ಬೇಸಿಗೆ ಆಳೋ ಮ್ಯಾಂಗೋ ಲಸ್ಸಿಗೆ ಡ್ರಿಂಕ್ಸ್‌ನಲ್ಲಿ ಮೊದಲ ಸ್ಥಾನ!

By Suvarna News  |  First Published Jan 30, 2024, 2:52 PM IST

ವಿಶ್ವದಲ್ಲಿ ಸಾವಿರಾರು ಪಾನೀಯಗಳಿವೆ. ಅದ್ರಲ್ಲಿ ಡೈರಿ ಪಾನೀಯಗಳ ಸಂಖ್ಯೆಯೂ ಹೆಚ್ಚಿದೆ. ಆದ್ರೆ ಆ ಪಾನೀಯಗಳ್ಯಾವುವೂ ನಮ್ಮ ಭಾರತದ ಪ್ರಸಿದ್ಧ ಮ್ಯಾಂಗೋ ಲಸ್ಸಿಗೆ ಸಮನಾಗಿಲ್ಲ. ಅವುಗಳನ್ನೆಲ್ಲ ಹಿಂದಿಕ್ಕಿ ಮ್ಯಾಂಗೋ ಲಸ್ಸಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. 


ಹಣ್ಣುಗಳ ರಾಜ ಮಾವು. ಹೆಸರಿಗೆ ತಕ್ಕಂತೆ ಅದು ಎಲ್ಲರನ್ನು ಆಳುತ್ತದೆ. ಮಾವಿನ ರುಚಿಯೇ ಅಂತಹದ್ದು. ಎಲ್ಲರಿಗೂ ಇಷ್ಟವಾಗುವಂತಹ ಹಣ್ಣು. ಮಾವಿನ ಹಣ್ಣನ್ನು ಹಾಗೆ ತಿನ್ನೋದು ಮಾತ್ರವಲ್ಲ ನಾನಾ ಖಾದ್ಯ ಮಾಡಿ ಸೇವನೆ ಮಾಡ್ತಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪಾನೀಯಗಳಲ್ಲಿ ಲಸ್ಸಿ ಒಂದು. ಅದ್ರಲ್ಲೂ ಬೇಸಿಗೆ ಮಾವಿನ ಋತುವಾಗಿರುವ ಕಾರಣ ಮ್ಯಾಂಗೋ ಲಸ್ಸಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಕಾಲ ಯಾವುದೇ ಇರಲಿ, ಮ್ಯಾಂಗೋ ಲಸ್ಸಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. 

ಮಾವಿನ (Mango) ಹಣ್ಣನ ಘಮನದ ಜೊತೆ ಮೊಸರು, ಏಲಕ್ಕಿ, ಸಕ್ಕರೆ ಹಾಗೂ ಕೇಸರಿ ಮಿಶ್ರಣ, ಲಸ್ಸಿ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಉತ್ತರ ಭಾರತ (North India ) ದ ಈ ಜನಪ್ರಿಯ ಡೈರಿ ಪಾನೀಯ ಇದು. ಆದ್ರೆ ಭಾರತದ ಎಲ್ಲ ಕಡೆ ನೀವು ಮ್ಯಾಂಗೋ ಲಸ್ಸಿ (Lassi) ಯ ರುಚಿ ನೋಡ್ಬಹುದು. ನೀವೂ ಮ್ಯಾಂಗೋ ಲಸ್ಸಿ ಪ್ರೇಮಿಗಳಾಗಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ತನ್ನ 2023-24 ಪ್ರಶಸ್ತಿಗಳಲ್ಲಿ ವಿಶ್ವದ ಅತ್ಯುತ್ತಮ ಡೈರಿ ಪಾನೀಯ ಎಂಬ ಶೀರ್ಷಿಕೆಯನ್ನು ಮ್ಯಾಂಗೋ ಲಸ್ಸಿಗೆ ನೀಡಿದೆ.

Latest Videos

undefined

ಮಗುಗಾಗಿ ಹಂಬಲಿಸುತ್ತಿದ್ದೀರಾ? ಫಲವತ್ತತೆ ಹೆಚ್ಚಿಸೋ ಈ ಆಹಾರ ಹೆಚ್ಚು ಸೇವಿಸಿ

ಮಾವು ಖನಿಜಗಳ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಕಬ್ಬಿಣದ ಜೊತೆಗೆ ಕ್ಯಾಲ್ಸಿಯಂ ಮತ್ತು ಸತುವು ಇದರಲ್ಲಿದೆ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಇದಲ್ಲದೆ  ಲಸ್ಸಿಯಲ್ಲಿ ಫೈಬರ್ ಮತ್ತು ಅನೇಕ ಜೀವಸತ್ವಗಳು ಕಂಡುಬರುತ್ತವೆ. ಇವೆರಡರ ಸಂಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ.

ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಸ್ಥಾನ : ಟೇಸ್ಟ್ ಅಟ್ಲಾಸ್, ಮ್ಯಾಂಗೋ ಲಸ್ಸಿಗೆ ವಿಶ್ವದ ಅತ್ಯುತ್ತಮ ಪಾನೀಯ ಎಂಬ ಬಿರುದನ್ನು ನೀಡಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗಳ ಮೆನುವಿನಲ್ಲಿ ಮ್ಯಾಂಗೋ ಲಸ್ಸಿ ಹೆಚ್ಚು ಜನಪ್ರಿಯವಾಗಿದೆ ಎಂದು ಹೇಳಿದೆ. ಮ್ಯಾಂಗೋ ಲಸ್ಸಿಗೆ 4.7 ರೇಟಿಂಗ್ ನೀಡಲಾಗಿದೆ. ವಿಶ್ವದ ಸಾವಿರಾರು ಪಾನೀಯಗಳ ಪೈಕಿ 16 ಪಾನೀಯಗಳನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಮ್ಯಾಂಗೊ ಲಸ್ಸಿ ಮೊದಲ ಸ್ಥಾನದಲ್ಲಿದೆ. ಪಟ್ಟಿಯು 4 ನೇ ಸ್ಥಾನದಲ್ಲಿ ಪಂಜಾಬಿ ಲಸ್ಸಿ ಇದೆ. ಇದಕ್ಕೆ 4.4 ರೇಟಿಂಗ್ ನೀಡಲಾಗಿದೆ. ಉಪ್ಪು ಲಸ್ಸಿ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಲಸ್ಸಿಯನ್ನು ಜೀರಿಗೆ ಪುಡಿ ಮತ್ತು ಉಪ್ಪನ್ನು ಬೆರೆಸಿ ತಯಾರಿಸಲಾಗುತ್ತದೆ. ಉಪ್ಪು ಲಸ್ಸಿಗೆ 3.7 ರೇಟಿಂಗ್‌ ನೀಡಲಾಗಿದ್ದು, ಅದು ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.  ಮ್ಯಾಂಗೋ ಲಸ್ಸಿ ಮಾಡಲು ಬೇಕಾಗುವ ಪದಾರ್ಥ : ನಾಲ್ಕು ಮಾವಿನ ಹಣ್ಣು. ಎರಡು ಕಪ್ ಮೊಸರು. ಐದು ಚಮಚ ಸಕ್ಕರೆ. 1/4 ಟೀಸ್ಪೂನ್ ಏಲಕ್ಕಿ ಪುಡಿ.

ಏಳು ಬಣ್ಣಗಳ ಮಳೆಬಿಲ್ಲು ಚಹಾ; ಒಂದೊಂದು ಪದರಕ್ಕೊಂದು ರುಚಿ, ಸ್ವಾದ!

ಮಾವಿನ ಹಣ್ಣಿನ ಲಸ್ಸಿ ಮಾಡುವ ವಿಧಾನ : ಮೊದಲು ಮಾವಿನ ಹಣ್ಣನ್ನು ತೆಗೆದುಕೊಂಡು, ಅದರ ಸಿಪ್ಪೆ ತೆಗೆದು ಒಂದು ಬ್ಲೆಂಡರ್ ಪಾತ್ರೆಗೆ ಹಣ್ಣನ್ನು ಸಣ್ಣ ಸಣ್ಣ ಪೀಸ್ ಆಗಿ ಕತ್ತರಿಸಿ ಹಾಕಿ. ಅದಕ್ಕೆ ಮೊಸರು, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಬ್ಲೆಂಡರ್ ಮುಚ್ಚಳ ಮುಚ್ಚಿ, ಮೂರ್ನಾಲ್ಕು ಬಾರಿ ಮಿಕ್ಸ್ ಮಾಡಿ. ಮ್ಯಾಂಗೋ ಪೀಸ್ ಗಳು ನುಣ್ಣಗಾದ ಮೇಲೆ ಅದನ್ನು ಒಂದು ಗಾಜಿನ ಪಾತ್ರೆಗೆ ಹಾಕಿ, ಸ್ವಲ್ಪ ಸಮಯ ತಣ್ಣಗಾಗಲು ನೀವು ಫ್ರಿಜ್ ನಲ್ಲಿ ಇಡಬಹುದು. ಮೊಸರು ಅಥವಾ ಮಾವಿನ ಹಣ್ಣು ಮೊದಲೇ ತಣ್ಣಗಿದ್ದಲ್ಲಿ ನೀವು ಆ ಕ್ಷಣದಲ್ಲಿಯೇ ಮ್ಯಾಂಗೋ ಲಸ್ಸಿ ಕುಡಿಯಬಹುದು. 

click me!