ದಿನಕ್ಕೊಂದು ಮೊಟ್ಟೆ ತಿನ್ನುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ಹೆಚ್ಚಿನ ಪ್ರೋಟೀನ್ ಇದೆ ಅನ್ನೋ ಕಾರಣಕ್ಕೆ ಹಲವರು ಬೆಳಗ್ಗೆದ್ದು ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಈ ರೀತಿ ಮಾಡೋದ್ರಿಂದ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚುತ್ತೆ ಅನ್ನೋ ವಿಚಾರ ನಿಮ್ಗೆ ಗೊತ್ತಿದ್ಯಾ?
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜನರು ಸಾಯುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಆತಂಕಕಾರಿಯಾಗಿ, ಪ್ರತಿ ಐದು ಸಾವುಗಳಲ್ಲಿ ನಾಲ್ಕು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುತ್ತವೆ ಮತ್ತು ಈ ಸಾವುಗಳಲ್ಲಿ ಮೂರನೇ ಒಂದು ಭಾಗವು 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಕಾಲಿಕವಾಗಿ ಸಂಭವಿಸುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಉತ್ತಮ ಜೀವನಶೈಲಿ, ಸಮರ್ಪಕ ಆಹಾರಪದ್ಧತಿಯನ್ನು ನಿರ್ವಹಿಸುವುದು ಮುಖ್ಯವಾಗಿದೆ.
ಮೊಟ್ಟೆಯಲ್ಲಿರುವ ಆರೋಗ್ಯಕರ ಅಂಶಗಳು
ಆಹಾರದ (Food) ವಿಷಯಕ್ಕೆ ಬಂದಾಗ ಹೆಚ್ಚಿನವರು ಪ್ರೋಟೀನ್, ವಿಟಮಿನ್ ಅಂಶವಿರುವ ಆಹಾರವನ್ನು ತಿನ್ನಲು ಬಯಸುತ್ತಾರೆ. ಈ ಮೂಲಕ ನಾವು ಆರೋಗ್ಯವಾಗಿರಬಹುದು ಎಂದು ಅಂದುಕೊಳ್ಳುತ್ತಾರೆ. ಹೆಚ್ಚಿನವರು ಇದೇ ಕಾರಣಕ್ಕೆ ಬೆಳಗ್ಗೆದ್ದು ಮೊಟ್ಟೆ ತಿನ್ನುತ್ತಾರೆ. ಮೊಟ್ಟೆ (Egg) ಸಂಪೂರ್ಣ ಆಹಾರ. ಮೊಟ್ಟೆಯಲ್ಲಿ ಹೈ ಕ್ವಾಲಿಟಿ ಪ್ರೋಟೀನ್ ಇರುತ್ತದೆ. ಅಂದ್ರೆ ಮೊಟ್ಟೆ ಸೇವನೆ ಮಾಡೋದ್ರಿಂದ ನಿಮಗೆ ಶೇಕಡಾ 100ರಷ್ಟು ಪ್ರೋಟೀನ್ ಸಿಗುತ್ತೆ ಎನ್ನಬಹುದು. ತಜ್ಞರ ಪ್ರಕಾರ ಒಂದು ಮೊಟ್ಟೆಯಲ್ಲಿ ನಿಮಗೆ 6.30 ಗ್ರಾಂ ಪ್ರೋಟೀನ್ ಸಿಗುತ್ತದೆ.
undefined
ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!
ಮೊಟ್ಟೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೃಷ್ಟಿಯನ್ನು ಆರೋಗ್ಯವಾಗಿಡಬಲ್ಲ ಆಂಟಿ ಆಕ್ಸಿಡೆಂಟ್ ಇದ್ರಲ್ಲಿದೆ. ಮೊಟ್ಟೆಯಲ್ಲಿ ನ್ಯೂಟೆಲ್ ಪ್ರಮಾಣ ಕೂಡ ಇದೆ. ಮೊಟ್ಟೆಯಲ್ಲಿ ವಿಟಮಿನ್ ಇ, ವಿಟಮಿನ್ ಡಿ ಕೂಡ ಲಭ್ಯವಿದೆ. ವಿಟಮಿನ್ ಬಿ 12 ಮತ್ತು ಕಬ್ಬಿಣಾಂಶದಿಂದ ಕೂಡಿರುವ ಮೊಟ್ಟೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅತ್ಯತ್ತಮ. ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲಸವನ್ನು ಈ ಮೊಟ್ಟೆ ಮಾಡುತ್ತದೆ. ಹಾಗಂತ ದಿನಕ್ಕೊಂದು ಮೊಟ್ಟೆ ತಿನ್ನೋ ಅಭ್ಯಾಸ (Habit) ಒಳ್ಳೆಯದಲ್ಲ.
ದಿನಕ್ಕೊಂದು ಮೊಟ್ಟೆ ತಿಂದ್ರೆ ಬೇಗ ಹೃದಯಾಘಾತವಾಗುತ್ತಾ ?
ಹೌದು, ದಿನಕ್ಕೊಂದು ಮೊಟ್ಟೆ ತಿನ್ನೋ ಅಭ್ಯಾಸ ಹೃದಯಾಘಾತಕ್ಕೂ ಕಾರಣವಾಗ್ಬೋದು ಅನ್ನುತ್ತೆ ಇತ್ತೀಚಿಗೆ ನಡೆದ ಅಧ್ಯಯನ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heartattack) ಸಾಮಾನ್ಯವಾಗುತ್ತಿದೆ. ಹಾರ್ಟ್ ಅಟ್ಯಾಕ್‌ಗೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ನಾವು ಸೇವಿಸುವ ಆಹಾರ ಕೂಡಾ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೀಗಾಗಿ ಯಾವ ರೀತಿಯ ಆಹಾರ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಹೃದಯಾಘಾತವನ್ನು ತಪ್ಪಿಸಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವುದನ್ನು ತಿಳಿದುಕೊಂಡಿರಬಹುದು.
ಮೊಟ್ಟೆ ಮಾತ್ರವಲ್ಲ, ಅದರ ಸಿಪ್ಪೆಗಳಲ್ಲಡಗಿದೆ ಆರೋಗ್ಯ…. ಕೂದಲಿಗೆ ಬೆಸ್ಟ್
ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಾ ?
ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ, ಅದು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಮೊಟ್ಟೆಯ ಸೇವನೆಯಲ್ಲಿ ಮಿತಿಯಿರಬೇಕು. ಮೊಟ್ಟೆಗಳಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಇತರ ಆಹಾರ ಪದಾರ್ಥಗಳಿಗಿಂತ ಬಹಳ ಹೆಚ್ಚಿಲ್ಲ. ಆದರೂ ಕೂಡಾ ಮೊಟ್ಟೆಗೂ ಹೃದ್ರೋಗಕ್ಕೂ ಸಂಬಂಧವಿದೆ ಎಂಬುದು ಕೆಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ದಿನಕ್ಕೆ ಒಂದು ಮೊಟ್ಟೆಯನ್ನು ತಿಂದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ಆದರೆ ಮೊಟ್ಟೆಗಳನ್ನು ಅತಿಯಾಗಿ ತಿನ್ನುವುದು ಹೃದಯದ ಆರೋಗ್ಯಕ್ಕೆ (Heart health) ಒಳ್ಳೆಯದಲ್ಲಅನ್ನೋದು ತಜ್ಞರ ಅಭಿಪ್ರಾಯ.
ಮೊಟ್ಟೆಯ ಬಿಳಿಭಾಗ ಆರೋಗ್ಯಕ್ಕೆ ಒಳ್ಳೆಯದು
ಹೀಗಾಗಿ ಕೊಲೆಸ್ಟ್ರಾಲ್ ಇದ್ದವರು, ಹೃದ್ರೋಗ ಇರುವವರು ಮೊಟ್ಟೆ ಸೇವನೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಮುನ್ನೆಚ್ಚರಿಕೆಯಾಗಿ ಮೊಟ್ಟೆಯಿಂದ ದೂರ ಇರುವುದೇ ಸೂಕ್ತ. ಇನ್ನು ಮೊಟ್ಟೆ ತಿನ್ನಲೇ ಬೇಕು ಎಂದಿದ್ದರೆ ಅದರ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಯಾಕೆಂದರೆ ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಹೀಗಿದ್ದೂ, ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಮೊಟ್ಟೆ ಸೇವನೆ ಮಾಡ್ಬೇಕು ಎಂಬುದು ಆತನ ದೇಹ (Body) ಪ್ರಕೃತಿಯನ್ನು ಅವಲಂಬಿಸಿದೆ. ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇರಿಸುವುದರಿಂದ, ಪಾರ್ಶ್ವವಾಯು ಮತ್ತು ಕಣ್ಣಿನ ಗಂಭೀರವಾದ ಕಾಯಿಲೆಗಳಾದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ದೂರವಿಡುವುದು ಸಾಧ್ಯವಾಗುತ್ತದೆ ಎನ್ನುವುದನ್ನು ಕೂಡಾ ಈ ಅಧ್ಯಯನದಲ್ಲಿ ಬಹಿರಂಗ ಪಡಿಸಲಾಗಿದೆ.