ಟೀ ಜೊತೆ ನಾವು ಸಾಮಾನ್ಯವಾಗಿ ಬಿಸ್ಕತ್, ಬಜ್ಜಿ ತಿನ್ನುತ್ತೇವೆ. ಪ್ರತಿ ದಿನ ಇದನ್ನೇ ತಿಂದು ಬೋರ್ ಆಗುತ್ತೆ ಅಂತಾ ಫಾಸ್ಟ್ ಫುಡ್ ಸಹವಾಸಕ್ಕೆ ಹೋದ್ರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಇದನ್ನು ಟ್ರೈ ಮಾಡ್ಬಹುದು.
ಭಾರತದಲ್ಲಿ ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಬರೀ ಟೀ ಮಾತ್ರವಲ್ಲ ಕಾಫಿ ಕುಡಿಯೋರು ಕೂಡ ಕಡಿಮೆಯೇನಿಲ್ಲ. ಅನೇಕರಿಗೆ ಬೆಡ್ ಟೀ ಬೇಕೆಬೇಕು. ಇನ್ನು ಕೆಲವರಿಗೆ ಉಪಹಾರದ ಜೊತೆ ಬೇಕು. ಮತ್ತೆ ಕೆಲವರಿಗೆ ಬಿಡುವಿದ್ದಾಗೆಲ್ಲ ಟೀ ಅಥವಾ ಕಾಫಿ ಬೇಕು. ಇನ್ನು ಭಾರತದ ಬಹುತೇಕ ಮನೆಗಳಲ್ಲಿ ಸಂಜೆ ಒಂದು ಕಪ್ ಟೀ ಕುಡಿಯುವವರಿದ್ದಾರೆ. ಸಂಜೆ ಟೀ ಅಥವಾ ಕಾಫಿ ಕುಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತೆ ಎನ್ನುವವರೇ ಹೆಚ್ಚು. ಆದ್ರೆ ಖಾಲಿ ಟೀ ಕುಡಿಯೋಕೆ ಮನಸ್ಸು ಬರೋದಿಲ್ಲ. ಅದ್ರಲ್ಲೂ ಬೊರೋ ಅಂತಾ ಮಳೆ ಸುರಿಯುತ್ತಿದ್ದರೆ ಇಲ್ಲ ಚಳಿಯಾಗ್ತಿದ್ದರೆ ಬಿಸಿ ಬಿಸಿ ತಿಂಡಿ ಬೇಕು ಎನ್ನಿಸದೆ ಇರದು. ಪ್ರತಿ ದಿನ ಅದೇ ಬಿಸ್ಕತ್ ತಿಂದು ಬೇಜಾರಾಗಿದೆ ಅಂತಾ ಪುರುಷರು ಹೇಳಿದ್ರೆ ಪ್ರತಿ ದಿನ ಏನು ತಿಂಡಿ ಮಾಡೋದು ಅಂತಾ ಮಹಿಳೆಯರ ಪ್ರಶ್ನೆ. ಇಂದು ನಾವು ಟೀ ಟೈಂನಲ್ಲಿ ಮಾಡಬಹುದಾದ ಕೆಲ ರೆಸಿಪಿ ನಿಮಗೆ ಹೇಳ್ತೇವೆ.
ಸಂಜೆ ಟೀ (Tea) ಜೊತೆ ತಿನ್ನಿ ಮಲ್ಟಿಗ್ರೇನ್ (Multigrain) ಸ್ನ್ಯಾಕ್ಸ್ :
ಮಲ್ಟಿಗ್ರೇನ್ ಇಡ್ಲಿ (Idli) : ಮಲ್ಟಿಗ್ರೇನ್ ಇಡ್ಲಿ ಮಾಡೋದು ಸುಲಭ. ಅದಕ್ಕೆ ನೀವು ಅಕ್ಕಿ ಬದಲು ರಾಗಿ, ಜೋಳ ಸೇರಿಸಬಹುದು. ನಿಮಗೆ ಇಷ್ಟವೆಂದ್ರೆ ನೀವು ಮೆಂತ್ಯೆ ಬೀಜವನ್ನು ಕೂಡ ಸೇರಿಸಬಹುದು. ಮಲ್ಟಿಗ್ರೇನ್ ಇಡ್ಲಿ ತಯಾರಿಸಲು ನೀವು 1/2 ಕಪ್ ರಾಗಿ ಹಿಟ್ಟು, 1/2 ಕಪ್ ಜೋಳದ ಹಿಟ್ಟು ಮತ್ತು 1/2 ಕಪ್ ಗೋಧಿ ಹಿಟ್ಟು ಬೇಕಾಗುತ್ತದೆ. ಉದ್ದಿನಬೇಳೆ ಮತ್ತು ಮೆಂತ್ಯ ಕಾಳುಗಳನ್ನು ನೀವು ಸ್ವಲ್ಪ ನೀರು ಹಾಕಿ ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ನಂತ್ರ ಮೆಂತ್ಯೆ ಹಾಗೂ ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ರಾತ್ರಿಯಿಡೀ ಈ ಮಿಶ್ರಣವನ್ನು ಹಾಗೆಯೇ ಬಿಡಿ. ಬೆಳಿಗ್ಗೆ ಈ ಮಿಶ್ರಣಕ್ಕೆ ಉಳಿದ ಹಿಟ್ಟುಗಳನ್ನು ಸೇರಿಸಿ. ಇಡ್ಲಿ ತಟ್ಟೆಯಲ್ಲಿ ಹಾಕಿ ಇವುಗಳನ್ನು ಬೇಯಿಸಿ. 15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಬೇಕು. ಸಾಂಬಾರ್ ಅಥವಾ ಚಟ್ನಿ ಜೊತೆ ಇದನ್ನು ಸೇವಿಸಿ.
ಮಲ್ಟಿಗ್ರೇನ್ ಮುರುಕು : ಮಲ್ಟಿಗ್ರೇನ್ ಮುರುಕು ಕೂಡ ಟೀ ಜೊತೆ ಸೇವಿಸಲು ರುಚಿಯಾಗಿರುತ್ತದೆ. ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ರುಚಿ ರುಚಿ ಸ್ನ್ಯಾಕ್ಸ್ ಮುರುಕು. ಡೀಪ್ ಪ್ರೈಡ್ ಸ್ನ್ಯಾಕ್ಸ್ ಇದು. ಇದನ್ನು ರಾಗಿ ಹಿಟ್ಟಿನಲ್ಲಿ ಕೂಡ ತಯಾರಿಸಲಾಗುತ್ತದೆ. ಅನೇಕರು ಅಕ್ಕಿ ಹಿಟ್ಟಿನಿಂದ ಇದನ್ನು ತಯಾರಿಸ್ತಾರೆ. ಇದಕ್ಕೆ ಉದ್ದಿನ ಬೇಳೆ ಹಾಗೂ ಓಟ್ಸ್ ಬೆರೆಸಿ ತಯಾರಿಸಿದ್ರೆ ರುಚಿ ಚೆನ್ನಾಗಿರುತ್ತದೆ. ಟೀ ಜೊತೆ ತಿನ್ನಲು ಮುರುಕು ದಿ ಬೆಸ್ಟ್ ಸ್ನ್ಯಾಕ್ಸ್.
Weight Loss : ಬೇಗ ಸಣ್ಣಗಾಗ್ಬೇಕೆಂದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ
ಮಲ್ಟಿಗ್ರೇನ್ ಗಾರ್ಲಿಕ್ ಬ್ರೆಡ್ (Garlic Bread) : ಇಟಾಲಿಯನ್ ಆಹಾರ ತಿನ್ನುವ ಇಷ್ಟ ನಿಮಗಿದ್ದರೆ ನೀವು ಮೆಲ್ಟಿಗ್ರೇನ್ ಗಾರ್ಲಿಕ್ ಬ್ರೆಡ್ ಸೇವನೆ ಮಾಡಬಹುದು. ಬಿಸಿ ಬೆಳ್ಳುಳ್ಳಿ ಹಾಗೂ ಬೆಣ್ಣೆಯನ್ನು ಟೋಸ್ಟ್ ಮಾಡಿ ಇದನ್ನು ತಯಾರಿಸಲಾಗುತ್ತೆ.
ಮಲ್ಟಿಗ್ರೇನ್ ಪರಾಟ (Paratha) : ಮಲ್ಟಿಗ್ರೇನ್ ಪರಾಟವನ್ನು ನೀವು ಯಾವಾಗ ಬೇಕಾದ್ರೂ ಸೇವನೆ ಮಾಡಬಹುದು. ನೀವು ಬೆಳಗಿನ ಉಪಹಾರಕ್ಕೆ ಹಾಗೂ ಸ್ನ್ಯಾಕ್ಸ್ ರೀತಿಯಲ್ಲೂ ಮಲ್ಟಿಗ್ರೇನ್ ಪರಾಟ ತಿನ್ನಬಹುದು. ಜೋಳ ಮತ್ತು ರಾಗಿಯನ್ನು ಸೇರಿಸಿ ನೀವು ರುಚಿಯಾದ ಪರಾಟ ತಯಾರಿಸಬಹುದು.
Health Care: ತೂಕ ಇಳಿಬೇಕಂತ ಸಿಕ್ಕಾಪಟ್ಟೆ ಗ್ರೀನ್ ಟೀ ಕುಡಿಬೇಡಿ
ಮಲ್ಟಿಗ್ರೇನ್ ಪಿಜ್ಜಾ : ಇದು ಕೂಡ ಇಟಾಲಿಯನ್ ರೆಸಿಪಿಯಾಗಿದೆ. ಮಲ್ಟಿಗ್ರೇನ್ ಪಿಜ್ಜಾ ಸೇವನೆ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು.