ಮಳೆ ಅವಾಂತರ; ಎಲ್ಲೆಲ್ಲೂ ನೀರು..ಕುಡಿಯಲು ಹನಿ ನೀರಿಲ್ಲ !

By Suvarna News  |  First Published Sep 16, 2022, 11:25 AM IST

ಪ್ರತಿಯೊಬ್ಬ ಮನುಷ್ಯನಿಗೂ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವಂಥದ್ದು ನೀರು. ಮಾನವನು ಆಹಾರವಿಲ್ಲದೆ 8ರಿಂದ 21 ದಿನಗಳ ವರೆಗೆ ಬದುಕಬಲ್ಲನು. ಆದರೆ ನೀರಿಲ್ಲದೆ ಹೆಚ್ಚೆಂದರೆ ಮೂರು ದಿನದ ಮೇಲೆ ಬದುಕಲಾರ. ಜೀವದಾನಿ ಹಾಗೂ ಜೀವಹಾನಿ ಎರಡು ಆಗಬಲ್ಲ ಶಕ್ತಿ ನೀರಿಗಿದೆ. ದೇಶಾದ್ಯಂತ ಸುರಿದಿರುವ ಭೀಕರ ಮಳೆಯಿಂದ ಆಗಿರುವ ಅನಾಹುತ ಅಂತಹದ್ದೇ. ಸುತ್ತಲೂ ನೀರಿಗೆ ಕುಡಿಯಲಾಗುವುದಿಲ್ಲ ಅನ್ನೋ ಪರಿಸ್ಥಿತಿ.


- ವಿಜೇಂದರ್ ರೆಡ್ಡಿ ಮುತ್ಯಾಲ, ಡ್ರಿಂಕ್‌ಪ್ರೈಮ್‌ನ ಸಹ ಸಂಸ್ಥಾಪಕ ಮತ್ತು ಸಿಇಒ

ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಪ್ರವಾಹ ಉಂಟಾಗುತ್ತಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರೆ, ಇನ್ನದೆಷ್ಟೋ ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಈಶಾನ್ಯದಲ್ಲಿ, 200ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿದ್ದು 90 ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನ ಸಿಲ್ಚಾರ್ ಪ್ರದೇಶದಲ್ಲಿ ನಿರಂತರ ಮಳೆಯಿಂದ ಪ್ರವಾಹ ಉಂಟಾಗಿ ಸುತ್ತಲೂ ನೀರು ಆವರಿಸಿದ್ದು, ಜನರು ವಾರಗಟ್ಟಲೆ ನೀರಿನಿಂದ ಸುತ್ತುವರೆದ ನಿವಾಸಗಳಲ್ಲಿ ಮೂಲಭೂತ ಅವಶ್ಯಕತೆಗಳಾದ  ವಿದ್ಯುತ್ ಹಾಗೂ ಕುಡಿಯುವ ನೀರಿನ ಕೊರತೆಯಿಂದ ತೊಂದರೆ ಪಡುತ್ತಿದ್ದಾರೆ, ಇನ್ನು ಕೆಲವರ ಮನೆಗಳು ನೀರಿನಿಂದ ಆವೃತವಾಗಿದ್ದವು. ಸುತ್ತಲೂ ನೀರಿದ್ದರೂ ಜನಗಳು ಕುಡಿಯುವ ನೀರಿಗೆ ಹಪಹಪಿಸುವ ಸ್ಥಿತಿ ಒದಗಿ ಬಂದಿದೆ. ಎಷ್ಟೋ ಕಡೆ  ಪೆಟ್ರೋಲ್ ದರಕ್ಕಿಂತ  ನೀರಿನ ದರವು ಹೆಚ್ಚಾಗಿದ್ದು  ಲೀಟರ್ ಗೆ 120/-Rs ಆಗಿತ್ತು.

Tap to resize

Latest Videos

ಮಳೆಯ ಕಲುಷಿತ ನೀರನ್ನೇ ಕುಡಿಯುತ್ತಿರುವ ಜನರು
ಜಲದಿಗ್ಬಂಧನಲ್ಲಿ ಸಿಲುಕಿಕೊಂಡ ಜನ  ದಿನಗಳು ಕಳೆದರೂ ನೀರಿನ ಪ್ರಮಾಣ  ಕಡಿಮೆಯಾಗದ ಕಾರಣ ಬೇರೆ ವಿಧಿ ಇಲ್ಲದೆ ಮಳೆಯ ಕಲುಷಿತ ನೀರನ್ನೆ (Rain water) ಬಳಸಲು ಮುಂದಾದರು. ಅತಿ ಹೆಚ್ಚು ಮಳೆ ಬಂದಾಗ ಕುಡಿಯುವ ನೀರಿನ ಜೊತೆಗೆ  ಚರಂಡಿ ನೀರು ಮಿಶ್ರಿತವಾಗುವ ಸಂಭವ ಹೆಚ್ಚಿದ್ದು ಅದನ್ನು ಬಳಸುವುದನ್ನು ಬಿಟ್ಟರೆ ಜನರಿಗೆ ಬೇರೆ ಮಾರ್ಗವಿರಲಿಲ್ಲ. ನೀರು ಅತ್ಯಂತ ಶಕ್ತಿಶಾಲಿ. ತನ್ನೊಳಗೆ ಏನನ್ನು ಬೇಕಾದರೂ ಎಂತಹ  ಗಟ್ಟಿಯಾದ ಲೋಹವಾದರೂ  ಕರಗಿಸುವ ಶಕ್ತಿ ಇರುವುದು ನೀರಿಗೆ. ಇಂತಹ ನೀರು ಕಲುಷಿತಗೊಂಡು  ಮಾನವನ ದೇಹಕ್ಕೆ (Body) ಪ್ರವೇಶಿಸಿದರೆ  ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಇನ್ನು ಮಕ್ಕಳ ವಿಷಯಕ್ಕೆ ಬಂದರೆ  ಅವರಲ್ಲಿ ವಾಟರ್ ಬೋನ್ ಡಿಸೀಸ್  ಎಂಬ ಹಾನಿಕಾರಕ  ಕಾಯಿಲೆ (Disease) ಕಾಣಿಸಿಕೊಳ್ಳಬಹುದು  ಹಾಗೂ ಭವಿಷ್ಯದಲ್ಲಿ ಬೆಳವಣಿಗೆ ಇದು ತೊಡಕ್ಕಾಗಬಹುದು.

ಮಳೆನೀರು ಸಂಗ್ರಹಿಸಿ ಕುಡಿಯೋ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಾ?

ನೈಸರ್ಗಿಕವಾಗಿ ಕಲುಷಿತ ನೀರನ್ನು ಕುಡಿಯಲು ಯೋಗ್ಯವಾಗಿ ಬದಲಾಯಿಸುವ ತಂತ್ರ
ಇಂಥಾ ಸಮಯದಲ್ಲಿ ಮಾನವೀಯತೆ ರೂಪವಾಗಿ ಬಂದ ಬೆಂಗಳೂರಿನ ಜಲ ತಜ್ಞರು ತಮ್ಮ ಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಸದುಪಯೋಗಪಡಿಸಲು  ಮುಂದಾದರು.  ಮನೆಯಲ್ಲಿಯೇ ಯಾವ ವಿದ್ಯುತ್ ಸಹಾಯವಿಲ್ಲದೆ  ನೈಸರ್ಗಿಕವಾಗಿ ಕಲುಷಿತ ನೀರನ್ನು ಕುಡಿಯಲು ಯೋಗ್ಯವಾದ  ನೀರನ್ನಾಗಿ  ಬದಲಾಗಿಸುವ ತಂತ್ರವನ್ನು ಹೇಳಿಕೊಟ್ಟರು. ನೀರು ಸಂಸ್ಕರಣಾ ಸಲಹೆಗಾರರಾದ ಡಾ. ಟಿಎನ್‌ವಿವಿ ರಾವ್ ನೇತೃತ್ವದ ವಾಟ್ಸಾಪ್ ಗುಂಪಿನಲ್ಲಿ ಜನರು ನೀರಿನ ಚಿತ್ರಗಳು, ದೃಶ್ಯ ಗುಣಲಕ್ಷಣಗಳು ಮತ್ತು ಇನ್‌ಪುಟ್ ನೀರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಕಳುಹಿಸುತಿದ್ದರು. ನಂತರ ಅವರು ಮಾಹಿತಿ ಪರೀಕ್ಷಿಸಿ ನೀರನ್ನು ಫಿಲ್ಟರ್ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಜನರಿಗೆ ಹೇಳಿಕೊಡುತ್ತಿದ್ದರು.

ತಜ್ಞರು ಮತ್ತು ವೈದ್ಯರು ಸೂಚಿಸುವಂತೆ ಗುರುತ್ವಾಕರ್ಷಣೆ ಆಧಾರಿತ ಶುದ್ಧೀಕರಣ ವ್ಯವಸ್ಥೆ ಹೆಚ್ಚು ಸೂಕ್ತವಾಗಿದ್ದು  ವೈಜ್ಞಾನಿಕವಾಗಿಯು ಹೆಚ್ಚು ಮೌಲ್ಯ ಆಧಾರಿತವಾದದ್ದು, ಇದು ಬಿಸಿ ನೀರಿಗಿಂತ  ಹೆಚ್ಚು ಯೋಗ್ಯವೆಂದು  ಹೇಳಬಹುದು. ಈ ರೀತಿಯ ಶುದ್ಧೀಕರಣವು ನೀರಿನಲ್ಲಿರುವ ಕೀಟನಾಶಕಗಳು  ಮತ್ತು ಕೊಳೆಯನ್ನು ತೆಗೆಯಲು  ಸಹಕಾರಿಯಾಗುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವಶ್ಯಕವಾಗಿರುವ ಕುಡಿಯುವ ನೀರಿನ ಬಾಟಲ್ ಗಳು ಹಾಗೂ  ನೀರನ್ನು ಶುದ್ಧೀಕರಿಸುವ ಅಯೋಡಿನ್/ಕ್ಲೋರಿನ್ ಮಾತ್ರೆಗಳನ್ನು ಶೇಖರಿಸುವಂತೆ (Store) ಸೂಚನೆ ನೀಡಲಾಗುತ್ತದೆ. ಅಥವಾ ನಾನ್-ಎಲೆಕ್ಟ್ರಿಕ್ ವಾಟರ್ ಪ್ಯೂರಿಫೈಯರ್‌ಗಳನ್ನು ಸಂಗ್ರಹಿಸಬಹುದು.

ಬಿಸ್ಲೆರಿ ಮಾರಾಟಕ್ಕಿದೆ, ಖರೀದಿ ಮಾಡ್ತಿರೋ ಕಂಪನಿ ಇದು!

ಪ್ರವಾಹಕ್ಕೆ ಕಾರಣವಾಗುವ ಪ್ರಮುಖ ಅಂಶಗಳು
ತಜ್ಞರು ಈಗಾಗಲೇ  ಪ್ರವಾಹಕ್ಕೆ ಕಾರಣವಾಗುವ  ಪ್ರಮುಖ ಅಂಶಗಳನ್ನು ಹೇಳಿದ್ದಾರೆ. ನೈಸರ್ಗಿಕ ಜಲಾಶಯಗಳಾದ ಕೆರೆ, ಕಾಲುವೆ ಆಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಕಟ್ಟಡಗಳನ್ನು ಕಟ್ಟಲಾಗಿದೆ.  ಕಸದ ರಾಶಿಗಳಿಂದ  ಸದ್ಯಕ್ಕೆ ಬದುಕಿರುವ ಕೆರೆಗಳು ಮತ್ತು  ಒಳಚರಂಡಿಗಳು  ತುಂಬಿಕೊಂಡಿದ್ದು, ಮಳೆಯ ನೀರು ಸಾಗಿ  ಸಾಗರ ಸೇರುವುದಕ್ಕೆ  ದಾರಿಯೇ ಇಲ್ಲದಾಗಿದೆ ಈ ಅಂಶಗಳು ಕೃತಕ ಪ್ರವಾಹಕ್ಕೆ ಎಡೆಮಾಡಿಕೊಡುತ್ತವೆ. ಪ್ರವಾಹದ (Flood) ನಂತರವೂ ಕುಡಿಯುವ ನೀರಿನ ಸಮಸ್ಯೆ  ಸಂಪೂರ್ಣವಾಗಿ ಸರಿ ಹೋಗುವುದಿಲ್ಲವಾದ ಕಾರಣ ಪ್ರವಾಹದ ಕಲುಷಿತ ನೀರು  ಕೆರೆ,ಬಾವಿ ಹಾಗೂ ನೀರಿನ  ಎಲ್ಲ ಮೂಲಗಳಲ್ಲಿಯೂ ಸೇರಿಕೊಂಡಿರುವುದರಿಂದ  ಮೊದಲು ಅವುಗಳನ್ನು ಸ್ವಚ್ಛಪಡಿಸಿ  ಕುಡಿಯಲು ಯೋಗ್ಯವಾಗಿದೆಯೇ  ಎಂದು ಪರೀಕ್ಷಿಸುವ ಅವಶ್ಯಕತೆ ಇದೆ. ಈ ಸಮಯದಲ್ಲಿ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಮತ್ತು ಜನರಿಗೆ ಶುದ್ಧ ನೀರನ್ನು ಒದಗಿಸುವ ನೀರಿನ ಎಟಿಎಂಗಳನ್ನು ಪರಿಚಯಿಸಬಹುದು.

ಅವೈಜ್ಞಾನಿಕ ಅಥವಾ ಕೃತಕ ಪ್ರವಾಹವನ್ನು ತಡಿಯಲು ಜನರ ಸಮೂಹವೇ  ಪರಿಸರ ತಜ್ಞರು ಹಾಗೂ ಸ್ಥಳೀಯರ ಗುಂಪನ್ನು ರಚಿಸಬಹುದು. ನಗರದಲ್ಲಿ ನಡೆಯುತ್ತಿರುವ  ಪರಿಸರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳಿಂದ ಹಸಿರನ್ನು ಸಂರಕ್ಷಿಸುತ್ತಾ ಜನರಿಗೆ ಮುಂದೆ ಆಗುವ  ಅಪಾಯದ (Danger) ಮುನ್ಸೂಚನೆ ಬಗ್ಗೆ ಮಾಹಿತಿ ನೀಡಿ ಕೃತಕ ಪ್ರವಾಹ ತಡೆಗಟ್ಟಬಹುದು.

ಆರ್ಯುವೇದದ ಪ್ರಕಾರ ನೀರು ಕುಡಿಯೋ ಸರಿಯಾದ ವಿಧಾನ ಇದೇ ನೋಡಿ

ಭಾರತದಲ್ಲಿ ಪ್ರವಾಹವು  ಕರುಣೆಯಿಲ್ಲದೆ ಎಷ್ಟೋ ಕುಟುಂಬಗಳ ದಿಕ್ಕಾಪಾಲಾಗಿಸಿ, ಸಾವು ನೋವುಗಳನ್ನು  ಸೃಷ್ಟಿಸಿದೆ  ಹಾಗೂ ತಲೆಮಾರುಗಳಿಂದ ನಿರ್ಮಿಸಲಾದ ಕಟ್ಟಡಗಳನ್ನು ನೆಲಸಮ ಮಾಡಿದೆ. ಎಷ್ಟೋ ಜನರ ಜೀವ ಮತ್ತು ಜೀವನದಲ್ಲಿ ಭಯಂಕರ ಅಲೆಯನ್ನೇ ಎಬ್ಬಿಸಿದೆ. ಬನ್ನಿ ನಾವೆಲ್ಲರೂ  ಮೊದಲು ಮಾನವರಾಗಿ ಈ ಜನಗಳಿಗೆ ಸಹಾಯ ಹಸ್ತ ನೀಡಲು ಮುಂದಾಗೋಣ.ಈ ನಿಟ್ಟಿನಲ್ಲಿ  ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು  ಅವರಿಗೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಾದರೂ  ಸಹಾಯ ಮಾಡಬಹುದು.ನೊಂದ ಜನರ  ಸೇವೆ ಮಾಡುವಲ್ಲಿ ಪಾಲುದಾರರಾಗಬಹುದು. ಪ್ರವಾಹ ಸಂಪೂರ್ಣ ತಗ್ಗಿದ ನಂತರ ಅಲ್ಲಿನ ಜನಗಳಿಗೆ ಜೀವನ ಕಟ್ಟಿಕೊಳ್ಳಲು ಸರ್ಕಾರೇತರ ಸಂಘ ಸಂಸ್ಥೆಗಳು ಆರ್ಥಿಕವಾಗಿ ನೆರವಾಗುವವು ಬನ್ನಿ ನಾವು ನಮ್ಮ ನಮ್ಮ ಶಕ್ತಿ ಅನುಸಾರ ಕೈ ಜೋಡಿಸೋಣ.

click me!