ಕೆ.ಜಿಗೆ ನೂರು ರೂಪಾಯಿ ಆಗಿರಲಿ ಇಲ್ಲ ನೂರು ರೂಪಾಯಿಗೆ ಐದು ಕೆ.ಜಿ ಈರುಳ್ಳಿ ಆಗಿರಲಿ, ಜನರು ಈರುಳ್ಳಿ ತಿನ್ನೋದು ಬಿಡಲ್ಲ. ಅದರಲ್ಲೂ ಅನೇಕರು ಹಸಿ ಈರುಳ್ಳಿಯನ್ನು ಚಪ್ಪರಿಸಿ ತಿಂತಾರೆ. ಹಸಿ ಈರುಳ್ಳಿ ಸೇವನೆ ಮಿತಿ ಮೀರಿದ್ರೆ ಅಪಾಯ ಗ್ಯಾರಂಟಿ.
ಊಟ (Meals) ದ ಜೊತೆ ಕಚ್ಚಿಕೊಳ್ಳೋಕೆ ಈರುಳ್ಳಿ (Onion) ಬೇಕು ಎನ್ನುವವರಿದ್ದಾರೆ. ಹಸಿ ಈರುಳ್ಳಿ (Raw onion ) ಮೇಲೆ ನಿಂಬೆ ರಸ (Lemon juice) ಹಾಗೂ ಉಪ್ಪು ಸೇರಿಸಿ ತಿನ್ನುವ ಮಜವೇ ಬೇರೆ. ಅನೇಕ ಆಹಾರದ ರುಚಿಯನ್ನು ಹಸಿ ಈರುಳ್ಳಿ ಹೆಚ್ಚಿಸುತ್ತದೆ. ಚುರ್ ಮುರಿ, ಮಸಾಲಾ ಪುರಿ ಸೇರಿದಂತೆ ಫಾಸ್ಟ್ ಫುಡ್ ಗೆ ಮಾತ್ರವಲ್ಲ ತುರಿದ ಕ್ಯಾರೆಟ್, ತುರಿದ ಸೌತೆಕಾಯಿಗೂ ಹಸಿ ಈರುಳ್ಳಿ ಇದ್ರೆ ರುಚಿ ಹೆಚ್ಚು. ಕೆಲ ಆಹಾರದ ಮೇಲೆ ಹಸಿ ಈರುಳ್ಳಿ ಹಾಕಿಕೊಂಡು ತಿಂದ್ರೆ ಆಹಾರದ ಮಜಾ ಡಬಲ್ ಆಗುತ್ತೆ. ಅನಾರೋಗ್ಯಕ್ಕೊಳಗಾಗಿದ್ದಾಗ, ಜ್ವರ ಬಂದ ಬಾಯಿ ರುಚಿ ಕಳೆದುಕೊಂಡಿದ್ದಾಗ ಈರುಳ್ಳಿ ತಿನ್ನುತ್ತೇವೆ. ದಿನದಲ್ಲಿ ಮೂರೂ ಹೊತ್ತೂ ಊಟ ಮಾಡುವ ವೇಳೆ ಹಸಿ ಈರುಳ್ಳಿ ತಿನ್ನುವವರಿದ್ದಾರೆ. ಆದ್ರೆ ಹಸಿ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಸೇವನೆ ಮಾಡಿದ್ರೆ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಲ್ಲದೆ ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು. ಹಸಿ ಈರುಳ್ಳಿ ತಿಂದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ನಾವಿಂದು ಹೇಳ್ತೇವೆ.
ಅತಿಯಾಗಿ ಹಸಿ ಈರುಳ್ಳಿ ತಿಂದ್ರೆ ಕಾಡುತ್ತೆ ಈ ಆರೋಗ್ಯ ಸಮಸ್ಯೆ :
ಅಸಿಡಿಟಿ ಸಮಸ್ಯೆಗೆ ಹಸಿ ಈರುಳ್ಳಿ ಕಾರಣ : ಅನೇಕರಿಗೆ ಹಸಿ ಈರುಳ್ಳಿ ಸೇವನೆ ಮಾಡಿದ್ರೆ ಅಸಿಡಿಟಿ ಕಾಡುತ್ತೆ ಎಂಬ ಸಂಗತಿಯೇ ತಿಳಿದಿಲ್ಲ. ಈರುಳ್ಳಿಯಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೇ ಇದರಲ್ಲಿ ನಾರಿನ ಪ್ರಮಾಣವೂ ಅಧಿಕವಾಗಿದೆ. ಹಸಿ ಈರುಳ್ಳಿ ಸರಿಯಾಗಿ ಜೀರ್ಣವಾಗುವುದಿಲ್ಲ. ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಿರುವವರಿಗೆ ಇದು ಮತ್ತಷ್ಟು ತೊಂದರೆ ನೀಡುತ್ತದೆ. ಹಸಿ ಈರುಳ್ಳಿಯನ್ನು ಕೆಲವರು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಅವರಿಗೆ ಅಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.
HEALTH TIPS : ಆರೋಗ್ಯಕ್ಕೆ ಒಳ್ಳೆದು ಅಂತಾ ಅತಿಯಾಗಿ ದಾಳಿಂಬೆ ತಿನ್ಬೇಡಿ
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು : ನಮಗೆ ತಿಳಿಯದೆ ನಾವು ಅನೇಕ ಬಾರಿ ಹಸಿ ಈರುಳ್ಳಿಯನ್ನು ಅತಿಯಾಗಿ ತಿಂದಿರುತ್ತೇವೆ. ಬೇರೆ ಬೇರೆ ಆಹಾರದ ಮೂಲಕ ದೊಡ್ಡ ಪ್ರಮಾಣದಲ್ಲಿ ಹಸಿ ಈರುಳ್ಳಿ ದೇಹ ಸೇರಿರುತ್ತದೆ. ಈ ಹಸಿ ಈರುಳ್ಳಿಯ ಅತಿಯಾದ ಸೇವನೆಯು ರಕ್ತದಲ್ಲಿರುವ ಸಕ್ಕರೆಗೆ ಒಳ್ಳೆಯದಲ್ಲ. ಹಸಿ ಈರುಳ್ಳಿಯನ್ನು ವಿಶೇಷವಾಗಿ ಮಧುಮೇಹಿಗಳು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಮಧುಮೇಹಿಗಳು, ಹಸಿ ಈರುಳ್ಳಿ ಸೇವನೆ ಮೊದಲು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು. ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಹಸಿ ಈರುಳ್ಳಿ ಸೇವನೆ ಮಾಡ್ಬೇಕೆಂದು ಸಲಹೆ ಪಡೆಯುವುದು ಒಳ್ಳೆಯದು.
ಎದೆ ಉರಿಗೆ ಕಾರಣವಾಗುತ್ತೆ ಹಸಿ ಈರುಳ್ಳಿ : ಅನೇಕರಿಗೆ ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ವಿಪರೀತ ತೇಗು ಬರುತ್ತದೆ. ಎದೆ ಕಟ್ಟಿದ ಅನುಭವವಾಗುತ್ತದೆ. ಇದಕ್ಕೆ ಅತಿಯಾದ ಹಸಿ ಈರುಳ್ಳಿ ಸೇವನೆಯೂ ಕಾರಣ, ಹಸಿ ಈರುಳ್ಳಿ ಸೇವನೆಯಿಂದ ಎದೆಯಲ್ಲಿ ತೀವ್ರವಾದ ಉರಿ ಜೊತೆ ಎದೆ ಸುಡುವ ಅನುಭವವಾಗುತ್ತದೆ. ಎದೆ ಉರಿ ಕಾಡುತ್ತದೆ ಎನ್ನುವವರು ಹಸಿ ಈರುಳ್ಳಿ ಸೇವನೆಯಿಂದ ದೂರವಿರಿ.
New Study : ಎಸ್ಪ್ರೆಸೊ ಕಾಫಿ ಪ್ರಿಯರಿಗೆ ಶಾಕಿಂಗ್…! ಮಹಿಳೆಯರಿಗಿಂತ ಪುರುಷರಿಗೆ ಅಪಾಯಕಾರಿ ಈ ಪಾನೀಯ
ಹಸಿ ಈರುಳ್ಳಿಯಿಂದ ಬಾಯಿ ವಾಸನೆ : ಹಸಿ ಈರುಳ್ಳಿ ತಿಂದ್ರೆ ಬಾಯಿಯಿಂದ ಗಬ್ಬು ವಾಸನೆ ಬರುತ್ತದೆ. ಈ ವಾಸನೆ ನಮಗೆ ಮಾತ್ರವಲ್ಲ, ನಮ್ಮ ಜೊತೆ ಮಾತನಾಡುವವರಿಗೆ ಕಿರಿಕಿರಿ ಎನ್ನಿಸುತ್ತದೆ. ವಿಶೇಷ ಸಮಾರಂಭಗಳಲ್ಲಿ ಅಥವಾ ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಮಯದಲ್ಲಿ ಅಪ್ಪಿತಪ್ಪಿಯೂ ಹಸಿ ಈರುಳ್ಳಿ ಸೇವನೆ ಮಾಡಬೇಡಿ. ಇದು ನಿಮ್ಮನ್ನು ಮುಜುಗರಕ್ಕೆ ನೂಕುತ್ತದೆ. ಬಾಯಿಯಲ್ಲಿ ಬರುವ ಈರುಳ್ಳಿ ವಾಸನೆಯಿಂದ ನೀವು ಆರಾಮವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವಾಗ ಹಸಿ ಈರುಳ್ಳಿ ಸೇವನೆ ಮಾಡ್ತಿರೋ ಆಗ ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.