ಮಾರ್ಕೆಟ್‌ನಲ್ಲಿ(Market) ಮಾವು(Mango) ಹೇರಳವಾಗಿ ಸಿಗ್ತಿದೆ, ಅಲ್ಲಿ ಇಲ್ಲಿ ಮಾವಿನ ಮೇಳ ಹಾಕ್ತಿದ್ದಾರೆ, ಅಲ್ಲಿ ಭರಪೂರ ಮಾವಿನ ಪದಾರ್ಥಗಳ(Items) ಭೋಜನ ಬೇರೆ, ಮಾವಿನ ಹಣ್ಣಿನಿಂದ ನಾನಾ ರೀತಿಯ ಅಡುಗೆ(Cook) ಮಾಡಿ ಗಡದ್ದಾಗಿ ತಿನ್ನುವ ಮೊದಲು ಈ ಸ್ಟೋರಿ ಮಿಸ್ ಮಾಡದೆ ಓದಿ.
ಬೇಸಿಗೆ(Summer) ಆಗ್ತಿದ್ದಂತೆ ಎಲ್ಲರೂ ಎದುರು ನೋಡುವುದು ಮಾವಿನ ಹಣ್ಣಿಗೆ(Mango Fruit). ಮಾರುಕಟ್ಟೆಗೆ ಈ ಹಣ್ಣಿನ ರಾಜ ಯಾವಾಗ ಬರುತ್ತಾನೆ ಎಂದು ಹಲವಾರು ಮಂದಿ ಕಾದು ಕುಳಿತಿರುತ್ತಾರೆ. ಬಾಯಲ್ಲಿಟ್ಟರೆ ಅದರ ಸಿಹಿ(Sweet), ಹಳಿ(Sore), ಮಿಶ್ರಣ ಎಲ್ಲೆಡೆ ಹರಡಿದರೆ ಸ್ವರ್ಗಕ್ಕೆ ಮೂರೇ ಗೇಣು... ಈ ಮಾವಿನ ಹಣ್ಣು ಆರೋಗ್ಯಕ್ಕೆ(Health) ಬಲು ಉಪಕಾರಿ. ಆದರೆ ಒಳ್ಳೆಯದರ ಹಿಂದೆ ಕೆಟ್ಟದ್ದು ಇರುತ್ತದೆ ಎಂದು ದೊಡ್ಡವರು(Elders) ಹೇಳಿದ್ದಾರೆ. ಹಾಗೆ ಈ ಹಣ್ಣಿನ ರಾಜನನ್ನು ಸೇವಿಸಿದರೆ ಕೆಲ ಸಮಸ್ಯೆಯೂ ಬರುತ್ತದೆ.
ಮಾವಿನ ಹಣ್ಣಲ್ಲಿ ಹಲವು ಥಳಿಗಳಿವೆ(Verities). ಇದರಲ್ಲಿ ಒಂದು ಆಲ್ಫೆನ್ಜೊ(Alphanzo) ಮಾವುನ ಹಣ್ಣು ಬಹಳ ದುಬಾರಿ(Expensive). ಈ ಹಣ್ಣಲ್ಲಿ ವಿಟಮಿನ್ A,B,C,E,K ಇದ್ದು, ಕ್ಯಾನ್ಸರ್(Cancer) ನಂತಹ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಆದರೆ ಎಲ್ಲಾ ಮಾವಿನ ಹಣ್ಣು ಕೆಲವರಿಗೆ ಆಗಿ ಬರುವುದಿಲ್ಲ. ಸಾಮಾನ್ಯವಾಗಿ ಇದರ ಪ್ರಯೋಜನದ ಬಗ್ಗೆ ತಿಳಿದಿದ್ದೇವೆ, ಓದಿದ್ದೇವೆ ಕೂಡ. ಆದರೆ ನಾವು ಹೇಳಲು ಹೊರಟಿರುವುದು ಇದರಿಂದಾಗುವ ಸಮಸ್ಯೆಗಳ(Disadvantages) ಬಗ್ಗೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಮಾವಿನ ಹಣ್ಣು ಮಾತ್ರವಲ್ಲ, ಆರೋಗ್ಯಕ್ಕಾಗಿ ಮಾವಿನ ಎಲೆಯನ್ನೂ ತಿನ್ನಿ
1. ಮಾವು ಕಂಡ ತಕ್ಷಣ ಅತಿಯಾಗಿ ತೃಪ್ತಿಯಾಗುವಷ್ಟು ತಿಂದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಮಾವಿನ ಹಣ್ಣು ತಿನ್ನುವುದರಿಂದ ಅತಿಸಾರ(Diarrhoea) ಬೇಧಿಯಾಗುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್(Fiber) ಅಂಶವಿದೆ. ಹಾಗಾಗಿ ಅತಿಯಾಗಿ ಸೇವಿಸಿದರೆ ಅತಿಸಾರವಾಗುತ್ತದೆ.
2. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕವಾದ ಸಕ್ಕರೆ(Natural Sugar) ಅಂಶವಿದೆ. ಹಾಗಾಗಿ ಸಕ್ಕರೆ ಖಾಯಿಲೆ(Diabetic) ಇರುವವರು ಲಿಮಿಟ್ನಲ್ಲಿ ಈ ಹಣ್ಣು ಸೇವಿಸುವುದು ಉತ್ತಮವಲ್ಲ. ಒಂದಕ್ಕಿAತ ಹೆಚ್ಚಿನ ಮಾವಿನ ಹಣ್ಣನ್ನು ಸೇವಿಸಬಾರದು ಎಂಬುದು ತಜ್ಞರ ಅಭಿಪ್ರಾಯ.
3. ಮಾವಿನ ಹಣ್ಣು ಸೇವಿಸಿದರೆ ಕೆಲವರಿಗೆ ಅಲರ್ಜಿಯಾಗುತ್ತದೆ(Allergy). ಕೆಲವರಲ್ಲಿ ಕಣ್ಣಲ್ಲಿ ನೀರು(Water eye) ಬರುವುದು, ಉಸಿರಾಟದ ಸಮಸ್ಯೆ(Breathing Problem), ರನ್ನಿಂಗ್ ನೋಸ್(Running nose), ಸೀನುವುದ(Sneeze), ಹೊಟ್ಟೆ ನೋವು ಬರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಸ್ವಲ್ಪ ದಿನಗಳ ಕಾಲ ಮಾವಿನ ಹಣ್ಣು ಸೇವಿಸುವುದು ಒಳ್ಳೆಯದು.
4. ಈ ಹಣ್ಣಿನಲ್ಲಿ ಉರುಶಿಯೊಲ್(Urushiol) ಎಂಬ ಕೆಮಿಕಲ್(Chemical) ಇದೆ. ಇದರಿಂದ ಕೆಲವರಲ್ಲಿ ತುರುಕಿ(Itching), ಫ್ಲಾಕಿ(Flaky) ಮತ್ತು ಗುಳ್ಳೆಗಳಾಗುವುದು ಈ ರೀತಿಯ ಚರ್ಮದ(Skin) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನೆಗ್ಲೆಕ್ಟ್ ಮಾಡದೆ ತಜ್ಞರ ಬಳಿ ಹೋಗುವುದು ಒಳ್ಳೆಯದು.
5. ಮಾವಿನ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿ(Calorie) ಇದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೂಕವೂ ಹೆಚ್ಚುತ್ತದೆ(Weight Gain). ಒಂದು ಸರಾಸರಿ ಗಾತ್ರದ ಮಾವಿನ ಹಣ್ಣಿನಲ್ಲಿ 150 ಕ್ಯಾಲೋರಿ ಇದೆ. ಹಾಗಾಗಿ ತೂಕ ಕಡಿಮೆ(Weight lose) ಮಾಡುವವರಿಗೆ ಇದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬೇಕು.
6. ಕೆಲ ಸಂದರ್ಭಗಳಲ್ಲಿ ಮಾವಿನ ಹಣ್ಣಿನಿಂದ ಅಜೀರ್ಣದಂತಹ(Indigestion) ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಮಾವಿನ ಹಣ್ಣಿನ ಸಿಪ್ಪೆ ಎಸಿತೀರಾ? ಅದನ್ನ ಹೀಗೆ ಬಳಸಿ ನೋಡಿ..
7. ಮಾರುಕಟ್ಟೆಯಲ್ಲಿ ಬೇಸಿಗೆ ಸಮಯದಲ್ಲಿ ಪೌರ‍್ಡ್(Powder) ಮಾವಿನ ಹಣ್ಣು ಬೇಸಿಗೆಯ ಆರಂಭದಲ್ಲಿ ಸಿಗುತ್ತವೆ. ಆದರೆ ಈ ರೀತಿಯ ಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಣ್ಣಲ್ಲಿ ಕ್ಯಾಲ್ಶಿಯಂ ಕಾರ್ಬೈಡ್(Calcium Carbide) ಎಂಬ ರಾಸಾಯನಿಕ(Chemical) ಅಂಶವಿದ್ದು, ಬಹುತೇಕ ರಾಷ್ಟçಗಳಲ್ಲಿ(Nations) ಇದನ್ನು ಬ್ಯಾನ್(Bann) ಮಾಡಲಾಗಿದೆ. ಏಕೆಂದರೆ ಬಹುತೇಕ ಸಮಸ್ಯೆಗಳು ಇದರಿಂದ ನಿಧಾನಗತಿಯಲ್ಲಿ ಕಾಣಿಸಿಕೊಳ್ಳುತ್ತವೆ.
8. ಕೆಲವರಲ್ಲಿ ಅನಾಫಿಲ್ಯಾಕ್ಟಿಕ್ ಶಾಕ್ ಗೆ(Anaphylactic Shock) ಕಾರಣವಾಗುತ್ತದೆ. ಅಂದರೆ ವಾಂತಿ(Vomit), ಶಾಕ್(Shock), ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡಿಯದಿದ್ದಲ್ಲಿ ಪ್ರಜ್ಞಾಹೀನತೆಗೆ(unconscious) ಒಳಗಾಗಬೇಕಾಗುತ್ತದೆ.
9. ಕೆಲ ಅಧ್ಯಾಯನದ ಪ್ರಕಾರ ಹೆಚ್ಚಿನ ಪ್ರಮಾಣದ ಮಾವಿನ ಹಣ್ಣು ಸೇವನೆಯಿಂದ ದೇಹದ ಉಷ್ಣ(Body Heat) ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಉಷ್ಣದಿಂದ ಬಾಯಿಹುಣ್ಣು, ಅಲ್ಸರ್, ಹುಳಿ ತೇಗು, ಗ್ಯಾಸ್ಟಿçಕ್(Gastric) ಸಮಸ್ಯೆಗಳಿಗೂ ಕಾರಣವಾಗಬಹುದು.
10. ಆಯುರ್ವೇಧದ(Ayurveda) ಪ್ರಕಾರ ಮಾವಿನ ಹಣ್ಣನ್ನು ಹಾಲಿನೊಂದಿಗೆ(Milk) ಸೇವಿಸಬಾರದು. ಇದರಿಂದ ನಮ್ಮ ಹೃದಯಕ್ಕೆ(Heart) ಭಾರೀ ತೊಂದರೆಯಾಗುತ್ತದೆ.
11.ಅರ್ಥರೀಸ್‌ನಂತಹ(Arthritic) ಸಮಸ್ಯೆ ಇರುವವರು ಮಾವಿನ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಅತಿಯಾಗಿ ತಿಂದರೆ ತುರಿಕೆಯಂತಹ(Itching) ಸಮಸ್ಯೆ ಹೆಚ್ಚಾಗಬಹುದು.