ಜೋಳ, ಇದು ವಿಟಮಿನ್, ಮಿನರಲ್ಸ್ ಮತ್ತು ಫೈಬರಿನಿಂದ ಸಮೃದ್ಧವಾಗಿದೆ ಮತ್ತು ರುಚಿ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದ್ರೆ ಬಿಳಿ ದೇಸಿ ಕಾರ್ನ್ ಅಥವಾ ವಿದೇಶಿ ಹಳದಿ ಕಾರ್ನ್ ಆರೋಗ್ಯಕ್ಕೆ ಯಾವ್ದು ಒಳ್ಳೇದು ?
ಜೋಳವನ್ನು ಯಾವುದೇ ರೂಪದಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ದೇಶೀಯ ಮೆಕ್ಕೆ ಜೋಳವನ್ನು ಮಳೆಗಾಲದಲ್ಲಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜೀರ್ಣ ಕ್ರಿಯೆಗೆ ಅನುಕೂಲ ಮಾಡುವ ಜೋಳ ಮಧುಮೇಹಿಗಳಿಗೂ ಉತ್ತಮ ಪರಿಣಾಮ ಬೀರುತ್ತದೆ. ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಆಗಿರುವ ರುಜಾತಾ ದಿವೇಕರ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೋಳದಿಂದ ಏನೆಲ್ಲ ಲಾಭವಿದೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಅಂಶಗಳು ಹೆಚ್ಚು ಗಮನ ಸೆಳೆಯುವಂಥದ್ದು. ಜೋಳಕ್ಕೆ ಉತ್ತರ ಭಾರತದಲ್ಲಿ ಮಕ್ಕಾ, ಮಕಾಯಿ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಇದರ ಸೇವನೆ ಮಾಡುವುದರಿಂದ ಹಲವಾರು ಸಮಸ್ಯೆಗಳಿಂದ ದೂರವಿರಬಹುದು. ಆದರೆ ಆರೋಗ್ಯಕ್ಕೆ ದೇಸೀಯಾಗಿ ಬೆಳೆಯುವ ಬಿಳಿ ಕಾರ್ನ್ ಒಳ್ಳೆಯದೋ ಅಥವಾ ಅಮೇರಿಕನ್ ಹಳದಿ ಕಾರ್ನ್ ಒಳ್ಳೇದು ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಯಾವ ರೀತಿಯ ಕಾರ್ನ್ ಆರೋಗ್ಯಕ್ಕೆ ಒಳ್ಳೇದು ?
ಮಾರುಕಟ್ಟೆಯಲ್ಲಿ ಹಲವು ಬಗೆಯ ಜೋಳ (Corn), ವಿವಿಧ ಬಣ್ಣಗಳಲ್ಲಿ ಲಭ್ಯವಿವೆ. ಆದರೆ ಈಗ ಹಳದಿ ಜೋಳ ಹೆಚ್ಚು ಪ್ರಚಲಿತದಲ್ಲಿದೆ. ಇದರಿಂದಲೇ ಸೂಪ್, ಸಲಾಡ್, ಸ್ನ್ಯಾಕ್ಸ್ ಮಾಡಿ ಸವಿಯಲಾಗುತ್ತದೆ. ಆದರೆ ಬಿಳಿ ಜೋಳವು ಇದರಂತೆಯೇ ಆರೋಗ್ಯಕರವಾಗಿದೆ (Healthy) ಎಂಬುದು ನಿಮಗೆ ತಿಳಿದಿದೆಯೇ ? ಯಾವಾಗಲೂ ನಮ್ಮ ಸಂಪ್ರದಾಯದ ಭಾಗವಾಗಿರುವ ಪ್ರಾಚೀನ ಆಹಾರ (Food)ಗಳನ್ನು ತಿನ್ನುವುದು ಆರೋಗ್ಯ ಉತ್ತಮವಾಗಿರಲು ಕಾರಣವಾಗುತ್ತದೆ. ಅಂಥಾ ಆಹಾರಗಳಲ್ಲೊಂದು ದೇಸಿ ಬಿಳಿ ಕಾರ್ನ್. ಇದನ್ನು ಜೋಳ, ಭಟ್ಟ, ಮಕ್ಕ, ಮಕೈ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಕಾರ್ನ್ ಸಿಲ್ಕ್ ಮರೆತು ಕೂಡ ಎಸೆಯಬೇಡಿ, ಇದನ್ನು ಈ ರೀತಿ ಬಳಸಬಹುದು ಕೇಳಿಸ್ಕೊಳ್ಳಿ!
ಸೆಲೆಬ್ರಿಟಿ ಪೌಷ್ಟಿಕತಜ್ಞ ಗಜಲ್ ಫರ್ನಿಚರ್‌ವಾಲಾ ಅವರು ದೇಸಿ ಬಿಳಿ ಕಾರ್ನ್ ಅನ್ನು ತಿನ್ನಲು ಕಾರಣಗಳನ್ನು ಹಂಚಿಕೊಂಡಿದ್ದಾರೆ. ದೇಸಿ ಕಾರ್ನ್ ಅನ್ನು ಸಾಮಾನ್ಯವಾಗಿ ಹುರಿದ ನಂತರ ಸೇವಿಸಲಾಗುತ್ತದೆ ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ. ಇದನ್ನು ಗ್ಯಾಸ್ ಸ್ಟೌವ್‌ನಲ್ಲಿ ಮಾಡಬಹುದು. ನಂತರ, ಅದರ ಮೇಲೆ ಕೆಲವು ಮಸಾಲೆಗಳನ್ನು ಸೇರಿಸಬಹುದು. ಮೇಲಿನಿಂದ ನಿಂಬೆ ರಸವನ್ನು ಸೇರಿಸುವುದು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕಾರ್ನ್ ತೂಕ ನಷ್ಟಕ್ಕೆ ಸಹಾಯಕವಾಗಿದೆಯೇ ?
ಕಾರ್ನ್ ಪೌಷ್ಟಿಕಾಂಶದಿಂದ ಕೂಡಿದೆ ಎಂಬುದು ನಿಜ. ಮಾತ್ರವಲ್ಲ ಇದನ್ನು ಕಿಚಡಿ, ಚಪಾತಿಯೊಂದಿಗೆ ತಿನ್ನಬಹುದು. ಮಳೆಗಾಲದಲ್ಲಿ (Monsoon) ಕೆಲವೊಂದು ಆಹಾರವನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೇದಲ್ಲ. ಆದ್ರೆ ಮಾನ್ಸೂನ್‌ನಲ್ಲಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಜೋಳ ಆರೋಗ್ಯಕ್ಕೆ ತುಂಬಾ ಒಳ್ಳೇದು. ದೇಸಿ ಜೋಳವನ್ನು ಬೆಳೆಯುವುದು ಮಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದರ ಸೇವನೆ ದೇಹಕ್ಕೆ (Body) ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. "ದು ಸ್ಥಳೀಯ ಆರ್ಥಿಕತೆ ಮತ್ತು ಪರಿಸರ ವಿಜ್ಞಾನಕ್ಕೂ ಒಳ್ಳೆಯದು ಎಂದು ಅವರು ಹೇಳಿದರು.
Monsoon Food: ಮಳೆಗಾಲದ ಆಹಾರದಲ್ಲಿ ಮೆಕ್ಕೆಜೋಳವೂ ಇರಲಿ
ದೇಶೀಯ ಜೋಳ ಗ್ರೇಟ್
ಜೋಳವನ್ನು ಯಾವ ರೀತಿ ಬೇಕಿದ್ದರೂ ಬಳಕೆ ಮಾಡಬಹುದು. ಬೇಯಿಸಿ, ಉಪ್ಪು, ಚಾಟ್ ಮಸಾಲೆ ಸೇರಿಸಿ ತಿನ್ನಬಹುದು. ಹುರಿದು ಸೇವನೆ ಮಾಡಬಹುದು. ಅಥವಾ ವಿವಿಧ ಬಾತ್, ಮಸಾಲೆಗಳಿಗೆ ಸೇರಿಸಿ, ಕೋಸಂಬರಿ ಮಾಡಿಕೊಂಡೂ ಸೇವಿಸಬಹುದು. ಅಸಲಿಗೆ ರುಜಾತಾ (Rujata) ಅವರು ದೇಶೀಯ ಬಿಳಿ ಜೋಳವನ್ನು (White Corn) ತಿನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಸ್ವೀಟ್ ಕಾರ್ನ್ ನಂತೆಯೇ ಆಕಾರ ಹೊಂದಿದ್ದು, ಬಿಳಿ ಬಣ್ಣದ ಮೆಕ್ಕೆಜೋಳ ಆರೋಗ್ಯಕ್ಕೆ ಅತ್ಯುತ್ತಮ ಎಂದು ಹೇಳಿದ್ದಾರೆ.
ಆದರೆ, ಕೆಲವು ಅಧ್ಯಯನಗಳ ಪ್ರಕಾರ, ಸ್ವೀಟ್ ಕಾರ್ನ್ (Sweet Corn) ಕೂಡ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ. ಮಧುಮೇಹಿಗಳೂ ಕೂಡ ಇದನ್ನು ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಬಹುದು. ಆಂಟಿಆಕ್ಸಿಡಂಟ್ (Antioxidants) ಹಾಗೂ ಪಾಲಿಫೆನಾಲ್ ಅಂಶ ಹೊಂದಿರುವ ಸ್ವೀಟ್ ಕಾರ್ನ್, ಟೈಪ್ 2 ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದೆ.