
ಮನುಷ್ಯ ಏನು ಬೇಕಾದ್ರೂ ಮಾಡ್ತಾನೆ. ಆತನ ಮನಸ್ಸು ಮರ್ಕಟ. ಜಗತ್ತಿನಲ್ಲಿರುವ ಜನರು ಮಾಡುವ ಹುಚ್ಚಾಟಗಳನ್ನು ಕೇಳಿದ್ರೆ ಬೆರಗಾಗ್ಲೇಬೇಕು. ಜನರ ತಿನ್ನುವ ಹವ್ಯಾಸವಂತೂ ಹುಬ್ಬೇರಿಸುವಂತೆ ಮಾಡುತ್ತದೆ. ಕೆಲವರು, ಯಾವ್ ಯಾವುದೋ ಆಹಾರವನ್ನು ಇನ್ನ್ಯಾವುದಕ್ಕೊ ಬೆರೆಸಿ ತಿಂದ್ರೆ ಮತ್ತೆ ಕೆಲವರು ಹಾವು, ಜಿರಲೆಗಳನ್ನು ಕೂಡ ಬಿಡೋದಿಲ್ಲ. ನಾಯಿ, ಇಲಿ ಮಾಂಸ ಹೋಗ್ಲಿ ಮನುಷ್ಯರ ಮಾಂಸ ತಿನ್ನುವ ಜನರೂ ನಮ್ಮಲ್ಲಿದ್ದಾರೆ. ದ್ವೇಷಿಸುವ ವ್ಯಕ್ತಿಯನ್ನು ಹತ್ಯೆಗೈದು, ಅವರ ಮಾಂಸವನ್ನು ಅಡುಗೆ ಮಾಡಿ ತಿಂದ ಅನೇಕ ಉದಾಹರಣೆಗಳನ್ನು ನಾವು ನೋಡ್ಬಹುದು. ಆದ್ರೆ ಈ ಸ್ಟೋರಿ ಸ್ವಲ್ಪ ವಿಚಿತ್ರವಾಗಿದೆ. ಇಲ್ಲಿ ಯಾರ ಕೊಲೆ ನಡೆದಿಲ್ಲ. ಯಾರೂ, ಯಾರನ್ನೂ ದ್ವೇಷಿಸೋದಿಲ್ಲ. ತನ್ನ ಮಾಂಸವನ್ನೇ ತಾನು ತಿಂದಿದ್ದಾಳೆ ಈ ಯುವತಿ.
ಸ್ಪ್ಯಾನಿಷ್ (Spanish) ಸಾಮಾಜಿಕ ಮಾಧ್ಯಮದ ಪ್ರಭಾವಿ ಪೌಲಾ ಗೋನು (Paula Gonu) ತನ್ನ ಕಥೆಯನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ಆಕೆ ಮಾತು ಕೇಳ್ತಿದ್ದಂತೆ ವೀಕ್ಷಕರು ಬೆಕ್ಕಸ ಬೆರಗಾಗಿದ್ದಾರೆ. ಯಾಕೆಂದ್ರೆ ಆಕೆ ಮಾಡಿದ್ದು ಸಾಮಾನ್ಯ ಕೆಲಸವಲ್ಲ. ತನ್ನ ಮೊಣಕಾಲಿನ ಮಾಂಸ (Meat) ವನ್ನು ತಾನೇ ತಿಂದಿದ್ದಾಳೆ ಯುವತಿ. ಪೌಲಾ ಗೋನು, ತನ್ನ ಗೆಳೆಯನೊಂದಿಗೆ ರೋಮ್ಯಾಂಟಿಕ್ ಡೇಟ್‌ಗೆ ಹೋಗಿದ್ದಳು. ಅಲ್ಲಿ, ತನ್ನ ಮೊಳಕಾಲಿನ ಮಾಂಸವನ್ನು ಬೇಯಿಸಿ ಬಾಯ್ ಫ್ರೆಂಡ್ ಜೊತೆ ತಿಂದಿದ್ದಾಳೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅಂತಾ ನಾವು ತಿಳಿಸ್ತೇವೆ.
ಅಬ್ಬಬ್ಬಾ..ಮೊಸಳೆ ಕಾಲಿನ ಸೂಪ್, ತೈವಾನೀಸ್ ರೆಸ್ಟೋರೆಂಟ್‌ನ ಹೊಸ ಡಿಶ್ ನೋಡಿ ಗ್ರಾಹಕರು ಶಾಕ್!
ಆಪರೇಷನ್ ನಲ್ಲಿ ಮೊಣಕಾಲಿನ ಮಾಂಸ ತೆಗೆಯಲಾಗಿತ್ತು : ಡೇಟಿಂಗ್ ನಲ್ಲಿರುವಾಗ ರಾತ್ರಿ ಊಟಕ್ಕೆ ಮೊಣಗಾಲಿನ ಮಾಂಸ ಬೇಯಿಸಿ ತಿನ್ನುತ್ತಿರೋದನ್ನು ಬಹಿರಂಗಪಡಿಸಿದ್ದಾಳೆ ಪೌಲಾ. ರೋಮ್ಯಾಂಟಿಕ್ ಡೇಟಿಂಗ್ ಗೆ ಹೋಗುವ ಕೆಲ ದಿನಗಳ ಹಿಂದೆ ಆಕೆಯ ಮೊಣಕಾಲಿನ ಆಪರೇಷನ್ ನಡೆದಿತ್ತಂತೆ. ಈ ಆಪರೇಷನ್ ವೇಳೆ ಮೊಣಕಾಲಿನ ಸ್ವಲ್ಪ ಮಾಂಸವನ್ನು ತೆಗೆಯಲಾಗಿತ್ತಂತೆ. ಆ ನಂತ್ರ ಮೊಣಕಾಲಿನ ಮಾಂಸವನ್ನು ಮನೆಗೆ ತೆಗೆದುಕೊಂಡು ಹೋಗುವ ಆಯ್ಕೆಯನ್ನು ವೈದ್ಯರು ನೀಡಿದ್ದರಂತೆ. ಈ ಆಫರನ್ನು ಪೌಲಾ ತಕ್ಷಣ ಒಪ್ಪಿಕೊಂಡಿದ್ದಳಂತೆ. ಅದರಂತೆ ಪೌಲಾ, ಮೊಣಕಾಲಿನ ಮಾಂಸವನ್ನು ಮನೆಗೆ ತಂದಿದ್ದಾಳೆ. ಮಾಂಸ ಕೆಡದಂತೆ ಅದನ್ನು ಫ್ರಿಜರ್ ನಲ್ಲಿ ರಕ್ಷಿಸಿಟ್ಟಿದ್ದಾಳೆ. ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ಗೆ ಹೋದಾಗ, ಮಾಂಸವನ್ನೂ ಕೊಂಡೊಯ್ದಿದ್ದ ಪೌಲಾ, ರಾತ್ರಿ ಊಟಕ್ಕೆ ಅದನ್ನು ಬೇಯಿಸಿ ತಿನ್ನುತ್ತಿದ್ದಳಂತೆ. ಅದನ್ನೇ ತನ್ನ ಬಾಯ್ ಫ್ರೆಂಡ್ ಗೆ ಕೂಡ ನೀಡ್ತಿದ್ದಳಂತೆ.
ಸಂದರ್ಶನದಲ್ಲಿ ಮೊಣಕಾಲಿನ ಮಾಂಸ ಹೇಗಿತ್ತು ಎಂದು ಪ್ರಶ್ನೆ ಮಾಡಲಾಗಿದೆ. ಆದ್ರೆ ಅದಕ್ಕೆ ಪೌಲಾ ಉತ್ತರ ನೀಡದೆ ಬೇರೆ ಮಾತನಾಡಿದ್ದಾಳೆ. ಈ ವಿಷ್ಯ ತಿಳಿದ ಸಾಮಾಜಿಕ ಜಾಲತಾಣ ಬಳಕೆದಾರರು, ಪೌಲಾ ಮೇಲೆ ಕೋಪಗೊಂಡಿದ್ದಾರೆ.
ಪೌಲಾ ಮಾತ್ರವಲ್ಲ, ತನ್ನ ಮಾಂಸವನ್ನು ತಾನೇ ತಿನ್ನುವ ಅನೇಕರಿದ್ದಾರೆ. ಇದು ಒಂದು ರೀತಿಯ ರೋಗ. ಇದನ್ನು ಆಟೋಸಾರ್ಕೊಫಾಗಿ ಅಥವಾ ಆಟೋ ಕ್ಯಾನಿಬಲಿಸಂ ಎಂದು ಕರೆಯಲಾಗುತ್ತದೆ.
ರಸ್ತೆ ಬದಿ ಮಾರ್ತಿರೋ ನೇರಳೆ ನೋಡಿ ಕೊಳ್ಳದೇ ಹೋಗ್ಬೇಡಿ, ತಿಂದು ತೂಕ ಇಳಿಸ್ಕೊಳ್ಳಿ
ಆಟೋ ಕ್ಯಾನಿಬಲಿಸಂ ಮಾನಸಿಕ ಆರೋಗ್ಯ (Mental Illness) ಅಸ್ವಸ್ಥತೆಯಾಗಿದೆ. ಇದಕ್ಕೆ ಮೂಲ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ಇದಕ್ಕೆ ಒತ್ತಡ, ಕೀಳರಿಮೆ ಕಾರಣ ಎನ್ನುತ್ತಾರೆ. ಈ ರೋಗದಲ್ಲಿ ಜನರು ತಮ್ಮದೆ ಉಗುರು, ಚರ್ಮ, ಕೂದಲುಗಳನ್ನು ತಿನ್ನುತ್ತಾರೆ. ಪೌಲಾಗೆ ಯಾವುದೇ ಅಸ್ವಸ್ಥತೆ ಇದ್ದಂತೆ ಕಾಣ್ತಿಲ್ಲ. ಮೊಣಕಾಲಿಗೆ ಇನ್ಫೆಕ್ಷನ್ ಆದ ಕಾರಣ ಅದ್ರ ಮಾಂಸ ತೆಗೆಯಲಾಗಿತ್ತು. ಅದ್ರ ರುಚಿ ನೋಡಲು ಪೌಲಾ ಈ ಸಾಹಸಕ್ಕೆ ಕೈ ಹಾಕಿದಂತಿದೆ.
ಕೆಲ ದಿನಗಳ ಹಿಂದೆ ನಮ್ಮ ಪೂರ್ವಜರು, ಜೀವ ಉಳಿಸಿಕೊಳ್ಳಲು ಪರಸ್ಪರರ ಮಾಂಸ ತಿನ್ನುತ್ತಿದ್ದರು ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಕೀನ್ಯಾದಲ್ಲಿ ಕಂಡುಬರುವ 1.45 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಮಾನವ ಪೂರ್ವಜರ ಮೂಳೆಯು ಅನೇಕ ವಿಷ್ಯಗಳನ್ನು ಬಹಿರಂಗಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.