ಮೋದಕ ಬಾಯಿಗಷ್ಟೇ ರುಚಿಯಲ್ಲ ಆರೋಗ್ಯಕೂ ಬೆಸ್ಟ್

By Suvarna NewsFirst Published Aug 31, 2022, 9:30 AM IST
Highlights

ಇಂದು ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಾಗಿದೆ. ಈ ದಿನ ಮನೆ ಮನೆಗಳಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಗಣೇಶ ಚತುರ್ಥಿ ಅಂದ್ರೆ ಮೋದಕ ಇರ್ಲೇಬೇಕು. ಈ ಮೋದಕ ತಿನ್ನೋಗಷ್ಟೇ ರುಚಿಯಲ್ಲ. ಆರೋಗ್ಯಕ್ಕೂ ಉಪಕಾರಿ. 
 

ಗಣೇಶ ಚತುರ್ಥಿ ಬಂತು ಅಂದ್ರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ದೇಶವೇ ವೈಭವದಿಂದ ಆಚರಿಸುವ ಒಂದು ಹಬ್ಬವೆಂದರೆ ಗನೇಶನ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಜನರು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ಹಲವು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ, ವಿಘ್ನ ವಿನಾಯಕನಿಗೆ ನೈವೇದ್ಯವಾಗಿ ಸಲ್ಲಿಸಿ ಖುಷಿ ಪಡುತ್ತಾರೆ. ಗಣೇಶನ ಹಬ್ಬ ಅಂದ್ರೆ ಅಲ್ಲಿ ಮೋದಕ ಇರ್ಲೇಬೇಕು. ಮೋದಕ  ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಇದನ್ನು ಎಲ್ಲರ ಮನೆಯಲ್ಲಿಯೂ ತಯಾರು ಮಾಡುತ್ತಾರೆ. 

ಮೋದಕವು ಗಣೇಶ ಚತುರ್ಥಿಯಂದು ವಿಶೇಷವಾಗಿ ತಯಾರಿಸಲಾಗುವ ಸಿಹಿ ಖಾದ್ಯವಾಗಿದೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಗಣೇಶನಿಗೆ ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಆದರೆ ಇದೆಲ್ಲದಕ್ಕಿಂತಲೂ ಮೋದಕ ತುಂಬಾ ಸ್ಪೆಷಲ್‌. ಯಾಕೆಂದರೆ ಗಣಪ ಮೋದಕ ಪ್ರಿಯ. ಹೀಗಾಗಿಯೇ ಈತನನ್ನು ಮೋದಕ ಪ್ರಿಯ ಎಂದು ಸಹ ಕರೆಯುತ್ತಾರೆ. ಈ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿ, ಮೊನಚಾದ ಮೇಲ್ಭಾಗದೊಂದಿಗೆ ಲಡ್ಡುವಿನಂತೆ ಕಾಣುತ್ತದೆ ಮತ್ತು ಇದರೊಳಗೆ ಬೆಲ್ಲ, ತೆಂಗಿನ ತುರಿ ಸೇರಿಸಿದ ಮಿಶ್ರಣವಿರುತ್ತದೆ. ಇದನ್ನು ಬೇಯಿಸಿ ಅಥವಾ ಫ್ರೈ ಮಾಡಿ ಸಹ ತಯಾರಿಸುತ್ತಾರೆ. ಮೋದಕಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ. ಹಾಗಾದರೆ ಮೋದಕದ ಪ್ರಯೋಜನಗಳ ಬಗ್ಗೆ ತಿಳಿಯೋಣ.

Sugar Free ಮೋದಕ, ಸಕ್ಕರೆ ಕಾಯಿಲೆ ಇರೋರು ಭಯ ಪಡ್ದೆ ತಿನ್ಬೋದು

ಆರೋಗ್ಯಕ್ಕೆ ಮೋದಕದ ಪ್ರಯೋಜನಗಳು

ಮಲಬದ್ಧತೆಯನ್ನು ನಿವಾರಿಸುತ್ತದೆ: ಮೋದಕ್ ಮಲಬದ್ಧತೆಯ (Constipation) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಸ್ಟಫಿಂಗ್ ಅನ್ನು ತುಪ್ಪದಲ್ಲಿ ಬೇಯಿಸುವುದರಿಂದ, ಇದು ಹೊಟ್ಟೆಯ (Stomach) ಒಳಪದರಕ್ಕೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಅದರಲ್ಲಿ ತುಂಬಿದ ತೆಂಗಿನಕಾಯಿ ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹ ಉಪಯುಕ್ತವಾಗಿದೆ.

ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ: ತೆಂಗಿನಕಾಯಿ (ಮತ್ತು ಇತರ ಒಣಗಿದ ಹಣ್ಣುಗಳು) ಮೋದಕ್ ಫಿಲ್ಲಿಂಗ್‌ಗಳಲ್ಲಿ ಸಸ್ಯ ಸ್ಟೆರಾಲ್‌ಗಳನ್ನು ಹೊಂದಿದ್ದು ಅದು ಎಲ್‌ಡಿಎಲ್ ಅನ್ನು ಕಡಿಮೆ ಮಾಡಲು ಮತ್ತು ಎಚ್‌ಡಿಎಲ್ (ಉತ್ತಮ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೇಹದ ಊತವನ್ನು ಕಡಿಮೆ ಮಾಡುತ್ತದೆ: ಮೋದಕಗಳಲ್ಲಿನ ತುಪ್ಪವು (Ghee) ಬ್ಯುಟರಿಕ್ ಆಮ್ಲವನ್ನು ಸಹ ಹೊಂದಿದೆ, ಇದು ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕೀಲುಗಳಿಗೆ ಒಳ್ಳೆಯದು, ಆದ್ದರಿಂದ ತುಪ್ಪವನ್ನು ಅನಾದಿ ಕಾಲದಿಂದಲೂ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ಗಣೇಶ ಹಬ್ಬಕ್ಕೆ ಚಕ್ಕುಲಿ, ಉಂಡೆ ಮಾಡೋದು ಮರೀಬೇಡಿ, ಇಲ್ಲಿದೆ ರೆಸಿಪಿ

ಮೂಳೆಗಳನ್ನು ಬಲವಾಗಿ ಇರಿಸುತ್ತದೆ: ಮೋದಕಗಳಲ್ಲಿ ಬಳಸಲಾಗುವ ತೆಂಗಿನಕಾಯಿ, ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳಂತಹ ಇತರ ಎಲ್ಲಾ ಪ್ರಯೋಜನಗಳ ಹೊರತಾಗಿ, ಆರೋಗ್ಯಕರ ಮೂಳೆಗಳಿಗೆ (Healthy bones) ಅಗತ್ಯವಾದ ಮ್ಯಾಂಗನೀಸ್ನಲ್ಲಿಯೂ ಸಹ ಅಧಿಕವಾಗಿದೆ. ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ದೇಹದ ಚಯಾಪಚಯ ಕ್ರಿಯೆಗೆ ಮ್ಯಾಂಗನೀಸ್ ಸಹ ಅತ್ಯಗತ್ಯ. ಹೀಗಾಗಿ ಹಬ್ಬದ (Festival) ಖುಷಿಯಲ್ಲಿ ಒಂದಿಷ್ಟು ಮೋದಕ ಹೆಚ್ಚು ತಿಂದ್ರೂ ಏನೂ ತೊಂದ್ರೆಯಿಲ್ಲ. 

click me!