ಸ್ ಸೇರಿಸಿ ಲಡ್ಡು ಅಥವಾ ಬೈಟ್ಸ್ ಮಾಡಬಹುದು. ಆದರೆ ಒಂದು ವಿಷಯ ಗಮನದಲ್ಲಿರಲಿ. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಹಾಗಾಗಿ ಇಂತಹ ಸಿಹಿಯನ್ನು ಸಕ್ಕರೆ ಸೇರಿಸದ ಸಿಹಿ ಎಂದು ಕರೆಯುವುದು ಹೆಚ್ಚು ಸಮಂಜಸ. ಮಧುಮೇಹ ಇರುವವರು ಅಥವಾ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದವರು ಖರ್ಜೂರದ ಸಿಹಿ ತಿನ್ನುವ ಮೊದಲು ವೈದ್ಯರು ಅಥವಾ ಡಯಟಿಷಿಯನ್ ಸಲಹೆ ಪಡೆಯುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಕ್ಕರ್ ಬಳಸದೆ, ರೆಡಿಮೇಡ್ ಮಸಾಲೆ ಇಲ್ಲದೆ ಪಾತ್ರೆಯಲ್ಲೇ ಮಾಡಿ ಮಂಡ್ಯ ಸ್ಟೈಲ್ ನಾಟಿ ಕೋಳಿ ಸಾರು
Curd Benefits: ದಿನಾ ಮೊಸರು ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳಿವು