ಮನುಷ್ಯನ ದೇಹ (Body) ಹೆಚ್ಚಿನ ಪ್ರಮಾಣದಲ್ಲಿ ನೀರಿನಿಂದ (Water) ರೂಪುಗೊಂಡಿದೆ ಎಂದು ಹೇಳುತ್ತಾರೆ. ಆದ್ರೆ ಈಕೆಗೆ ನೀರೆಂದರೇ ಅಲರ್ಜಿ, ಕುಡಿದರೆ ವಾಂತಿಯಾಗುತ್ತೆ, ಸ್ನಾನ ಮಾಡಿದರೆ ಚರ್ಮ (Skin) ಸುಡುತ್ತೆ, ಕಣ್ಣೀರು ಹಾಕಿದರೆ ಆಸಿಡ್ ಸುರಿದಂತಾಗುತ್ತೆ. ಅರೆ ಇದೇನ್ ವಿಚಿತ್ರ ಅಂತೀರಾ. ಇಲ್ಲಿದೆ ಫುಲ್ ಸ್ಟೋರಿ.
ಮನುಷ್ಯನ ದೇಹ (Human body) ಒಂಥರಾ ಅಚ್ಚರಿ. ಒಬ್ಬೊಬ್ಬರ ದೆ ರಚನೆಯೂ ವಿಭಿನ್ನವಾಗಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ, ಚೈತನ್ಯ ಎಲ್ಲವೈ ಬೇರೆ ಬೇರೆಯಾಗಿರುತ್ತದೆ. ಹಾಗೆಯೇ ಕೆಲವೊಬ್ಬರ ದೇಹಕ್ಕೆ ಕೆಲವೊಂದು ಆಹಾರ (Food)ಗಳು ಆಗಿ ಬರುವುದಿಲ್ಲ. ನಿರ್ಧಿಷ್ಟ ಆಹಾರಗಳನ್ನು ತಿಂದಾಗ ದೇಹದಲ್ಲಿ ಗುಳ್ಳೆ, ತುರಿಕೆ ಕಾಣಿಸಿಕೊಳ್ಳುವುದಿದೆ. ಇದು ಹೆಚ್ಚಾಗಿ ಶೇಂಗಾ, ಮಾಂಸವನ್ನು ತಿನ್ನೋದ್ರಿಂದ ಉಂಟಾಗುತ್ತದೆ. ಆದ್ರೆ ಇಲ್ಲೊಬ್ಬಾಕೆ ನೀರಂದ್ರೆ ಅಲರ್ಜಿ (Allergy) ಅಂದ್ರೆ ನೀವು ನಂಬ್ತೀರಾ. ನಂಬೋಕೆ ಕಷ್ಟವಾದರೂ ಇದು ನಿಜ.
15 ವರ್ಷ ವಯಸ್ಸಿನ ಹುಡುಗಿಯೊಬ್ಬಳಿಗೆ ನೀರಿನಿಂದ (Water) ತುಂಬಾ ಅಲರ್ಜಿ ಇದೆ. ನೀರು ಈಕೆಯ ದೇಹಕ್ಕೆ ಎಷ್ಟರ ಮಟ್ಟಿಗೆ ಆಗುವುದಿಲ್ಲವೆಂದರೆ ನೀರು ಕುಡಿದರೆ ವಾಂತಿಯಾಗುತ್ತದೆ. ಸ್ನಾನ ಮಾಡಿದರೆ ದೇಹದಲ್ಲಿ ತುರಿಕೆ ಉಂಟಾಗುತ್ತದೆ.
ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಆರೋಗ್ಯಕರವೇ ? ತಜ್ಞರು ಏನ್ ಹೇಳ್ತಾರೆ ಕೇಳಿ
ಯುಎಸ್ ರಾಜ್ಯದ ಅರಿಜೋನಾದ ಟಕ್ಸನ್‌ನಿಂದ ಅಬಿಗೈಲ್ ಬೆಕ್, ಅಕ್ವಾಜೆನಿಕ್ ಉರ್ಟೇರಿಯಾರಿಯಾದಿಂದ ಬಳಲುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಅವರು 13 ವರ್ಷ ವಯಸ್ಸಿನವರಾಗಿದ್ದಾಗ ಅವರಲ್ಲಿ ರೋಗಲಕ್ಷಣಗಳು ಮೊದಲು ಕಾಣಿಸಿಕೊಂಡವು. ಅತ್ಯಂತ ಅಪರೂಪದ ಸ್ಥಿತಿಯು 200 ಮಿಲಿಯನ್ ಜನರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ನೀರಿಗೆ ಅಲರ್ಜಿಯ 100ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.
ಅಬಿಗೈಲ್ ಬೆಕ್‌ನ ವಿಚಿತ್ರ ಪರಿಸ್ಥಿತಿಯನ್ನು ಸುಧಾರಿಸಲು ವೈದ್ಯರು ಆಕೆಗೆ ಪುನರ್ಜಲೀಕರಣ ಮಾತ್ರೆಗಳನ್ನು ಸೂಚಿಸಿದ್ದಾರೆ. ಮಳೆ ಬಂದಾಗ ಅಥವಾ ಸ್ನಾನ ಮಾಡುವಾಗ ನೀರು ಮೈ ಮೇಲೆ ಬಿದ್ದರೆ ಚರ್ಮದ ಮೇಲೆ ಆಸಿಡ್ ಬಿದ್ದಂತೆ ಭಾಸವಾಗುತ್ತದೆ ಅಬಿಗೈಲ್ ಬೆಕ್ ಹೇಳಿದ್ದಾರೆ.
ನೀರು ಕುಡಿದರೂ ದೇಹ ಪ್ರತಿಕ್ರಿಯೆ ತೋರಿಸಲು ಆರಂಭಿಸುತ್ತದೆ. ಹೀಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಒಂದು ಲೋಟ ನೀರನ್ನೂ ಕುಡಿದಿಲ್ಲ ಈಕೆ. ಹಣ್ಣಿನ ರಸಗಳು ಅಥವಾ ತಂಪು ಪಾನೀಯಗಳನ್ನು ಮಾತ್ರ ಸೇವಿಸುತ್ತಾಳೆ. ಈಕೆ ಒಂದು ಸಮಯದಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಮಾತ್ರ ಕುಡಿಯಬಹುದು ಮತ್ತುಈ ಸಂದರ್ಭದಲ್ಲಿ ದೇಹದ ಪ್ರತಿಕ್ರಿಯೆಗಳನ್ನು ನಿಭಾಯಿಸಲು ಆಂಟಿಹಿಸ್ಟಮೈನ್‌ಗಳು ಮತ್ತು ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುತ್ತದೆ.
ಸ್ನಾನ ಮಾಡುವಾಗಲೇ ಹೆಚ್ಚಾಗಿ ಹೃದಯಾಘಾತ ಸಂಭವಿಸುವುದು ಯಾಕೆ ?
ನನ್ನ ಕಣ್ಣೀರು ನನ್ನ ಮುಖವು ಕೆಂಪಾಗುವ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಮತ್ತು ನಿಜವಾಗಿಯೂ ಕೆಟ್ಟದಾಗಿ ಸುಟ್ಟುಹೋಗುತ್ತದೆ. ನಾನು ಸಾಮಾನ್ಯ ವ್ಯಕ್ತಿಯಂತೆ ಅಳುತ್ತೇನೆ ಮತ್ತು ಅದು ನೋವುಂಟುಮಾಡುತ್ತದೆ. ಕಣ್ಣೀರು ಮುಖದ ಚರ್ಮವನ್ನೆ ಸುಡುತ್ತದೆ ಎಂದು ಅಬಿಗೈಲ್ ಬೈಕ್ ಹೇಳಿದ್ದಾರೆ. ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುವ ನೀರಿನಲ್ಲಿರುವ ವಸ್ತುವಿನ ಕಾರಣದಿಂದಾಗಿ ಈ ಸ್ಥಿತಿಯು ಉಂಟಾಗಬಹುದು ಎಂದು ನಂಬಲಾಗಿದೆ. ಹೆಚ್ಚಿನ ಪ್ರಕರಣಗಳು ಯಾದೃಚ್ಛಿಕವಾಗಿ ಸಂಭವಿಸುತ್ತವೆ, ಪರಿಸ್ಥಿತಿಯ ಯಾವುದೇ ಕುಟುಂಬದ ಇತಿಹಾಸವನ್ನು ಹೊಂದಿಲ್ಲ.
ಅಬಿಗೈಲ್ ಆರಂಭದಲ್ಲಿ ತನ್ನ ಮನೆಯಲ್ಲಿನ ನೀರಿನಲ್ಲಿ ಏನಾದರೂ ತೊಂದರೆಯಿದೆ ಎಂದು ಭಾವಿಸಿದಳು. ಇನ್ನು ಕೆಲವೊಮ್ಮೆ ತನಗೆ ಉಂಟಾಗುತ್ತಿರುವುದು ಚರ್ಮ ಅಲರ್ಜಿ ಎಂದುಕೊಂಡಳು. ಆದರೆ ಕಾಲಾನಂತರ ರೋಗಲಕ್ಷಣಗಳು ಉಲ್ಬಣಗೊಂಡಿತು. ಭಯದಿಂದ ಆಕೆಗೆ ವೈದ್ಯರನ್ನೂ ಭೇಟಿ ಮಾಡಲ್ಲಿಲ್ಲ. ಆದರೆ ನಂತರದ ದಿನಗಳಲ್ಲಿ ಇದು ನೀರಿನ ಅಲರ್ಜಿ ಎಂಬುದು ಗಮನಕ್ಕೆ ಬಂತು.
ನನಗೆ ನೀರಿಗೆ ಅಲರ್ಜಿ ಇದೆ ಎಂದು ನಾನು ಜನರಿಗೆ ಹೇಳಿದಾಗ, ಜನರು ಅದನ್ನು ಸಂಪೂರ್ಣವಾಗಿ ಹಾಸ್ಯಾಸ್ಪದವೆಂದು ಭಾವಿಸುತ್ತಾರೆ ಮತ್ತು ಬಹಳಷ್ಟು ಜನರು ಅದರಿಂದ ಆಘಾತಕ್ಕೊಳಗಾಗುತ್ತಾರೆ. ಜನರು ಯಾವಾಗಲೂ ನಮ್ಮ ದೇಹವು ನೀರಿನಿಂದ ಮಾಡಲ್ಪಟ್ಟಿದೆ ಎಂದು ಸೂಚಿಸುತ್ತಾರೆಎಂದು ಅಬಿಗೈಲ್ ಬೈಕ್ ಹೇಳಿದರು. ಅಬಿಗೈಲ್ ಈಗ ತನ್ನ ಸ್ಥಿತಿಯ ಬಗ್ಗೆ ಬಹಿರಂಗವಾಗಿ ಜಾಗೃತಿ ಮೂಡಿಸಲು ಮತ್ತು ಜನರು ಅದರ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದುವ ಭರವಸೆಯೊಂದಿಗೆ ಶಿಕ್ಷಣವನ್ನು ನೀಡಲು ಉದ್ದೇಶಿಸಿದ್ದಾಳೆ.