ಇಷ್ಟ ಅಂತ ಹೆಚ್ಚೆಚ್ಚು ಮೊಮೊಸ್ ತಿಂದು, ಯಡವಟ್ಟು ಮಾಡ್ಕೊಳ್ಬೇಡಿ

By Suvarna News  |  First Published Jan 17, 2023, 3:10 PM IST

ಸ್ಟ್ರೀಟ್ ಫುಡ್ ಗಳು ಎಲ್ಲರಿಗೂ ಇಷ್ಟವಾಗುತ್ವೆ. ಅದ್ರಲ್ಲೂ ಮೈದಾದಿಂದ ಮಾಡಿದ ಆಹಾರದ ರುಚಿ ಹೆಚ್ಚು. ಇದ್ರಲ್ಲಿ ಮೊಮೊಸ್ ಕೂಡ ಸೇರಿದೆ. ಒಂದಾದ್ಮೇಲೆ ಒಂದರಂತೆ ಮೊಮೊಸ್ ಹೊಟ್ಟೆ ಸೇರಿದ್ದೆ ಗೊತ್ತಾಗಲ್ಲ. ರುಚಿ ಹೆಚ್ಚಿರುವ ಈ ಮೊಮೊ ಆರೋಗ್ಯ ಕೆಡಿಸುತ್ತೆ ಎಚ್ಚರ.
 


ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಹೆಚ್ಚು ಪ್ರಸಿದ್ಧಿಯಾಗ್ತಿರುವ ಆಹಾರದಲ್ಲಿ ಮೊಮೊಸ್ ಕೂಡ ಒಂದು. ಹಿಂದೆ ಕರ್ನಾಟಕದಲ್ಲಿ ಬಹಳ ಅಪರೂಪ ಎನ್ನುವಂತೆ ಅಲ್ಲೋ ಇಲ್ಲೋ ಒಂದು ಮೊಮೊಸ್ ತಯಾರಿಸುವ ಅಂಗಡಿ ಕಾಣ್ತಿತ್ತು. ಆದ್ರೀಗ ಕರ್ನಾಟಕದಲ್ಲೂ ಮೊಮೊಸ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. 

ಮೊಮೊ (Momo) ಎಂಬುದು ಚೈನೀಸ್ (Chinese) ಪದ. ಇದರರ್ಥ ಆವಿಯಲ್ಲಿ ಬೇಯಿಸಿದ ಬ್ರೆಡ್. ಆದ್ರೆ ಮೊಮೊಸ್ ಮೂಲ ನೇಪಾಳ (Nepal) ಮತ್ತು ಟಿಬೆಟ್ ಆಗಿದೆ. ವಾಸ್ತವವಾಗಿ, ಮೊಮೊಸ್ ಅರುಣಾಚಲ ಪ್ರದೇಶದ ಮೊನ್ಪಾ ಮತ್ತು ಶೆರ್ಡುಕ್ಪೆನ್ ಬುಡಕಟ್ಟುಗಳ ಆಹಾರದ ಪ್ರಮುಖ ಭಾಗವಾಗಿದೆ. ಈ ಸ್ಥಳವು ಟಿಬೆಟ್ ಗಡಿಯ ಪಕ್ಕದಲ್ಲಿದೆ.  

Tap to resize

Latest Videos

ಈಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಮೊಸ್ ತಿನ್ನಲು ಇಷ್ಟಪಡ್ತಾರೆ. ಕಾಲೇಜು, ಕಚೇರಿಯಿಂದ ವಾಪಸ್ ಬರುವ ವೇಳೆ ಖಾಲಿ ಹೊಟ್ಟೆಯಲ್ಲಿ ಮೊಮೊಸ್ ತಿನ್ನೋರು ಜಾಸ್ತಿ. ಫಾಸ್ಟ್ ಫುಡ್ (Fast  Food) ಆರೋಗ್ಯ (Health) ಕ್ಕೆ ಹಾಳು, ಹಾಗಾಗಿ ನಾವು ಮೊಮೊಸ್ ಸೇವನೆ ಶುರು ಮಾಡಿದ್ದೇವೆ ಅನ್ನೋರನ್ನು ನೀವು ಕೇಳಿರಬಹುದು. 

ಬೆಳಗ್ಗೆದ್ದು ಕಾಫಿ, ಟೀ ಕುಡಿಯೋದಲ್ಲ ಬಾಳೆಹಣ್ಣು ತಿನ್ನಿ..ಎನರ್ಜಿಟಿಕ್ ಆಗಿರ್ತೀರಿ

ಒಂದು ಮೊಮೊಸ್ ನಲ್ಲಿ 1.6 ಗ್ರಾಂ ಪ್ರೋಟೀನ್ (Protein) ಇದ್ರೆ, 9.6 ಗ್ರಾಂ ಕಾರ್ಬೋಹೈಡ್ರೇಟ್‌ ಇರುತ್ತದೆ. ಹಾಗೆಯೇ 0.9 ಗ್ರಾಂ ಫೈಬರ್ ಇರುತ್ತದೆ. ಎಣ್ಣೆಯನ್ನು ಬಳಸದೆ ಇದನ್ನು ಮಾಡೋದ್ರಿಂದ ಇದು ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ತಿಳಿದಿದ್ದಾರೆ. ಎಷ್ಟು ತಿಂದ್ರೂ ಅದ್ರಿಂದ ತೊಂದ್ರೆಯಿಲ್ಲ ಎಂದುಕೊಂಡಿದ್ದಾರೆ. ಆದ್ರೆ ನಿಮ್ಮ ಆಲೋಚನೆ ತಪ್ಪು. ಮೊಮೊಸ್ ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅದು ಹೇಗೆ ಅನ್ನೋದನ್ನು ನಾವಿಂದು ಹೇಳ್ತೆವೆ. 

ಮೊಮೊಸ್ ಹೇಗೆ ತಯಾರಿಸ್ತಾರೆ? : ನಿಮಗೆ ಗೊತ್ತಿರುವಂತೆ ತರಕಾರಿ (Vegetable ) ಮೊಮೊಸ್ ತಯಾರಿಸಲು ಮೈದಾ (Maida) ಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಬೆಳ್ಳುಳ್ಳಿ, ಸೋಯಾ ಸಾಸ್, ವಿನೆಗರ್, ಕರಿಮೆಣಸು, ತುರಿದ ಎಲೆಕೋಸು ಜೊತೆಗೆ ಕ್ಯಾರೆಟ್ ಅನ್ನು ಬಳಸಲಾಗುತ್ತದೆ. ಮೊಮೊಗಳನ್ನು ಆವಿಯಲ್ಲಿ ಬೇಯಿಸಲಾಗುತ್ತದೆ. ತರಕಾರಿಗಳ ಹೊರತಾಗಿ, ಮೊಮೊಸ್ ಅನ್ನು ಚಿಕನ್ ಮತ್ತು ಪನೀರ್ ಸ್ಟಫಿಂಗ್‌ನೊಂದಿಗೆ ಕೂಡ ತಯಾರಿಸಲಾಗುತ್ತದೆ.  
 
ಮೊಮೊಸ್ ತಿನ್ನುವುದ್ರಿಂದ ಏನಾಗುತ್ತೆ ಗೊತ್ತಾ? :  

ಅತಿಯಾದ ಮೊಮೊಸ್ ಸೇವನೆಯಿಂದ ಬೊಜ್ಜು ಹೆಚ್ಚಳ : ಮೊದಲನೇಯದಾಗಿ ಮೊಮೊ ತಯಾರಾಗೋದು ಮೈದಾ ಹಿಟ್ಟಿನಿಂದ. ಮೈದಾ ಹಿಟ್ಟಿನಲ್ಲಿ ಅಜೋಡಿಕಾರ್ಬೊನಮೈಡ್, ಬೆಂಜಾಯಿಲ್ ಪೆರಾಕ್ಸೈಡ್ ಹೇರಳವಾಗಿ ದೊರೆಯುತ್ತವೆ. ಮೊಮೊಸ್ ಅನ್ನು ದೀರ್ಘಕಾಲದವರೆಗೆ ಮೃದುವಾಗಿಡಲು ಅದಕ್ಕೆ ಅಲೋಕ್ಸನ್ ಎಂಬ ದ್ರವವನ್ನು ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಯುಂಟು ಮಾಡುತ್ತದೆ.  ಅಲ್ಲದೆ ಪಿಷ್ಟವನ್ನು ಬಳಸಲಾಗುತ್ತದೆ.  ಈ ಪಿಷ್ಟದಿಂದಾಗಿ ಹೊಟ್ಟೆಯ ಬೊಜ್ಜು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊಮೊಸ್ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿಯಾಗುವ ಅಪಾಯವಿರುತ್ತದೆ.

ಮಧುಮೇಹದ ಅಪಾಯ : ಮೊಮೊಸ್ ಗೆ ಬಳಸುವ ವಸ್ತುಗಳು ದೇಹದ ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತದೆ.  ಇನ್ಸುಲಿನ್ ಹಾರ್ಮೋನ್ ಸ್ರವಿಸುವಿಕೆಯು ಸರಿಯಾಗಿ ಆಗುವುದಿಲ್ಲ. ಇದ್ರಿಂದ ಮಧುಮೇಹ ಹೆಚ್ಚಾಗುವ ಅಪಾಯವಿರುತ್ತದೆ.  

ನಾನ್ ವೆಜ್ ಮೊಮೊಸ್ ಮತ್ತಷ್ಟು ಅಪಾಯಕಾರಿ : ನಾನ್ ವೆಜ್ ಮೊಮೊಸ್ ಹೆಚ್ಚು ಅಪಾಯಕಾರಿ. ನಾನ್ ವೆಜ್ ಮೊಮೊಗಳಲ್ಲಿ ಚಿಕನ್ ಬಳಸುತ್ತಾರೆ. ನೀವು ಎಲ್ಲಿ ಮೊಮೊಸ್ ಸೇವನೆ ಮಾಡ್ತಿರಿ ಎನ್ನುವುದು ಮುಖ್ಯವಾಗುತ್ತದೆ. ಗುಣಮಟ್ಟ ಕೆಟ್ಟದಿರುವ ಚಿಕನ್ ಸೇವನೆ ಮಾಡಿದ್ರೆ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ. 

ಬಟಾಣಿ ತೆಗೆದು ಸಿಪ್ಪೆ ಎಸೆಯೋ ಮುನ್ನ ಇರಲಿ ಗಮನ

ಮೊಮೊಸ್ ಗೆ ಬಳಸುವ ಕೆಂಪು ಚಟ್ನಿಯಿಂದ ಅನಾರೋಗ್ಯ : ಮೊಮೊಸ್ ಜೊತೆ ಕೆಂಪು ಚಟ್ನಿಯನ್ನು ನೀಡಲಾಗುತ್ತದೆ. ಇದು ಕೂಡ ದೇಹಕ್ಕೆ ಹಾನಿಕಾರಕವಾಗಿದೆ.  ಇದನ್ನು ಅತಿಯಾಗಿ ಸೇವಿಸುವುದರಿಂದ ಪೈಲ್ಸ್ ಉಂಟಾಗಬಹುದು.
 

click me!