Healthy Food : ತೂಕ ಇಳಿಸಿಕೊಳ್ಳಬೇಕಾ, ಮತ್ತೊಂದಿಷ್ಟು ಸಮಸ್ಯೆಗೆ ಪರಿಹಾರ ಈ ಸಣ್ಣ ಏಲಕ್ಕಿ

By Suvarna News  |  First Published Jun 28, 2023, 7:00 AM IST

ಎಲ್ಲರ ಮನೆಯಲ್ಲೂ ಏಲಕ್ಕಿ ಇದ್ದೇ ಇರುತ್ತೆ. ಅಡುಗೆಗೆ ಬಳಕೆಯಾಗುವ ಈ ಏಲಕ್ಕಿ ಆಹಾರಕ್ಕೆ ವಿಶೇಷ ಪರಿಮಳ ನೀಡುತ್ತೆ. ಇಷ್ಟೇ ಅಲ್ಲ ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದ್ದು, ಅದೇನು ಅಂತಾ ನಾವು ಹೇಳ್ತೇವೆ.
 


ಮಸಾಲೆಗಳ ರಾಣಿ ಎಂದೇ ಹೆಸರುವಾಸಿಯಾಗಿರುವ ಏಲಕ್ಕಿ  ಸಾಂಬಾರು ಪದಾರ್ಥಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. ವಿಶಿಷ್ಟ ಪರಿಮಳವನ್ನು ಹೊಂದಿದ ಏಲಕ್ಕಿ ಉತ್ತಮ ಆರೋಗ್ಯವನ್ನೂ ನೀಡುತ್ತದೆ. ನಿತ್ಯದ ಅಡುಗೆ ಹಾಗೂ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿ ಅನೇಕ ಶಾರೀರಿಕ ಸಮಸ್ಯೆಗಳನ್ನು ದೂರಮಾಡುತ್ತದೆ.

ಚಿಕ್ಕ ಏಲಕ್ಕಿ (Cardamom) ಯಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತ ನಿರೋಧಕ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣವಿದೆ. ಈ ಎಲ್ಲ ಗುಣಗಳನ್ನು ಹೊಂದಿರುವುದರಿಂದ ಮಧುಮೇಹ, ಒತ್ತಡ ಹಾಗೂ ಲಿವರ್ ಮತ್ತು ಕ್ಯಾನ್ಸರ್ (Cancer ) ಗೆ ಸಂಬಂಧಿಸಿದ ಅನೇಕ ರೋಗಗಳನ್ನು ದೇಹದಿಂದ ತೆಗೆದುಹಾಕುತ್ತದೆ. ಏಲಕ್ಕಿಯಲ್ಲಿರುವ ಕಾರ್ಡಮೊನಿನ್ ಅಂಶವು ಸ್ತನ, ಕೊಲೊರೆಕ್ಟಲ್ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್ ಗಳಿಗೆ ಕಿಮೋಪ್ರಿವೆಂಟಿವ್ ಆಗಿ ಕಾರ್ಯನಿರ್ವಹಿಸುತ್ತದೆ.

ಚಿಕ್ಕ ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ, ಅಜೀರ್ಣ (Indigestion) ಸಮಸ್ಯೆಗೆ ಉತ್ತಮ ಔಷಧವಾಗಿದೆ. ಇದು ರುಚಿ ಮತ್ತು ವಾಂತಿಯ ಸಮಸ್ಯೆಯನ್ನು ನಿವಾರಿಸುತ್ತೆ. ಗಂಟಲಿನ ಕಿರಿಕಿರಿ, ಬಾಯಾರಿಕೆ, ಅಜೀರ್ಣ, ಬಿಕ್ಕಳಿಕೆಯ ತೊಂದರೆಗೆ ಏಲಕ್ಕಿ ಬಳಸಬಹುದು. ಸಣ್ಣ ಏಲಕ್ಕಿ ವಾತ, ಪಿತ್ತ, ಕಫದ ದೋಷಗಳನ್ನು ನಿವಾರಿಸುವುದರ ಜೊತೆಗೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಕಂಡುಬಂದಲ್ಲಿ ಏಲಕ್ಕಿಯ ಪರಿಮಳವನ್ನು ಗ್ರಹಿಸುವುದರಿಂದ ವಾಕರಿಕೆ ದೂರವಾಗುತ್ತದೆ. 

Tap to resize

Latest Videos

ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?

ಚಿಕ್ಕ ಏಲಕ್ಕಿಯ ಚಮತ್ಕಾರಿ ಗುಣಗಳು : 

ಅಧಿಕ ರಕ್ತದೊತ್ತಡ (High Blood Pressure) ನಿಯಂತ್ರಣ: ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ 3 ಗ್ರಾಂ ಏಲಕ್ಕಿ ಪುಡಿಯನ್ನು ಮೂರು ವಾರ ದಿನಕ್ಕೆ ಮೂರು ಬಾರಿ ತೆಗೆದುಕೊಂಡರೆ ಬ್ಲಡ್ ಪ್ರೆಶರ್ ದೂರವಾಗುತ್ತೆ. ಏಲಕ್ಕಿಯಲ್ಲಿರುವ ಮೂತ್ರವರ್ಧಕ ಪರಿಣಾಮದಿಂದಾಗಿ ಮೂತ್ರದ ಮೂಲಕ ದೇಹದ ನೀರನ್ನು ಹೊರಹಾಕುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಉತ್ತಮ ಜೀರ್ಣಕ್ರಿಯೆ (Good Digestive System) : ಹಸಿರು ಅಥವಾ ಚಿಕ್ಕ ಏಲಕ್ಕಿ ತಿನ್ನುವುದರಿಂದ ಎಸಿಡ್ ರಿಫ್ಲಕ್ಸ್, ಹೊಟ್ಟೆ ನೋವು ಮತ್ತು ಎದೆಯುರಿ ಮುಂತಾದ ದೈಹಿಕ ಸಮಸ್ಯೆಯನ್ನು ದೂರ ಮಾಡಬಹುದು. ಇದರಲ್ಲಿರುವ ಬಯೋ ಎಕ್ಟಿವ್ ಅಂಶ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಏಲಕ್ಕಿ ಸೇವನೆಯು ಗ್ಯಾಸ್ಟ್ರಿಕ್ ಅಲ್ಸರ್ ಅನ್ನು ಪ್ರತಿಶತ 50ರಷ್ಟು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಅಗಿಯುವುದರಿಂದ ಇದರ ರಸವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಮಳೆಗಾಲದಲ್ಲಿ ತುಪ್ಪ ಜಾಸ್ತಿ ತಿನ್ನಿ, ಯಾಕ್ ಗೊತ್ತಾ?

ಬಾಯಿಯ ದುರ್ವಾಸನೆಗೆ ಮುಕ್ತಿ : ಎಂಟಿ ಬ್ಯಾಕ್ಟೀರಿಯಾ ಮತ್ತು ಎಂಟಿ ಇಂಪ್ಲಿಮೆಂಟರಿ ಗುಣಗಳನ್ನು ಹೊಂದಿರುವ ಚಿಕ್ಕ ಏಲಕ್ಕಿ ಲಾಲಾರಸದಲ್ಲಿರುವ ಪ್ರತಿಶತ 54ರಷ್ಟು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದ ಉಸಿರಾಟದಲ್ಲಿ ತಾಜಾತನ ಬರುತ್ತೆ.

ಕ್ಯಾನ್ಸರ್ ನಿಂದ ರಕ್ಷಣೆ (Cancer) : ಸಣ್ಣ ಏಲಕ್ಕಿಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಶರೀರದಲ್ಲಿ ಗಡ್ಡೆಯ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಕೊಲ್ಕತ್ತಾದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಏಲಕ್ಕಿ ತಿನ್ನುವುದರಿಂದ ದೇಹದಲ್ಲಿ ಎಂಟಿ ಆಕ್ಸಿಡೆಂಟ್ ಗಳು ಹೆಚ್ಚುತ್ತವೆ ಎಂದು ತಿಳಿದುಬಂದಿದೆ. ಇದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ಎದುರಿಸಲು ಪ್ರತಿಶತ 48ರಷ್ಟು ಸಹಾಯವಾಗುತ್ತೆ ಎಂಬುದು ತಿಳಿದುಬಂದಿದೆ. ಏಲಕ್ಕಿಯಲ್ಲಿರುವ ಫೈಟೊಕೆಮಿಕಲ್ ಬಾಯಿಯ ಕ್ಯಾನ್ಸರ್ ಕೋಶಗಳ ಪ್ರಸರಣವನ್ನು ತಡೆಯುತ್ತದೆ.

ದುಷ್ಚಟಗಳಿಂದ ದೂರ : ದುಷ್ಚಟದಿಂದ ಹೊರಬರಲು ಕಷ್ಟಪಡುತ್ತಿರುವವರು ಆಗಾಗ್ಗೆ ಏಲಕ್ಕಿ ಸೇವಿಸುವುದರಿಂದ ನಿಕೋಟಿನ್ ಚಡಪಡಿಕೆ, ಕಿರಿಕಿರಿ, ಅಸಹನೆ, ಆತಂಕ, ಖಿನ್ನತೆಯಂತಹ ತೊಂದರೆಯಿಂದ ಹೊರಬರಲು ಸಹಾಯಮಾಡುತ್ತದೆ.

ತೂಕ ಇಳಿಕೆ (Weight Loss) : ವಿಟಮಿನ್ ಮತ್ತು ಮಿನರಲ್ ಗಳಿಂದ ಸಮೃದ್ಧವಾದ ಸಣ್ಣ ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ನೀರನ್ನು ಕುಡಿಯುವುದರಿಂದ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು. ಸಣ್ಣ ಏಲಕ್ಕಿಯು ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಮತ್ತು ಕ್ಯಾಲೊರಿಗಳು ತೂಕ ನಷ್ಟವಾಗುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
 

click me!