ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಉಪ್ಪಿನಕಾಯಿ ವರ್ಷಗಳಾದರೂ ಹಾಳಾಗಲ್ಲ

Published : May 02, 2025, 03:28 PM ISTUpdated : May 02, 2025, 03:42 PM IST
ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಉಪ್ಪಿನಕಾಯಿ ವರ್ಷಗಳಾದರೂ ಹಾಳಾಗಲ್ಲ

ಸಾರಾಂಶ

ಉಪ್ಪಿನಕಾಯಿ ಕೆಡದಿರಲು ಗುಣಮಟ್ಟದ ತಾಜಾ ಪದಾರ್ಥ ಬಳಸಿ, ಮಣ್ಣಿನ/ಗಾಜಿನ ಜಾಡಿಯಲ್ಲಿಟ್ಟು, ಪಾತ್ರೆ ಕ್ರಿಮಿರಹಿತವಾಗಿಸಿ, ಪದಾರ್ಥಗಳನ್ನು ಒಣಗಿಸಿ ಉಪ್ಪಿನಕಾಯಿ ತಯಾರಿಸಿ. ಒಣ ಚಮಚ ಬಳಸಿ, ಸ್ವಲ್ಪ ಉಪ್ಪಿನಕಾಯಿಯನ್ನು ಪ್ರತ್ಯೇಕವಾಗಿಡಿ, ಮಸಾಲೆಗಳನ್ನು ಹುರಿದು ತೇವಾಂಶ ತೆಗೆಯಿರಿ. ಅಗತ್ಯವಿದ್ದರೆ ಫ್ರಿಜ್‌ನಲ್ಲಿಡಿ.

ಉಪ್ಪಿನಕಾಯಿ ರುಚಿ ಬಲ್ಲವನೇ ಬಲ್ಲ. ಇದಕ್ಕೆ ಆಹಾರ ತಟ್ಟೆಯಲ್ಲಿ ವಿಶೇಷ ಸ್ಥಾನವಿದೆ. ಸಪ್ಪೆ ಊಟಕ್ಕೆ ಬೆಸ್ಟ್ ಕಾಂಬಿನೇಶನ್. ಉಪ್ಪಿನಕಾಯಿ ನೀರಸ ಅಥವಾ ರುಚಿಯಿಲ್ಲದ ಆಹಾರಕ್ಕೂ ರುಚಿಯನ್ನು ನೀಡುತ್ತವೆ. ಕೆಲವರಿಗೆ ಹುಳಿ ಮಾವಿನ ಉಪ್ಪಿನಕಾಯಿ ಇಷ್ಟವಾದರೆ, ಇನ್ನು ಕೆಲವರಿಗೆ ಕಾರದ ಮೆಣಸಿನಕಾಯಿ ಉಪ್ಪಿನಕಾಯಿ ಇಷ್ಟ. ಪ್ರತಿ ಮನೆಯಲ್ಲೂ ತಮ್ಮದೇ ಆದ ರೀತಿಯಲ್ಲಿ ಉಪ್ಪಿನಕಾಯಿ ತಯಾರಿಸುತ್ತಾರೆ. ಇದೆಲ್ಲಾ ಸರಿ. ಆದರೆ ಮಹಿಳೆಯರಿಗೆ ಹೆಚ್ಚಾಗಿ ತೊಂದರೆ ಕೊಡುವ ಒಂದು ಸಮಸ್ಯೆಯೆಂದರೆ ಉಪ್ಪಿನಕಾಯಿ ಹಾಕಿ ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳುವ ಬೂಸ್ಟ್. ಈ ಶಿಲೀಂಧ್ರವು ಉಪ್ಪಿನಕಾಯಿ ಡಬ್ಬಿಯ ಯಾವುದೇ ಸ್ಥಳದಲ್ಲಿ ಬೆಳೆದರೆ ಇಡೀ ಉಪ್ಪಿನಕಾಯಿ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ಇದು ಆಹಾರದ ರುಚಿಯನ್ನಷ್ಟೇ ಅಲ್ಲ, ಆರೋಗ್ಯವನ್ನು ಹಾಳು ಮಾಡುತ್ತದೆ.  ಆದರೆ ನೀವೀಗ ಚಿಂತಿಸಬೇಕಾಗಿಲ್ಲ. ನಿಮ್ಮ ಈ ಸಮಸ್ಯೆಗೂ ನಾವು ಪರಿಹಾರವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಇಲ್ಲಿ ಹೇಳಲಾದ 5 ವಿಧಾನಗಳನ್ನು ಅನುಸರಿಸಬೇಕು. ಇದು ನಿಮ್ಮ ಉಪ್ಪಿನಕಾಯಿ ಕೆಡದಂತೆ ತಡೆಯುವುದಲ್ಲದೆ, ಅದರ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದವರೆಗೆ ಅದರ ರುಚಿಯನ್ನು ಹಾಗೆಯೇ ಇಡುತ್ತದೆ. 
 
ಗುಣಮಟ್ಟವನ್ನು ನೋಡಿಕೊಳ್ಳಿ
ಉಪ್ಪಿನಕಾಯಿ ಮಾಡಲು ನೀವು ಯಾವುದೇ ತರಕಾರಿ ಅಥವಾ ಹಣ್ಣು ಖರೀದಿಸಿದರೂ ಅದರ ಗುಣಮಟ್ಟದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ನೀವು ಯಾವ ಉಪ್ಪಿನಕಾಯಿ ಮಾಡಲು ಬಯಸುತ್ತೀರೋ ಅದು ಮಾವು, ನಿಂಬೆ, ಮೆಣಸಿನಕಾಯಿ, ಹಲಸಿನಹಣ್ಣು, ನೆಲ್ಲಿಕಾಯಿ, ಕ್ಯಾರೆಟ್ ಅಥವಾ ಮೂಲಂಗಿಯಾಗಿರಬಹುದು ಯಾವಾಗಲೂ ತಾಜಾ  ಬಳಸಿ. ಉಪ್ಪಿನಕಾಯಿ ಮಾಡುವ ಮೊದಲು ಹಣ್ಣು ಅಥವಾ ತರಕಾರಿಯನ್ನು ತೊಳೆದು ಒಣಗಿಸಿ. ನಂತರ ಅದನ್ನು ಬಳಸಿ.  

ಬ್ರೇಕ್‌ಫಾಸ್ಟ್‌ಗೆ ಈ 5 ತಿಂಡಿಗಳನ್ನು ತಿಂತಿದ್ರೆ ಈಗಲೇ ನಿಲ್ಲಿಸಿ, ಅದರ ಬದಲು ಹೀಗೆ ಮಾಡಿ

ಮಣ್ಣಿನ ಅಥವಾ ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಿ
ನಿಮ್ಮ ಉಪ್ಪಿನಕಾಯಿ ದೀರ್ಘಕಾಲ ಕೆಡಬಾರದು ಎಂದು ನೀವು ಬಯಸಿದರೆ ಅದನ್ನು ಯಾವಾಗಲೂ ಮಣ್ಣಿನ ಅಥವಾ ಗಾಜಿನ ಜಾಡಿಯಲ್ಲಿ ಇರಿಸಿ. ಏಕೆಂದರೆ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಉಪ್ಪಿನಕಾಯಿ ಬೇಗನೆ ಹಾಳಾಗುವ ಸಂಭವವಿರುತ್ತದೆ. ಜೊತೆಗೆ ಉಪ್ಪಿನಕಾಯಿ ವಾಸನೆ ಬರಲು ಪ್ರಾರಂಭಿಸುತ್ತದೆ. ಪಾತ್ರೆಗಳು ಕ್ರಿಮಿ ಮುಕ್ತವಾಗಿರಲಿ 
ಉಪ್ಪಿನಕಾಯಿಗಳನ್ನು ಸಂಗ್ರಹಿಸುವ ಮೊದಲು ಯಾವಾಗಲೂ ಪಾತ್ರೆಯನ್ನು ಕ್ರಿಮಿ ಮುಕ್ತಗೊಳಿಸಿ. ಇದಕ್ಕಾಗಿ ಮೊದಲು ಪಾತ್ರೆಯನ್ನು ನೀರಿನಿಂದ ಸ್ವಚ್ಛಗೊಳಿಸಿ. ಒಣಗಲು ಬಿಸಿಲಿನಲ್ಲಿ ಇರಿಸಿ.  ಸರಿಯಾಗಿ ಸೂರ್ಯನ ಬೆಳಕಿಗೆ ಒಣಗಿಸಿದ ನಂತರ ಇಂಗು ಅಥವಾ ಕೆಲವು ಮೆಣಸಿನಕಾಯಿಯ ಹೊಗೆಯನ್ನು ಅದಕ್ಕೆ ಹಾಕಿ. ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಉಪ್ಪಿನಕಾಯಿ ಹೆಚ್ಚು ಕಾಲ ಕೆಡುವುದಿಲ್ಲ. 

ಒಣಗಿದ ನಂತರವೇ ಉಪ್ಪಿನಕಾಯಿ ಮಾಡಿ 
ನೀವು ಉಪ್ಪಿನಕಾಯಿ ಮಾಡುವಾಗಲೆಲ್ಲಾ ಉಪ್ಪಿನಕಾಯಿ ಮಾಡಲು ಬಳಸುವ ಎಲ್ಲಾ ಪದಾರ್ಥಗಳು ಸಂಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮಳೆಗಾಲದಲ್ಲಿ ಹೆಚ್ಚಿನ ಆರ್ದತೆಯಿಂದಾಗಿ ಉಪ್ಪಿನಕಾಯಿ ನೀರಿರುವಂತೆ ಕಾಣುತ್ತದೆ ಮತ್ತು ಅದು ಬೇಗನೆ ಹಾಳಾಗಲು ಪ್ರಾರಂಭಿಸುತ್ತದೆ ಇದಲ್ಲದೆ, ಉಪ್ಪಿನಕಾಯಿಯನ್ನು ಸಾಂದರ್ಭಿಕವಾಗಿ ಸೂರ್ಯನ ಬೆಳಕಿಗೆ ಒಡ್ಡಿ.

ಮಣ್ಣಿನ ಪಾತ್ರೆಗಳು ಒಡೆಯಬಾರದೆಂದರೆ ಇಲ್ಲಿದೆ ಸರಳ ಮಾರ್ಗ

ಈ ವಿಷಯಗಳನ್ನು ನೆನಪಿನಲ್ಲಿಡಿ...
* ಉಪ್ಪಿನಕಾಯಿ ತೆಗೆಯಲು ಒಣ ಚಮಚ ಬಳಸಿ.
* ಉಪ್ಪಿನಕಾಯಿಯ ದೊಡ್ಡ ಡಬ್ಬಿಯನ್ನು ಮತ್ತೆ ಮತ್ತೆ ತೆರೆಯುವ ಬದಲು, ದಿನನಿತ್ಯದ ಬಳಕೆಗಾಗಿ ಸ್ವಲ್ಪ ಉಪ್ಪಿನಕಾಯಿಯನ್ನು ಸಣ್ಣ ಪಾತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ.
* ನೀವು ಸ್ವಲ್ಪ ಪ್ರಮಾಣದ ಉಪ್ಪಿನಕಾಯಿಯನ್ನು ಸಂಗ್ರಹಿಸಲು ಬಯಸಿದರೆ ಅದನ್ನು ಶಿಲೀಂಧ್ರದಿಂದ ರಕ್ಷಿಸಲು ಫ್ರಿಜ್‌ನಲ್ಲಿ ಸಂಗ್ರಹಿಸಬಹುದು.
* ಉಪ್ಪಿನಕಾಯಿ ಮಾಡುವ ಮೊದಲು ಎಲ್ಲಾ ಮಸಾಲೆಗಳನ್ನು ಲಘುವಾಗಿ ಹುರಿಯಿರಿ ಇದರಿಂದ ತೇವಾಂಶ ಹೋಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ