Quick Morning Chaat:ನೀವು ಬೆಳಗಿನ ಉಪಾಹಾರಕ್ಕೆ ಲೈಟಾಗಿರುವ, ಆರೋಗ್ಯಕರವಾದ ಟಿಫನ್ ತಿನ್ನಲು ಬಯಸಿದರೆ ಸೌತೆಕಾಯಿ ಮತ್ತು ಸ್ವೀಟ್ ಕಾರ್ನ್‌ನಿಂದ ತಯಾರಿಸಿದ ರುಚಿಕರವಾದ ಈ ಸೌತೆಕಾಯಿ-ಸ್ವೀಟ್ ಕಾರ್ನ್ ಚಾಟ್ ಮಾಡಬಹುದು. ಇದರಲ್ಲಿ ಹೆಚ್ಚು ಎಣ್ಣೆ ಇಲ್ಲ, ಡೀಫ್ ಫ್ರೈ ಮಾಡಬೇಕಿಲ್ಲ. ಈ ರೆಸಿಪಿ ರುಚಿಯಲ್ಲಿ ಅದ್ಭುತವಾಗಿದೆ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸ್ವೀಟ್ ಕಾರ್ನ್‌ನಲ್ಲಿ ಟಮಿನ್ ಎ, ಬಿ, ಇ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದಲ್ಲದೆ, ಇದರಲ್ಲಿರುವ ಫೈಬರ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಫೈಟೊಕೆಮಿಕಲ್‌ಗಳು ಅನೇಕ ರೀತಿಯ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ. ಇನ್ನು ಸೌತೆಕಾಯಿಯಲ್ಲಿ ಕ್ಯಾಲೊರಿಗಳು ಬಹಳ ಕಡಿಮೆ, ಆದರೆ ಇದರಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಕರಗುವ ನಾರು ಇರುವುದರಿಂದ ತೂಕ ಇಳಿಸಿಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ. ಸ್ವೀಟ್ ಕಾರ್ನ್‌ನಿಂದ ಒಂದಲ್ಲ, ಹಲವು ಬಗೆಯ ರೆಸಿಪಿಗಳನ್ನು ತಯಾರಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ಹೇಳಿರುವ ರೆಸಿಪಿ ತಯಾರಿಸುವುದು ತುಂಬಾ ಸುಲಭ ಮತ್ತು ಎಲ್ಲಾ ಸಮಯದಲ್ಲಿಯೂ ಸಹ ನೀವಿದನ್ನು ಸೇವಿಸಬಹುದು. ಇದರಲ್ಲಿ ಸೌತೆಕಾಯಿ, ಸ್ವೀಟ್ ಕಾರ್ನ್, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪುನ್ನು ಹಾಕುವುದರಿಂದ ಇದರಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಫೈಬರ್ ಸಮೃದ್ಧವಾಗಿರುವುದರಿಂದ ದಿನವಿಡೀ ನಾವು ರಿಫ್ರೆಶ್ ಆಗಿರಬಹುದು.
ಬೇಕಾಗುವ ಪದಾರ್ಥಗಳು
1 ಕಪ್ ಬೇಯಿಸಿದ ಸ್ವೀಟ್ ಕಾರ್ನ್
1 ದೊಡ್ಡ ಸೌತೆಕಾಯಿ (ಸಣ್ಣ ತುಂಡುಗಳಾಗಿ ಕತ್ತರಿಸಿ)
1 ಸಣ್ಣ ಈರುಳ್ಳಿ (ನುಣ್ಣಗೆ ಕತ್ತರಿಸಿ)
1 ಟೊಮೆಟೊ (ಸಣ್ಣಗೆ ಕತ್ತರಿಸಿ)
1 ಹಸಿರು ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ್ದು, ಬೇಕಿದ್ದರೆ)
2 ಚಮಚ ನಿಂಬೆ ರಸ
1/2 ಟೀಸ್ಪೂನ್ ಚಾಟ್ ಮಸಾಲಾ
1/4 ಟೀಸ್ಪೂನ್ ಕಪ್ಪು ಉಪ್ಪು
1/4 ಟೀಸ್ಪೂನ್ ಹುರಿದ ಜೀರಿಗೆ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು (ಅಲಂಕಾರಕ್ಕಾಗಿ)
ಪಫ್ಡ್ ರೈಸ್ ಅಥವಾ ಹುರಿದ ಕಡಲೆ (ನೀವು ಬಯಸಿದರೆ ಅವುಗಳನ್ನು ಕ್ರಂಚ್‌ಗಾಗಿ ಸೇರಿಸಬಹುದು)
ಇಡ್ಲಿ ಕುಕ್ಕರ್ ಇಲ್ವಾ? ಚಿಂತೆ ಬೇಡ, ಹೀಗೂ ಮಾಡಬಹುದು ಮಲ್ಲಿಗೆಯಂಥ ಇಡ್ಲಿ
ತಯಾರಿಸುವ ವಿಧಾನ
* ಮೊದಲಿಗೆ ಬೇಯಿಸಿದ ಸಿಹಿ ಜೋಳವನ್ನು ಮಿಕ್ಸಿಂಗ್ ಬೌಲ್‌ನಲ್ಲಿ ತೆಗೆದುಕೊಳ್ಳಿ.
* ಈಗ ಇದಕ್ಕೆ ಕಟ್ ಮಾಡಿಟ್ಟುಕೊಂಡ ಸೌತೆಕಾಯಿ, ಈರುಳ್ಳಿ, ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ.
ಹಾಗೆಯೇ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಚಾಟ್ ಮಸಾಲಾ, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
* ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳು ಬೆರೆತ ನಂತರ ಇದರಿಂದ ಘಮ್ ಎನ್ನುವ ಪರಿಮಳ ಬರಲು ಆರಂಭಿಸುತ್ತದೆ.
* ಕೊನೆಗೆ ಮೇಲೆ ಹಸಿರು ಕೊತ್ತಂಬರಿ ಸೊಪ್ಪು ಹಾಕಿ. ನೀವು ಬಯಸಿದರೆ, ಸ್ವಲ್ಪ ಪಫ್ಡ್ ರೈಸ್ ಅಥವಾ ಹುರಿದ ಕಡಲೆಯನ್ನು ಸೇರಿಸಿ ಸೇವಿಸಿ.
ಬೇಕಾದಲ್ಲಿ...
* ನೀವು ಇದಕ್ಕೆ ಬೇಯಿಸಿದ ಆಲೂಗಡ್ಡೆ ತುಂಡುಗಳು ಅಥವಾ ಮೊಳಕೆ ಕಾಳುಗಳನ್ನು ಕೂಡ ಸೇರಿಸಬಹುದು.
* ಹೆಚ್ಚು ಖಾರ ಇಷ್ಟಪಡುವವರು ನೀವಾಗಿದ್ದರೆ ಕೆಂಪು ಮೆಣಸಿನ ಪುಡಿ ಅಥವಾ ಹಸಿರು ಚಟ್ನಿ ಕೂಡ ಸೇರಿಸಬಹುದು.
* ಇದನ್ನು ತಯಾರಿಸಿದ ತಕ್ಷಣವೇ ಬಡಿಸಿವುದರಿಂದ ಅದರ ರುಚಿ ತಾಜಾ ಮತ್ತು ಗರಿಗರಿಯಾಗಿ ಉಳಿಯುತ್ತದೆ.
ಸೌತೆಕಾಯಿ ಸ್ವೀಟ್ ಕಾರ್ನ್ ಚಾಟ್ ರೆಸಿಪಿ ಬಹಳ ಆರೋಗ್ಯಕರ ಮತ್ತು ರುಚಿಕರವಾದ ರೆಸಿಪಿಯಾಗಿದ್ದು, ಇದನ್ನು ನೀವು ಉಪಾಹಾರ, ಸಂಜೆ ತಿಂಡಿಗೆ ಅಥವಾ ಡಯಟ್ ಫುಡ್ ಆಗಿಯೂ ಸೇವಿಸಬಹುದು. ಈ ರೆಸಿಪಿ ಹೊಟ್ಟೆ ಹಸಿವನ್ನು ನೀಗಿಸುವುದಲ್ಲದೆ ಜೀರ್ಣಕ್ರಿಯೆಗೂ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.