ಇಡ್ಲಿ ಅಂದ್ರೆ ಸಾಮಾನ್ಯವಾಗಿ ಎಲ್ಲರ ಫೇವರಿಟ್. ಹೊಟ್ಟೆನೂ ತುಂಬುತ್ತೆ. ಆರೋಗ್ಯಕ್ಕೂ ಒಳ್ಳೇದು. ಆದ್ರೆ ಯಾವಾಗ್ಲೂ ಒಂದೇ ರೀತಿಯ ಇಡ್ಲಿ ತಿನ್ನೋದು ಅಂದ್ರೆ ಬೇಜಾರು ಅಲ್ವಾ ? ಅದ್ಕೇ ಇಲ್ಲೊಬ್ಬ ಮಹಿಳೆ ನೋಡೋಕು, ತಿನ್ನೋಕು ಕಲರ್‌ಫುಲ್ ಆಗಿರ್ಲಿ ಅಂತ ಬ್ಲೂ ಇಡ್ಲಿ ತಯಾರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇಡ್ಲಿ (Idli) ದಕ್ಷಿಣ ಭಾರತದ (South India) ಜನಪ್ರಿಯ ಆಹಾರವಾಗಿದೆ. ಬಹುತೇಕರು ಇಷ್ಟ ಪಡುವಂತಹ ನೆಚ್ಚಿನ ಉಪಾಹಾರ (Breakfast) ಎಂದು ಹೇಳಬಹುದು. ಬಿಸಿ ಬಿಸಿ ಸಾಂಬಾರ್ (Sambar) ಮತ್ತು ಕೊಬ್ಬರಿ ಚಟ್ನಿ ಜೊತೆ ಇಡ್ಲಿಯನ್ನು ಸವಿಯುತ್ತಾರೆ. ಆದ್ರೆ ಎಷ್ಟೇ ಟೇಸ್ಟೀಯಾಗಿದ್ರೂ ಯಾವಾಗ್ಲೂ ಒಂದೇ ರೀತಿಯ ಇಡ್ಲಿ ತಿನ್ನೋಕೆ ಬೇಜಾರು ಅಲ್ವಾ ? ಅದೇ ಕೆಲವರು ಒಂದೊಂದು ದಿನ ರವೆ ಇಡ್ಲಿ, ಶ್ಯಾವಿಗೆ ಇಡ್ಲಿ ಮಾಡಿ ಸವಿಯುತ್ತಾರೆ. ಆದರೆ ಅದರ ಕಲರ್ ಸಹ ಬಿಳಿಯಾಗಿಯೇ ಇರುತ್ತೆ ಅನ್ನೋದೆ ಬೇಜಾರು. ನಿಮ್ಗೂ ಸಹ ಅದೇ ರೀತಿ ಒಂದೇ ಬಣ್ಣದ ಬಿಳಿ ಇಡ್ಲಿ ಸವಿದು ಬೇಜಾರಾಗಿದ್ರೆ ನೀವು ಈ ಬ್ಲೂ ಕಲರ್ ಇಡ್ಲಿ ಟ್ರೈ ಮಾಡ್ಬೋದು.
ಅರೆ, ಬ್ಲೂ ಕಲರ್ ಇಡ್ಲಿನಾ ಅಂತ ಗಾಬರಿಯಾಗ್ಬೇಡಿ. ಹೌದು ನೀಲಿ ಬಣ್ಣದ ಇಡ್ಲಿನೇ (Blue Idli). ಮಹಿಳೆ (Woman)ಯೊಬ್ಬರು ತಯಾರಿಸಿದ ಈ ಬ್ಲೂ ಇಡ್ಲಿ ಸದ್ಯ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಗ್ತಿದೆ. ಈ ಅಟ್ರ್ಯಾಕ್ಟಿವ್ ಇಡ್ಲಿ ತಯಾರಿಸೋದು ಹೇಗೆ ? ಇದನ್ನು ತಿನ್ನೋದ್ರಿಂದ ಆರೋಗ್ಯ (Health)ಕ್ಕೇನೂ ತೊಂದ್ರೆಯಿಲ್ವಾ ಅನ್ನೋದನ್ನು ತಿಳ್ಕೊಳ್ಳಿ.
Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?
ಹೂಗಳನ್ನು ಬಳಸಿ ನೀಲಿ ಇಡ್ಲಿ ತಯಾರಿಸಿದ ಮಹಿಳೆ
ವಿವಿಧ ಭಕ್ಷ್ಯಗಳಿಗೆ ಆಹಾರ ಬಣ್ಣಗಳನ್ನು ಹೆಚ್ಚಾಗಿ ಸೇರಿಸಲಾಗುತ್ತದೆ ಮತ್ತು ಹೀಗೆ ಮಾಡುವುದರಿಂದ ಅವುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಮಹಿಳೆಯೊಬ್ಬರು ನೀಲಿ ಶಂಖ ಪುಷ್ಪ ಹೂಗಳನ್ನು ಬಳಸಿ ನೀಲಿ ಬಣ್ಣದ ಇಡ್ಲಿಗಳನ್ನು ತಯಾರಿಸುತ್ತಿರುವ ವೀಡಿಯೊವನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ ಮಹಿಳೆ ಹೂವಿನ ಸಾರಗಳೊಂದಿಗೆ ನೀಲಿ ಇಡ್ಲಿಗಳನ್ನು ತಯಾರಿಸಿದ್ದಾರೆ. ಈ ವೀಡಿಯೋವನ್ನು jyotiz_kitchen ಎಂಬ Instagram ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.
ಬ್ಲೂ ಇಡ್ಲಿ ತಯಾರಿಸುವ ವೀಡಿಯೋ ಇಲ್ಲಿದೆ ನೋಡಿ.
ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಜ್ಯೋತಿ ಕಲ್ಬುರ್ಗಿ ಅವರು ಹಂಚಿಕೊಂಡಿರುವ ವೀಡಿಯೊ ಈಗ ವೈರಲ್ ಆಗಿದ್ದು, ತಟ್ಟೆಯಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಇಡ್ಲಿಗಳನ್ನು ತೋರಿಸಲಾಗಿದೆ. ವೀಡಿಯೋದಲ್ಲಿ ಜ್ಯೋತಿ ಈ ಇಡ್ಲಿಯನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಈ ನೀಲಿಗಳನ್ನು ಇಡ್ಲಿಗಳನ್ನು ತಯಾರಿಸಲು ಜ್ಯೋತಿ ಮೊದಲಿಗೆ ಹಲವು ನೀಲಿ ಬಣ್ಣದ ಶಂಖಪುಷ್ಪ ಹೂಗಳನ್ನು ತೆಗೆದುಕೊಂಡು ತೊಳೆದು ನೀರಿನ ಕುದಿಸುತ್ತಾರೆ. ನಂತರ ಇದರಿಂದ ಬರೀ ನೀಲಿ ನೀರನ್ನು ತೆಗೆದು ಇಡ್ಲಿ ಹಿಟ್ಟಿಗೆ (idli batter) ಬೆರೆಸಿಕೊಳ್ಳುತ್ತಾರೆ. ನಂತರ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿ ತೆಗೆಯುತ್ತಾರೆ. ಸುಂದರವಾದ ನೀಲಿ ಇಡ್ಲಿ ಸಿದ್ಧಗೊಳ್ಳುತ್ತದೆ. ನೀಲಿ ಇಡ್ಲಿ ತಯಾರಿಸುವ ಈ ವೀಡಿಯೋಗೆ 'ಬ್ಲೂ ಬಟಾಣಿ ಇಡ್ಲಿ' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
World Idli Day 2022: ಇಡ್ಲಿ ಬಗ್ಗೆ ನಿಮಗೆಷ್ಟು ಗೊತ್ತು
ಹೂಗಳಿಂದ ತಯಾರಿಸಿದ ಇಡ್ಲಿ ಆರೋಗ್ಯಕ್ಕೆ ಒಳ್ಳೇದಾ ?
ಕಳೆದ ತಿಂಗಳು ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಹಂಚಿಕೊಂಡ ನಂತರ, ಕ್ಲಿಪ್ 8.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಿವೆ. ಕ್ಲಿಪ್ 32,000 ಲೈಕ್‌ಗಳನ್ನು ಸಹ ಸ್ವೀಕರಿಸಿದೆ. ವೀಡಿಯೋಗೆ ಪ್ರತಿಕ್ರಿಯಿಸಿದ ಜನರು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಹೂವುಗಳು ಖಾದ್ಯವಾಗಿರುವ ಬಗ್ಗೆ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇಡ್ಲಿಗಳ ಬಣ್ಣವನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಹಂಚಿಕೊಂಡರೆ, ಇನ್ನು ಕೆಲವರು ಆಹಾರದ (Food) ರುಚಿಯ (Taste)ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಇನ್ನೊಬ್ಬರು 'ಹುಡುಗರೇ ಚಿಲ್ ಔಟ್, ಈ ಹೂವುಗಳು ಖಾದ್ಯವಾಗಿದೆ ಮತ್ತು ಅವುಗಳನ್ನು ಚಹಾಗಳಲ್ಲಿಯೂ ಬಳಸಲಾಗುತ್ತದೆ' ಎಂದು ಬರೆದಿದ್ದಾರೆ. ಆಯುರ್ವೇದದ ಬಗ್ಗೆ ಏನೂ ತಿಳಿದಿಲ್ಲದವರಿಗೆ ಈ ಹೂವುಗಳು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.