Recipe: ದಿನವಿಡೀ ದೇಹಕ್ಕೆ ಶಕ್ತಿ ನೀಡುವ ಸೇಬಿನ ಶೇಕ್ ಮಾಡೋದು ಸುಲಭ

By Suvarna News  |  First Published Aug 3, 2022, 3:55 PM IST

ಹಣ್ಣಿಗಿಂತ ಹಣ್ಣಿನ ಜ್ಯೂಸ್ ಮತ್ತಷ್ಟು ರುಚಿ. ಕೆಲವರಿಗ ಹಣ್ಣು ಸೇವನೆ ಇಷ್ಟವಾಗೋದಿಲ್ಲ. ಅಂಥವರು ಮಿಲ್ಕ್ ಶೇಕ್ ರೂಪದಲ್ಲಿ ಅದನ್ನು ಸೇವನೆ ಮಾಡ್ಬಹುದು. ಆಪಲ್ ನಲ್ಲಿ ಕೂಡ ಜ್ಯೂಸ್ ಮಾಡ್ಬಹುದು. ಆಪಲ್ ಶೇಕ್ ಮಾಡೋದು ಸರಳ. ಹಾಗೆ ಆರೋಗ್ಯಕ್ಕೂ ಒಳ್ಳೆಯದು. 
 


ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಸೇಬು ಹಣ್ಣು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ದಿನಕ್ಕೊಂದು ಸೇಬು ಹಣ್ಣು ತಿಂದು ಆಸ್ಪತ್ರೆಯಿಂದ ದೂರವಿರಿ ಎನ್ನುವ ಮಾತಿದೆ. ಸೇಬು ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಆದ್ರೆ ಸೇಬು ಹಣ್ಣನ್ನು ಹಾಗೆಯೇ ತಿನ್ನಲು ಅನೇಕರಿಗೆ ಇಷ್ಟವಾಗುವುದಿಲ್ಲ. ಅಂತವರು ಆಪಲ್ ಶೇಕ್ ತಯಾರಿಸಿಕೊಂಡು ಕುಡಿಯಬಹುದು. ಆಪಲ್ ಶೇಕ್ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದಿನವಿಡೀ ದೇಹಕ್ಕೆ ಶಕ್ತಿ ಬೇಕು ಎನ್ನುವವರು ಇಂದಿನಿಂದಲೇ ಡಯಟ್ ನಲ್ಲಿ ಆಪಲ್ ಶೇಕ್ ಸೇರಿಸಬಹುದು. ಆರೋಗ್ಯಕರ ಸೇಬು ಹಣ್ಣಿನ ಶೇಕ್ ನಿಮ್ಮ ದಿನಕ್ಕೆ ಉತ್ತಮ ಆರಂಭವನ್ನು ನೀಡುತ್ತದೆ. ಆ್ಯಪಲ್ ಶೇಕ್ ನ ವಿಶೇಷತೆ ಎಂದರೆ ಮಕ್ಕಳಿಗೆ ಇದನ್ನು ಸುಲಭವಾಗಿ ಕುಡಿಸಬಹುದು. ಅನೇಕ ಮಕ್ಕಳು ಹಣ್ಣು ಅಂದ್ರೆ ದೂರ ಓಡ್ತಾರೆ. ಅಂಥ ಮಕ್ಕಳಿಗೆ ಶೇಕ್ ಮಾಡಿ ಕುಡಿಸಬಹುದು. ಆಪಲ್ ಶೇಕ್ ಮಾಡುವುದು ಕೂಡ ಸುಲಭ. ಕುಟುಂಬ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವವರು ನೀವಾಗಿದ್ದರೆ ಆಪಲ್ ಶೇಕ್ ತಯಾರಿಸಿ. ಕೆಲವೇ ನಿಮಿಷದಲ್ಲಿ ಸಿದ್ಧವಾಗುವ ಆಪಲ್ ಶೇಕ್ ತಯಾರಿಸುವ ವಿಧಾನ ಇಲ್ಲಿದೆ.  

ಆ್ಯಪಲ್ ಫ್ರೂಟ್ ಶೇಕ್ (Apple Fruit Shake) ತಯಾರಿಸಲು ಬೇಕಾಗು ಪದಾರ್ಥಗಳು : 
250 ಗ್ರಾಂ ಹಾಲು, 2 ಸೇಬು ಹಣ್ಣು, 5-6 ಬಾದಾಮಿ (Almonds), 1/2 ಟೀಸ್ಪೂನ್ ಏಲಕ್ಕಿ (Cardamom) ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, 5-6 ಐಸ್ ತುಂಡುಗಳು.  

Tap to resize

Latest Videos

ಆ್ಯಪಲ್ ಶೇಕ್ ಮಾಡುವ ವಿಧಾನ : ಆಪಲ್  ಶೇಕ್ ಮಾಡಲು  ಮೊದಲು ಸೇಬು ಹಣ್ಣನ್ನು ಸ್ವಚ್ಛವಾಗಿ ತೊಳೆದು ಶುದ್ಧ ಬಟ್ಟೆಯಿಂದ ಒರೆಸಿ. ಇದರ ನಂತರ ಸೇಬನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದರ ನಂತರ ಸೇಬು ಹಣ್ಣಿನ ಎಲ್ಲಾ ಬೀಜಗಳನ್ನು ತೆಗೆಯಿರಿ. ಕತ್ತರಿಸಿದ ಸೇಬು ಹಣ್ಣಿನ ಹೋಳುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ. ಇದಕ್ಕೂ ಮೊದಲು, ಬಾದಾಮಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಆಗ ನಿಮಗೆ ಬಾದಾಮಿ ಸಿಪ್ಪೆಗಳನ್ನು ಸುಲಭವಾಗಿ ತೆಗೆಯಬಹುದು. ಬಾದಾಮಿಯನ್ನು ಸಿಪ್ಪೆ ತೆಗೆದು ಮಿಕ್ಸರ್ ಜಾರ್‌ಗೆ ಹಾಕಿ ಒಂದು ಕಪ್ ಹಾಲು ಸೇರಿಸಿ ಮತ್ತು ಮಿಶ್ರಣವನ್ನು ಒಂದು ಅಥವಾ ಎರಡು ಬಾರಿ ರುಬ್ಬಿಕೊಳ್ಳಿ.

ಹಿಂಗೆಲ್ಲಾ ಕಾಫಿ ಮಾಡಿದ್ರೆ ಕುಡಿಯೋದಾದ್ರು ಹೆಂಗೆ... ನೀವೇ ಹೇಳಿ

ಇದರ ನಂತರ, ಮಿಶ್ರಣಕ್ಕೆ ಏಲಕ್ಕಿ ಪುಡಿ ಮತ್ತು ಉಳಿದ ಹಾಲು ಸೇರಿಸಿ ಮತ್ತು ಅದರಲ್ಲಿ 2-3 ಐಸ್ ತುಂಡುಗಳನ್ನು ಹಾಕಿ. ನಂತ್ರ ಮತ್ತೆ ರುಬ್ಬಬೇಕು. ಮಿಶ್ರಣ ಸಂಪೂರ್ಣ ನಯವಾಗುವವರೆಗೂ ರುಬ್ಬಬೇಕು.  ಇದರ ನಂತರ ಗ್ಲಾಸ್ ಗೆ ಆಪಲ್ ಶೇಕ್ ಹಾಕಿ ಸರ್ವ್ ಮಾಡಿ. ತಣ್ಣಗಿನ ಶೇಕ್ ಬೇಕು ಎನ್ನುವವರು ಅದಕ್ಕೆ ಮತ್ತೆರಡು ಐಸ್ ಪೀಸ್ ಹಾಕಬಹುದು.

ಜಿಟಿ ಜಿಟಿ ಮಳೆಗೆ ಬಿಸಿ ಬಿಸಿ ಏಡಿ ಸಾರು ತಿನ್ನೋಕೆ ಸೂಪರ್ ಆಗಿರುತ್ತೆ

ಸೇಬು ಹಣ್ಣನ್ನು ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ಆಪಲ್, ಗಂಭೀರ ದೈಹಿಕ ಸಮಸ್ಯೆಗಳಿಗೆ ಸಾಮಾನ್ಯ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸೇಬಿನ ಗುಣಗಳು ಮಧುಮೇಹ, ಹೃದ್ರೋಗ, ಅಸ್ತಮಾ ಮತ್ತು ಕ್ಯಾನ್ಸರ್ ನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಆಂಟಿ-ಆಕ್ಸಿಡೆಂಟ್ ಪರಿಣಾಮಗಳನ್ನು ಸಹ ಹೊಂದಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ದೇಹವನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಸೇಬಿನಿಂದ ಆರೋಗ್ಯಕ್ಕೆ ಮಾತ್ರವಲ್ಲ, ಸುಂದರವಾದ ಚರ್ಮ ಮತ್ತು ಆರೋಗ್ಯಕರ ಕೂದಲಿಗೆ ಹಲವಾರು ಪ್ರಯೋಜನಗಳಿವೆ. ಇದಕ್ಕೆ ಹಾಲು ಹಾಗೂ ಏಲಕ್ಕಿ ಹಾಕುವುದ್ರಿಂದ ಅದ್ರ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ.

click me!