ಮಳೆಗಾಲ ಎಂಜಾಯ್ ಮಾಡ್ಬೇಕು ಅಂದ್ರೆ ಆರೋಗ್ಯ ಕೂಡಾ ಚೆನ್ನಾಗಿರಬೇಕು. ಆರೋಗ್ಯ ಚೆನ್ನಾಗಿರಬೇಕೆಂದರೆ ತಿನ್ನುವ ಆಹಾರ ಸರಿಯಾಗಿರಬೇಕು. ಹಾಗಿದ್ರೆ ಮಳೆಗಾಲದಲ್ಲಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆಎಂಥಾ ಆಹಾರ ತಿನ್ನೋದು ಸೂಕ್ತ.
ಇದು ಮಳೆಗಾಲ ಮತ್ತು ಈ ಸಮಯದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಸ್ವಲ್ಪಮಟ್ಟಿಗೆ ದುರ್ಬಲವಾಗಿರುತ್ತದೆ. ಇದರಿಂದಾಗಿ, ಅನಾರೋಗ್ಯಕ್ಕೆ ಒಳಗಾಗುವ ಅಪಾಯವೂ ಹೆಚ್ಚಾಗಿರುತ್ತದೆ., ಆದ್ದರಿಂದ ಆಹಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಆಹಾರದಲ್ಲಿ ಯಾವುದನ್ನು ಸೇರಿಸಬೇಕು ಮತ್ತು ಯಾವುದನ್ನು ಸೇರಿಸಬಾರದು ಎಂಬುದರ ಬಗ್ಗೆ ಯಾವಾಗಲೂ ಗೊಂದಲವಿರುತ್ತದೆ. ಹೆಚ್ಚಿನವರು ಮಳೆಗೆ, ಚಳಿಗೆ ನಾನ್‌ವೆಜ್ ತಿನ್ನೋಕೆ ಚೆನ್ನಾಗಿರುತ್ತೆ ಅಂತ ಅದನ್ನೇ ತಿನ್ತಾರೆ. ಆದ್ರೆ ಇದ್ರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತವಾ ? ಮಳೆಗಾಲದಲ್ಲಿ ಆರೋಗ್ಯವಾಗಿರಬೇಕು ಅಂದ್ರೆ ಏನು ತಿನ್ನಬೇಕು? ಏನು ತಿನ್ನಬಾರದು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು. ನಾವಿಂದು ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು? ಯಾವುದನ್ನು ಅವಾಯ್ಡ್ ಮಾಡಬೇಕೆನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ.
ಮಳೆಗಾಲವು (Monsoon) ಕೆಮ್ಮು, ಶೀತ, ಜ್ವರ ಮತ್ತು ಕಾಲೋಚಿತ ಜ್ವರ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆ (Health problem)ಗಳನ್ನು ತರುತ್ತದೆ. ಆಯುರ್ವೇದ ತಜ್ಞರು 'ಮಳೆಗಾಲಕ್ಕೆ ಔಷಧೀಯ ಉಪಹಾರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಯುರ್ವೇದ ತಜ್ಞೆ ಡಾ.ರೇಖಾ ರಾಧಾಮೋನಿ, ಮಳೆಗಾಲದಲ್ಲಿ ನಮ್ಮ ದೇಹದ ಶಕ್ತಿ ಮತ್ತು ಅಗ್ನಿ (ಜೀರ್ಣಕಾರಿ ಬೆಂಕಿ) ಕಡಿಮೆಯಿರುತ್ತದೆ ಮತ್ತು ಎಲ್ಲಾ ದೋಷಗಳು ಸಮತೋಲನದಿಂದ ' ಎಂದು ಹೇಳುತ್ತಾರೆ. 'ಜ್ವರ, ಮೂಳೆ ಮತ್ತು ಕೀಲುಗಳ ಕಾಯಿಲೆಗಳಿಂದ ಚರ್ಮದ ಅಸ್ವಸ್ಥತೆಗಳವರೆಗೆ (Skin problem), ನಮ್ಮ ದೇಹವು ಬಹಳಷ್ಟು ರೋಗಗಳಿಗೆ ಒಳಗಾಗುತ್ತದೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಹೇಳ್ಕೊಂಡಿದ್ದಾರೆ. ಡಾ.ರೇಖಾ ರಾಧಾಮೋನಿ ಮಳೆಗಾಲದಲ್ಲಿ ಆರೋಗ್ಯಕ್ಕೆ ಅತ್ಯುತ್ತಮವಾದ ಅಕ್ಕಿಗಂಜಿ ಸೇವನೆಯ ಪ್ರಯೋಜನವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಈ ತರಕಾರಿ ತಿನ್ಬೇಡಿ
ಮಳೆಗಾಲದಲ್ಲಿ ಅನಾರೋಗ್ಯ ಕಾಡದೇ ಇರಲು, ಪ್ರತಿದಿನ ಬೆಳಿಗ್ಗೆ ಎಳ್ಳೆಣ್ಣೆಯೊಂದಿಗೆ ಅಭ್ಯಂಗ ಮತ್ತು ಬೆಚ್ಚಗಿನ ಸ್ನಾನ ಮಾಡಬೇಕು. ನಂತರ ಅಕ್ಕಿ ಗಂಜಿಯನ್ನು ಒಂದು ತಿಂಗಳ ಕಾಲ ಸೇವಿಸುವಂತೆ ಅವರು ಸೂಚಿಸುತ್ತಾರೆ. ಅಕ್ಕಿ ಗಂಜಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
ಅಕ್ಕಿ ಗಂಜಿ ಸೇವನೆಯಿಂದ ಆರೋಗ್ಯಕ್ಕೆ ಸಿಗೋ ಪ್ರಯೋಜನಗಳು
ಅಕ್ಕಿ ಗಂಜಿ (Rice gruel) ವಾತವನ್ನು ತಗ್ಗಿಸುವ ಔಷಧೀಯ ಸೂಪ್ ಆಗಿದೆ. ಇದು ಎಲ್ಲಾ ರೀತಿಯ ದೇಹ (Body) ಪ್ರಕಾರಕ್ಕೂ ಒಳ್ಳೆಯದು. ದೇಹದ ಬಲವನ್ನು ಸುಧಾರಿಸುತ್ತದೆ. ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ. ರೋಗಗಳ (Disease) ವಿರುದ್ಧ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ. ಮಾತ್ರವಲ್ಲ ಮದುಮೇಹಕ್ಕೂ ಅಕ್ಕಿ ಗಂಜಿ ಸೇವನೆ ತುಂಬಾ ಒಳ್ಳೆಯದು.
ಅಕ್ಕಿ ಗಂಜಿಯನ್ನು ಮಾಡಲು ಬೇಕಾದ ಪದಾರ್ಥಗಳು
ಕೆಂಪು ಅಕ್ಕಿ- 100 ಗ್ರಾಂ
ತೆಂಗಿನ ಹಾಲು ಸಾಕಷ್ಟು ಪ್ರಮಾಣದಲ್ಲಿ
ಸೇರಿಸಬೇಕಾದ ಪುಡಿಗಳು: ಒಣ ಶುಂಠಿ, ಕೊತ್ತಂಬರಿ ಬೀಜಗಳು, ಅಜ್ವೈನ್, ಜೀರಿಗೆ ತಲಾ 5 ಗ್ರಾಂ
ಪ್ರಮುಖ ಅಂಶ: ದಶಪುಷ್ಪ ಚೂರ್ಣ (10 ಗ್ರಾಂ) - ನೀವು ಇದನ್ನು ಸ್ಥಳೀಯ ಆಯುರ್ವೇದ ಅಂಗಡಿಯಿಂದ ಖರೀದಿಸಬೇಕಾಗಬಹುದು.
ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ
ಮಾಡುವ ವಿಧಾನ: ಕೆಂಪು ಅಕ್ಕಿಯನ್ನು 5 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿಯನ್ನು ಕುದಿಯುವ ನೀರಿಗೆ ಸೇರಿಸಿ ಮತ್ತು ಪುಡಿಗಳನ್ನು ಸೇರಿಸಿ. ಅಕ್ಕಿ ಬೆಂದ ನಂತರ ತೆಂಗಿನ ಹಾಲು ಸೇರಿಸಿ. ತುಪ್ಪ ಮತ್ತು ಜೀರಿಗೆಯೊಂದಿಗೆ ಹದಗೊಳಿಸಿ. ನಿಮ್ಮ ರುಚಿಗೆ ತಕ್ಕಂತೆ ಬೆಲ್ಲ, ಕಲ್ಲು ಉಪ್ಪನ್ನು ರುಚಿಗೆ ಸೇರಿಸಿ, ಬಿಸಿಯಿದ್ದಾಗಲೇ ಸವಿಯಿರಿ.