ಪ್ರತಿ ದಿನ ಬೆಳಿಗ್ಗೆ ಉಪಹಾರಕ್ಕೆ ಏನ್ ಮಾಡ್ಬೇಕು ಎಂಬುದು ಎಲ್ಲರ ಸಮಸ್ಯೆ. ಇಂದು ಮಾಡಿದ್ದು ನಾಳೆ ಮಾಡೋ ಹಾಗಿಲ್ಲ. ರುಚಿ ಹಾಗೂ ಆರೋಗ್ಯ ಎರಡಕ್ಕೂ ಮಹತ್ವ ನೀಡ್ಬೇಕು. ದಿನ ಬೆಳಗಾದ್ರೆ ಇದೇ ಚಿಂತೆ ಎನ್ನುವವರಿಗೆ ಬೆಸ್ಟ್ ಟಿಪ್ಸ್ ಇಲ್ಲಿದೆ.
ಬಿಸಿಯಾದ, ಗರಿಗರಿಯಾದ, ಡೀಪ್ ಫ್ರೈ (Deep Fry) ಮಾಡಿದ ಪರಾಟ (Paratha ) ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಪರಾಟ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು (Water) ಬರುತ್ತದೆ. ಬೆಣ್ಣೆ ಅಥವಾ ಎಣ್ಣೆ ಹಾಕಿ ಪರಾಟ ಮಾಡಿರ್ತಾರೆ. ಭಾರತೀಯ ಪಾಕಪದ್ಧತಿಯ ಪ್ರಧಾನ ಆಹಾರದಲ್ಲಿ ಇದು ಒಂದು ಹೇಳ್ಬಹುದು. ಉತ್ತರ ಭಾರತದ ಹೆಚ್ಚಿನ ಜನರು ಬೆಳಗಿನ ಉಪಾಹಾರವಾಗಿ ಪರಾಟವನ್ನು ತಿನ್ನಲು ಬಯಸ್ತಾರೆ. ಪರಾಟ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಬೇಗ ಹಸಿವಾಗುವುದಿಲ್ಲ. ಹಾಗಾಗಿಯೇ ಜನರು ಇದನ್ನು ಹೆಚ್ಚು ಇಷ್ಟಪಡ್ತಾರೆ. ಉಪ್ಪಿನಕಾಯಿ, ತರಕಾರಿ, ರೈತಾ, ಕರಿಬೇವಿನ ಜೊತೆಗೆ ಪರಾಟ ಸೇವನೆ ಮಾಡಿದ್ರೆ ಅದರ ಅನುಭವವೇ ಬೇರೆ. ರೊಟ್ಟಿಗೆ ಹೋಲಿಸಿದರೆ ಪರಾಟ ಸಾಮಾನ್ಯವಾಗಿ ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರತಿದಿನ ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ಜನರು ಅದರಲ್ಲಿ ಸ್ಟಫಿಂಗ್ ಮಾಡ್ತಾರೆ. ಇದನ್ನು ಬೇಯಿಸಲು ಹೆಚ್ಚು ತುಪ್ಪ ಮತ್ತು ಎಣ್ಣೆಯನ್ನು ಬಳಸುತ್ತಾರೆ. ಆದರೆ ಅದನ್ನು ಸರಿಯಾಗಿ ತಯಾರಿಸಿದರೆ ಇದು ಆರೋಗ್ಯಕರ ಖಾದ್ಯ ಎಂದು ಸಾಬೀತುಪಡಿಸಬಹುದು. ನಾವಿಂದು ಕೆಲ ಆರೋಗ್ಯಕರ ಪರಾಟ ಬಗ್ಗೆ ವಿವರ ನೀಡ್ತೇವೆ.
ಬೀಟ್ರೋಟ್ ಪರಾಟ : ಕೆಲವೇ ಕೆಲವು ಮಂದಿ ಬೀಟ್ರೋಟ್ ಪರಾಟ ಮಾಡ್ತಾರೆ. ಈ ಪರಾಟ ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು, ಫೈಬರ್, ಫೋಲೇಟ್, ಮ್ಯಾಂಗನೀಸ್, ಕಬ್ಬಿಣ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಈ ಪರಾಟವನ್ನು ತಿನ್ನುವುದು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಬಿಪಿಯನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ ಮಾಡುವ ನಿಮ್ಮ ಕ್ಷಮತೆಯನ್ನೂ ಹೆಚ್ಚಿಸುತ್ತದೆ.
ಫ್ರೇಶ್ ಕಬ್ಬಿನ ಹಾಲು ಓಕೆ, ಸ್ವಲ್ಪ ಹೊತ್ತಿನ ನಂತರ ಸೇವಿಸಿದ್ರೆ ಕೆಡುತ್ತೆ ಆರೋಗ್ಯ!
ಕೀಮಾ ಪರಾಟ : ಕೀಮಾ ಪರಾಟ ಚಪ್ಪಟೆ ರೊಟ್ಟಿಯಾಗಿದೆ. ಮಸಾಲೆಯುಕ್ತ ಮತ್ತು ಟೇಸ್ಟಿ ಕೊಚ್ಚಿದ ಮಾಂಸವನ್ನು ಸಂಪೂರ್ಣ ಗೋಧಿ ಹಿಟ್ಟಿನಲ್ಲಿ ತುಂಬಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಉತ್ತಮ ಪ್ರಮಾಣದ ಪ್ರೊಟೀನ್ ನಿಮ್ಮ ದೇಹಕ್ಕೆ ಸಿಗುತ್ತದೆ.
ಅಣಬೆ ಪರಾಟ : ಮಶ್ರೂಮ್ ತುಂಬಾ ಪೌಷ್ಟಿಕವಾಗಿದೆ. ನೀವು ಮಾಂಸದ ಸೇವನೆಯನ್ನು ತಪ್ಪಿಸಲು ಬಯಸಿದರೆ, ಮಶ್ರೂಮ್ ಪರಾಟ ಉತ್ತಮ ಆಯ್ಕೆಯಾಗಿದೆ. ಈ ಪರಾಟದ ಸಹಾಯದಿಂದ ಮಾಂಸದ ಕಡುಬಯಕೆಗಳನ್ನು ನೀವು ಪೂರೈಸಬಹುದು. ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್‌ಗಳ ಅತ್ಯುತ್ತಮ ಮೂಲ ಅಣಬೆ. ಇದು ತುಂಬಾ ಆರೋಗ್ಯಕರ ಭಕ್ಷ್ಯವಾಗಿದೆ.
ಟೈಪ್-2 ಮಧುಮೇಹ ನಿಯಂತ್ರಿಸಲು ಮೆಂತ್ಯ ಪರಾಟ : ಮೆಂತ್ಯವನ್ನು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಮೆಂತ್ಯ ಪರಾಟ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯ ಸೊಪ್ಪಿನಿಂದ ಪರಾಟ ಮಾಡಲಾಗುತ್ತದೆ. ಕೆಲವರು ಮೆಂತ್ಯ ಬೀಜಗಳಿಂದ ತಯಾರಿಸಿದ ಪರಾಟ ಇಷ್ಟಪಡ್ತಾರೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಕೆಲಸವನ್ನು ಇದು ಮಾಡುತ್ತದೆ. ಇಷ್ಟೇ ಅಲ್ಲ, ಮೆಂತ್ಯ ಎಲೆಗಳು, ಗ್ಲೂಕೋಸ್ ಮತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ. ಟೈಪ್ 2 ಡಯಾಬಿಟಿಸ್ ಹೊಂದಿರುವವರಿಗೆ ಈ ಪರಾಟ ಬಹಳ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟ, ಹೃದಯದ ಆರೋಗ್ಯ ಮತ್ತು ರಕ್ತದ ಲಿಪಿಡ್‌ಗಳನ್ನು ನಿಯಂತ್ರಿಸಲು ನೀವು ಬೆಳಗಿನ ಉಪಾಹಾರದಲ್ಲಿ ಮೆಂತ್ಯ ಪರಾಟವನ್ನು ಸೇವಿಸಬಹುದು.
ಯಾವತ್ತಾದ್ರೂ ಹಳದಿ ಕಲ್ಲಂಗಡಿ ಹಣ್ಣು ತಿಂದು ನೋಡಿದ್ರಾ?
ದಾಲ್ ಪರಾಟ : ಬೇಳೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೊಪ್ಪನ್ನು ತಿನ್ನಲು ಇಷ್ಟಪಡದ ಅಥವಾ ಒಂದೇ ರೀತಿಯ ಸೊಪ್ಪನ್ನು ತಿನ್ನಲು ಇಷ್ಟಪಡದವರಿಗೆ ದಾಲ್ ಪರಾಟ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಹೆಸರು ಬೇಳೆ ಪರಾಟ ದಿನ ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ. ಈ ಪರಾಟ ಫೈಬರ್, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿರುವ ಪ್ರೊಟೀನ್ ತೂಕ ಇಳಿಸಲು ತುಂಬಾ ಸಹಾಯ ಮಾಡುತ್ತದೆ.
ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಇಲ್ಲಿ ತಿಳಿಸಲಾದ ಹಲವು ಬಗೆಯ ಪರಾಟಗಳನ್ನು ನೀವು ಪ್ರಯತ್ನಿಸಬಹುದು.