ಬಾಳೆ ಹಣ್ಣಲ್ಲ ಹೂ ತಿಂದ್ನೋಡಿ.. ರುಚಿ ಜೊತೆ ಆರೋಗ್ಯಕ್ಕೂ ಒಳ್ಳೇದು! ಶುಗರ್‌ಗೆ ರಾಮಬಾಣ

By Suvarna News  |  First Published Mar 1, 2024, 1:41 PM IST

ನಮ್ಮ ದೇಹ ರೋಗಗಳ ಗೂಡಾಗ್ತಿದೆ. ಅದ್ರಿಂದ ಹೊರಗೆ ಬರಬೇಕೆಂದ್ರೆ ಆರೋಗ್ಯಕರ ಆಹಾರ ಮುಖ್ಯ. ಹೊರಗಿನ ತಿಂಡಿ ಬಿಟ್ಟು, ಮನೆಯಲ್ಲಿರುವ ಆರೋಗ್ಯಕರ ಆಹಾರ ಸೇವನೆ ಮಾಡಿದ್ರೆ ದೊಡ್ಡ ಖಾಯಿಲೆ ನಮ್ಮ ಬಳಿ ಸುಳಿಯೋದಿಲ್ಲ. 
 


ಜಗತ್ತಿನಲ್ಲಿ ಅನೇಕ ರೀತಿಯ ರೋಗಗಳಿವೆ. ಕೆಲವು ರೋಗಗಳ  ಹೆಸರನ್ನೇ ನಾವು ಕೇಳಿಲ್ಲ. ಇನ್ನು ಕೆಲ ಖಾಯಿಲೆ ಪ್ರತಿ ದಿನ ನೂರಾರು ಮಂದಿಯನ್ನು ಬಲಿ ಪಡೆಯುತ್ತಿದೆ. ವೈದ್ಯಲೋಕದಲ್ಲಿ ಇಷ್ಟೆಲ್ಲ ಸಂಶೋಧನೆ ಆಗ್ತಿದ್ದರೂ ಕೆಲವೊಂದು ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ವಿಚಿತ್ರ ಅಂದ್ರೆ ಈ ರೋಗಕ್ಕೆ ಮದ್ದಿಲ್ಲ ಅಥವಾ ಗುಣವಗಲ್ಲ ಎಂದು ವೈದ್ಯರು ಹೇಳಿದ ರೋಗ ಮನೆ ಮದ್ದಿನಿಂದ ಗುಣಮುಖವಾದ್ದಿದೆ. ಹಾಗಾಗಿಯೇ ಕೆಲವರು ಮೊದಲು ಮನೆ ಮದ್ದಿನ ಮೊರೆ ಹೋಗ್ತಾರೆ. 

ಹೃದಯ (Heart )ದ ಖಾಯಿಲೆಗಳು, ಕ್ಯಾನ್ಸರ್, ಮಧುಮೇಹ, ಆಸ್ಟಿಯೊಪೊರೋಸಿಸ್, ಸ್ಥೂಲಕಾಯದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಇದು ಪ್ರತಿ ದಿನ ಅನೇಕರ ಜೀವ ಬಲಿಪಡೆಯುತ್ತಿದೆ.  ಹೈ ಎಲ್ ಡಿ ಎಲ್ ಕೊಲೆಸ್ಟ್ರಾಲ್, ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ, ಕಳಪೆ ಜೀರ್ಣಕ್ರಿಯೆ ಮತ್ತು ಮೂಳೆಗಳ ಸಮಸ್ಯೆಯಿಂದ ದೊಡ್ಡ ರೋಗ ಹುಟ್ಟಿಕೊಳ್ತಿದೆ. ಈ ಮಾರಣಾಂತಿಕ ರೋಗಕ್ಕೆ ಮನೆಯಲ್ಲಿಯೇ ಔಷಧವಿದೆ. ಬಾಳೆ (Banana) ಕುಂಡಿಗೆಯಲ್ಲಿರುವ ಹೂವು ಇಂತಹ ಅನೇಕ ರೋಗಗಳಿಗೆ ರಾಮಬಾಣವಾಗಿದೆ.

Tap to resize

Latest Videos

undefined

ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಬೆಳ್ಳುಳ್ಳಿ ಕಬಾಬ್ ಕೇಳಿದ ಸಾರಾ ಅಣ್ಣಯ್ಯ!

ಬಾಳೆ ಕುಂಡಿಗೆ ಹೂನಿಂದ ಲಾಭ : 

ಕೆಟ್ಟ ಕೊಲೆಸ್ಟ್ರಾಲ್ (Cholesterol) ನಿಯಂತ್ರಣ : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯಾಘಾತ ಉಂಟಾಗುತ್ತದೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ರಕ್ತ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತದೆ. ಇದರಿಂದ ರಕ್ತ ಬ್ಲಾಕ್ ಆಗುತ್ತದೆ. ಇದನ್ನು ತಡೆಗಟ್ಟಲು ನೀವು ಕೊಬ್ಬಿನ ಆಹಾರ ಸೇವಿಸುವುದನ್ನು ತಪ್ಪಿಸಿ ಬಾಳೆ ಹೂವನ್ನು ಸೇವಿಸಬೇಕು. ಬಾಳೆ ಹೂವಿನಲ್ಲಿರುವ ಸ್ಟೆರಾಲ್ ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ (Sugar Level Control) : ಬಾಳೆ ಕುಂಡಿಗೆಯ ಒಳಗಡೆ ಇರುವ ಹೂವು ಆರೋಗ್ಯಕ್ಕೆ ಉತ್ತಮವಾಗಿದೆ. ಇದರ ಔಷಧೀಯ ಗುಣಗಳ ಕುರಿತು ಅನೇಕರಿಗೆ ತಿಳಿದಿಲ್ಲ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಇದು ದೇಹದಲ್ಲಿ ಸಕ್ಕರೆಯ ಪ್ರಮಾಣ ಹಠಾತ್ ಏರುವುದು ಅಥವಾ ಇಳಿಯುವುದನ್ನು ತಪ್ಪಿಸುತ್ತದೆ. ಇದರಿಂದ ಮಧುಮೇಹದಿಂದಾಗುವ ಇತರ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ಕರುಳಿನ ಆರೋಗ್ಯಕ್ಕೆ ಬಾಳೆ ಹೂವು (good for Gut Health) : ಕರುಳಿನ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಬೊಜ್ಜು ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳು ಎದುರಾಗುತ್ತವೆ. ಬಾಳೆ ಹೂವು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಈ ಆರೋಗ್ಯಕರ ಬ್ಯಾಕ್ಟೀರಿಯಾಗಳು ಕ್ಯಾನ್ಸರ್ ಮತ್ತು ಬೊಜ್ಜಿನ ತೊಂದರೆಯನ್ನು ನಿವಾರಿಸುತ್ತವೆ.

ಊಟ ಮಾಡುವ ಮೊದಲು ಸುಮಧುರ ಸಂಗೀತ ಕೇಳಿ ಮ್ಯಾಜಿಕ್ ನೋಡಿ

ಮೂಳೆಗಳ ಆರೋಗ್ಯ ಕಾಪಾಡುತ್ತೆ (Makes the bone Strong) :  ಮೂಳೆಗಳ ಆರೋಗ್ಯಕ್ಕೆ ಬಾಳೆ ಹೂವು ದಿವ್ಯೌಷಧವಾಗಿದೆ. ಇದು ಬೋನ್ ಲಾಸ್ ಆಗುವುದನ್ನು ತಪ್ಪಿಸುತ್ತದೆ ಮತ್ತು ಸಂಧಿನೋವು ಮುಂತಾದ ಸಮಸ್ಯೆಗಳನ್ನು ಕೂಡ ದೂರಮಾಡುತ್ತದೆ. ಅದರ ಕ್ಯಾಟೆಚಿನ್ ಮತ್ತು ಕ್ವೆರ್ಸೆಟಿನ್ ಉತ್ಕರ್ಷಣ ನಿರೋಧಕಗಳು ಮೂಳೆ ದ್ರವ್ಯರಾಶಿಯನ್ನು ಬೀಳದಂತೆ ತಡೆಯುತ್ತವೆ ಎಂದು ಟೆಸ್ಟ್ ಟ್ಯೂಬ್ ಅಧ್ಯಯನಗಳು ಹೇಳಿವೆ. ಇಂತಹ ಫ್ಲೇವನೈಡ್ ಗಳು ಮನುಷ್ಯನ ಶರೀರದಲ್ಲಿ ಕ್ಯಾನ್ಸರ್ ಕೊಶಗಳ ಬೆಳವಣಿಗೆಯನ್ನು ಕೂಡ ನಿಯಂತ್ರಿಸುತ್ತವೆ.

ಪುರುಷರಿಗೆ ವರದಾನ (Bless for Men) : ವಯಸ್ಸು ಹೆಚ್ಚಾದಂತೆ ಪುರುಷರು ಪ್ರಾಸ್ಟೇಟ್ ಹಿಗ್ಗುವಿಕೆ ಸಮಸ್ಯೆಯನ್ನು ಎದುರಿಸುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹೊಂದಿರುವವರು ದುರ್ಬಲ ಮೂತ್ರದ ಹರಿವು, ಮೂತ್ರದ ಸೋರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಬಾಳೆ ಹೂವಿನಲ್ಲಿರುವ ಉರಿಯೂತ ನಿವಾರಕ ಗುಣಲಕ್ಷಣ ಪ್ರೊಸ್ಟೇಟ್ ಗಾತ್ರವನ್ನು ಕಡಿಮೆ ಮಾಡುತ್ತದೆ.

ಬಾಳೆ ಹೂವಿನಲ್ಲಿರುವ ಪೋಷಕಾಂಶಗಳು (Available Vitamins) : ಬಾಳೆಹಣ್ಣಿನಂತೆ ಬಾಳೆ ಹೂವಿನಲ್ಲಿ ಅನೇಕ ರೀತಿಯ ಆರೋಗ್ಯಕರ ಅಂಶಗಳಿವೆ. ಬಾಳೆ ಹೂವು ಕಾರ್ಬೋಹೈಡ್ರೇಟ್ ಗಳು, ಕ್ಯಾಲೋರಿಗಳು, ಪ್ರೋಟೀನ್, ಫೈಬರ್, ಪೊಟ್ಯಾಶಿಯಂ (Potasium), ಕ್ಯಾಲ್ಸಿಯಂ (Calcium(, ಮೆಗ್ನೀಸಿಯಂ (Magnesium), ಕಬ್ಬಿಣ (Iron), ಸತು ಮತ್ತು ತಾಮ್ರದ ಅಂಶಗಳನ್ನು ಹೊಂದಿದೆ.  

click me!