ಬೆಳಗ್ಗೆ ಅಥವಾ ಮಧ್ಯಾಹ್ನ, ಯಾವ ಸಮಯದಲ್ಲಿ ಎಳನೀರು ಕುಡಿಯೋದು ಆರೋಗ್ಯಕ್ಕೆ ಬೆಸ್ಟ್‌?

By Vinutha Perla  |  First Published Feb 23, 2024, 10:24 AM IST

ಬಹುತೇಕರು ಬೆಳಗ್ಗೆದ್ದು ಎಳನೀರು ಕುಡಿಯುತ್ತಾರೆ. ಮತ್ತೆ ಕೆಲವರು ಮಧ್ಯಾಹ್ನ ಊಟವಾದ ಬಳಿಕ ಎಳನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಯಾವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು.


ಬೇಸಿಗೆ ಶುರುವಾಗಿದೆ. ದಿನವಿಡೀ ಬಾಯಾರಿಕೆಯಾದಂತೆ, ಸುಸ್ತಾದಂತೆ ಅನುಭವ ಆಗುತ್ತಲೇ ಇರುತ್ತದೆ. ಹೀಗಾಗಿ ದೇಹವನ್ನು ಹೈಡ್ರೀಕರಿಸಿ ಇಟ್ಟುಕೊಳ್ಳುವುದು ಮುಖ್ಯ. ಹೀಗಾಗಿಯೇ ಸಮ್ಮರ್ ಶುರುವಾದಾಗ ಜನರು ಹೆಚ್ಚು ಜ್ಯೂಸ್‌, ಎಳನೀರು ಮೊದಲಾದ ಪಾನೀಯವನ್ನು ಕುಡಿಯುತ್ತಾರೆ. ಎಳನೀರು ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಮಾತ್ರವಲ್ಲದೆ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಆದರೆ ಯಾವ ಸಮಯದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ಬಹುತೇಕರು ಬೆಳಗ್ಗೆದ್ದು ಎಳನೀರು ಕುಡಿಯುತ್ತಾರೆ. ಮತ್ತೆ ಕೆಲವರು ಮಧ್ಯಾಹ್ನ ಊಟವಾದ ಬಳಿಕ ಎಳನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಯಾವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು.

ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಕೇವಲ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ, ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ತೆಂಗಿನ ನೀರಿನಲ್ಲಿ ಕ್ಯಾಲೋರಿ ಕಡಿಮೆ ಇರುವ ಕಾರಣ ಇದನ್ನು ಕುಡಿಯೋದ್ರಿಂದ ಆರೋಗ್ಯಕ್ಕೆ ಯಾವ್ದೇ ರೀತಿಯಲ್ಲಿ ತೊಂದರೆಯಿಲ್ಲ. ಒಂದು ಕಪ್ ನಲ್ಲಿ ಕೇವಲ 45 ಕ್ಯಾಲೋರಿಗಳಿವೆ. ಹೀಗಾಗಿ, ನೀವು ಸೋಡಾ ಅಥವಾ ಇತರ ಸಕ್ಕರೆ ಪಾನೀಯಗಳನ್ನು ಕುಡಿಯಬೇಕು ಅನಿಸಿದಾಗಲ್ಲೆಲ್ಲಾ ಎಳನೀರು ಕುಡಿಯುವುದು ಉತ್ತಮ.

Tap to resize

Latest Videos

undefined

Healthy Drink: ಗ್ರೀನ್ ಟೀ ವರ್ಸಸ್ ಬ್ಲಾಕ್ ಕಾಫಿ.. ಯಾವುದು ಬೆಸ್ಟ್?

ತೆಂಗಿನ ನೀರು ಕುಡಿಯಲು ಉತ್ತಮ ಸಮಯ ಯಾವಾಗ?
ಪ್ರತಿಯೊಬ್ಬರೂ ಎಳನೀರು ಕುಡಿಯುವುದು ಅತ್ಯುತ್ತಮ ಎಂದು ಆಹಾರ ತಜ್ಞರು ಹೇಳುತ್ತಾರೆ. ತೆಂಗಿನ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಕಿಕ್‌ಸ್ಟಾರ್ಟ್ ಮಾಡುತ್ತದೆ. ತೆಂಗಿನ ನೀರನ್ನು ಸಂಜೆಯ ಸಮಯದಲ್ಲಿ ಕುಡಿಯುವುದಕ್ಕಿಂತ ಬೆಳಿಗ್ಗೆ ಬೇಗನೆ ಕುಡಿಯುವುದು ಮತ್ತು ಹಿತಮಿತವಾಗಿ ಕುಡಿಯುವುದು ಉತ್ತಮ ಎಂದಿದ್ದಾರೆ. ತೆಂಗಿನ ನೀರು ಅತ್ಯುತ್ತಮ ನೈಸರ್ಗಿಕ ಎಲೆಕ್ಟ್ರೋಲೈಟ್ ಮೂಲವಾಗಿದೆ, ವ್ಯಾಯಾಮದ ನಂತರ ಪುನರ್ಜಲೀಕರಣಕ್ಕೆ ಇದು ಉತ್ತಮ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಕ್ತದಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದರೆ ತೆಂಗಿನ ನೀರನ್ನು ಕುಡಿಯಬೇಡಿ. ತೆಂಗಿನ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇದೆ. ಆದ್ದರಿಂದ ಮೂತ್ರಪಿಂಡದ ಕಾಯಿಲೆ ಇರುವವರು ಮತ್ತು ಹೃದಯದ ತೊಂದರೆ ಇರುವವರು ಇದನ್ನು ತೆಗೆದುಕೊಳ್ಳಬಾರದು. ಕೆಲವು ಜನರು ಬೆಡ್‌ಟೈಮ್ ಮೊದಲು ತೆಂಗಿನ ನೀರನ್ನು ಹಿತವಾದ ಮತ್ತು ಜಲಸಂಚಯನಗೊಳಿಸುವ ಆಯ್ಕೆಯಾಗಿ ಪರಿಗಣಿಸುತ್ತಾರೆ. ಆದರೆ ಹೀಗೆ ಮಾಡಿದಾಗ ಇದು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

ಜಸ್ಟ್ 1 ತಿಂಗಳು ಈ ನೀರು ಕುಡಿದ್ರೆ ಸಾಕು, ಭರ್ತಿ 10 ಕೆಜಿ ತೂಕ ಕಡಿಮೆ ಮಾಡ್ಕೋಬೋದು

ನೆನಪಿಡಿ, ತೆಂಗಿನ ನೀರು ಆರೋಗ್ಯಕರ ಆಯ್ಕೆಯಾಗಿದ್ದರೂ, ಅದರ ನೈಸರ್ಗಿಕ ಸಕ್ಕರೆ ಅಂಶದಿಂದಾಗಿ ಮಿತವಾಗಿ ಕುಡಿಯುವುದು ಸಹ ಮುಖ್ಯವಾಗಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

click me!