Food
ಬೇಸಿಗೆಯಲ್ಲಿ ಹೆಚ್ಚು ಲಭ್ಯವಾಗುವ ನೇರಳೆ ಹಣ್ಣು ಕಪ್ಪು ಬಣ್ಣದಲ್ಲಿದ್ದು ರಸಭರಿತವಾಗಿರುತ್ತದೆ. ಹೀಗಾಗಿ ಇದನ್ನು ಬ್ಲ್ಯಾಕ್ ಜಾಮೂನ್ ಎಂದು ಸಹ ಕರೆಯುತ್ತಾರೆ. ಈ ಹಣ್ಣು ಟೇಸ್ಟೀ ಮಾತ್ರವಲ್ಲದೆ ಆರೋಗ್ಯಕ್ಕೂ ಅತ್ಯುತ್ತಮ..
ನೇರಳೆ ಹಣ್ಣಿನಲ್ಲಿ ಹೇರಳವಾಗಿ ಮ್ಯಾಂಗನೀಸ್, ಫೈಬರ್, ವಿಟಮಿನ್ ಸಿ, ಕೆ ಅಂಶವಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಅಧ್ಯಯನದ ಪ್ರಕಾರ ನೇರಳೆ ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣವೂ ಇದೆ.
ನೇರಳೆಹಣ್ಣು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ನೇರಳೆ ಹಣ್ಣಲ್ಲಿರುವ ಜಂಬೋಲಿನ್ ಎಂಬ ಸಂಯುಕ್ತ, ಸಕ್ಕರೆಯ ಮಟ್ಟ ಕಡಿಮೆ ಮಾಡಲು, ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸಲು ನೆರವಾಗುತ್ತದೆ.
ನೇರಳೆ ಹಣ್ಣಿನ ಸೇವನೆ ಟೈಪ್ 2 ಮಧುಮೇಹದ ಲಕ್ಷಣ ಗುಣಪಡಿಸುತ್ತದೆ. ಮಧುಮೇಹವು ಆಗಾಗ್ಗೆ ಮೂತ್ರ ವಿಸರ್ಜನೆ, ಬಾಯಾರಿಕೆಗೆ ಕಾರಣವಾಗುತ್ತದೆ. ನೇರಳೆ ಹಣ್ಣನ್ನು ತಿಂದರೆ ಮಧುಮೇಹದ ಈ ಲಕ್ಷಣಗಳು ಕಡಿಮೆಯಾಗುತ್ತವೆ.
ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ನೇರಳೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿರುವ ಕಬ್ಬಿಣವು ರಕ್ತವನ್ನು ಶುದ್ಧೀಕರಿಸುತ್ತದೆ.
ರಸಭರಿತ ನೇರಳೆ ಹಣ್ಣಿನ ಸೇವನೆಯಿಂದ ತೂಕ, ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಇರುವ ಕಾರಣ ದೇಹದಲ್ಲಿನ ಕೊಬ್ಬನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣುಗಳು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ಅಪಧಮನಿಗಳ ಆರೈಕೆಯ ಮೂಲಕ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.