ಹಣ್ಣು,ಜ್ಯೂಸ್, ಮೊಸರು ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಪ್ರತಿಯೊಂದು ಆಹಾರ ಸೇವನೆ ಮಾಡೋಕೆ ಕೆಲವೊಂದು ನಿಯಮವಿದೆ. ಆ ನಿಯಮ ಮೀರಿ ಆಹಾರ ತಿಂದ್ರೆ ಸಮಸ್ಯೆ ಕಾಡುತ್ತೆ. ಖಾಲಿ ಹೊಟ್ಟೆಯಲ್ಲಿ ಆಹಾರ ತೆಗೆದುಕೊಳ್ಳುವ ಮೊದಲು ಯಾವುದು ಬೆಸ್ಟ್, ಯಾವುದು ವರ್ಸ್ಟ್ ಎಂಬುದನ್ನು ತಿಳಿದಿರಿ.
ಬೆಳಿಗ್ಗೆ ನಾವು ಏನು ಆಹಾರ ಸೇವನೆ ಮಾಡ್ತೇವೆ ಎಂಬುದು ಬಹಳ ಮುಖ್ಯ. ರಾತ್ರಿಯಿಡಿ ಖಾಲಿ ಇರುವ ಹೊಟ್ಟೆಗೆ ನಾವು ಮೊದಲು ಏನನ್ನು ನೀಡ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ನಾವು ಬೆಳಿಗ್ಗೆ ಸೇವನೆ ಮಾಡುವ ಆಹಾರಗಳು ನಾವು ಇಡೀ ದಿನ ಆರೋಗ್ಯವಾಗಿ, ಶಕ್ತಿಯುತವಾಗಿ ಇರುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಸೇವನೆ ಮಾಡುವ ಜನರು ನಂತ್ರ ತಮ್ಮಿಷ್ಟದ ಆಹಾರ ತಿನ್ನುತ್ತಾರೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿದ್ರೆ ಮತ್ತೆ ಕೆಲವರು ಕಾಫಿ ಸೇವನೆ ಮಾಡ್ತಾರೆ. ಇನ್ನು ಕೆಲವರು ಜ್ಯೂಸ್ ಅಥವಾ ಹಣ್ಣನ್ನು ತಿನ್ನುತ್ತಾರೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ನಮಗೆ ಇಷ್ಟಬಂದ ಆಹಾರ ಸೇವನೆ ಮಾಡೋದು ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಕೆಲವು ವಸ್ತುಗಳನ್ನು ತಿನ್ನುವುದು ಕರುಳಿಗೆ ಹಾನಿ ಮಾಡುತ್ತದೆ. ನಾವಿಂದು ಖಾಲಿ ಹೊಟ್ಟೆಯಲ್ಲಿ ನೀವು ಯಾವೆಲ್ಲ ಆಹಾರ ತಿನ್ಬಾರದು ಎಂಬುದನ್ನು ಹೇಳ್ತೇವೆ.
ಖಾಲಿ ಹೊಟ್ಟೆ (Empty Stomach ) ಯಲ್ಲಿ ಇದನ್ನು ಸೇವಿಸಿ ಆರೋಗ್ಯ ಹಾಳ್ಮಾಡ್ಕೊಳ್ಳಬೇಡಿ :
ಕಾಫಿ (Coffee) ಸಹವಾಸ ಬೇಡ : ಬೆಳಿಗ್ಗೆ ಬೆಡ್ ಕಾಫಿ ಇಲ್ಲವೆಂದ್ರೆ ದಿನ ಶುರುವಾಗೋದೇ ಕಷ್ಟ. ಹಾಗಂತ ಈ ಕಾಫಿ ನಿಮ್ಮ ಮೂಡ್ ಸರಿಮಾಡೋದಿಲ್ಲ. ಬದಲಾಗಿ ನಿಮ್ಮ ಆರೋಗ್ಯ ಹದಗೆಡಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದ್ರಿಂದ ಅಸಿಡಿಟಿ ಸಮಸ್ಯೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.
ಇನ್ಮುಂದೆ ಎಟಿಎಂನಲ್ಲೇ ಸಿಗುತ್ತೆ ಬಿರಿಯಾನಿ: 4 ನಿಮಿಷದಲ್ಲಿ ಸಿಗುತ್ತೆ ಬಿಸಿ ಬಿಸಿ, ಸ್ವಾದಿಷ್ಟ ಆಹಾರ..!
ಮಸಾಲೆ (Spice) ಆಹಾರ ತಿನ್ಬೇಡಿ : ಮೆಣಸಿನಕಾಯಿ ಅಥವಾ ಅತಿಯಾದ ಮಸಾಲೆಯಿಂದ ಮಾಡಿದ ಪದಾರ್ಥಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ಹೊಟ್ಟೆಯಲ್ಲಿ ಸುಡುವ ಅನುಭವವುಂಟು ಮಾಡುತ್ತದೆ. ನಿಮಗೆ ಆಸಿಡಿಟಿ ಇದ್ರಿಂದ ಕಾಡುತ್ತದೆ. ಕೆಲವೊಮ್ಮೆ ಹೊಟ್ಟೆ ನೋವು ಕೂಡ ಕಾಡುವುದಿದೆ. ಬೆಳಗ್ಗೆ ನೀವು ಉಪಹಾರದ ರೂಪದಲ್ಲಿ ಸಮೋಸ, ಕಚೋಡಿ ಅಥವಾ ಡೀಪ್ ಫ್ರೈ ಆಹಾರವನ್ನು ಸೇವನೆ ಮಾಡಿದ್ರೆ ಈ ಸಮಸ್ಯೆ ಹೆಚ್ಚಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಮೊಸರು (Curd) ಬೇಡ : ಖಾಲಿ ಹೊಟ್ಟೆಯಲ್ಲಿ ಮೊಸರು ತಿಂದ್ರೆ ಹೊಟ್ಟೆ ತಂಪಾದಂತೆ ಭಾಸವಾಗುತ್ತದೆ. ಅನೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನೋದು ಸೂಕ್ತವಲ್ಲ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಕಂಡುಬರುತ್ತದೆ. ಇದನ್ನು ನೀವು ಬೆಳಿಗ್ಗೆ ಸೇವನೆ ಮಾಡಿದಾಗ ಆಮ್ಲೀಯತೆ ಹೆಚ್ಚಾಗುತ್ತದೆ. ಬರೀ ಮೊಸರು ಮಾತ್ರವಲ್ಲ, ಹಾಲಿನಿಂತ ತಯಾರಿಸಿದ ಯಾವುದೇ ಆಹಾರವನ್ನು ನೀವು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಯಾಕೆಂದ್ರೆ ಹಾಲಿನ ಉತ್ಪನ್ನದಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುವ ಜೊತೆಗೆ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ.
Healthy Snack : ಸ್ವಾದಿಷ್ಟಕರ ಮಖಾನಾ ಚಾಟ್ ರುಚಿಗೂ ಸೈ ಆರೋಗ್ಯಕ್ಕೂ ಸೈ
ಜ್ಯೂಸ್ ಒಳ್ಳೆಯದಾದ್ರೂ ಖಾಲಿ ಹೊಟ್ಟೆಯಲ್ಲಿ ನೋ : ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ಜ್ಯೂಸ್ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ಅನೇಕರು ದಿನದ ಪ್ರಾರಂಭವನ್ನೇ ಜ್ಯೂಸ್ ನಿಂದ ಮಾಡ್ತಾರೆ. ಆದ್ರೆ ಆರೋಗ್ಯ ತಜ್ಞರ ಪ್ರಕಾರ, ಹಣ್ಣಿನ ರಸದಿಂದ ದಿನವನ್ನು ಎಂದಿಗೂ ಪ್ರಾರಂಭಿಸಬಾರದು. ಇದು ಮೇದೋಜ್ಜೀರಕ ಗ್ರಂಥಿಯ ಮೇಲೆ ಹೆಚ್ಚುವರಿ ಹೊರೆ ಹಾಕುತ್ತದೆ. ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದರಿಂದ ಫ್ರಕ್ಟೋಸ್ ರೂಪದಲ್ಲಿ ಹಣ್ಣುಗಳಲ್ಲಿ ಇರುವ ಸಕ್ಕರೆ ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಹಾಗಾಗಿ ನೀವು ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಸೇವನೆ ಮಾಡ್ಬೇಡಿ.
ಹಸಿ ತರಕಾರಿ : ಕೆಲವೊಂದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಯಾವ್ಯಾವುದೋ ಸಮಯದಲ್ಲಿ ಇದ್ರ ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ಅದ್ರಲ್ಲಿ ಹಸಿ ತರಕಾರಿ ಹಾಗೂ ಸಲಾಡ್ ಕೂಡ ಸೇರಿದೆ. ಆರೋಗ್ಯ ತಜ್ಞರ ಪ್ರಕಾರ ಹಸಿ ತರಕಾರಿಗಳಲ್ಲಿ ನಾರಿನಂಶ ಹೇರಳವಾಗಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ನಿಮ್ಮ ತೂಕ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆ ನಿಮ್ಮನ್ನು ಬಾಧಿಸುತ್ತದೆ.
ಸಿಟ್ರಸ್ ಹಣ್ಣುಗಳು : ನೀವು ಅಪ್ಪಿತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಹುಳಿ ಹಣ್ಣುಗಳನ್ನು ತಿನ್ನಬೇಡಿ. ಇದು ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಇವುಗಳಲ್ಲಿರುವ ಫೈಬರ್ ಮತ್ತು ಫ್ರಕ್ಟೋಸ್ ಹೊಟ್ಟೆಯ ಆರೋಗ್ಯ ಹದಗೆಡಿಸುತ್ತದೆ. ಕಿತ್ತಳೆ ಹಣ್ಣು, ಪೇರಳೆ ಹಣ್ಣಿನಂತಹ ಹುಳಿ ಇರುವ ಹಣ್ಣುಗಳನ್ನು ನೀವು ಬೆಳಿಗ್ಗೆ ಸೇವನೆ ಮಾಡ್ಬೇಡಿ.