ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಎಲ್ಲ ಹಣ್ಣನ್ನು ತಿನ್ನಲು ಹೋಗ್ಬೇಡಿ. ಕೆಲ ಹಣ್ಣನ್ನು ಎಫ್ ಎಸ್ ಎಸ್ ಎಐ ಬ್ಯಾನ್ ಮಾಡಿದೆ. ಅದಕ್ಕೆ ಕಾರಣ ಏನು ಗೊತ್ತಾ?
ದಿನಕ್ಕೊಂದು ಸೇಬು ಹಣ್ಣನ್ನು ತಿಂದ್ರೆ ನಮ್ಮ ಆರೋಗ್ಯ ಸುಧಾರಿಸುತ್ತೆ ಎನ್ನುವ ನಂಬಿಕೆಯಲ್ಲಿ ನಾವು 200 -250 ರೂಪಾಯಿ ಕೊಟ್ಟು ಮಾರುಕಟ್ಟೆಯಿಂದ ಸೇಬು ಹಣ್ಣನ್ನು ತಂದು ತಿನ್ನುತ್ತೇವೆ. ಆದ್ರೆ ಆರೋಗ್ಯ ವೃದ್ಧಿಸಬೇಕಾಗಿದ್ದ ಈ ಸೇಬು ಹಣ್ಣುಗಳು ನಮ್ಮ ಆರೋಗ್ಯ ಹಾಳು ಮಾಡ್ತಿವೆ. ಸೇಬು ಹಣ್ಣನ್ನು ತಾಜಾ ಆಗಿಡಲು ವ್ಯಾಕ್ಸ್ ಬಳಸ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ವ್ಯಾಕ್ಸ್ ಮಾತ್ರವಲ್ಲ, ಸೇಬು ಬೇಗ ಹಣ್ಣಾಗಲು ಅದಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ಸೇಬು ಒಳ ಸೇರುವ ಕೆಮಿಕಲ್ ನಮ್ಮ ಜೀವಕ್ಕೆ ಅಪಾಯಕಾರಿ. ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರಾಸಾಯನಿಕ ಬೆರೆಸುವ ಹಣ್ಣನ್ನು ನಿಷೇಧಿಸಿದೆ.
ಕೆಂಪು ಹಣ್ಣಿಗೆ ಮರುಳಾಗಬೇಡಿ : ಮಾರುಕಟ್ಟೆ (Market) ಯಲ್ಲಿ ನಾನಾ ವೆರೈಟಿ ಸೇಬು (Apple) ಹಣ್ಣುಗಳು ನಮಗೆ ಕಾಣಸಿಗ್ತವೆ. ಅದ್ರಲ್ಲಿ ಕೆಂಪಾಗಿರುವ, ಹೊಳೆಯುವ ಹಣ್ಣು ಎಲ್ಲರನ್ನೂ ಆಕರ್ಷಿಸೋದು ಸಹಜ. ಆ ಹಣ್ಣು ರುಚಿಯಾಗಿದೆ ಎನ್ನುವ ನಂಬಿಕೆಯಲ್ಲಿ ಅದನ್ನು ನಾವು ಮನೆಗೆ ತರ್ತೇವೆ. ಆದ್ರೆ ಈ ಸೇಬು ಹಣ್ಣು ನಮ್ಮ ಆರೋಗ್ಯ (Health) ವನ್ನು ಸಂಪೂರ್ಣ ಹಾಳು ಮಾಡುತ್ತದೆ. ಇಂಥ ಹಣ್ಣಿಗೆ ರಾಸಾಯನಿಕ ಬೆರೆಸಿರಲಾಗುತ್ತದೆ.
undefined
ಹೋಟೆಲ್ ರೀತಿಯಲ್ಲೇ ಉದ್ದಿನ ವಡೆ ಗರಿಗರಿಯಾಗಲು ಏನು ಮಾಡ್ಬೇಕು? ವಾಸುದೇವ ಅಡಿಗರ ಟಿಪ್ಸ್ ಇಲ್ಲಿದೆ...
ಕೆಂಪು ಸೇಬು ವಿಷಕಾರಿ : ಬೇಡಿಕೆ ಪೂರೈಸಲು ಸೇಬುವನ್ನು ಬೇಗ ಹಣ್ಣಾಗಿಸುವ ಪ್ರಯತ್ನ ನಡೆಯುತ್ತದೆ. ಇದಕ್ಕೆ ರಾಸಾಯನಿಕವನ್ನು ಇಂಜೆಕ್ಟ್ ಮಾಡಲಾಗುತ್ತದೆ. ಅದ್ರಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಅದರಿಂದ ಬಿಡುಗಡೆಯಾಗುವ ಅಸಿಟಿಲೀನ್ ಅನಿಲವೂ ಸೇರಿದೆ. ಎಥಿಲೀನ್ ಅನಿಲವನ್ನು ಕೂಡ ಬಳಸಲಾಗುತ್ತದೆ. ಇವು ಸೇಬು ಬೇಗ ಹಣ್ಣಾಗುವಂತೆ ಮತ್ತು ಕೆಂಪಾಗುವಂತೆ ಮಾಡುತ್ತವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ರಾಸಾಯನಿಕಗಳನ್ನು ಬ್ಯಾನ್ ಮಾಡಿದೆ. ಆದ್ರೂ ಅದರ ಬಳಕೆ ಕಡಿಮೆ ಆಗಿಲ್ಲ.
ಕ್ಯಾನ್ಸರ್ ಗಿಂತ ಅಪಾಯಕಾರಿ (Dangerous than Cancer): ಈ ಕೆಂಪು ಸೇಬು ಹಣ್ಣಿನಲ್ಲಿ ಬೆರೆತಿರುವ ರಾಸಾಯನಿಕಗಳು ಕ್ಯಾನ್ಸರ್ ಗಿಂತ ಹೆಚ್ಚು ಅಪಾಯಕಾರಿ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ಸೇವನೆ ಮಾಡುವುದರಿಂದ ಕ್ಯಾನ್ಸರ್, ಮಧುಮೇಹ, ಉರಿಯೂತ, ಅಂಗಾಂಗ ಹಾನಿ ಸೇರಿದಂತೆ ನಾನಾ ರೋಗಗಳು ನಿಮಗೆ ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಯೊಂದು ಹೇಳಿದೆ.
ಸೇಬು ಹಣ್ಣಿನ ಖರೀದಿ ಹೇಗೆ? (How to Buy Apple) : ಸೇಬು ಹಣ್ಣಿನ ಖರೀದಿ ವೇಳೆ ನೀವು ಹೆಚ್ಚು ಎಚ್ಚರಿಕೆ ವಹಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಸೇಬು ಹಣ್ಣುಗಳನ್ನು ಖರೀದಿ ಮಾಡಬೇಡಿ. ನೈಸರ್ಗಿಕವಾಗಿ ಹಣ್ಣು ಮಾಡುವ ಅಂಗಡಿಗೆ ಆದ್ಯತೆ ನೀಡಿ. ಸೇಬು ಹಣ್ಣಿನ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡಿದ್ದರೆ ಅದನ್ನು ಖರೀದಿ ಮಾಡಲು ಹೋಗಬೇಡಿ. ಹಾಗೆಯೇ ಗಾಢ ಕೆಂಪಾಗಿರುವ ಹಣ್ಣನ್ನು ತಿನ್ನಬೇಡಿ ಎಂದು ಎಫ್ ಎಸ್ ಎಸ್ ಎಐ ಹೇಳಿದೆ.
ಸೇಬು ಸೇವನೆ ಮುನ್ನ ಹೀಗೆ ಮಾಡಿ (How to Wash Apples) : ಸೇಬು ಹಣ್ಣನ್ನು ನೀವು ಸೇವನೆ ಮಾಡುವ ಮೊದಲು ಅದನ್ನು ಸ್ವಚ್ಛವಾಗಿ ತೊಳೆಯುವುದು ಮುಖ್ಯ. ಸರಿಯಾಗಿ ಉಜ್ಜಿ ಸೇಬು ಹಣ್ಣನ್ನು ನೀವು ಸ್ವಚ್ಛಗೊಳಿಸಬೇಕು. ಅದರಲ್ಲಿರುವ ಕೊಳಕು ಹೋಗುತ್ತದೆ. ಆದ್ರೆ ಒಳಗೆ ಸೇರಿರುವ ರಾಸಾಯನಿಕವನ್ನು ನೀವು ಬೇರ್ಪಡಿಸಲು ಸಾಧ್ಯವಿಲ್ಲ.
ಸುಲಭ ಹೆರಿಗೆಗೆ ಗರ್ಭಿಣಿಯರಿಗೆ ಮ್ಯಾಜಿಕ್ ಯೋಗ ಭಂಗಿಯ ಮಹತ್ವ ತಿಳಿಸಿಕೊಟ್ಟ ದೀಪಿಕಾ ಪಡುಕೋಣೆ
ಸೇಬು ಹಣ್ಣಿನ ಮೇಲೆ ಮೇಣವನ್ನು ಹಾಕಿರಲಾಗುತ್ತದೆ. ಅದನ್ನು ಸ್ವಚ್ಛಗೊಳಿಸಿಯೇ ನೀವು ಸೇವನೆ ಮಾಡಬೇಕು. ಸೇಬು ಹಣ್ಣನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ. ನಂತ್ರ ಚಾಕುವಿನಿಂದ ಮೇಲ್ಭಾಗವನ್ನು ನಿಧಾನವಾಗಿ ಉಜ್ಜಿ. ಮೇಣವಿದ್ದರೆ ಅದು ಹೊರಗೆ ಬರುತ್ತದೆ. ನಂತ್ರ ಮತ್ತೊಮ್ಮೆ ಕ್ಲೀನ್ ಮಾಡಿ ಸೇವನೆ ಮಾಡಿ. ಸೇಬು ಹಣ್ಣಿನ ಸಿಪ್ಪೆ ತೆಗೆದು ನೀವು ಹಣ್ಣನ್ನು ತಿನ್ನಬಹುದು.