ಆಹಾರ ಸೇವಿಸುತ್ತಿದ್ದ ಬಾಲಕನಿಗೆ ಕಚ್ಚಿದ ಇಲಿ: ಹೈದರಾಬಾದ್‌ನ ಮೆಕ್‌ಡೊನಾಲ್ಡ್‌ನಲ್ಲಿ ಆಘಾತಕಾರಿ ಘಟನೆ

Published : Mar 12, 2023, 02:57 PM IST
ಆಹಾರ ಸೇವಿಸುತ್ತಿದ್ದ ಬಾಲಕನಿಗೆ ಕಚ್ಚಿದ ಇಲಿ: ಹೈದರಾಬಾದ್‌ನ ಮೆಕ್‌ಡೊನಾಲ್ಡ್‌ನಲ್ಲಿ ಆಘಾತಕಾರಿ ಘಟನೆ

ಸಾರಾಂಶ

ತೆಲಂಗಾಣದ ಹೈದರಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮ್ಯಾಕ್‌ಡೋನಾಲ್ಡ್‌ ರೆಸ್ಟೋರೆಂಟ್‌ವೊಂದರಲ್ಲಿ ಪೋಷಕರೊಂದಿಗೆ ಆಹಾರ ಸೇವಿಸುತ್ತಾ ಕುಳಿತಿದ್ದ 8 ವರ್ಷದ ಬಾಲಕನಿಗೆ ಇಲಿಯೊಂದು ಕಚ್ಚಿದ್ದು, ಈ ಆಘಾತಕಾರಿ ದೃಶ್ಯ ಅಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ.

ಹೈದರಾಬಾದ್‌: ತೆಲಂಗಾಣದ ಹೈದರಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮ್ಯಾಕ್‌ಡೋನಾಲ್ಡ್‌ ರೆಸ್ಟೋರೆಂಟ್‌ವೊಂದರಲ್ಲಿ ಪೋಷಕರೊಂದಿಗೆ ಆಹಾರ ಸೇವಿಸುತ್ತಾ ಕುಳಿತಿದ್ದ 8 ವರ್ಷದ ಬಾಲಕನಿಗೆ ಇಲಿಯೊಂದು ಕಚ್ಚಿದ್ದು, ಈ ಆಘಾತಕಾರಿ ದೃಶ್ಯ ಅಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ.  ಬಾಲಕನ ತಂದೆ ಸವಿಯೋ ಹೆನ್ರಿಕ್ಸ್ (Savio Henriques) ಈ ಘಟನೆಯನ್ನು ದೃಶ್ಯಾವಳಿ ಸಮೇತ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ವಿವರಿಸಿದ್ದಾರೆ. ಅಲ್ಲದೇ ಮೆಕ್‌ಡೊನಾಲ್ಡ್ ಔಟ್‌ಲೆಟ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಇಲಿ ಸಣ್ಣ ನಾಯಿಮರಿ ಗಾತ್ರದಲ್ಲಿತ್ತು ಎಂದು ಅವರು ತಿಳಿಸಿದ್ದಾರೆ.  ಫಾಸ್ಟ್ಫುಡ್‌ಗೆ ಫೇಮಸ್ ಆಗಿರುವ ಮ್ಯಾಕ್‌ಡೋನಾಲ್ಡ್ ರೆಸ್ಟೋರೆಂಟ್‌ನಲ್ಲಿ ನನ್ನ ಪತ್ನಿ ಹಾಗೂ ಮಗ ಆಹಾರ ಸೇವಿಸುತ್ತಿದ್ದರು.  ಈ ವೇಳೆ ಇಲಿಯೊಂದು ವಿಶ್ರಾಂತಿ ಕೊಠಡಿಯಿಂದ ಹೊರಬಂದು ಸೀದಾ ನನ್ನ ಮಗ  ಡ್ವೇನ್ ಹೆನ್ರಿಕ್ಸ್‌ನ ಮೇಲೆ ನೆಗೆಯಿತು ಎಂದು ಹೇಳಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಇವರ ಕುಟುಂಬವು ಕುಳಿತಿದ್ದ ಮೇಜಿನ ಕೆಳಗೆ ಇಲಿ ಅಡಗಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದು ಅಲ್ಲದೇ . ಇದಲ್ಲದೆ, ಅದು 8 ವರ್ಷದ ಬಾಲಕನ ಶಾರ್ಟ್ಸ್ (ಚಡ್ಡಿ) ಮೇಲೇರಿ ಆತನ ತೊಡೆಗೆ ಕಚ್ಚಿದೆ. ಕೂಡಲೇ ಆತನ ತಂದೆ ಮಗನನ್ನು ಹತ್ತಿರಕ್ಕೆ ಎಳೆದುಕೊಂಡು ಆತನ ಶಾರ್ಟ್ಸ್‌ನಿಂದ ಇಲಿಯನ್ನು ಹೊರಗೆ ತೆಗೆದು ಎಸೆದಿದ್ದಾರೆ.  ನಂತರ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅವನಿಗೆ ಅಲ್ಲಿ ಇಲ್ಲಿ ಕಚ್ಚಿದ್ದಕ್ಕಾಗಿ ಚಿಕಿತ್ಸೆ ನೀಡಲಾಗಿದೆ. 

ಇಲಿಗಳು 580 ಕೆಜಿ ಗಾಂಜಾ ಭಕ್ಷಿಸಿವೆ ಎಂದ ಪೊಲೀಸ್: ಸಾಕ್ಷಿ ನೀಡಲು ಕೋರ್ಟ್‌ ತಾಕೀತು 

ಇಲ್ಲಿ ಕಡಿತಕ್ಕೊಳಗಾದ ಬಾಲಕನ ತೊಡೆಸಂದಿಯಲ್ಲಿ ಎರಡು ಕಡೆ ಗಾಯದ ಗುರುತುಗಳಿವೆ. ಅಲ್ಲದೇ ಅಲ್ಲಿ ರಕ್ತ ಸೋರುತ್ತಿತ್ತು. ಅದನ್ನು ಗಮನಿಸಿದ ಅವರು ಕೂಡಲೇ ಸಮೀಪದ ಬೋವೆನಪಲ್ಲಿ (Bowenpally)ಬಳಿ ಇರುವ  ಮಿಲಿಟರಿ ವೈದ್ಯಕೀಯ ತಪಾಸಣಾ ಕೊಠಡಿಗೆ ಮಗನನ್ನು ಕರೆದೊಯ್ದರು. ಅಲ್ಲಿ ಆತನನ್ನು ತಪಾಸಣೆ ನಡೆಸಿದ ವೈದ್ಯರು ಆತನಿಗೆ ಟೆಟನಸ್ (tetanus injection) ಹಾಗೂ ಆಂಟಿ ರೇಬಿಸ್ ಇಂಜೆಕ್ಷನ್ (anti-rabies injection) ನೀಡಿದ್ದಾರೆ. ಅಲ್ಲದೇ ಮುನ್ನೇಚ್ಚರಿಕಾ ಕ್ರಮವಾಗಿ ದಿನಗಳ ನಂತರ ಮತ್ತೆರಡು ಚುಚ್ಚುಮದ್ದುಗಳನ್ನು ಬಾಲಕನಿಗೆ ನೀಡಲಾಗಿದೆ. 

ಈ ಅವಘಡದ ವೇಳೆ ರೆಸ್ಟೋರೆಂಟ್ ಕೆಲಸಗಾರರು ಸಹಾಯಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಅಲ್ಲದೇ ಭಾರತೀಯ ದಂಡ ಸಂಹಿತೆಯ  ಸೆಕ್ಷನ್ 269 (ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿ ಕಾಯಿಲೆ ಸೋಂಕನ್ನು ಹರಡುವ ಸಾಧ್ಯತೆ) ಅಡಿಯಲ್ಲಿ ರೆಸ್ಟೋರೆಂಟ್  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೂಡಿಗೆ ನುಗ್ಗಿದ ಮಳೆ ನೀರು: ಜೀವದ ಹಂಗು ತೊರೆದು ಮರಿಗಳ ರಕ್ಷಿಸಿದ ತಾಯಿ ಇಲಿ

ಇವರ ಟ್ವಿಟ್‌ಗೆ ಮೆಕ್‌ಡೋನಾಲ್ಡ್‌ ಕೂಡ ಪ್ರತಿಕ್ರಿಯಿಸಿದ್ದು, ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.  ಹಾಗೆಯೇ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ (Hyderabad Municipal Corporation) ಸಹಾಯಕ ಆಹಾರ ನಿಯಂತ್ರಕರ ಗಮನಕ್ಕೂ ಈ ವಿಚಾರ ಬಂದಿದ್ದು,  ಸಂಬಂಧಿತ ಆಹಾರ ಸುರಕ್ಷತಾ ಅಧಿಕಾರಿ (Food Safety Officer) ಆವರಣವನ್ನು ಪರಿಶೀಲಿಸಿದ್ದಾರೆ ಮತ್ತು ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?