ದಕ್ಷಿಣಭಾರತದ ಆಹಾರ (Food) ಪದ್ಧತಿಯಲ್ಲಿ ಅನ್ನಕ್ಕೆ ಮಹತ್ವದ ಸ್ಥಾನವಿದೆ. ರೋಟಿ, ಚಪಾತಿಗಿಂತ ದಿನನಿತ್ಯ, ಹಬ್ಬ,ಹರಿದಿನಗಲ್ಲೂ ಅನ್ನ (Rice) ಬೇಕೇ ಬೇಕು. ಸಾಮಾನ್ಯವಾಗಿ ಮೂರು ಹೊತ್ತು ಅನ್ನ ಸೇವಿಸುವುದು ಇಲ್ಲಿನ ಅಭ್ಯಾಸ. ಹೀಗಾಗಿ ಅಕ್ಕಿಯ ಗುಣಮುಟ್ಟ ಚೆನ್ನಾಗಿರಬೇಕಾಗುದು ಮುಖ್ಯ. ಆದರೆ ಇವತ್ತಿನ ದಿನಗಳಲ್ಲಿ ಇಲ್ಲೆಡೆ ಸಿಗುತ್ತಿರುವುದು ಪಾಲಿಶ್‌ಡ್ ಅಕ್ಕಿ. ಇದರಿಂದ ಆರೋಗ್ಯ (Health)ಕ್ಕಿರುವ ಹಾನಿ ಒಂದೆರಡಲ್ಲ.
ಹಿಂದಿನ ಕಾಲದಲ್ಲಿ ಎಲ್ಲರ ಮನೆಯಲ್ಲಿಯೂ ಬೇಸಾಯ ಮಾಡುತ್ತಿದ್ದರು. ಹೀಗಾಗಿ ಅಕ್ಕಿಯ ಗುಣಮಟ್ಟ ಸಹ ಪರಿಶುದ್ಧವಾಗಿಯೇ ಇತ್ತು. ಆದರೆ ಕಾಲ ಬದಲಾದಂತೆಲ್ಲಾ ಲಾಭ ಗಳಿಸುವ ಉದ್ದೇಶದಿಂದ ಭತ್ತದ ಗದ್ದೆಗಳೆಲ್ಲಾ ತೋಟವಾದವು. ಇನ್ನೂ ಕೆಲವೆಡೆ ಗದ್ದೆಯಿರುವ ಜಾಗಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿದವು. ಭತ್ತದ ಬೇಸಾಯ ಎಂಬುದು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿ ಹೋಯ್ತು. ಬೇಸಾಯವೂ ವ್ಯವಹಾರವಾಯ್ತು. ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಜನರ ಕೈ ಸೇರುವ ಅಕ್ಕಿಯ ಗುಣಮಟ್ಟವೂ ಕಡಿಮೆಯಾಯಿತು. ಹೀಗಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿಯೆಲ್ಲವೂ ಸಾಮಾನ್ಯವಾಗಿ ಪಾಲಿಶ್ ಮಾಡಿದ ಅಕ್ಕಿಗಳೇ ಆಗಿವೆ.
ಪಾಲಿಶ್ ಮಾಡಿದ ಅಕ್ಕಿ ಎಂದರೇನು?
ಭತ್ತ ಎಂದರೆ ಅಕ್ಕಿಯನ್ನು ಆವರಿಸಿರುವ ಹೊಟ್ಟು. ಹೊಟ್ಟು ನಿವಾರಿಸಿದ ಬಳಿಕ ಸಿಗುವ ಅಕ್ಕಿಯ ಹೊರಪದರದಲ್ಲಿ ತೆಳುವಾದ ನಾರಿನಂಶದ ಲೇಪನ ಇರುತ್ತದೆ ಇದನ್ನು ತೌಡು ಎಂದು ಕರೆಯುತ್ತಾರೆ. ಈ ತೌಡಿನಲ್ಲಿ ಇರುವ ಎಣ್ಣೆಯಂಥಾ ಅಂಶವನ್ನು ತೌಡೆಣ್ಣೆ ಎಂದು ಕರೆಯುತ್ತಾರೆ. ತೌಡು ಕಹಿಯಾಗಿದ್ದು, ಅಕ್ಕಿಯ ಸವಿಯನ್ನೇ ಬದಲಿಸುತ್ತದೆ. ಹೀಗಾಗಿ ಅಕ್ಕಿ ಗಿರಣಿಯಲ್ಲಿ ಈ ಹೊರಪದರವನ್ನು ತೆಗೆದು ಹಾಕಲಾಗುತ್ತದೆ. ಇದನ್ನೇ ಪಾಲಿಶ್ ಎಂದು ಕರೆಯುತ್ತೇವೆ.
undefined
ಹಿಂದೆಲ್ಲಾ ಅಕ್ಕಿಯನ್ನು ಪಾಲಿಶ್ ಗೆ ಕೊಡುವಾಗ ಅಕ್ಕಿ (Rice) ತುಂಡಾಗುತ್ತದೆ ಎಂಬ ಕಾರಣಕ್ಕೆ ಕಡಿಮೆ ಪಾಲಿಶ್ (Polish) ಮಾಡಲಾಗುತ್ತಿತ್ತು. ಆದರೆ, ಇವತ್ತಿನ ದಿನಗಳಲ್ಲಿ ಭತ್ತವನ್ನು ಹಬೆಯಲ್ಲಿ ಬಿಸಿ ಮಾಡಿ ತಣಿಯುವ ಮುನ್ನವೇ ಹೊಟ್ಟು ನಿವಾರಿಸಿ ತೌಡನ್ನೂ ತೆಗೆದುಹಾಕಲಾಗುತ್ತದೆ. ಈ ರೀತಿ ತೌಡನ್ನು ತೆಗೆದು ಹಾಕುವಾಗ ಭತ್ತದ ಮೊಳಕೆ ಬರುವ ಭಾಗವೂ ಇಲ್ಲವಾಗುತ್ತದೆ. ಈ ರೀತಿಯ ಅಕ್ಕಿಯ ಸೇವನೆ ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ. ಈ ರೀತಿ ಪಾಲಿಶ್ ಮಾಡಿದ ಅಕ್ಕಿಯ ಅನ್ನವನ್ನು ಸೇವಿಸುವುದರಿಂದ ಬರೀ ಪಿಷ್ಟವನ್ನೇ ತಿಂದಾಗುತ್ತದೆ.
Kitchen Tips: ಅನ್ನ ಮಾಡುವಾಗ ಅಕ್ಕಿ ಹೆಚ್ಚು ಬೆಂದರೆ ಏನು ಮಾಡೋದು?
ಪಾಲಿಶ್ ಮಾಡದ ಅಕ್ಕಿ ಎಂದರೇನು?
ಪಾಲಿಶ್ ಮಾಡದ ಅಕ್ಕಿ ಎಂದರೆ ಹೊಟ್ಟು ತೆಗೆಯದ ಅಕ್ಕಿಯನ್ನು ಸೂಚಿಸುತ್ತದೆ. ಈ ಅಕ್ಕಿಯಲ್ಲಿರುವ ಹೊಟ್ಟು ಭಾಗಶಃ ಅಥವಾ ಸಂಪೂರ್ಣವಾಗಿ ಉಳಿದಿರುತ್ತದೆ. ಇದು ಆರೋಗ್ಯಕರ ಮತ್ತು ಪೌಷ್ಟಿಕವಾಗಿದೆ.
ಅಕ್ಕಿಯನ್ನು ಹೇಗೆ ಪಾಲಿಶ್ ಮಾಡಲಾಗುತ್ತದೆ?
ಅಕ್ಕಿ ಪಾಲಿಷರ್ ಯಂತ್ರದ ಮೂಲಕ ಅಕ್ಕಿಯನ್ನು ಪಾಲಿಶ್ ಮಾಡಲಾಗುತ್ತದೆ. ಭಾರತದಲ್ಲಿ, ಇದು ಕಂದು ಅಕ್ಕಿಯನ್ನು ಬಿಳಿ ಅಕ್ಕಿಯಾಗಿ ಪರಿವರ್ತಿಸುವುದು ಅಭ್ಯಾಸವಾಗಿದೆ. ಈ ಯಂತ್ರಗಳು (Machines) ಅಕ್ಕಿ ಕಾಳುಗಳ ಹೊರ ಪದರವನ್ನು ಉಬ್ಬಿ ಕಾಣುವಂತೆ ಮಾಡಲು ಟಾಲ್ಕ್ ಅಥವಾ ಇತರ ವಸ್ತುಗಳ ಸೂಕ್ಷ್ಮ ಧೂಳನ್ನು ಬಳಸುತ್ತವೆ.
ಪಾಲಿಶ್ ಮಾಡಿದ ಮತ್ತು ಪಾಲಿಶ್ ಮಾಡದ ಅಕ್ಕಿಯ ನಡುವಿನ ವ್ಯತ್ಯಾಸ
ಪಾಲಿಶ್ ಮಾಡಿದ ಅಕ್ಕಿ ಹೊಳೆಯುತ್ತಿರುತ್ತದೆ ಮತ್ತು ಬಿಳಿ ಬಣ್ಣದ್ದಾಗಿರುತ್ತದೆ. ಆದರೆ, ಪಾಲಿಶ್ ಮಾಡದ ಅಕ್ಕಿ ಕಂದು ಬಣ್ಣದ್ದಾಗಿದೆ. ಪಾಲಿಶ್ ಮಾಡಿದ ಅಕ್ಕಿ ನಯವಾಗಿರುತ್ತದೆ, ಪಾಲಿಶ್, ಮಾಡದ ಅಕ್ಕಿ ಒರಟಾಗಿರುತ್ತದೆ. ಪಾಲಿಶ್ ಮಾಡದ ಅಕ್ಕಿಗೆ ಹೋಲಿಸಿದರೆ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಫೈಬರ್ (Fiber) ಅಂಶವು ತುಂಬಾ ಕಡಿಮೆಯಾಗಿದೆ. ಪಾಲಿಶ್ ಮಾಡಿದ ಅಕ್ಕಿಯನ್ನು ಬೇಯಿಸುವುದು ಸುಲಭ ಮತ್ತು ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಪಾಲಿಶ್ ಮಾಡದ ಅಕ್ಕಿಯಲ್ಲಿ ಪೌಷ್ಟಿಕಾಂಶದ ಪ್ರಮಾಣ ತುಂಬಾ ಕಡಿಮೆಯಿರುತ್ತದೆ. ಆದರೆ ಪಾಲಿಶ್ ಮಾಡದ ಅಕ್ಕಿ ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ.
Rice and Health: ದಿನಾಲೂ ಅನ್ನ ತಿಂತೀರಾ? ಅಭ್ಯಾಸ ಬದಲಾಯಿಸಿದ್ರೊಳಿತು
ಪಾಲಿಶ್ ಮಾಡಿದ ಅಕ್ಕಿ ಸೇವನೆಗೆ ಸುರಕ್ಷಿತವೇ ?
ಪಾಲಿಶ್ ಮಾಡಿದ ಅಕ್ಕಿಯಲ್ಲಿ ಕಡಿಮೆ ತೇವಾಂಶ, ಬಯೋಟಿನ್, ಖನಿಜ, ನಿಯಾಸಿನ್, ಪ್ರೋಟೀನ್ ಮತ್ತು ಕೊಬ್ಬಿನಂಶವಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ, ಫೈಬರ್ ತೆಗೆದು ಹಾಕಿರುವ ಮತ್ತು ಕಡಿಮೆ ಪ್ರೋಟೀನ್ (Protein) ಇರುವ ಅಕ್ಕಿಯು ಅಪೂರ್ಣ ಆಹಾರವಾಗಿದೆ. ಪಿಷ್ಟ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ಅಥವಾ ಗ್ಲುಕೋಸ್ ಮಟ್ಟಗಳನ್ನು ಅತಿ ಎನಿಸುವಷ್ಟು ಹೆಚ್ಚಿಸುತ್ತದೆ. ಹೀಗಾಗಿಯೇ ಮಧುಮೇಹಿಗಳು ಅನ್ನ ತಿನ್ನಬೇಡಿ ಎಂದು ವೈದ್ಯರು ಹೇಳುತ್ತಾರೆ.