Healthy Food For Children: ದೊಡ್ಡವರು ತಿನ್ನುವ ಆಹಾರವನ್ನೆಲ್ಲಾ ಮಕ್ಕಳಿಗೂ ಕೊಡಬಹುದಾ ?

By Suvarna News  |  First Published Jan 9, 2022, 8:39 PM IST

ಆರೋಗ್ಯ (Health) ಉತ್ತಮವಾಗಿರಬೇಕಾದರೆ ಆಹಾರಕ್ರಮ ಸರಿಯಾಗಿರಬೇಕಾದುದು ಅಗತ್ಯ. ಅದರಲ್ಲೂ ಮಕ್ಕಳ (Children) ಆರೋಗ್ಯವಂತೂ ಆಗಾಗ ಹದಗೆಡುತ್ತಿರುತ್ತದೆ. ಹೀಗಾಗಿ ಮಕ್ಕಳಿಗೆ ಯಾವ ರೀತಿಯ ಆಹಾರ (Food) ಉತ್ತಮ ಅನ್ನೋ ಬಗ್ಗೆ ಹಲವರಿಗೆ ಗೊಂದಲವಿದೆ. ಮಕ್ಕಳು ಮತ್ತು ದೊಡ್ಡವರಿಗೆ ಆರೋಗ್ಯಕರ ಆಹಾರ ಒಂದೇ ಆಗಿದೆಯೇ ? 


ಇವತ್ತಿನ ದಿನಗಳಲ್ಲಿ ಮಕ್ಕಳು ಆರೋಗ್ಯಕ್ಕೆ ಬೇಕಾಗುವ ಆಹಾರವನ್ನು ಬಿಟ್ಟು ಮತ್ತೆಲ್ಲವನ್ನೂ ತಿನ್ನುತ್ತಿದ್ದಾರೆ. ಹೀಗಾಗಿಯೇ ಇವತ್ತಿನ ದಿನಗಳಲ್ಲಿ ಮಕ್ಕಳಲ್ಲಿ ವಯಸ್ಸಿಗೂ ಮೀರಿದ ದಢೂತಿತನ, ಬೆಳವಣಿಗೆಯನ್ನು ನೋಡಬಹುದು. ಕಡಿಮೆ ವಯಸ್ಸಿನ ಮಕ್ಕಳಲ್ಲಿಯೂ ಹಿರಿಯರಲ್ಲಿ ಕಂಡುಬರುವಂಥಹಾ ಹಲವು ಆರೋಗ್ಯ ಸಮಸ್ಯೆಗಳನ್ನು ನೋಡಬಹುದು. ಹೀಗಾಗಿಯೇ ಮಕ್ಕಳ ಆಹಾರಪದ್ಧತಿ ಹೇಗಿರಬೇಕು ಎಂಬ ಬಗ್ಗೆ ಎಲ್ಲಾ ಪೋಷಕರಲ್ಲೂ ಗೊಂದಲವಿರುತ್ತದೆ. ಆಹಾರದಿಂದಲೇ ಇಷ್ಟೆಲ್ಲಾ ಅನಾರೋಗ್ಯಗಳು ಕಾಡುತ್ತಿವೆ ಎಂದುಕೊಳ್ಳುತ್ತಾರೆ. ಇದಕ್ಕಾಗಿ ಹಲವು ರೀತಿಯ ಆಹಾರಕ್ರಮವನ್ನು ಅನುಸರಿಸಿ ನೋಡುತ್ತಾರೆ. ಹೀಗಾಗಿ ಹಿರಿಯರು ತಾವು ತಿನ್ನುವ ಎಷ್ಟೋ ಆಹಾರಗಳನ್ನು ಮಕ್ಕಳಿಗೆ ಕೊಡಲು ಇಷ್ಟಪಡುವುದಿಲ್ಲ. 

ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಹೆಚ್ಚು ಆರೋಗ್ಯಕರ ಆಹಾರವನ್ನು ನೀಡುವ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಮಕ್ಕಳು ಮತ್ತು ದೊಡ್ಡವರ ಆರೋಗ್ಯಕರ ಆಹಾರಗಳು ಒಂದೇ ಎಂದು ನಿಮಗೆ ತಿಳಿದಿದೆಯೇ ? ಹೌದು, ಇದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮತ್ತು ವಯಸ್ಕರು ಸೇವಿಸುವ ಆಹಾರಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ.

Tap to resize

Latest Videos

undefined

ಮಗುವಿಗೆ ಇನ್ನೂ ಹಲ್ಲು ಬಂದಿಲ್ವಾ? ಆದರೂ ಈ ಫುಡ್ಸ್ ಕೊಡಬಹುದು ಟ್ರೈ ಮಾಡಿ

ಅಧ್ಯಯನದಲ್ಲೇನಿದೆ..? 
2ರಿಂದ 14 ವರ್ಷದೊಳಗಿನ ಮಕ್ಕಳು (Children( ಸೇವಿಸುವ ಆಹಾರವನ್ನು ಮಕ್ಕಳ ಆಹಾರವೆಂದು ಪರಿಗಣಿಸಲಾಗುತ್ತದೆ. ವಯಸ್ಕರಿಗಿಂತ ಮಕ್ಕಳಿಗೆ ವಿವಿಧ ರೀತಿಯ ಆಹಾರಗಳು ಬೇಕಾಗುತ್ತವೆ ಎಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಹಳ ಹಿಂದಿನಿಂದಲೂ ನಂಬಿಕೆ ಇದೆ.  ಹೀಗಾಗಿಯೇ ಮಕ್ಕಳಿಗೆ ನೀಡುವ ಹೆಚ್ಚಿನ ಆಹಾರ (Food) ಹೆಚ್ಚು ಸಂಸ್ಕರಿಸಲ್ಪಡುತ್ತವೆ. ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬು, ಸೋಡಿಯಂ ಮತ್ತು ಸಕ್ಕರೆ ಇರುವ ಆಹಾರವಾಗಿದೆ. ಆದರೆ, ಈ ಆಹಾರಗಳು ಮಕ್ಕಳ ಆದ್ಯತೆಗಳು ಮತ್ತು ಅಭಿರುಚಿಗಳ ಮೇಲೆ ಗಮನಾರ್ಹವಾದ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಆಹಾರದ ನಿಯೋಫೋಬಿಯಾ ಅಥವಾ ಮಕ್ಕಳಿಗೆ ಆಹಾರದ ಮೇಲೆ ಆಸಕ್ತಿಯಿಲ್ಲದಿರುವುದು, ಹಸಿವಾಗದಿರುವುದು ಮೊದಲಾದ ಸಮಸ್ಯೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ಇನ್ನೊಂದು ಅಧ್ಯಯನದ ಪ್ರಕಾರ, 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ವಯಸ್ಕರಂತೆ ಆರೋಗ್ಯಕರ ಆಹಾರವನ್ನು ಸೇವಿಸಬಹುದು ಎಂಬುದು ತಿಳಿದುಬಂದಿದೆ. ಹೀಗಾಗಿಯೇ ಮಕ್ಕಳು ಸಹ ಚಿಕನ್, ಹಾಟ್ ಡಾಗ್‌ಗಳು, ಫ್ರೆಂಚ್ ಫ್ರೈಗಳು ಮತ್ತು ಗ್ರಿಲ್ಡ್ ಚೀಸ್‌ನಂತಹ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಸೇವಿಸಬಹುದು ಎಂದು ತಿಳಿದುಬರುತ್ತದೆ. ಯಾಕೆಂದರೆ ಈ ಎಲ್ಲಾ ಆಹಾರಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಮಕ್ಕಳ ದೇಹದಲ್ಲೂ ಇರುತ್ತದೆ.

ವಯಸ್ಕರು ತಿನ್ನುವಂತೆಯೇ ಸಂಸ್ಕರಿಸಿದ ಆಹಾರಗಳನ್ನು ಮಕ್ಕಳಿಗೆ ಸಹ ಕೊಡಬಹುದು. ಸಂಸ್ಕರಿಸಿದ ಮತ್ತು ರೆಡಿಮೇಡ್ ಆಹಾರಗಳಲ್ಲಿ ಕ್ಯಾಲೋರಿ (Calorie) ಮತ್ತು ಕೊಬ್ಬಿನ ಅಂಶಗಳು ಹೆಚ್ಚಿರುತ್ತವೆ. ಇದು ದೇಹಕ್ಕೆ ಅಗತ್ಯವಾದ ಚೈತನ್ಯವನ್ನು ಒದಗಿಸುತ್ತದೆ. ಹಾಗೆಯೇ ಹೆಚ್ಚು ಹಣ್ಣು, ತರಕಾರಿಗಳ ಸೇವನೆಯೂ ಮಕ್ಕಳಿಗೆ ಒಳ್ಳೆಯದು. ಇವುಗಳು ದೇಹಕ್ಕೆ ಯಾವತ್ತೂ ಅತಿಯಾಗುವುದಿಲ್ಲ. ಅಕ್ಕಿ, ಗೋಧಿ, ರಾಗಿ ಮೊದಲಾದ ಧಾನ್ಯಗಳ ಸೇವನೆ ದೇಹಕ್ಕೆ ಅಗತ್ಯವಾದ ಪ್ರೋಟೀನ್ (Protein), ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಹೀಗಾಗಿ ಇದು ಮಕ್ಕಳು ಹೆಚ್ಚು ಕಾಲ ಚಟುವಟಿಕೆಯಿಂದಿರಲು ನೆರವಾಗುತ್ತದೆ.

ಮಕ್ಕಳ ಬ್ರೇಕ್ ಫಾಸ್ಟ್ ಹೇಗಿದ್ದರೆ ಚೆಂದ?

ವಯಸ್ಕರಂತೆ ಮಕ್ಕಳು ಸಹ ಜಂಕ್ ಫುಡ್ (Junk Food), ರೆಡಿಮೇಡ್ ಆಹಾರಗಳನ್ನು ತಿನ್ನಬಹುದಾದರೂ, ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವಂತೆ ಮಕ್ಕಳಿಗೆ ಸಲಹೆ ನೀಡಿ. ಮಕ್ಕಳ ಆರೋಗ್ಯಕ್ಕೆ ಮಾತ್ರವಲ್ಲ ವಯಸ್ಕರ ಆರೋಗ್ಯಕ್ಕೂ ಇಂಥಹಾ ಆಹಾರಗಳ ಸೇವನೆ ಒಳ್ಳೆಯದಲ್ಲ. ಬದಲಾಗಿ ಅನ್ನ, ಚಪಾತಿ, ಸೊಪ್ಪು-ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳು ಎಲ್ಲರ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಹೀಗಾಗಿ ಮಕ್ಕಳಿಗೆ ಆಹಾರವನ್ನು ನೀಡುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹೆಲ್ದೀ ಫುಡ್ ಎನ್ನುವಂತಹಾ ಎಲ್ಲಾ ಆಹಾರವನ್ನು ಮಕ್ಕಳಿಗೆ ನೀಡಬಹುದು. ಆರೋಗ್ಯಕ್ಕೆ ಕೆಡುಕೆನಿಸುವ ಆಹಾರಗಳನ್ನು ಕೊಡುವುದು ಒಳ್ಳೆಯದಲ್ಲ.

click me!