ಚಿಕನ್ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಚಿಕನ್‌ನಲ್ಲಿ ವೆರೈಟಿ ಟೇಸ್ಟ್ ಮಾಡಲು ಜನರು ಸಿದ್ಧವಿರ್ತಾರೆ. ಭಾರತ ಸೇರಿ ವಿಶ್ವದಾದ್ಯಂತ ಚಿಕನ್‌ನಲ್ಲಿ ನಾನಾ ರೆಸಿಪಿ ಸಿದ್ಧಪಡಿಸಲಾಗುತ್ತದೆ. ಅದ್ರಲ್ಲಿ ಜನರಿಗೆ ಇಷ್ಟವಾಗೋದು ಯಾವುದು ಎಂಬ ಸಮೀಕ್ಷೆ ನಡೆದಿದೆ.
ಭಾರತೀಯರು ಖಾದ್ಯ ಪ್ರೀಯರು. ಇಲ್ಲಿ ಅನೇಕ ಬಗೆಯ ತಿಂಡಿಗಳನ್ನು ತಯಾರಿಸುತ್ತಾರೆ. ಎಲ್ಲ ಸಮುದಾಯದ ಜನರು ಅವರವರ ಸಂಪ್ರದಾಯ ಮತ್ತು ಪದ್ಧತಿಗೆ ಅನುಗುಣವಾಗಿ ನಾನಾ ವಿಧದ ಭಕ್ಷ್ಯಗಳನ್ನು ಮಾಡುತ್ತಾರೆ. ಅನೇಕ ಕಡೆ ಹಬ್ಬ ಹರಿದಿನಗಳಲ್ಲಿ ಕುರಿ ಕೋಳಿ ಮುಂತಾದ ಮಾಂಸಹಾರಿ ಅಡುಗೆಗಳನ್ನು ದೇವರಿಗೆ ನೈವೇದ್ಯ ರೂಪದಲ್ಲಿ ನೀಡುವ ಸಂಪ್ರದಾಯ ನಮ್ಮ ದೇಶದಲ್ಲಿದೆ.
ಸ್ಥಳದಿಂದ ಸ್ಥಳಕ್ಕೆ ಅಡುಗೆ (Cooking) ಯ ಶೈಲಿ, ರುಚಿ ಎಲ್ಲವೂ ವಿಭಿನ್ನವಾಗಿರುತ್ತದೆ. ಕೆಲವು ಕಡೆ ಶಾಖಾಹಾರಿ ಅಡುಗೆಗಳು ಪ್ರಖ್ಯಾತವಾಗಿದ್ದರೆ ಇನ್ನು ಕೆಲವು ಕಡೆ ಮಾಂಸಹಾರಿ ಅಡುಗೆಗಳು ಅಥವಾ ಸ್ನ್ಯಾಕ್ಸ್ (Snacks) ಫೇಮಸ್ ಆಗಿದೆ. ಅಂತಹ ಆಹಾರಗಳನ್ನೇ ಮುಖ್ಯವಾಗಿರಿಸಿಕೊಡು ಟೇಸ್ಟ್ (Taste) ಅಟ್ಲಾಸ್ ಜಾಲತಾಣವು ವರ್ಲ್ಡ್ ಫೇಮಸ್ ಚಿಕನ್ ರೆಸಿಪಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಅಡುಗೆ ಎಷ್ಟನೇ ಸ್ಥಾನ ಗಿಟ್ಟಿಸಿದೆ ಎಂದು ನೋಡೋಣ.
Paneer For Weight Loss: ಪನ್ನೀರ್ ಹೀಗೆ ಸೇವಿಸಿದ್ರೆ ನಿಮ್ಮ ತೂಕ ಇಳಿಯುತ್ತೆ
ಜಗತ್ತಿನೆಲ್ಲೆಡೆ ಹಲವಾರು ರೀತಿಯ ಚಿಕನ್ ರೆಸಿಪಿಗಳನ್ನು ತಯಾರಿಸಲಾಗುತ್ತೆ ಮತ್ತು ಸೇವಿಸಲಾಗುತ್ತದೆ. ದೇಶದಿಂದ ದೇಶಕ್ಕೆ ಜನರಿಂದ ಜನರಿಗೆ ಚಿಕನ್ ಟೇಸ್ಟ್ ಬೇರೆಯಾಗಿಯೇ ಇರುತ್ತದೆ. ಚಿಕನ್ ಪ್ರೇಮಿಗಳು ಉತ್ತರ ಅಮೆರಿಕದ ರಸಭರಿತವಾದ ಹುರಿದ ಚಿಕನ್ ನಿಂದ ಹಿಡಿದು ಭಾರತದ ಸ್ಮೋಕಿ ತಂದೂರಿ ಚಿಕನ್ ತನಕ ಎಲ್ಲವನ್ನೂ ಇಷ್ಟಪಡುತ್ತಾರೆ. ಪ್ರಪಂಚದಾದ್ಯಂತ ಅನೇಕ ವಿಧದ ಚಿಕನ್ ರೆಸಿಪಿಗಳು ಮಾಂಸಹಾರಿ ಪ್ರಿಯರನ್ನು ಆಕರ್ಷಿಸುತ್ತದೆ. ಇದೀಗ ಟೇಸ್ಟ್ ಅಟ್ಲಾಸ್ ಜಗತ್ತಿನೆಲ್ಲೆಡೆ ಪ್ರಖ್ಯಾತವಾದ ಮತ್ತು ಅವುಗಳ ರುಚಿಯ ಆಧಾರದ ಮೇಲೆ ಉತ್ತಮ ವರ್ಲ್ಡ್ ಫೇಮಸ್ ಚಿಕನ್ ರೆಸಿಪಿಗಳ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಜಗತ್ತಿನ ಐವತ್ತು ಚಿಕನ್ ರೆಸಿಪಿಗಳು ಸ್ಥಾನ ಪಡೆದಿವೆ.
ಟೇಸ್ಟ್ ಅಟ್ಲಾಸ್ ಪ್ರಕಟಿಸಿದ ಫುಡ್ ಲಿಸ್ಟ್ : ಟೇಸ್ಟ್ ಅಟ್ಲಾಸ್ ಜಾಲತಾಣವು ಜನಪ್ರಿಯ ರೆಸಿಪಿಗಳ ಪಟ್ಟಿ ತಯಾರಿಸಲು ಜನರಿಂದ ವೋಟಿಂಗ್ ಪಡೆಯಿತು. ಹಲವು ಕಡೆಗಳಿಂದ 7,425 ಮಂದಿ ಉತ್ತಮ ರೆಸಿಪಿಯ ಆಯ್ಕೆಗಾಗಿ ಮತ ಚಲಾಯಿಸಿದರು. ಜನರ ವೋಟಿಂಗ್ ಅನ್ನು ಆಧಾರವಾಗಿಟ್ಟುಕೊಂಡು ರೆಸಿಪಿಯ ಜನಪ್ರಿಯತೆ ಮತ್ತು ರುಚಿಯ ಆಧಾರದ ಮೇಲೆ ರೇಟಿಂಗ್ ನೀಡಲಾಯಿತು. ಜೂನ್ 23 2023 ರಂದು ವರ್ಲ್ಡ್ ಬೆಸ್ಟ್ ಚಿಕನ್ ರೆಸಿಪಿಯ ಪಟ್ಟಿಯನ್ನು ಜಾರಿಗೊಳಿಸಿತು.
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರ್ದು ಅಂದ್ರೆ ಹೀಗ್ ಮಾಡಿ
ಇರಾನಿನ ಜುಜೇಹ ಕಬಾಬ್ ಗೆ ದೊರಕಿತು ಮೊದಲ ಸ್ಥಾನ : ಇರಾರಿನ ಉತ್ತಮ ಖಾದ್ಯವಾದ ಗ್ರಿಲ್ಡ್ ಚಿಕನ್ ಜುಜೇಹ ಕಬಾಬ್ ಜಗತ್ತಿನ ಉತ್ತಮ ಚಿಕನ್ ರೆಸಿಪಿಯ ಲಿಸ್ಟ್ ನಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಟೇಸ್ಟ್ ಅಟ್ಲಾಸ್ ಅನ್ವಯ ಇದು ಇರಾನಿನ ಪಾಕಪದ್ಧತಿಯ ಪ್ರಧಾನ ಆಹಾರವಾಗಿದೆ. ಇದರಲ್ಲಿ ಎರಡು ವಿಧಾನವಿದೆ. ಒಂದನ್ನು ಮೂಳೆ ಸಹಿತ ತಯಾರಿಸಲಾಗುತ್ತದೆ. ಇನ್ನೊಂದನ್ನು ಮೂಳೆ ರಹಿತವಾಗಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸುಟ್ಟ ಟೊಮೆಟೋಗಳು, ಈರುಳ್ಳಿ, ಲಾವಾಶ್ ಬ್ರೆಡ್ ಅಥವಾ ಕೇಸರಿ ಅನ್ನದೊಂದಿಗೆ ಸರ್ವ್ ಮಾಡಲಾಗುತ್ತದೆ. ಜುಜೇಹ ಕಬಾಬ್ ನಂತರ ದಕ್ಷಿಣ ಕೊರಿಯಾದ ದಕ್ ಗಲ್ಬಿ ಮತ್ತು ಭಾರತದ ಮುರ್ಗ್ ಮಖಾನಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. ಇವುಗಳ ಹೊರತಾಗಿ ಭಾರತೀಯ ಖಾದ್ಯಗಳಾದ ಟಿಕ್ಕಾ, ತಂದೂರಿ ಮುರ್ಗಾ ಮತ್ತು ಚಿಕನ್ 65, ಕ್ರಮವಾಗಿ 19 ಮತ್ತು 25 ನೇ ಸ್ಥಾನದಲ್ಲಿವೆ.
ಜಗತ್ತಿನ ಮೋಸ್ಟ್ ವಾಂಟೆಡ್ ಚಿಕನ್ ರೆಸಿಪಿಗಳಿವು : ಇರಾನಿನ ಜುಜೆಹ್ ಕಬಾಬ್, ದಕ್ಷಿಣ ಕೊರಿಯಾದ ದಕ್ ಗಲ್ಬಿ, ಭಾರತದ ಮುರ್ಗ್ ಮಖ್ನಿ ಮತ್ತು ಟಿಕ್ಕಾ, ಇಂಡೋನೇಶಿಯಾದ ಕ್ಯೋ, ಜಾರ್ಜಿಯಾದ ಚಿಕನ್ ತಂಬಾಕೂ, ಪೋರ್ಚುಗಲ್ ನ ಪಿರಿ ಪಿರಿ ಹುರಿದ ಸೀಗಡಿ, ಅಲ್ಜೀರಿಯಾದ ತಾಜಿನೆ ಜಿಟೌನ್, ಕ್ಯೂಬಾದ ಚಿಕನ್ ಫ್ರಿಕಾಸೆ, ಪೆರುದ ಗ್ರಿಲ್ಡ್ ಚಿಕನ್ ಮುಂತಾದವು ಜನಪ್ರೀಯತೆ ಗಳಿಸಿದ ಮಾಂಸಹಾರಿ ಖಾದ್ಯಗಳಾಗಿವೆ.