ದೇಹದ ತೂಕಕ್ಕೆ ತಕ್ಕಂತೆ ನೀರು ಕುಡಿದ್ರೆ, ವೈಟ್ ಲಾಸ್ ಮಾಡ್ಕೊಳ್ಳೋದು ತುಂಬಾ ಈಝಿ

By Vinutha Perla  |  First Published Jan 31, 2024, 9:19 AM IST

ತೂಕ ಹೆಚ್ಚಳ ಮತ್ತು ಬೊಜ್ಜು ಇವತ್ತಿನ ಕಾಲದಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಹೀಗಾಗಿ ವೈಟ್ ಲಾಸ್ ಮಾಡಿಕೊಳ್ಳಲು ನಾನಾ ದಾರಿಯನ್ನು ಹುಡುಕುತ್ತಿರುತ್ತಾರೆ. ವರ್ಕೌಟ್, ಡಯೆಟ್ ಎಲ್ಲಾ ಮಾಡ್ತಾರೆ. ಆದ್ರೆ ನಾವು ದಿನಾ ಕುಡಿಯೋ ನೀರನ್ನು ಸರಿಯಾದ ರೀತಿಯಲ್ಲಿ ಕುಡಿದ್ರೆ ಸುಲಭವಾಗಿ ವೈಟ್ ಲಾಸ್ ಮಾಡ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ?


ತೂಕ ಹೆಚ್ಚಳ ಮತ್ತು ಬೊಜ್ಜು ಇವತ್ತಿನ ಕಾಲದಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಹೀಗಾಗಿ ವೈಟ್ ಲಾಸ್ ಮಾಡಿಕೊಳ್ಳಲು ನಾನಾ ದಾರಿಯನ್ನು ಹುಡುಕುತ್ತಿರುತ್ತಾರೆ. ಆದರೆ ದಿನಾ ವರ್ಕೌಟ್‌, ಡಯೆಟ್‌, ಎಕ್ಸರ್‌ಸೈಸ್ ಮಾಡುವುದು ಎಲ್ಲರಿಗೂ ಬೇಸರದ ಕೆಲಸವಾಗಿದೆ. ಪ್ರತಿಯೊಬ್ಬರೂ ತ್ವರಿತವಾಗಿ ತೂಕ ಕಳೆದುಕೊಳ್ಳಲು ಬಯಸುತ್ತಾರೆ. ಆದರೆ ಅದಕ್ಕಾಗಿ ಪ್ರತ್ಯೇಕ ಆಹಾರ, ಜ್ಯೂಸ್ ತಯಾರಿಸಿಕೊಳ್ಳಲು ಯಾರಿಗೂ ಸಮಯವಿರುವುದಿಲ್ಲ. ಆದರೆ, ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಒಂದು ಪಾನೀಯವಿದೆ. ಇದು ಪ್ರತಿ ಮನೆಯಲ್ಲೂ ಲಭ್ಯವಿದೆ. ಅದು ಇನ್ನೇನು ಅಲ್ಲ ನೀರು.

ದೇಹಕ್ಕೆ ನಾವು ತಿನ್ನುವ ಆಹಾರದಂತೆಯೇ ಕುಡಿಯುವ ನೀರು ಸಹ ತುಂಬಾ ಅಗತ್ಯವಾಗಿದೆ. ನೀರು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಮುಖ್ಯ. ಇದು ದೇಹವು ದೈಹಿಕ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ನೀರು ಹೇಗೆ ಸಹಾಯ ಮಾಡುತ್ತದೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಚಳಿಗಾಲದಲ್ಲಿ ಬೆಲ್ಲಿ ಫ್ಯಾಟ್‌ ಕಡಿಮೆ ಮಾಡ್ಕೊಳ್ಳೋಕೆ ಈ ಐದು ಪಾನೀಯ ಕುಡೀರಿ ಸಾಕು

ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ
ಸಾಕಷ್ಟು ನೀರು ಕುಡಿಯದಿದ್ದರೆ, ದೇಹವು ಸಂಗ್ರಹವಾಗಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಚಯಾಪಚಯಗೊಳಿಸಲು ಸಾಧ್ಯವಾಗುವುದಿಲ್ಲ ದೇಹವು ಅವುಗಳನ್ನು ಸುಡುವುದಿಲ್ಲ. ಆದರೆ ಹೆಚ್ಚಿನ ಪ್ರಮಾಣದ ನೀರನ್ನು ಕುಡಿದಾಗ ಕೊಬ್ಬನ್ನು ತೊಡೆದು ಹಾಕುವುದು ಸುಲಭ.

ಕ್ಯಾಲೊರಿಗಳನ್ನು ಕಡಿಮೆಗೊಳಿಸುತ್ತದೆ
ತಣ್ಣೀರು  ಚಯಾಪಚಯವನ್ನು ಹೆಚ್ಚಿಸುತ್ತದೆ. ಅದು ಅಂತಿಮವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀರನ್ನು ಬೆಚ್ಚಗಾಗಲು ನಿಮ್ಮ ದೇಹವು ಹೆಚ್ಚು ಶ್ರಮಿಸಬೇಕು ಮತ್ತು ಆದ್ದರಿಂದ, ಪ್ರಕ್ರಿಯೆಯಲ್ಲಿ ಕ್ಯಾಲೊರಿ ಬರ್ನ್ ಆಗುತ್ತದೆ.

ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಸಾಕಷ್ಟು ಪ್ರಮಾಣದ ನೀರನ್ನು ಕುಡಿದಾಗ ಅದು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟಕ್ಕೆ ಮುಂಚೆ ನೀರು ಕುಡಿಯುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟ ಪ್ರಕ್ರಿಯೆಯನ್ನು ಸಹ ಸುಗಮಗೊಳಿಸುತ್ತದೆ.

ಒಂದೇ ವಾರದಲ್ಲಿ ತೂಕ ಕಡಿಮೆ ಮಾಡ್ಕೊಳ್ಳೋಕೆ ಈ ಐದು ಎಕ್ಸರ್‌ಸೈಸ್ ಮಾಡಿ ಸಾಕು

ವೈಟ್‌ ಲಾಸ್ ಮಾಡಿಕೊಳ್ಳಲು ಎಷ್ಟು ನೀರು ಕುಡಿಯಬೇಕು?
ತೂಕವನ್ನು ಕಳೆದುಕೊಳ್ಳಲು ಎಷ್ಟು ನೀರು ಕುಡಿಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀರಿನ ಪ್ರಮಾಣವು ದೇಹದ ತೂಕವನ್ನು ಅವಲಂಬಿಸಿರಬೇಕು. ದೇಹದ ತೂಕವನ್ನು ಅವಲಂಬಿಸಿ, ನೀರಿನ ಬಳಕೆಯ ಪ್ರಮಾಣವೂ ಬದಲಾಗುತ್ತದೆ. ತೂಕ ನಷ್ಟಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಹೇಗೆ ಲೆಕ್ಕ ಹಾಕಬೇಕು ಎಂಬುದು ಇಲ್ಲಿದೆ.

ಮೊದಲಿಗೆ, ತೂಕವನ್ನು ಪರೀಕ್ಷಿಸಿ. 80 ಕೆಜಿ ಇರುವ ವ್ಯಕ್ತಿಗೆ ಹೋಲಿಸಿದರೆ 55 ಕೆಜಿ ತೂಕದ ವ್ಯಕ್ತಿಗೆ ಕಡಿಮೆ ನೀರು ಬೇಕಾಗುತ್ತದೆ. ನಂತರ ಸಂಖ್ಯೆಯನ್ನು ⅔ ಅಥವಾ 67% ರಿಂದ ಗುಣಿಸಿ. ಆದ್ದರಿಂದ ನಿಮ್ಮ ತೂಕ 60 ಕೆಜಿ ಇದ್ದರೆ, ಅದನ್ನು 30 ರಿಂದ ಭಾಗಿಸಿ ಮತ್ತು ನೀವು 2 ಲೀಟರ್ ನೀರನ್ನು ಕುಡಿಯಬೇಕು.ವ್ಯಾಯಾಮ ಮಾಡಿದರೆ, ನೀರಿನ ಸೇವನೆಯ ಪ್ರಮಾಣವನ್ನು ಹೆಚ್ಚು ಮಾಡಬೇಕು. ಪ್ರತಿ 30 ನಿಮಿಷಗಳ ತಾಲೀಮುಗೆ, ಸುಮಾರು 350 ಮಿಲಿ ನೀರನ್ನು ಕುಡಿಯಬೇಕು.

click me!