
ಚಳಿಗಾಲ ಶುರುವಾಗುವುದರ ಜತೆಗೇ ಕರಿದ ಆಹಾರವನ್ನು ತಿನ್ನುವ ಹಠಾತ್ ಬಯಕೆ ಹೆಚ್ಚಾಗುತ್ತದೆ. ಮೈ ನಡುಗಿಸುವ ಚಳಿಯಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ, ಪಕೋಡಾವನ್ನು ಸವಿಯಲು ಇಷ್ಟಪಡುತ್ತೇವೆ. ಆದರೆ, ಹಲವರು ಎಣ್ಣೆಯಲ್ಲಿ ಕರಿದ ಆಹಾರ ಆರೋಗ್ಯಕ್ಕೆ ಉತ್ತಮವಲ್ಲ ಎಂದು ತಿನ್ನಲು ಆಸೆಯಿದ್ದರೂ ಇಂಥಹಾ ತಿಂಡಿಗಳನ್ನು ದೂರವಿಡುತ್ತಾರೆ. ಆದರೆ, ಕರಿದ ಆಹಾರವನ್ನು ಆರೋಗ್ಯಕರವಾಗಿಸಲು ಕೆಲವೊಂದು ಉಪಾಯಗಳಿವೆ. ಕೆಲವೊಂದು ವಿಚಾರಗಳನ್ನು ಗಮನಿಸಿಕೊಂಡು ನೀವು ತಿಂಡಿಯನ್ನು ಕರಿಯುವುದಾದರೆ ಇಂಥಹಾ ಆಹಾರ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಹಾನಿಕರವಲ್ಲ. ಹಾಗಿದ್ರೆ ಯಾವ ರೀತಿಯಲ್ಲಿ ತಿಂಡಿಯನ್ನು ಕರಿದರೆ ಆರೋಗ್ಯಕ್ಕೆ ಒಳ್ಳೆಯದು ತಿಳಿಯೋಣ.
ತಾಜಾ ಎಣ್ಣೆಯಲ್ಲಿ ಫ್ರೈ ಮಾಡಿ
ತಜ್ಞರ ಪ್ರಕಾರ, ಎಣ್ಣೆ (Oil)ಯಲ್ಲಿ ಕರಿಯುವ ಆಹಾರದ ವಿಷಯಕ್ಕೆ ಬಂದರೆ ಎಣ್ಣೆ ತಾಜಾವಾಗಿರಬೇಕಾದುದು ತುಂಬಾ ಮುಖ್ಯ.ಪ್ರತಿ ಬಾರಿ ನೀವು ಏನನ್ನಾದರೂ ಹುರಿಯುವಾಗ ನಿಮ್ಮ ಬಳಸುತ್ತಿರುವ ಎಣ್ಣೆಯು ಶುದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ಸಾರಿ ಖಾದ್ಯವನ್ನು ಹುರಿದ ನಂತರ, ಎಣ್ಣೆಯಲ್ಲಿ ಹಿಟ್ಟಿನಂಶ ಏನಾದರೂ ಉಳಿದಿದ್ದರೆ, ಅದನ್ನು ತೆಗೆದು ಬಳಸಿ. ಅಥವಾ ಮತ್ತೆ ಕರಿಯಲು ತಾಜಾ ಎಣ್ಣೆಯನ್ನು ಮಾತ್ರ ಬಳಸಿ. ಹಳೆಯ ಎಣ್ಣೆಯನ್ನು ಮತ್ತೆ ಬಳಸುವುದರಿಂದ ಇದು ನಿಮ್ಮ ಆಹಾರದಲ್ಲಿರುವ ಪೌಷ್ಟಿಕಾಂಶದ ಪ್ರಮಾಣ ಕಡಿಮೆ ಮಾಡುತ್ತದೆ. ಮತ್ತು ಆಹಾರದ ರುಚಿಯನ್ನು ಕೆಡಿಸುತ್ತದೆ. ಅಲ್ಲದೆ, ತೈಲವನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಹೋಗಿ ಆ ಎಣ್ಣೆ ಹಾನಿಕಾರಕವಾಗಿ ಪರಿಣಮಿಸುತ್ತದೆ.
ಫ್ರೆಂಚ್ ಫ್ರೈಯಿಂದ ಕೋಲ್ಡ್ ಡ್ರಿಂಕಿನರೆಗೂ ಈ ಆಹಾರ ಮೆಮೊರಿ ಲಾಸ್ ಮಾಡುತ್ತೆ!
ಹಿಟ್ಟನ್ನು ಸರಿಯಾಗಿ ಕಲಸಿಕೊಳ್ಳಿ
ಹುರಿದ ಆಹಾರ (Fried Food) ಗಳು ಸಾಮಾನ್ಯವಾಗಿ ಹಿಟ್ಟು ಅಥವಾ ಬ್ರೆಡ್ ತುಂಡುಗಳ ಹೊರ ಲೇಪನವನ್ನು ಹೊಂದಿರುತ್ತವೆ. ಇದು ಆಹಾರಕ್ಕೆ ಹೆಚ್ಚಿನ ರುಚಿಯನ್ನು ಸೇರಿಸುತ್ತದೆ. ಕರಿಯುವಾಗ ಈ ಹಿಟ್ಟು ಸರಿಯಾಗಿ ಮಿಕ್ಸ್ (Mix) ಆಗಿರುವುದು ಮುಖ್ಯ. ಹಿಟ್ಟನ್ನು ಸರಿಯಾಗಿ ಮಿಕ್ಸ್ ಮಾಡಿರದಿದ್ದಲ್ಲಿ ಇದು ಎಣ್ಣೆಯಲ್ಲಿ ಬಿಟ್ಟು ಹೋಗುತ್ತದೆ. ಈ ರೀತಿ ಸೇವಿಸುವ ಕರಿದ ಆಹಾರ ಆರೋಗ್ಯಕ್ಕೆ ಉತ್ತಮವಲ್ಲ. ಹುರಿದ ಆಹಾರವನ್ನು ಉತ್ತಮವಾಗಿ ಮಾಡಲು ಸಂಸ್ಕರಿಸಿದ ಹಿಟ್ಟನ್ನು ಬಳಸುವುದನ್ನು ತಪ್ಪಿಸಲು ಪ್ರಾರಂಭಿಸಿ. ಮತ್ತು ಅಕ್ಕಿ ಅಥವಾ ಜೋಳದ ಹಿಟ್ಟಿನಂತಹ ಅಂಟುಮುಕ್ತ ಹಿಟ್ಟುಗಳನ್ನು ಬಳಸಲು ಪ್ರಾರಂಭಿಸಿ.
ಅಡುಗೆ ಸೋಡಾವನ್ನು ಬಳಸಿ
ಹುರಿದ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಸುಧಾರಿಸುವ ಮತ್ತೊಂದು ಉತ್ತಮ ಮಾರ್ಗವೆಂದರೆ ಅದಕ್ಕೆ ಅಡುಗೆ ಸೋಡಾ (Baking Soda) ವನ್ನು ಸೇರಿಸುವುದು. ಹಿಟ್ಟಿಗೆ ಅಡುಗೆ ಸೋಡಾವನ್ನು ಸೇರಿಸುವುದರಿಂದ ಇದು ಆಹಾರದಲ್ಲಿನ ತೈಲ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿದ ತಿಂಡಿಯನ್ನು ಆರೋಗ್ಯಕರವಾಗಿಸುತ್ತದೆ.
ಉಳಿದ ಎಣ್ಣೆಯನ್ನೂ ಮತ್ತೆ ಮತ್ತೆ ಬಳಸೋದು ಆರೋಗ್ಯಕ್ಕೆ ಹಾನಿಕಾರಕ
ತೈಲ ತಾಪಮಾನವನ್ನು ನಿರ್ವಹಿಸಿ
ಬಾಣಸಿಗರ ಪ್ರಕಾರ, ಎಣ್ಣೆಯನ್ನು ಹುರಿಯಲು ಸೂಕ್ತವಾದ ತಾಪಮಾನವು 325 ಫಾರನ್ ಹೀಟ್’ನಿಂದ 400 ಫಾರನ್ ಹೀಟ್ ನಡುವೆ ಇರಬೇಕು. (ಫಾರನ್ ಹೀಟ್ ಎಂದರೆ ಒಂದು ನೀರಿನ ಘನೀಕರಿಸುವ ಮತ್ತು ಕುದಿಯುವ ಬಿಂದುಗಳ ಆಧಾರದ ಮೇಲೆ ತಾಪಮಾನವನ್ನು ಅಳೆಯಲು ಬಳಸುವ ಮಾಪಕವಾಗಿದೆ. 100 ಡಿಗ್ರಿ ಫ್ಯಾರನ್‌ಹೀಟ್ 37.78 ಡಿಗ್ರಿ ಸೆಲ್ಸಿಯಸ್’ಗೆ ಸಮಾನವಾಗಿರುತ್ತದೆ). ಎಣ್ಣೆಯು ಸಾಕಷ್ಟು ಬಿಸಿಯಾಗಿಲ್ಲದಿದ್ದರೆ, ಆಹಾರವು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವ ಮತ್ತು ಅನಾರೋಗ್ಯಕರವಾಗಿಸುವ ಸಾಧ್ಯತೆಗಳಿವೆ.
ಆರೋಗ್ಯಕರ ಎಣ್ಣೆಯನ್ನು ಬಳಸಿ
ಕರಿದ ಆಹಾರಗಳನ್ನು ತಯಾರಿಸುವಾಗ ಆರೋಗ್ಯಕರ ಎಣ್ಣೆಯನ್ನು ಬಳಸುವುದು ಮುಖ್ಯ. ಹುರಿಯುವ ಉದ್ದೇಶಗಳಿಗಾಗಿ ಸಂಸ್ಕರಿಸಿದ ಎಣ್ಣೆಯನ್ನು ತಪ್ಪಿಸಲು ಸೂಚಿಸಲಾಗುತ್ತದೆ. ನೀವು ತಾಜಾ ಸಾಸಿವೆ ಎಣ್ಣೆ, ತುಪ್ಪ ಅಥವಾ ಆಲಿವ್ ಎಣ್ಣೆಯನ್ನು ಹುರಿಯಲು ಬಳಸಬಹುದು, ಏಕೆಂದರೆ ಈ ಆಯ್ಕೆಗಳು ಜೋಳದ ಎಣ್ಣೆ ಅಥವಾ ಸಂಸ್ಕರಿಸಿದ ಎಣ್ಣೆಗೆ ಹೋಲಿಸಿದರೆ ಹೆಚ್ಚಿನ ತಾಪಮಾನದಲ್ಲಿ ಹೆಚ್ಚು ಸ್ಥಿರವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.