ಹೋಟೆಲ್ ಶೈಲಿಯಲ್ಲಿ ಉದ್ದಿನ ವಡೆ ಗರಿಗರಿಯಾಗಲು ಏನು ಮಾಡ್ಬೇಕು? ವಾಸುದೇವ ಅಡಿಗರ ಟಿಪ್ಸ್ ಇಲ್ಲಿದೆ...
ಮನೆಯಲ್ಲಿ ಏನೇ ತಿನಿಸು ಮಾಡಿದರೂ ಹೋಟೆಲ್ನಷ್ಟು ಚೆನ್ನಾಗಿ ಬರುವುದಿಲ್ಲ ಎನ್ನುವುದು ನಿಜವೇ. ಹೋಟೆಲ್ನಲ್ಲಿ ಹಾಕುವ ಪದಾರ್ಥಗಳನ್ನೇ ಹಾಕಿದರೂ, ಅದೇ ಶೈಲಿಯಲ್ಲಿ ಮಾಡಿದರೂ ಹಲವು ಬಾರಿ ಹೋಟೆಲ್ ರುಚಿಯೇ ಹೆಚ್ಚು ಮೆಚ್ಚುವುದು ಉಂಟು. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಏನೇ ಇದ್ದರೂ ಮನೆಯ ಅಡುಗೆಯ, ಅಮ್ಮನ ಕೈರುಚಿಯೇ ಹೆಚ್ಚು ಚೆಂದ ಎಂದರೂ ಹೋಟೆಲ್ನ ರುಚಿ ಕಂಡವರಿಗೆ ಅದೇ ಇಷ್ಟ ಆಗುವುದೂ ಉಂಟು. ಹೋಟೆಲ್ಗಳಲ್ಲಿ ಮಾಡುವ ಅಡುಗೆಗಳಲ್ಲಿ ಎಕ್ಸ್ಪರ್ಟ್ಗಳು ಇರುತ್ತಾರೆ. ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಒಂದೊಂದು ತಿನಿಸಿಗೂ ಪ್ರತ್ಯೇಕ ಶೆಫ್ಗಳು ಇರುತ್ತಾರೆ. ಅವರ ಬಳಿ ರುಚಿಯಾದ ತಿನಿಸು ಮಾಡುವ ಏನೋ ಒಂದು ಟಿಪ್ಸ್ ಇರುತ್ತದೆ. ಇದೀಗ ಗರಿಗರಿ ವಡೆಯನ್ನು ಹೇಗೆ ಮಾಡುವುದು ಎನ್ನುವ ಟಿಪ್ಸ್ ಹೇಳಿಕೊಟ್ಟಿದ್ದಾರೆ ಹೋಟೆಲ್ ಉದ್ಯಮಿ ವಾಸುದೇವ ಅಡಿಗ.
ವಾಸುದೇವ ಅಡಿಗರು ಕ್ರಿಸ್ಪಿ ಉದ್ದಿನ ವಡೆ ಮಾಡುವುದು ಹೇಗೆ ಎನ್ನುವ ಟಿಪ್ಸ್ ಇಲ್ಲಿ ಹೇಳಿದ್ದಾರೆ ನೋಡಿ. ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಕ್ರಿಸ್ಪಿಯಾಗಿ ಬರುವುದು ರುಬ್ಬುವುದರಲ್ಲಿದೆ. ಕೆಲವರು ಅರ್ಜೆಂಟ್ನಲ್ಲಿ ರುಬ್ಬುವ ಮಷಿನ್ಗೆ ನೆನೆಸಿದ ಬೇಳೆ ಹಾಕಿಬಿಡುತ್ತಾರೆ. ಆ ಕಡೆ ಗಮನವನ್ನೇ ಕೊಡುವುದಿಲ್ಲ. ಅದು ತಿರುಗುತ್ತಾ ಇರುವಾಗ ಸೆಂಟ್ರಲ್ನಲ್ಲಿ ಸರಿಯಾಗಿ ಗ್ರೈಂಡ್ ಆಗಬೇಕು. ಕೆಲವರು ಹಾಗೆಯೇ ಬಿಡುತ್ತಾರೆ. ಅದರಲ್ಲಿ ಬೇಳೆ ಬೇಳೆ ಹಾಗೆ ಇರುತ್ತದೆ. ಕೆಲವು ಕಡೆ ಮಾತ್ರ ನೈಸ್ ಆಗುತ್ತದೆ.
undefined
ಸ್ಟಾರ್ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...
ಹೀಗೆ ಆದರೆ ವಡೆ ಗರಿಗರಿಯಾಗುವುದಿಲ್ಲ. ಇದರ ಜೊತೆಗೆ ಟೆಂಪರೇಚರ್ ಕೂಡ ತುಂಬಾ ಮಹತ್ವದ್ದು. ಒಂದು ಸಲ ಯೂಸ್ ಮಾಡಿರುವ ಎಣ್ಣೆ ಮತ್ತೊಮ್ಮೆ ಬಳಸಬಾರದು. ಫ್ರೆಷ್ ಎಣ್ಣೆಯನ್ನೇ ಬಳಸಬೇಕು. ಅಷ್ಟೇ ಅಲ್ಲದೇ ಟೆಂಪರೇಚರ್ ದೊಡ್ಡದಾಗಿ ಇಟ್ಟುಕೊಳ್ಳಬಾರದು. ಹೀಗೆ ಇಟ್ಟುಕೊಂಡರೆ ಮೇಲುಗಡೆ ಕಪ್ಪಾಗುತ್ತದೆ, ಒಳಗಡೆ ಬೇಯುವುದೇ ಇಲ್ಲ. ಆದ್ದರಿಂದ ಎರಡು ಸಲ ಬೇಕ್ ಮಾಡಬೇಕು. ಒಮ್ಮೆ ಬಿಳಿಬಿಳಿ ಇದ್ದಾಗ ಎತ್ತಿಟ್ಟು, ಮತ್ತೊಮ್ಮೆ ಟೆಂಪರೇಚರ್ ಸ್ವಲ್ಪ ಜಾಸ್ತಿ ಮಾಡಿಕೊಂಡು ಬೇಕ್ ಮಾಡಿದ್ರೆ ಕ್ರಿಸ್ಪಿನೆಸ್ ಬರುತ್ತದೆ ಎಂದಿದ್ದಾರೆ.
ಇನ್ನು ಕೆ.ಎನ್. ವಾಸುದೇವ್ ಅಡಿಗ ಅವರ ಕುರಿತು ಹೇಳುವುದಾದರೆ, ಅವರು 1993 ರಲ್ಲಿ ವಿಶಿಷ್ಟವಾದ ದರ್ಶಿನಿ ಹೋಟೆಲ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ರುಚಿಕರವಾದ ಆಹಾರವನ್ನು ನೀಡುವುದರೊಂದಿಗೆ ತಮ್ಮ ಹೋಟೆಲ್ ವೃತ್ತಿ ಆರಂಭಿಸಿದರು. ಇಂದು ಬೆಂಗಳೂರು ಒಂದರಲ್ಲಿಯೇ 15ಕ್ಕೂ ಅಧಿಕ ಫಾಸ್ಟ್ ಫುಡ್ ಹಾಗೂ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿಯೂ ಇವರ ರೆಸ್ಟೋರೆಂಮಟ್ಗಳಿವೆ. ಯುಎಇಯ ಶಾರ್ಜಾದಲ್ಲಿ ರೆಸ್ಟೋರೆಂಟ್ ಸಕತ್ ಫೇಮಸ್ ಆಗಿದೆ. ಇವರ ಹೋಟೆಲ್ಗಳಲ್ಲಿ 2 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ.
ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...